Bangalore Gold Rate: ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಚಿನ್ನದ ದರ! ಬೆಳ್ಳಿ ಬೆಲೆ ಇಳಿಕೆ

ಭಾರತೀಯರು ಚಿನ್ನ ಪ್ರಿಯರು. ಅದರಲ್ಲೂ ಬೆಂಗಳೂರಿನಲ್ಲಿ ಬಹುತೇಕರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಆದ್ರೆ ಇತ್ತೀಚಿನ ಬೆಲೆ ಏರಿಕೆಯಿಂದಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಹೆಚ್ಚಿನವರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಹೊಸ ವರ್ಷದಲ್ಲಿ ಚಿನ್ನದ ಬೆಲೆ (Gold Rate Bangalore) ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ, ಕೊನೆಗೂ ಗುಡ್‌ ನ್ಯೂಸ್‌ ಸಿಕ್ಕಿದೆ. ಇದೀಗ ಕೊನೆಗೂ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದೆ. ಹಾಗಿದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಚಿನ್ನದ ದರ! ಬೆಳ್ಳಿ ಬೆಲೆ ಇಳಿಕೆ

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಪ್ರತೀ ಗ್ರಾಂನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಅಂದರೆ 24K ಚಿನ್ನದ 1 ಗ್ರಾಂ ಬೆಲೆ ಇಂದು ₹13,582 ರೂ. ಆಗಿದ್ದು, ನಿನ್ನೆ ₹13,620 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂನಲ್ಲಿ ₹38 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು ₹1,08,656 ರೂ. ಆಗಿದ್ದು, ನಿನ್ನೆ ₹1,08,960 ರೂ. ಇತ್ತು. ನಿನ್ನೆಗಿಂತ ಇಂದು 8 ಗ್ರಾಂ ಚಿನ್ನದಲ್ಲಿ ₹304 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,35,820 ರೂ. ಆಗಿದ್ದು, ನಿನ್ನೆ ₹1,36,200 ರೂ. ಇತ್ತು. ನಿನ್ನೆಗಿಂತ ಇಂದು ₹380 ರೂ. ಇಳಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ದರ 13,58,200 ರೂ. ಆಗಿದ್ದು, ನಿನ್ನೆ 13,62,000 ರೂ. ಇತ್ತು.

ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು ₹12,450 ರೂ. ಆಗಿದ್ದು, ನಿನ್ನೆ ₹12,485 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹35 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು 99,600 ರೂ. ಆಗಿದ್ದು, ನಿನ್ನೆ 99,880 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹280 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,24,500 ರೂ. ಆಗಿದ್ದು, ನಿನ್ನೆ ₹1,24,850 ರೂ. ಇತ್ತು. ಒಟ್ಟು ₹350 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹12,45,000 ರೂ. ಆಗಿದ್ದು, ನಿನ್ನೆ ₹12,48,500 ರೂ. ಇತ್ತು. ಇನ್ನು ಚಿನ್ನದ ಬೆಲೆ ಏರಿಕೆಯ ಪ್ರಮಾಣ ಗಮನಿಸಿದ್ರೆ, ಇಳಿಕೆ ಪ್ರಮಾಣ ತುಂಬಾನೇ ಕಡಿಮೆಯಾಗಿದೆ. ಆದ್ದರಿಂದ ಹೂಡಿಕೆದಾರರು ಇದನ್ನು ಗಮನಿಸಿಕೊಂಡು ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿದ್ರೆ ಉತ್ತಮ.

ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಸಾಮಾನ್ಯವಾಗಿ 24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ. ಇಂದು 18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹10,187 ರೂ. ಆಗಿದ್ದು, ನಿನ್ನೆ ₹10,215 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹28 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹81,496 ರೂ. ಆಗಿದ್ದು, ನಿನ್ನೆ ₹81,720 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹224 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,01,870 ರೂ. ಆಗಿದ್ದು, ನಿನ್ನೆ 1,02,150 ರೂ. ಇತ್ತು. ಒಟ್ಟು ₹280 ರೂ. ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ ₹240 ರೂ. ಇದೆ. ಆದ್ರೆ ನಿನ್ನೆ ₹242 ರೂ. ಇತ್ತು. ನಿನ್ನೆಗಿಂತ ಇಂದು ₹2 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,920 ರೂ. ಆಗಿದ್ದು, ನಿನ್ನೆ ₹1,936 ರೂ. ಇತ್ತು. ನಿನ್ನೆಗ ಹೋಲಿಸಿದ್ರೆ ಇಂದು ₹16 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹2,400 ರೂ., 100 ಗ್ರಾಂ ಬೆಳ್ಳಿ ಬೆಲೆ ₹24,000 ರೂ., 1000 ಗ್ರಾಂ ಬೆಳ್ಳಿ ದರ ₹2,40,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಗೋಲ್ಡ್‌ ಪ್ರೈಸ್‌ ವರದಿ ಪ್ರಕಾರ, ಜನವರಿ 02, 2026 ರಂದು ಸ್ಪಾಟ್‌ ಚಿನ್ನದ ದರ ಪ್ರತೀ ಔನ್ಸ್‌ಗೆ $4,372.32 ಆಗಿತ್ತು. ಹಿಂದಿನ ವಹಿವಾಟಿಗೆ ಹೋಲಿಸಿದ್ರೆ ಇಂದು 1.01% ಹೆಚ್ಚಳವಾಗಿದೆ. ಆದರೆ ಇಂದು $4,332.36ರಷ್ಟು ಇಳಿಕೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+