ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ: 100 ಗ್ರಾಂ 22k ಚಿನ್ನದ ಬೆಲೆ 1,500 ರೂ. ಏರಿಕೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಈ ವಾರ ಚಿನ್ನದ ಬೆಲೆ ಮತ್ತೆ ಏರಿಕೆಯನ್ನ ಕಂಡಿದೆ. ಮತ್ತೆ ಬೆಂಗಳೂರಿಗರಿಗೆ ನಿರಾಸೆಯಾಗಿದೆ. ಅರಿಯಾಗಿ ಹಬ್ಬದ ವೇಳೆಗೆ ಚಿನ್ನದ ದರಗಳು ಕೂಡ ಏರಿಕೆಯಾಗಿವೆ. ಆಭರಣ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ.

ಜನವರಿ 11 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 150ರೂ. ಏರಿಕೆಯಾಗಿ 73,000 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 170 ರೂ. ಏರಿಕೆಯಾಗಿ 79,640 ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 120 ರೂ. ಏರಿಕೆಯಾಗಿ 59,730 ಆಗಿದೆ.

ಬೆಂಗಳೂರಿನಲ್ಲಿ ಮತ್ತೆ ಏರಿದ ಚಿನ್ನದ ದರ!

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,500 ರೂ. ಏರಿಕೆಯಾಗಿ 7,30,000 ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,700 ರೂ. ಏರಿಕೆಯಾಗಿ 7,96,400ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,200 ರೂ. ಏರಿಕೆಯಾಗಿ 5,97,300 ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರಗಳು

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 93.50 ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 93,600ರೂ. ಆಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ.

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24 ಕ್ಯಾರೆಟ್22 ಕ್ಯಾರೆಟ್
ದೆಹಲಿ79,80073,150
​ಮುಂಬೈ79,64073,000
ಚೆನ್ನೈ79,64073,000
​ಕೋಲ್ಕತ್ತಾ79,64073,000


ಸ್ಪಾಟ್‌ ಚಿನ್ನದ ಭವಿಷ್ಯ

ಸ್ಪಾಟ್‌ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್‌ ಡಾಲರ್‌ ಏರಿಕೆಯಿಂದಾಗಿ ಇದು ಸ್ಪಾಟ್‌ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ ಸ್ಪಾಟ್‌ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 2,689.90 ಡಾಲರ್‌ನಲ್ಲಿ ಸ್ಥಿರವಾಗಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 0.93% ಏರಿಕೆಯಾಗಿ 30.41 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್‌ ಬೆಲೆಯು ಪ್ರತಿ ಔನ್ಸ್‌ಗೆ 0.21%ರಷ್ಟು ಇಳಿಕೆಯಾಗಿ 959.25 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 2.15% ರಷ್ಟು ಏರಿಕೆಯಾಗಿ 948.50 ಡಾಲರ್‌ ತಲುಪಿದೆ.

MCX ಗೋಲ್ಡ್ ಔಟ್‌ಲುಕ್

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.03%ನಷ್ಟು ಇಳಿಕೆಯಾಗಿ 78,400ರೂ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು.

MCX ಸಿಲ್ವರ್‌ ಔಟ್‌ಲುಕ್

ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.04%ನಷ್ಟು ಇಳಿಕೆಯಾಗಿ 92,466 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಬೆಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು.

ರಾಯಿಟರ್ಸ್‌ ವರದಿ ಪ್ರಕಾರ ನವೆಂಬರ್‌ನ ಮಧ್ಯ ತಿಂಗಳಿನಿಂದ ಇಲ್ಲಿಯವರೆಗೆ ಹೋಲಿಕೆ ಮಾಡಿದರೆ ಈ ವಾರ ಹಳದಿ ಲೋಹ ಉತ್ತಮ ಓಟವನ್ನ ಮುಂದುವರೆಸಿದೆ. ಇಂದು ಯುಎಸ್‌ ಉದ್ಯೋಗ ದತ್ತಾಂಶಗಳು ಪ್ರಕಟವಾಗಲಿದ್ದು ಜಾಕತಿಕವಾಗಿ ಎಲ್ಲರ ಗಮನ ಆ ದತ್ತಾಂಶದ ಮೇಲೆ ಇದೆ. ಮುಂಬರುವ ದಿನಗಳಲ್ಲಿ ಯುಎಸ್‌ ಪೆಡರಲ್‌ ರಿಸರ್ವ್‌ನ ಬಡ್ಡಿದರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಯುಎಸ್‌ ಡಾಲರ್‌ ಏರಿಕೆಯಿಂದಾಗಿ ಇಂದು ಚಿನ್ನದ ದರ ಕೂಡ ಏರಿಕೆಯಾಗಿದೆ. ನಾಲ್ಕು ವಾರಗಳಲ್ಲಿ ಚಿನ್ನದ ದರ ಅಂತರಾಷ್ಟ್ರೀಯ ಮಾರರುಕಟ್ಟೆಯಲ್ಲಿ ಗರಿಷ್ಠ ಮಟ್ಟವನ್ನ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+