ಈ ವರ್ಷದ ಆರಂಭದಿಂದದಲೂ ಏರಿಳಿತಗಳನ್ನ ಗಮನಿಸಿದ್ದ ಚಿನ್ನದ ಬೆಲೆಯಲ್ಲಿ ನಿನ್ನೆ ಯಾವುದೇ ಬದಲಾವಣೆಯಾಗಿರಲಿಲ್ಲ. ಇದರ ಜೊತೆಗೆ ಬೆಳ್ಳಿ ಬೆಲೆ ಕೂಡ ಸ್ಥಿರ ಸ್ಥಾನ ಕಾಯ್ದುಕೊಂಡಿತ್ತು. ಆದ್ರೆ ಇಂದು ಕೂಡ ಅದೇ ಸ್ಥಿತಿ ಮುಂದುವರೆದಿದೆ. ಇಂದು ಕೂಡ ಚಿನ್ನದ ಬೆಲೆ ಸ್ಥಿರವಾಗಿದೆ. ಆದ್ರೆ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ.
ಬೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಹಣದುಬ್ಬರದ ಹಿನ್ನೆಲೆ ಚಿನ್ನದ ಬೆಲೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇತ್ತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನವರಿ 20 ರಂದು ಕಚೇರಿಗೆ ಹಿಂತಿರುಗಲಿದ್ದು, ಅವರ ಉದ್ದೇಶಿತ ಸುಂಕಗಳು ಮತ್ತು ರಕ್ಷಣಾ ನೀತಿಗಳು ಹಣದುಬ್ಬರವನ್ನು ಉತ್ತೇಜಿಸುವ ನಿರೀಕ್ಷೆಯಿದೆ.
ಜನವರಿ 7 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರವಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 72,150 ರೂ. ಇದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 78,710 ಇದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 59,030 ಇದೆ.

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,21,500 ಇದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,87,100 ಇದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 100 ಇಳಿಕೆಯಾಗಿ 5,90,300 ಇದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 1 ರೂ. ಏರಿಕೆಯಾಗಿ 92.50 ರೂ. ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 1000 ರೂ ಏರಿಕೆಯಾಗಿ 92,500ರೂ. ಆಗಿದೆ. ನಿನ್ನೆ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಏರಿಕೆಯಾಗಿದೆ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ಕ್ರಮ ಸಂಖ್ಯೆ | ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| 1 | ದೆಹಲಿ | 78,860 ರೂ | 72,300 ರೂ |
| 2 | ಮುಂಬೈ | 78,710 ರೂ | 72,150 ರೂ |
| 3 | ಚೆನ್ನೈ | 78,710 ರೂ | 72,150 ರೂ |
| 4 | ಕೋಲ್ಕತ್ತಾ | 78,710 ರೂ | 72,150 ರೂ |
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ 0242 GMT.ಯಲ್ಲಿ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.1% ರಷ್ಟು ಏರಿಕೆಯಾಗಿ 2,638.09 ಡಾಲರ್ ತಲುಪಿದೆ. ಹಾಗೆ ಯುಎಸ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ ಸ್ವಲ್ಪ ಬದಲಾವಣೆಯಾಗಿ 2,648.60 ಡಾಲರ್ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 0.1% ಏರಿಕೆಯಾಗಿ 29.98 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್ ಬೆಲೆಯು ಪ್ರತಿ ಔನ್ಸ್‌ಗೆ 0.2%ರಷ್ಟು ಇಳಿಕೆಯಾಗಿ 931.63 ಡಾಲರ್ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.1%ರಷ್ಟು ಇಳಿಕೆಯಾಗಿ 919.44 ಡಾಲರ್ ತಲುಪಿದೆ ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ.
MCX ಗೋಲ್ಡ್ ಔಟ್‌ಲುಕ್
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.06%ನಷ್ಟು ಏರಿಕೆಯಾಗಿ 77,205ರೂ. ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.02%ನಷ್ಟು ಇಳಿಕೆಯಾಗಿ 90,535 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ಯುಎಸ್ ಡಾಲರ್ ದುರ್ಭಲತೆಯಿಂದ ಇಳಿಕೆಯಾಗಿದ್ದ ಚಿನ್ನದ ದರ ಇಂದು ಸ್ಥಿರವಾಗಿದೆ. ಹಲವು ದಿಗಳಿಂದ ಹಾವುಏಣಿಆಟವನ್ನ ನಡೆಸುತ್ತಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಅಲ್ಲದೆ ಆರ್ಥಿಕ ದತ್ತಾಂಶಗಳ ಪ್ರಕಾರ ಈ ವಾರ ಚಿನ್ನದ ದರದಲ್ಲಿ ಸಾಕಷ್ಟು ಏರಿಳಿತಗಳಾಗಬಹುದು ಎನ್ನಲಾಗ್ತಿದೆ. ಅಲ್ಲದೆ ರಿಚ್ಮಂಡ್ ಫೆಡ್ ಅಧ್ಯಕ್ಷ ಬಾರ್ಕಿನ್ ಚಿನ್ನದ ದರವು ನಿರ್ಭಂದಿತವಾಗಿರಲಿದೆ ಎಂದು ಹೇಳಿದ್ದಾರೆ.
ರಾಯಿಟರ್ಸ್ ವರದಿ ಪ್ರಕಾರ ಯುಸ್ ಡಾಲರ್ ದುರ್ಬಲತೆಯಿಂದಾಗಿ ಚಿನ್ನದ ಬೆಲೆಗಳು ಕೂಡ ಏರಿಳಿತವನ್ನ ಗಮನಿಸುವಂತಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನ ಮಾಡುವವರು ಇಂದು ಯುಎಸ್ ದತ್ತಾಂಶಕ್ಕಾಗಿ ಕಾಯುತ್ತಿದ್ದ ಕಾರಣ ಬೆಲೆಗಳಲ್ಲಿ ಎರಿಳಿತಗಳನ್ನ ಕಾಣುವಂತಾಗಿದೆ. ಹಾಗೆ ಕ್ರಮೇಣ ದರ ಕಡಿತದಿಂದಾಗಿ ನಿರೋದ್ಯೋಗ ದರ ಕೂಡ ಸ್ಥಿರವಾಗಿದೆ ಎಂದು ವಿಶ್ಲೇಕರು ಹೇಳಿದ್ದಾರೆ. ಹಾಗೆ ಶುಕ್ರವವಾರ ಯುಎಸ್ ಕೃಷಿಯೇತರ ವೇತನದಾರರ ವರದಿ ಬಿಡುಗಡೆಯಾಗಲಿದ್ದು ಅದರ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಹಣದುಬ್ಬರದ ವಿರುದ್ಧ ಬುಲಿಯನ್ ಅನ್ನು ಹೆಡ್ಜ್ ಎಂದು ಪರಿಗಣನೆ ಮಾಡಲಾಗುತ್ತದೆ. ಅಲ್ಲದೆ ಈ ಬಾರಿ ಹಣದುಬ್ಬರ ಪುನಶ್ಚೇತನಗೊಳಿಸಬಹುದು ಎಂದು ಅತೀ ಹೆಚ್ಚು ನೀತಿ ನಿರೂಪಕರು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆ ಹೂಡಿಕೆದಾರರು ADP ಉದ್ಯೋಗ ಸಂಖ್ಯೆ ಮತ್ತು ಉದ್ಯೋಗವಕಾಶಗಳ ಡೇಟಾಗಾಗಿ ಕಾಯುತ್ತಿದ್ದಾರೆ.


Click it and Unblock the Notifications