ಬೆಂಗಳೂರು ಮೆಟ್ರೋ ಗ್ರೀನ್ ಲೈನ್‌ ವಿಸ್ತರಣೆಯಾಗಿದ್ದರೂ ಏರಿಕೆಯಾಗ್ತಿಲ್ಲ ಪ್ರಯಾಣಿಕರ ಸಂಖ್ಯೆ!

ಈಗಾಗಲೇ ಬೆಂಗಳೂರಿನಲ್ಲಿ ಜನರು ಮೆಟ್ರೋ ಸೇವೆಯನ್ನ ಬಳಸಿಕೊಳ್ತಿದ್ದಾರೆ. ಆದ್ರೆ ಈ ಹಿಂದೆ ನಾಗಸಂದ್ರವರೆಗೆ ಇದ್ದ ಮೆಟ್ರೋ ಮಾರ್ಗವನ್ನ ಮಾದವರವರೆಗೆ ವಿಸ್ತರಿಸಿದ ನಂತರ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಇದೆ ಎಂದು ಬಿಎಂಆರ್‌ಸಿಎಲ್‌ ವರದಿ ಮಾಡಿದೆ. ಅಲ್ಲದೆ ಹೊಸ ಮೆಟ್ರೋ ಸೇವೆಗಳ ಕುರಿತು ಈಗಾಗಲೇ ಬಿಎಂಆರ್‌ಸಿಎಲ್‌ ಹಲವು ಕಾರ್ಯಕ್ರಮಗಳನ್ನ ಕೂಡ ಮಾಡಿದೆ ಈ ಮೂಲಕ ಜನರನ್ನ ಸೆಲೆಯುವ ಕೆಲವನ್ನ ಮಾಡಿದೆ. ಆದ್ರೂ ಈ ಭಾಗದಲ್ಲಿ ಪ್ರಯಾಣಿಕರ ಸಮಖ್ಯೆ ಕಡಿಮೆ ಇದೆ ಎನ್ನಲಾಗ್ತಿದೆ.

ಸರ್ವಜನಿಕರ ಒತ್ತಡದಿಂದಾಗಿ ನವೆಂಬರ್‌ 7ರಂದು ನಾಗಸಂದ್ರದಿಂದ ಮಾದಾವರವರೆಗೆ ಹಸಿರು ಮಾರ್ಗ ಮೆಟ್ರೋ ಸೇವೆಯನ್ನ ಅಧಿಕೃತವಾಗಿ ಉದ್ಘಾಟನೆ ಮಾಡದೇನೆ ತೆರೆಯಲಾಯಿತು. ಆದ್ರೂ ಕೂಡ, ಈ ಮೂರು ವಾರಗಳ ಹಿಂದೆ, ಈ ಮಾರ್ಗ ಮೆಟ್ರೋವನ್ನ ಹೆಚ್ಚು ಜನರು ಬಳಸಿಸಲ್ಲ ಜೊತೆಗೆ ಹೆಚ್ಚು ಬಳಸಲು ಉತ್ಸಾಹವನ್ನ ತೋರುತ್ತಿಲ್ಲ ಎಂಬುದು ತಿಳಿದುಬಂದಿದೆ. ಏಕೆಂದರೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಅಂದಾಜು ಮಾಡಿರುವ ಸರಾಸರಿ ದೈನಂದಿನ ಸವಾರರ ಅಂಕಿಅಂಶಗಳ ಪ್ರಕಾರ ಈ ಭಾಗದಲ್ಲಿ ಬರೀ ನಾಲ್ಕನೇ ಒಂದು ಭಾಗದ ಜನರು ಮಾತ್ರ ಸಂಚರಿಸುತ್ತಾರೆ ಎನ್ನಲಾಗ್ತಿದೆ.

ಬೆಂಗಳೂರು ಮೆಟ್ರೋ ಗ್ರೀನ್ ಲೈನ್‌ನಲ್ಲಿ ಕಡಿಮೆಯಾದ ಪ್ರಯಾಣಿಕರ ಸಂಖ್ಯೆ

ಮಂಜುನಾಥ ನಗರ, ಚಿಕ್ಕಬಿದರಕಲ್ಲು ಮತ್ತು ಮಾದವರ (BIEC) ಮೂರು ನಿಲ್ದಾಣಗಳು ಈ 3.14-ಕಿಮೀ ಮಾರ್ಗವನ್ನು ಹೊಂದಿದ್ದು, ಇದೀಗ ಮಾದವರ ಗ್ರೀನ್ ಲೈನ್‌ನ ಉತ್ತರ ತುದಿಯ ಹೊಸ ಟರ್ಮಿನಲ್ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣಗಳಲ್ಲಿರುವ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಮತ್ತು ನೆಲಮಂಗಲ, ಮಾದನಾಯಕನಹಳ್ಳಿ, ಅಂಚೆಪಾಳ್ಯ ಮತ್ತು ಮಾಕಳಿ ಮುಂತಾದ ಸಮೀಪದ ಪ್ರದೇಶಗಳ ಸಾರ್ವಜನಿಕರು ಅವುಗಳನ್ನು ಬಳಸುವ ನಿರೀಕ್ಷೆಯಿದೆ.

BMRCL ಬಿಡುಗಡೆಯ ಮೊದಲದಿನದಿಂದಲು ಈ ಹೇಳಿಕೆಯನ್ನು ನೀಡಿದ್ದು, ಪ್ರತಿದಿನ 44,000 ಪ್ರಯಾಣಿಕರನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು BMRCL ತಿಳಿಸಿದೆ. BMRCL ನಿಂದ TNIEನೊಂದಿಗೆ ಹಂಚಿಕೊಂಡಿರುವ ನವೆಂಬರ್ 7 ರಿಂದ 30 ರವರೆಗಿನ ಡೇಟಾವನ್ನು ಆಧರಿಸಿ, ಈ ಮೂರು ನಿಲ್ದಾಣಗಳಲ್ಲಿ ಬೋರ್ಡಿಂಗ್ ಮಾಡುವ ಪ್ರಯಾಣಿಕರ ಸರಾಸರಿ ದೈನಂದಿನ ಸಂಖ್ಯೆ 11,303 ಇರುತ್ತದೆ.

ನಿರೀಕ್ಷೆಯಂತೆ, ಮಾದಾವರ, ಮಂಜುನಾಥನಗರ, ಚಿಕ್ಕಬಿದರಕಲ್ಲು ಭಾಗಗಳಲ್ಲಿ ಅತೀ ಹೆಚ್ಚು ಪ್ರಯಾಣಿಕರನ್ನ ಮಾದಾವರ ಹೊಂದಿದೆ. ಹಾಗೆ ಚಿಕ್ಕಬಿದರಕಲ್ಲು 3,649 ಸವಾರರಿದ್ದರೆ, ಮಂಜುನಾಥ್ ನಗರದಲ್ಲಿ 1,011 ಸವಾರರಿದ್ದರು ಎಂದು ಅಂಕಿಅಂಶದಿಂದ ತಿಳಿದುಬಂದಿದೆ.

ಅಲ್ಲದೆ ಬೆಂಗಲೂರಿನಲ್ಲಿ ಮೆಟ್ರೋ ಸಂಪೂಣ್ ನೆಟ್‌ವರ್ಕ್ 76.95 ಕಿಮೀನಲ್ಲಿ ನಿರಂತರವಾಗಿ ಸುಮಾರು ಎಂಟು ಲಕ್ಷ ಪ್ರಯಾಣಿಕರು ಪ್ರತಿದಿನ ಪ್ರಯಾಣ ಮಾಡ್ತಾರೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ನವೆಂಬರ್ ಕೊನೆಯ ವಾರದ ಬುಧವಾರ ಮತ್ತು ಗುರುವಾರದಂದು ಕ್ರಮವಾಗಿ 8.69 ಲಕ್ಷ ಮತ್ತು 8.7 ಲಕ್ಷ ಪ್ರಯಾಣಿಕರನ್ನು ಹೊಂದಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

BIEC ತೆಗೆದುಕೊಂಡ ಉಪಕ್ರಮಗಳು ತನ್ನ ಕಾರ್ಯಕ್ರಮಗಳನ್ನ ಮಾಡುವ ಮೂಲಕ ಮೆಟ್ರೋ ರೈಲುಗಳ ಬಳಕೆಯನ್ನು ಪ್ರಚಾರ ಮಾಡಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಅದರ ಹಿರಿಯ ನಿರ್ದೇಶಕ ಮತ್ತು ಬಿಐಇಸಿಯ ಮಾರ್ಕೆಟಿಂಗ್ ಮುಖ್ಯಸ್ಥ ಉಬೈದ್ ಅಹ್ಮದ್ ಹೇಳಿದರು.

BIEC ವೆಬ್‌ಸೈಟಟ್‌ನಲ್ಲಿ ನಮ್ಮ ಮೆಟ್ರೋ BIECನಿಂದ ಕಾರ್ಯನಿರ್ವಹಿಸುತ್ತಿದೆ, ಪ್ರಯಾಣಿಕರು ವೇಗದ ಪ್ರಯಾಣದ ಅನುಭವವನ್ನು ಪಡೆಯಬಹುದು ಎಂದು ಬರೆದುಕೊಂಡಿದೆ.

ಇನ್ನು ಮುಂಬರುವ ದಿಗಳಲ್ಲಿ ಹೊಸ ವಿಸ್ತರಣೆಯ ಪ್ರಾರಂಭದ ನಂತರ ನವೆಂಬರ್‌ನಲ್ಲಿ ಎರಡು ಕಾರ್ಯಕ್ರಮಗಳನ್ನ ಆಯೋಜಿಸಿದ್ದು, ಇದಕ್ಕೆ BIEC ಪ್ರತಿನಿಧಿಗಳು BIEC ಯ ಪ್ರದರ್ಶನ ಸಭಾಂಗಣಗಳನ್ನು ತಲುಪಲು ಶಟಲ್‌ ಬಸ್‌ಗಳನ್ನ ಸ್ಥಾಪಿಸುವಂತೆ ಅವರು ಒತ್ತಾಯಿಸಿದ್ದಾರೆ. ಇದನ್ನ ಪ್ರಚಾರ ಮಾಡುವ ನಮ್ಮ ಪ್ರಯತ್ನಗಳು ಮತ್ತು ಸಂಘಟಕರು ಕೈಗೊಂಡ ಉಪಕ್ರಮವು ನಮ್ಮ ಕಾರ್ಯಕ್ರಮಗಳು ತಲುಪುತ್ತಿದ್ದರಿಂದ ಅನೇಕರು ಮೆಟ್ರೋವನ್ನು ಬಳಸುವಂತೆ ಮಾಡಿದೆ ಎಂದು ಅವರು ಹೇಳಿದರು.

ನವೆಂಬರ್ 14 ರಿಂದ 16 ರವರೆಗೆ ಕೆಲವು ಕಾರ್ಯಕ್ರಮಗಳನ್ನ ನಡೆಸಲಾಯಿತು ಮತ್ತು ಗ್ರೇಸ್ ಹಾಪರ್ ಆಚರಣೆ 2024 ಅನ್ನು ನವೆಂಬರ್ 21 ರಿಂದ 22 ರವರೆಗೆ ನಡೆಸಲಾಯಿತು. ಡಿಸೆಂಬರ್‌ನಲ್ಲಿ ಮೂರು ಈವೆಂಟ್‌ಗಳನ್ನು ನಿಗದಿಪಡಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಗಳು BIEC ಅನ್ನು ತಲುಪಲು ಇದನ್ನು ಬಳಸುವ ನಿರೀಕ್ಷೆಯಿದೆ. ಹಾಗೆ ಇನ್ನೊಬ್ಬ ಅಧಿಕಾರಿ, ಇವು ಉಡಾವಣೆಯ ನಂತರದ ಆರಂಭಿಕ ವಾರಗಳು ಮಾತ್ರ. ಇದು ಕಾಲಾನಂತರದಲ್ಲಿ ಹೆಚ್ಚಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+