ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-25: 22 ಕ್ಯಾರೆಟ್‌ 100 ಗ್ರಾಂ ಚಿನ್ನದ ಬೆಲೆ 1000 ರೂ ಏರಿಕೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿದೆ. ನಿನ್ನೆ ಇಳಿಮುಖವಾಗಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಕ್ರಿಸ್‌ಮಸ್‌ ದಿನವೇ ಚಿನ್ನ ಮತ್ತೆ ತನ್ನ ಓಟವನ್ನ ಮುಂದುವರೆಸಿದೆ. ಹಲವು ದಿನಗಳಿಂದ ಚಿನ್ನದ ವೇಗ ತೀವ್ರವಾಗಿ ಕಡಿಮೆಯಾಗಿತ್ತು. ಮತ್ತೆ ಚಿನ್ನ ಚೇತರಿಸಿಕೊಳ್ಳುತ್ತಿದೆ. ಅಲ್ಲದೆ ಚಿನ್ನ ಸತತವಾಗಿ ಇಳಿಕೆಯನ್ನ ಕಂಡ ನಂತರ ಮತ್ತೆ ಏರಿಕೆಯನ್ನ ಕಾಣ್ತಿದೆ.

ಡಿಸೆಂಬರ್‌ 25 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100ರೂ. ಏರಿಕೆಯಾಗಿ 71,000ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100ರೂ. ಏರಿಕೆಯಾಗಿ 77,450 ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80 ರೂ. ಏರಿಕೆಯಾಗಿ 58,090ರೂ. ಆಗಿದೆ.

ಬೆಂಗಳೂರಿನಲ್ಲಿ ಮತ್ತೆ ಜಿಗಿದ ಚಿನ್ನದ ದರ!

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,000ರೂ. ಏರಿಕೆಯಾಗಿ 7,10,000ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,000ರೂ. ಏರಿಕೆಯಾಗಿ 7,74,500ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 800 ರೂ ಏರಿಕೆಯಾಗಿ 5,80,900 ರೂ. ಆಗಿದೆ.

ಇಂದು ಎಲ್ಲಡೆ ಕ್ರಿಸ್‌ಮಸ್‌ ಸಂಭ್ರಮ ಹೆಚ್ಚಾಗಿದ್ದು, ಈ ಮಧ್ಯೆ ಚಿನ್ನದ ಬೆಲೆ ಕೂಡ ಸಾಧರಣವಾಗಿ ಏರಿಕೆಯಾಗಿದೆ. ಬೇಡಿಕೆ ಕಡಿಮೆಯಾದ ನಂತರ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಕೂಡ ಕಡಿಮೆಯಾಗಿದೆ ಎಂದು ಗುರುತಿಸಲಾಗಿದೆ. ರಾಯಿಟರ್ಸ್‌ ವರದಿ ಪ್ರಕಾರ ಚಿನ್ನದ ಬೆಲೆಯಲ್ಲಿ ಒಂದೇ ರೀತಿಯ ಏರಿರಿಳಿತವನ್ನ ಗುರುತಿಸಿದೆ.

ಈ ವರ್ಷ ಚಿನ್ನ ದಾಖಲೆಯ ಓಟವನ್ನ ನಡೆಸಿದ್ದು, ಬೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಆರ್ಥಿಕ ಅನಶ್ಚಿತತೆಗಳ ನಡುವೆ ಮಾರುಕಟ್ಟೆಯಲ್ಲಿ ಚಿನ್ನ ಪ್ರಭಲ ಸ್ಥಾನ ಪಡೆದುಕೊಂಡಿದೆ. ಈ ವಾರ ಚಿನ್ನದ ಬೇಡಿಕೆ ಕಡಿಮೆಯದ ಕಾರಣ ಬೆಂಗಳೂರು ಹಾಗೆ ಇತರೆ ನಗರಗಳಲ್ಲೂ ಚಿನ್ನದ ಬೆಲೆಯಲ್ಲಿ ತೀವ್ರವಾಗಿ ಕಡಿಮೆಯಾಗಿತ್ತು ಆದ್ರೆ ಇಂದು ಏರಿಕೆಯಾಗಿದೆ.

ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಈ ರಜೆಯ ವೇಳೆಯಲ್ಲಿ ವ್ಯಾಪಾರ ಚಟುವಟಿಕೆಗಳು ಹೊರತುಪಡಿಸಿ, ಅನಿರೀಕ್ಷಿತ ಬೆಳವಣಿಗೆಗಳು ಕೂಡ ಚಿನ್ನದ ಮೇಲೆ ಪರಿಣಾಮ ಬೀರಲಿವೆ. ಅಲ್ಲದೆ ಈ ಡೇಟಾ ಯುಎಸ್‌ ಆರ್ಥಿಕ ದೃಷ್ಟಿಕೋನದ ಕುರಿತು ಹೆಚ್ಚಿನ ಮಾಹಿತಿಯನ್ನ ನೀಡಲಿದ್ದು, ಭವಿಷ್ಯದ ನಿರ್ಧರಗಳ ಮೇಲೆ ಇದು ಪ್ರಬಾವ ಬೀರಲಿದೆ. ಡಾಲರ್‌ ಸೂಚ್ಯಂಕವು 0.4% ಏರಿಕೆಯಾಗಿದ್ದು,ಮುಂಬರುವ ವರ್ಷದಲ್ಲಿ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯನ್ನ ಕಾಣಬಹುದು ಎನ್ನಲಾಗ್ತಿದೆ.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ಕ್ರಮ
ಸಂಖ್ಯೆ
ನಗರಗಳು24 ಕ್ಯಾರೆಟ್22 ಕ್ಯಾರೆಟ್
1ದೆಹಲಿ77,600 ರೂ71,150 ರೂ
2ಮುಂಬೈ77,450 ರೂ71,000 ರೂ
3ಚೆನ್ನೈ77,450 ರೂ71,000 ರೂ
4ಕೋಲ್ಕತ್ತಾ77,450 ರೂ71,000 ರೂ

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ

ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಚೇತರಿಸಿಕೊಂಡಿದೆ. ಇಂದು ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 100 ಏರಿಕೆಯಾಗಿ 91,400 ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 10 ಏರಿಕೆಯಾಗಿ 9,150. ರೂಪಾಯಿ ಇದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.04% ನಷ್ಟು ಇಳಿಕೆಯಾಗುವ ಮೂಲಕ 76,243 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.04% ರಷ್ಟು ಕಡಿಮೆಯಾಗಿ, 89,360.ರೂಪಾಯಿ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ಕ್ರಿಸ್‌ಮಸ್‌ ಹಬ್ಬ ಹಿನ್ನೆಲೆ ಅಂತರಾಷ್ಟ್ರೀಯ ಚಿನ್ನದ ಮಾರುಕಟ್ಟೆ ಇಂದು ಮುಚ್ಚಿದೆ. ಆದ್ರೆ ನಾಳೆ ಇದರ ವಹಿವಾಟುಗಳು ಆರಂಭವಾಗಲಿವೆ. ಇನ್ನು goldprice.org ಮಾಹಿರಿ ನೀಡಿರುವ ಪ್ರಕಾರ, ಸ್ಪಾಟ್‌ ಚಿನ್ನದ ಬೆಲೆ ಇಂದು ಪ್ರತೀ ಔನ್ಸ್‌ಗೆ 0.03% ರಷ್ಟು ಸ್ವಲ್ಪ ಲಾಭವನ್ನು ಸೂಚಿಸುವ ಮೂಲಕ 2,616.45 ಡಾಲರ್‌ ತಲುಪಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವನ್ನ ಕಂಡಿದೆ. ಅಲ್ಲದೆ US ಡಾಲರ್ ತನ್ನ ಪ್ರಬಲ ಮಟ್ಟದಲ್ಲಿ ಸ್ಥಿರವಾಗಿ ಇರುವುದರಿಂದ ಈ ಕುಸಿತವನ್ನ ಕಾಣುವಂತಾಗಿದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+