ಇಂದು ಬೆಂಗಳೂರಿನಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ. ಕೆಲ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನದ ದರ ಇಂದು ಏರಿಕೆಯಾಗಿದೆ. ಸಂಕ್ರಾಂತಿ ವೇಳೆ ಬೆಂಗಳೂರಿಗರಿಗೆ ನಿರಾಸೆಯಾಗಿದೆ. ಇನ್ನು ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಸಾಕಷ್ಟು ಏರಿಳಿತಗಳ ನಂತರ ಚಿನ್ನ ತನ್ನ ಓಟವನ್ನ ಮತ್ತೆ ಮುಂದುವರೆಸಿದೆ.
ಯುಎಸ್ ಡಾಲರ್‌ನ ಬಲವರ್ದನೆಯಿಂದಾಗಿ ಇಂದು ಚಿನ್ನದ ದರ ಕೂಡ ಏರಿಕೆಯಾಗಿದೆ. ಇನ್ನು ಡಾಲರ್ ಬೆಲೆ ಹೆಚ್ಚಾಗ್ತಿದ್ದಂತೆ ಉದ್ಯೋಗವಕಾಶಗಳು ಕೂಡ ತೆರೆದುಕೊಳ್ತಿವೆ. 259,000 ದಿಂದ 8.098 ಮಿಲಿಯನ್‌ಗೆ ಉದ್ಯೋಗವಕಾಶಗಳು ಏರಿಕೆಯಾಗಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಜನವರಿ 8 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂ. ಏರಿಕೆಯಾಗಿ 72,250 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 110 ರೂ. ಏರಿಕೆಯಾಗಿ 78,820 ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 90 ರೂ. ಏರಿಕೆಯಾಗಿ 59,120 ಆಗಿದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,000 ರೂ. ಏರಿಕೆಯಾಗಿ 7,22,500 ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,100 ರೂ. ಏರಿಕೆಯಾಗಿ 7,88,200 ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 900 ರೂ. ಏರಿಕೆಯಾಗಿ 5,91,200 ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 92.50 ರೂ. ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 92,500ರೂ. ಇದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ಕ್ರಮ ಸಂಖ್ಯೆ | ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| 1 | ದೆಹಲಿ | ರೂ.78,970 | ರೂ.72,400 |
| 2 | ಮುಂಬೈ | ರೂ.78,820 | ರೂ.72,250 |
| 3 | ಚೆನ್ನೈ | ರೂ.78,820 | ರೂ.72,250 |
| 5 | ಕೋಲ್ಕತ್ತಾ | ರೂ.78,820 | ರೂ.72,250 |
Gold Loan Vs Personal Loan: ಯಾವುದು ಉತ್ತಮ, ಯಾವುದನ್ನು ಆಯ್ಕೆ ಮಾಡಬೇಕು? ಇಲ್ಲಿ ತಿಳಿಯಿರಿ
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ 1907 GMT ಯಲ್ಲಿ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.5% ರಷ್ಟು ಏರಿಕೆಯಾಗಿ 2,648.76 ಡಾಲರ್ ತಲುಪಿದೆ. ಹಾಗೆ ಯುಎಸ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 0.7%ರಷ್ಟು ಏರಿಕೆಯಾಗಿ 2,665.40 ಡಾಲರ್ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 0.4% ಏರಿಕೆಯಾಗಿ 30.06 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್ ಬೆಲೆಯು ಪ್ರತಿ ಔನ್ಸ್‌ಗೆ 1.8%ರಷ್ಟು ಏರಿಕೆಯಾಗಿ 949.74 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.3% ರಷ್ಟು ಏರಿಕೆಯಾಗಿ 923.25 ಡಾಲರ್ ತಲುಪಿದೆ.
MCX ಗೋಲ್ಡ್ ಔಟ್‌ಲುಕ್
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.1%ನಷ್ಟು ಇಳಿಕೆಯಾಗಿ 77,450ರೂ. ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.16%ನಷ್ಟು ಇಳಿಕೆಯಾಗಿ 90,726 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ಮಾರುಕಟ್ಟೆಯಲ್ಲಿ ಸ್ಪರ್ಧಿಸುವವರು ಇಂದು ಯುಎಸ್ ದತ್ತಾಂಶದ ನಿರೀಕ್ಷೆಯಲ್ಲಿದ್ದಾರೆ. ಹಾಗೆ ಕ್ರಮೇಣ ದರ ಕಡಿತದಿಂದಾಗಿ ನಿರೋದ್ಯೋಗ ದರ ಕೂಡ ಸ್ಥಿರವಾಗಿತ್ತು, ಅದ್ರೆ ಇಂದು ಉದ್ಯೋಗವಕಾಶಗಳು ತೆರದುಕೊಂಡಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಹಾಗೆ ಯುಎಸ್ ಕೃಷಿಯೇತರ ವೇತನದಾರರ ವರದಿ ಶುಕ್ರವವಾರ ಬಿಡುಗಡೆಯಾಗಲಿದ್ದು ಅದನ್ನ ನಿರೀಕ್ಷೆ ಮಾಡುತ್ತಿದ್ದಾರೆ.
ಇನ್ನು ಹಣದುಬ್ಬರದ ವಿರುದ್ಧ ಬುಲಿಯನ್ ಅನ್ನು ಹೆಡ್ಜ್ ಎಂದು ಪರಿಗಣಿಸಲಾಗಿದೆ. ಅಲ್ಲದೆ ಈ ಬಾರಿ ಹಣದುಬ್ಬರ ಪುನಶ್ಚೇತನಗೊಳಿಸಬಹುದು ಎಂದು ಅತೀ ಹೆಚ್ಚು ನೀತಿ ನಿರೂಪಕರು ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆ ಹೂಡಿಕೆದಾರರು ADP ಉದ್ಯೋಗ ಸಂಖ್ಯೆ ಮತ್ತು ಉದ್ಯೋಗವಕಾಶಗಳ ಡೇಟಾಗಾಗಿ ನಿರೀಕ್ಷಿಸುತ್ತಿದ್ದಾರೆ.


Click it and Unblock the Notifications