ವಿದ್ಯುತ್ ಕಂಬಗಳಲ್ಲಿ ಅಳವಡಿಸಲಾಗಿರುವ ಕೇಬಲ್ ವೈರ್‍ಗಳಿಂದ ಈವರೆಗೂ ಅದೆಷ್ಟೋ ಅನಾಹುತಗಳು ಸಂಭವಿಸಿವೆ. ಮಳೆ ಬಂದಾಗ ಕೇಬಲ್ ವೈರ್ ಬಿದ್ದು, ಅದನ್ನು ತುಳಿದ ಎಷ್ಟೋ ಮಂದಿ ಸಾವಿಗೀಡಾಗಿದ್ದಾರೆ. ಇನ್ನೆಷ್ಟೋ ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಹೀಗೆ ನಾನಾ ಅನಾಹುತಗಳು ಸಂಭವಿಸಿರುವ ಎಷ್ಟೋ ಉದಾಹರಣೆಗಳು ಕಣ್ಣು ಮುಂದಿವೆ. ಇಂತಹ ತೊಂದರೆಗಳನ್ನು ತಪ್ಪಿಸುವ ಸಲುವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹಾಗೂ ಬಿಬಿಎಂಪಿ ಒಂದು ಹೆಜ್ಜೆ ಮುಂದಿಟ್ಟಿದೆ.

ಹೌದು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹಾಗೂ ಬಿಬಿಎಂಪಿ ಜೊತೆಗೂಡಿ, ಮೇಲ್ಮಹಡಿ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ತೆಗೆದುಹಾಕುವ ನಿರ್ಧಾರಕ್ಕೆ ಮುಂದಾಗಿದೆ. ಅಂದರೆ ಈ ಕೇಬಲ್‌ಗಳನ್ನು ಅಂಡರ್‍ಗ್ರೌಂಡ್‌ನಲ್ಲಿ ಅಳವಡಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ನಗರದಲ್ಲಿ ಓವರ್‌ಹೆಡ್ ಕೇಬಲ್‌ಗಳನ್ನು ಭೂಗತ ಕೇಬಲ್‌ಗಳಿಗೆ ಬದಲಾಯಿಸಲು ಒತ್ತಾಯಿಸಲಾಗಿದೆ.
ಇನ್ನು ಬೆಂಗಳೂರು ವಿದ್ಯುತ್ ಸರಬರಾಜು ಇಲಾಖೆ (ಬೆಸ್ಕಾಂ) 2019ರಲ್ಲಿಯೇ, ಭೂಗತ ಕೇಬಲ್‌ಗಳ ವ್ಯವಸ್ಥೆ ನಿರ್ಮಿಸಲು ಯೋಜನೆ ರೂಪಿಸಿತು. ಆದರೆ ಈ ಯೋಜನೆ 2022ರಲ್ಲಿ ಪ್ರಾರಂಭಗೊಂಡು, 2024ರ ವೇಳೆಗೆ ನಿರ್ದಿಷ್ಟ ಡಕ್ಟ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಬೆಸ್ಕಾಂ ಇಲಾಖೆಯ ಪ್ರಕಾರ, , 50/42 mm ಗಾತ್ರದ 3,377.26 ಕಿ.ಮೀ. ಹಾಗೂ 40/33 mm ಗಾತ್ರದ 3,131.71 ಕಿ.ಮೀ. ಉದ್ದದ ಡಕ್ಟ್‌ಗಳು OFCಗಳಿಗೆ ಮೀಸಲಿಡಲಾಗಿದೆ. ಇದರ ಜೊತೆಗೆ 18,591 ಮ್ಯಾನ್‌ಹೋಲ್‌ಗಳ ಮೂಲಕ ಸಂಪರ್ಕವನ್ನು ಕೂಡ ಕಲ್ಪಿಸಲಾಗಿದೆ.
ವಿದ್ಯುತ್ ಕಂಬಗಳಲ್ಲಿ ನೇತಾಡುತ್ತಿದ್ದ ಕೇಬಲ್‌ಗಳಿಗೆ ಯಾವುದೇ ನಿಯಂತ್ರಣವಿರಲಿಲ್ಲ. ಜೊತೆಗೆ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಇದು ಸಾಕಷ್ಟು ಅಪಾಯವನ್ನುಂಟುಮಾಡುತ್ತಿತ್ತು. ಹೀಗಾಗಿ ಈ ಕೇಬಲ್‌ಗಳನ್ನು ಭೂಗತಕ್ಕೆ ಸ್ಥಳಾಂತರಿಸುವುದು ಅತ್ಯಗತ್ಯವಾಗಿತ್ತು. ಕಳೆದ ವರ್ಷವೇ ಓರ್ವ ವ್ಯಕ್ತಿ ತನ್ನ ಸ್ಕೂಟರ್ ಓಡಿಸಿಕೊಂಡು ಹೋಗುತ್ತಿದ್ದಾಗ, OFC ಕೇಬಲ್‌ಗೆ ಸಿಲುಕಿ ಸಾವನ್ನಪ್ಪಿದ ಘಟನೆ ಇನ್ನೂ ಅಚ್ಚಳಿಯದೆ ಉಳಿದಿದೆ. ಇದಲ್ಲದೆ, ಕಳೆದ ವರ್ಷ ಓವರ್‌ಹೆಡ್ ಕೇಬಲ್‌ಗಳ ಕಾರಣ 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಹೀಗಾಗಿ ಅಂಡರ್‍ಗ್ರೌಂಡ್‌ನಲ್ಲಿ ನಿರ್ಮಿಸುವ ಕೇಬಲ್‌ಗಳಿಂದ ಇಂತಹ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು.
ಅಂದಹಾಗೆ ಬೆಸ್ಕಾಂವು ಈ ಡಕ್ಟ್‌ಗಳನ್ನು ಸೇವಾ ಪೂರೈಕೆದಾರರಿಗೆ ಗುತ್ತಿಗೆ ನೀಡಲು ಪ್ರಸ್ತಾಪಿಸಿದರೂ, ಯಾವುದೇ ಕಂಪನಿಗಳು ಆಸಕ್ತಿ ತೋರಿಸಲಿಲ್ಲ. ಆದರೆ, ಅವ್ಯವಸ್ಥಿತ ಕೇಬಲ್‌ಗಳ ಸಂಖ್ಯೆಯು ಹೆಚ್ಚಿದಂತೆ ಅಪಘಾತಗಳ ಅಪಾಯವೂ ಹೆಚ್ಚಿತು. ಇದರಿಂದಾಗಿ, ಬೆಸ್ಕಾಂ ಭೂಗತ ಕೇಬಲ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ನಿರ್ಧಾರ ಕೈಗೊಂಡಿದೆ. ಅಲ್ಲದೇ ಬಿಬಿಎಂಪಿ ತನ್ನ ರಸ್ತೆಗಳ ಅಡಿಯಲ್ಲಿ ಡಕ್ಟ್‌ಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದಾಗ, ಟೆಲಿಕಾಂ ಕಂಪನಿಗಳು ಇದರಲ್ಲಿ ಆಸಕ್ತಿ ತೋರಿಸಿದವು. ಈ ಯಶಸ್ವಿ ಮಾದರಿಯನ್ನು ಅನುಸರಿಸಿ, ಬೆಸ್ಕಾಂ ಸಹ ಭೂಗತ ಕೇಬಲ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಇನ್ನು ನೆತ್ತಿ ಮೇಲೆ ನೇತಾಡುವ ಕೇಬಲ್‌ಗಳನ್ನು ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ.. ಹಾಗೆಯೇ ದಂಡ ವಿಧಿಸುವ ನೀತಿಯ ಕೊರತೆಯಿಂದಾಗಿ ಸೇವಾ ಪೂರೈಕೆದಾರರು ಅವುಗಳನ್ನು ಹಿಂದಕ್ಕೆ ಪಡೆಯುತ್ತಲೇ ಇದ್ದರೆಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ಒಂದು ಯೋಜನೆಯಿಂದ ಸಾಕಷ್ಟು ಯೋಜನೆಗಳಿವೆ. ಅವುಗಳ್ಯಾವುವು ಎಂದು ನೋಡುವುದಾದರೆ..
1. ಸುರಕ್ಷತೆ ಹೆಚ್ಚಿಸುವುದು:
ರಸ್ತೆಗಳ ಮೇಲೆ ನೇತಾಡುವ ಆಪ್ಟಿಕಲ್ ಫೈಬರ್ ಕೇಬಲ್‌ಗಳಿಂದ ಎದುರಾಗುತ್ತಿದ್ದ ಅನಾಹುತಗಳನ್ನು ತಪ್ಪಿಸಬಹುದು. ಅಂದರೆ ಎಷ್ಟೋ ಬಾರಿ ಕರೆಂಟ್ ವೈರ್ ತುಳಿದು ದುರಂತಕ್ಕೆ ಒಳಗಾಗಿರುವ ಘಟನೆಗಳು ಕಣ್ಣು ಕಟ್ಟಿದಂತಿವೆ. ಅವುಗಳಿಗೆ ಈ ಮೂಲಕ ಬ್ರೇಕ್ ಹಾಕಬಹುದು. ಅಪಘಾತಗಳನ್ನು ತಪ್ಪಿಸಲು, ಈ ಕೇಬಲ್‌ಗಳನ್ನು ಭೂಗತ ವ್ಯವಸ್ಥೆಗೆ ಪರಿವರ್ತಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು 2019ರಿಂದ 2024ರ ನಡುವೆ, 10ಕ್ಕೂ ಹೆಚ್ಚು ಅಪಘಾತಗಳು ಓವರ್ಹೆಡ್ ಕೇಬಲ್‌ಗಳ ಕಾರಣದಿಂದ ಸಂಭವಿಸಿವೆ. ಬಸ್, ಬೈಕ್, ಕಾರುಗಳ ಮೇಲೆ ಕೇಬಲ್ ಬೀಳುವುದು, ರಸ್ತೆಯಲ್ಲಿ ತೊಂದರೆ ಉಂಟುಮಾಡುವುದು ಸಾಮಾನ್ಯ ಆಗಿತ್ತು. ಭೂಗತ ವ್ಯವಸ್ಥೆ ಇದನ್ನು ಸಂಪೂರ್ಣವಾಗಿ ತಪ್ಪಿಸಲಿದೆ.
2. ನಗರದ ಸೌಂದರ್ಯವನ್ನು ಹೆಚ್ಚಿಸುವುದು:
ಅಂದಹಾಗೆ ರಸ್ತೆ ಮೇಲೆ ನೇತಾಡುವ ಕೇಬಲ್‌ಗಳು ಒಂದೇ ರೂಪದಲ್ಲಿ ಇರುವುದಿಲ್ಲ. ಅವುಗಳು ಒಮ್ಮೊಮ್ಮೆ ನೆಲಕ್ಕೆ ಮುಖ ಮಾಡಿ ಬೀಳು ಸ್ಥಿತಿಯಲ್ಲಿರುತ್ತವೆ. ಇವು ರಸ್ತೆಗಳ ಅಂದವನ್ನು ಹಾಳುಮಾಡುತ್ತವೆ. ಭೂಗತ ಕೇಬಲ್‌ಗಳನ್ನು ಅಳವಡಿಸುವುದರಿಂದ ನಗರ ಹೆಚ್ಚು ಆಕರ್ಷಕ ಮತ್ತು ಸ್ವಚ್ಛವಾಗಿ ಕಾಣುತ್ತದೆ, ಇದು ಬೆಂಗಳೂರು ಆಧುನಿಕ ಮೆಟ್ರೋಪೊಲಿಸ್ ಆಗಲು ಸಹಾಯ ಮಾಡುತ್ತದೆ.
3. ಅನಧಿಕೃತ ಕೇಬಲ್‌ಗಳನ್ನು ನಿಯಂತ್ರಿಸುವುದು:
ಬಹಳಷ್ಟು ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಕಂಪನಿಗಳು ಅನುಮತಿ ಇಲ್ಲದೆ ಕೇಬಲ್‌ಗಳನ್ನು ಹಾಕುತ್ತಾ ಹೋಗಿದ್ದರಿಂದ, ನಗರದಲ್ಲಿ ಅನಧಿಕೃತ ಸಂಪರ್ಕಗಳ ಗೂಡಂಗಡಿ ನಿರ್ಮಾಣವಾಗಿತ್ತು. ಇದನ್ನು ತಡೆಹಿಡಿಯಲು, ಎಲ್ಲ ಕಂಪನಿಗಳಿಗೆ ಭೂಗತ ಕೇಬಲ್ ಬಳಕೆ ಕಡ್ಡಾಯಗೊಳಿಸಲಾಗಿದೆ.
4. ಟೆಲಿಕಾಂ ಸೇವೆಗಳನ್ನು ಸುಧಾರಿಸುವುದು:
ಮೇಲ್ಮೈ ಕೇಬಲ್‌ಗಳು ಹವಾಮಾನ, ತಾಂತ್ರಿಕ ದೋಷ, ಕಳವು ಮುಂತಾದ ಸಮಸ್ಯೆಗಳಿಗೆ ಒಳಗಾಗುತ್ತವೆ. ಭೂಗತ ಕೇಬಲ್‌ಗಳು ಹೆಚ್ಚು ಸ್ಥಿರತೆ ಮತ್ತು ವೇಗ ನೀಡುತ್ತವೆ, ಇದರಿಂದ ಬ್ರಾಡ್‌ಬ್ಯಾಂಡ್, ಮೊಬೈಲ್ ಸೇವೆಗಳು ಉತ್ತಮವಾಗಬಹುದು.
5. ಬೆಸ್ಕಾಂನ ಆದಾಯ ವೃದ್ಧಿ;
ಭೂಗತ ಚ್ಯಾನೆಲ್‌ಗಳನ್ನು ಬಳಸಲು ಸೇವಾ ಪೂರೈಕೆದಾರರು ಬೆಸ್ಕಾಂಗೆ ಬಾಡಿಗೆ ಪಾವತಿಸಬೇಕು. ಇದು ಬೆಸ್ಕಾಂಗೆ ಹೊಸ ಆದಾಯ ಮೂಲ ನೀಡುತ್ತದೆ, ಇದರಿಂದ ಇತರ ಬೃಹತ್ ಯೋಜನೆಗಳಿಗೆ ಹಣದ ವ್ಯವಸ್ಥೆ ಸಾಧ್ಯವಾಗುತ್ತದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications