Bangalore Today's Gold Rate Update Nov 28: ಚಿನ್ನಪ್ರಿಯರ ಮೊಗದಲ್ಲಿ ಮಂದಹಾಸ -22 ಕ್ಯಾರೆಟ್ ಬಂಗಾರದ ಬೆಲೆ ₹1500 ಕುಸಿತ

ನಿನ್ನೆ ತಾನೆ ಏರಿಕೆ ಕಂಡಿದ್ದ ಚಿನ್ನದ ದರದಿಂದ ಆಭರಣಪ್ರಿಯರಿಗೆ ನಿರಾಸೆ ಉಂಟಾಗಿತ್ತು. ಆದರೆ ಇಂದು ರಾಜ್ಯ ರಾಜಧಾನಿ ಬೆಂಗಳೂರಿನ ಚಿನ್ನದ ಬೆಲೆಯಲ್ಲಿ ಕೊಂಚ ಮಟ್ಟಿನ ಕುಸಿತ ಕಂಡಿದ್ದು ಚಿನ್ನಾಭರಣ ಪ್ರಿಯರ ಮೊಗದಲ್ಲಿ ನಗು ಕಂಡುಬಂದಿದೆ.

ಬುಧವಾರದಂದು ಸಣ್ಣ ಮಟ್ಟದ ಏರಿಕೆಯ ನಂತರ ಈ ಇಳಿಕೆ ಕಂಡುಬಂದಿದೆ. ಅಮೆರಿಕ ಡಾಲರ್ ಸೂಚ್ಯಂಕದಲ್ಲಿ ಸಣ್ಣ ಮಟ್ಟದ ಏರಿಕೆಯಿಂದಾಗಿ ಚಿನ್ನದ ಬೆಲೆ ಮೇಲೆ ಒತ್ತಡ ಹೆಚ್ಚಾಗಿದೆ. ಕೋರ್ ಪರ್ಸನಲ್ ಕನ್ಸಂಪ್ಷನ್ ಎಕ್ಸ್‌ಪೆಂಡಿಚರ್ ಡೇಟಾ ಬಿಡುಗಡೆಯಾದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಈ ಡೇಟಾವು ಅಮೆರಿಕದಲ್ಲಿ ಹಣದುಬ್ಬರ ಕಡಿಮೆಯಾಗುತ್ತಿರುವ ಸಂಕೇತಗಳನ್ನು ತೋರಿಸಿದೆ. ಇದರಿಂದಾಗಿ ಮುಂದಿನ ವರ್ಷ ಫೆಡರಲ್ ರಿಸರ್ವ್‌ನ ನೀತಿ ನಿಲುವು ಹಿಂದಿನ ನಿರೀಕ್ಷೆಗಿಂತ ಕಡಿಮೆ ಸಹಾಯಕವಾಗಿರಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಇದು ಡಾಲರ್‌ಗೆ ಬಲ ತಂದುಕೊಡಬಹುದು . ಡಾಲರ್ ಬಲವಾಗಿದ್ದಾಗ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಹೆಚ್ಚಿರುವುದರಿಂದ ಬಂಗಾರದ ಮೇಲೆ ಹೂಡಿಕೆಗೆ ಇದು ಅನುಕೂಲವಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರವಿದೆ.

ಬೆಂಗಳೂರಿನಲ್ಲಿ ನ. 28ರ ಗುರುವಾರ ಚಿನ್ನದ ಬೆಲೆಯಲ್ಲಿ ಇಳಿಕೆ

ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ 22 ಕ್ಯಾರೆಟ್ ಚಿನ್ನದ 10 ಗ್ರಾಂಗೆ 150 ರೂ, ಕುಸಿತ ಕಂಡು ₹70,900 ಆಗಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 160 ₹77,300 ಆಗಿದೆ. ಇನ್ನು 18 ಕ್ಯಾರೆಟ್ ಚಿನ್ನದ 10 ಗ್ರಾಂಗೆ 120 ರೂ. ಕಡಿಮೆಯಾಗಿದ್ದು ₹58,010 ಇದೆ. 24 ಕ್ಯಾರೆಟ್ ಚಿನ್ನವು ಅತ್ಯಂತ ಶುದ್ಧವಾದ ಚಿನ್ನವಾಗಿದ್ದು, ಇದರ ಬೆಲೆ ಹೆಚ್ಚಿಳ ವ್ಯತ್ಯಾಸವಾಗುತ್ತದೆ.

ಅದೇ ರೀತಿ ಬೆಂಗಳೂರಿನಲ್ಲಿ ಪ್ರಸ್ತುತ 100 ಗ್ರಾಂ ಹಳದಿ ಲೋಹದ 24 ಕ್ಯಾರೆಟ್ ಬೆಲೆ ರೂ. 7,73,000 ಆಗಿದ್ದು, ಇದರ ಬೆಲೆ ನಿನ್ನೆಯ ಬೆಲೆ 7,75,100 ರೂ. ಆಗಿತ್ತು. ಅಂದರೆ ಒಟ್ಟಾರೆ ಬಂಗಾರ ಬೆಲೆಯಲ್ಲಿ 1,600 ರೂ. ಕುಸಿತ ಕಂಡಿದೆ. ಇನ್ನು 22-ಕ್ಯಾರೆಟ್ ನ 100 ಗ್ರಾಂ ಚಿನ್ನದ ಬೆಲೆ 7,09,000 ಆಗಿದ್ದು 1,500 ರೂ. ಕುಸಿತ ಕಂಡಿದೆ. ಇನ್ನೂ 100 ಗ್ರಾಂ ಚಿನ್ನದ 18 ಕೆ ಬುಧವಾರದ ಬೆಲೆ ₹ 5,81,300. ಇದು ಗುರುವಾರದಂದು 5,80,100 ರೂ. ಆಗಿದೆ. ಅಂದರೆ 1,200 ರೂ. ಇಳಿಕೆಯಾಗಿದೆ.

ಇಂದು 10 ಗ್ರಾಂಗೆ 18 ಕ್ಯಾರೆಟ್ ಚಿನ್ನದ ಬೆಲೆ ರೂ ನಿನ್ನೆ 58,130 ಆಗಿದ್ದು , ಇಂದಿನ ಬೆಲೆ ₹ 58,010 ಆಗಿದೆ. ಒಟ್ಟಾರೆ ಗಮನಿಸುವುದಾದರೆ ಇಲ್ಲಿ 120 ರೂಪಾಯಿ ಕಡಿಮೆ ಆಗಿದೆ.

ಈ ವಾರದ ಚಿನ್ನದ ಬೆಲೆಯನ್ನು ಗಮನಿಸುವುದಾದರೆ ಬೆಂಗಳೂರಿನ ಚಿನ್ನದ ಬೆಲೆಗಳು ಗಮನಾರ್ಹ ಏರಿಳಿತಗಳನ್ನು ಅನುಭವಿಸುತ್ತಿವೆ. ವಾರದ ಆರಂಭದಲ್ಲಿ ಬೆಲೆಗಳು ಕುಸಿಯುತ್ತಾ ಸಾಗಿ ಗ್ರಾಹಕರಿಗೆ ಖುಷಿ ನೀಡಿದ್ದ ಚಿನ್ನ, ನಿನ್ನೆ ಸ್ವಲ್ಪ ಬೆಲೆಯಲ್ಲಿ ಚೇತರಿಕೆ ಕಂಡು ಚಿನ್ನ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಆದಫ಼ೆಇಂದು ಮತ್ತೆ ಸಣ್ಣ ಮಟ್ಟದ ಇಳಿಕೆ ಕಂಡುಬಂದಿದೆ.

ದೇಶೀಯ ಚಿನ್ನದ ಮಾರುಕಟ್ಟೆಯಲ್ಲಿನ ಈ ಏರಿಳಿತಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗಳಲ್ಲಿನ ಬದಲಾವಣೆಗಳಿಗೆ ನೇರವಾಗಿ ಸಂಬಂಧಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತಗೊಳ್ಳುವುದರಿಂದ, ಭಾರತದಲ್ಲಿನ ಬೆಲೆಗಳು ಕೂಡ ಅದೇ ರೀತಿ ಪ್ರಭಾವಿತವಾಗುತ್ತವೆ.

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ

ಇನ್ನು ಬೆಳ್ಳಿಯ ಬೆಲೆಗಳನ್ನು ಬೆಂಗಳೂರಿನಲ್ಲಿ ಗಮನಿಸುವುದಾದರೆ ಇಂದು, ಅಂದರೆ ನವೆಂಬರ್ 28, 2024 ರಂದು ಯಾವುದೇ ಬದಲಾವಣೆಯಾಗಿಲ್ಲ. ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ ₹89,500 ಆಗಿದೆ. ಅದೇ ರೀತಿ, 100 ಗ್ರಾಂ ಬೆಳ್ಳಿಯ ಬೆಲೆ ₹8,950 ಆಗಿದೆ. ಕಳೆದೆರಡು ದಿನಕ್ಕೆ ಹೋಲಿಸಿದರೆ ಅಂದರೆ ಮಂಗಳವಾರ ಮತ್ತು ಬುಧವಾರ ಬೆಲೆ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 89,500 ರೂ ಇದ್ದು ಬೆಲೆಯ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX)ನಲ್ಲಿ ಚಿನ್ನ-ಬೆಳ್ಳಿಯ ಭವಿಷ್ಯದ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ ಚಿನ್ನ ಮತ್ತು ಬೆಳ್ಳಿಯ ಭವಿಷ್ಯದ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ಡಿಸೆಂಬರ್ 5 ರ ವಿತರಣೆಗೆ ಚಿನ್ನದ ಭವಿಷ್ಯವು ಪ್ರಸ್ತುತ ಪ್ರತಿ 10 ಗ್ರಾಂಗೆ ₹75,545 ಕ್ಕೆ ವಹಿವಾಟು ನಡೆಸುತ್ತಿದೆ, ಇದು 0.28% ಕುಸಿದಿದೆ. ಅದೇ ರೀತಿ, ಡಿಸೆಂಬರ್ 5 ರಂದು ಮುಕ್ತಾಯವಾಗುವ ಬೆಳ್ಳಿಯ ಭವಿಷ್ಯವು 0.70% ಕುಸಿದು ಪ್ರತಿ ಕಿಲೋಗ್ರಾಂಗೆ ₹87,070 ಕ್ಕೆ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಗೋಲ್ಡ್

ರಾಯಿಟರ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಗುರುವಾರ ಚಿನ್ನದ ಬೆಲೆ ಕುಸಿದಿದೆ. ಸ್ಪಾಟ್ ಚಿನ್ನವು 0.3% ಕುಸಿದು ಔನ್ಸ್‌ಗೆ $2,627.60 ಕ್ಕೆ ತಲುಪಿದೆ ಮತ್ತು ಯುಎಸ್ ಚಿನ್ನದ ಫ್ಯೂಚರ್ಸ್ 0.5% ಕುಸಿದು $2,627.00 ಕ್ಕೆ ತಲುಪಿದೆ. ಸ್ಪಾಟ್ ಬೆಳ್ಳಿಯು ಸಹ 1% ಕ್ಕಿಂತ ಹೆಚ್ಚು ಕುಸಿದು ಔನ್ಸ್‌ಗೆ $29.78 ಕ್ಕೆ ತಲುಪಿದೆ.ಯುಎಸ್ ಡಾಲರ್ ಬಲಗೊಂಡಿದ್ದರಿಂದ ಚಿನ್ನದ ಬೆಲೆ ಕುಸಿದಿದೆ, ಇದು ಸಾಮಾನ್ಯವಾಗಿ ಸರಕು ಬೆಲೆಗಳ ಮೇಲೆ ಒತ್ತಡ ಹೇರುತ್ತದೆ. ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ಸೀಮಿತ ಪ್ರಗತಿಯನ್ನು ತೋರಿಸಿರುವ ಇತ್ತೀಚಿನ ಆರ್ಥಿಕ ಡೇಟಾವನ್ನು ಹೂಡಿಕೆದಾರರು ಜೀರ್ಣಿಸಿಕೊಳ್ಳುತ್ತಿದ್ದಾರೆ. ಇದು ಫೆಡರಲ್ ರಿಸರ್ವ್ ಮುಂದಿನ ಅಲ್ಪಾವಧಿಯಲ್ಲಿ ಹೆಚ್ಚಿನ ಬಡ್ಡಿ ದರ ಕಡಿತಗಳಿಗೆ ಹೆಚ್ಚು ಎಚ್ಚರಿಕೆಯ ವಿಧಾನವನ್ನು ಅಳವಡಿಸಿಕೊಳ್ಳಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ರಾಯಿಟರ್ಸ್‌ನ ಇತ್ತೀಚಿನ ವಿಶ್ಲೇಷಕ ವರದಿಯ ಪ್ರಕಾರ, ಚಿನ್ನದ ದೀರ್ಘಕಾಲೀನ ಪ್ರವೃತ್ತಿಯು ಅಕ್ಟೋಬರ್‌ನಲ್ಲಿ 64.7% ಸಾಧ್ಯತೆಯೊಂದಿಗೆ ಬಡ್ಡಿ ಕಡಿತದೊಂದಿಗೆ ಸುಸ್ಥಿರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+