ಬೆಂಗಳೂರು ಮೆಟ್ರೋ ವಿಸ್ತರಣೆಯು ತುಮಕೂರಿನವರೆಗೂ ಹಾದು ಹೋಗುತ್ತದೆ ಎಂಬ ಚರ್ಚೆಗಳಿದ್ದವು. ಆದರೆ ಇದು ಕೇವಲ ಮಾತಿನಲ್ಲೇ ಉಳಿದಿತ್ತು. BMRCL ಹಳದಿ ಮಾರ್ಗ, ಪಿಂಕ್ ಮಾರ್ಗ, ನೀಲಿ ಮಾರ್ಗದ ಮೆಟ್ರೋಗಳ ಅಭಿವೃದ್ಧಿಯತ್ತ ಚಿತ್ತ ಹರಿಸಿತ್ತು. ಈಗ BMRCL ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಇದು ತುಮಕೂರು ಜನರ ಕುತೂಹಲ ಹೆಚ್ಚಾಗಿಸಿದೆ. ಹಾಗೆಯೇ ಇದು ನಿರೀಕ್ಷೆಯನ್ನೂ ಹೆಚ್ಚಾಗಿಸಿದೆ.

ಹೌದು, ತುಮಕೂರಿನ ವರೆಗೂ ಮೆಟ್ರೋ ಮಾರ್ಗ ವಿಸ್ತರಿಸುವ ಯೋಜನೆಯು, ಇದೀಗ ಅಧಿಕೃತ ವರದಿಗಳೊಂದಿಗೆ ಗಂಭೀರ ಹಂತಕ್ಕೆ ಬಂದು ನಿಂತಿದೆ. ಇದರಿಂದ ತುಮಕೂರು ಜನರಿಗೆ ನಿರೀಕ್ಷೆ ಹಾಗೂ ಕುತೂಹಲ ಒಟ್ಟಿಗೇ ಹೆಚ್ಚಾದಂತಾಗಿದೆ. ಇದು ಇಷ್ಟು ದಿನ ಮಾತಿಗೆ ನಡೆಯುತ್ತಿದ್ದ ಪ್ರಕ್ರಿಯೆ ಈಗ ಗಂಭೀರವಾಗಿದದೆ. ಬೆಂಗಳೂರು ನಗರದಲ್ಲಿ ಪ್ರಾರಂಭವಾದ ಮೆಟ್ರೋ ಯೋಜನೆ ಇನ್ನು ಮುಂದೆ ಹತ್ತಿರದ ಜಿಲ್ಲೆಗಳತ್ತ ವಿಸ್ತಾರಗೊಳ್ಳುತ್ತಿರುವುದು ಮುನ್ನುಗ್ಗುತ್ತಿರುವ ಸಾರಿಗೆ ನೀತಿಯ ಸಾಕ್ಷಿಯಾಗಿರಬಹುದು.
ಕಾರ್ಯಸಾಧ್ಯತಾ ವರದಿ ಸರ್ಕಾರದ ಕೈಗೆ:
ಈಗಾಗಲೇ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು-ತುಮಕೂರು ನಡುವಿನ 56.6 ಕಿ.ಮೀ ಉದ್ದದ ಮೆಟ್ರೋ ಮಾರ್ಗದ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸಿದ್ಧಪಡಿಸಿದೆ. ಅದನ್ನು ರಾಜ್ಯ ಸರ್ಕಾರಕ್ಕೆ ಕೂಡ ಸಲ್ಲಿಸಲಾಗಿದೆ. ಈ ವರದಿಯನ್ನು ಖಾಸಗಿ ಸಂಸ್ಥೆಯೊಂದು ತಯಾರಿ ಮಾಡಿದ್ದು, ಇದೀಗ ಇದು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ಬಳಿಕವೇ ಇದರ ಮುಂದಿನ ಕಾರ್ಯಗಳು ನಡೆಯುತ್ತವೆ. ಈ ಬಗ್ಗೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದು, ವರದಿ ಪ್ರಸ್ತುತ ರಾಜ್ಯ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.
ಮಾರ್ಗದ ನಕ್ಷೆ ಹೇಗಿದೆ?
ಈ ನೂತನ ಮೆಟ್ರೋ ಮಾರ್ಗವು ನಗರದ ಗ್ರೀನ್ ಲೈನ್‌ನ ಮಾದಾವರ (BIEC) ನಿಲ್ದಾಣದಿಂದ ಪ್ರಾರಂಭವಾಗಿ ತುಮಕೂರಿನ ಶಿರಾಗೇಟ್ ತನಕ ಹಾದು ಹೋಗಲಿದೆ. ಈ ಮಾರ್ಗದಲ್ಲಿ ಒಟ್ಟು 25 ಎತ್ತರದ ನಿಲ್ದಾಣಗಳು ನಿರ್ಮಾಣಗೊಳ್ಳಲಿದ್ದು, ಇವು ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸುತ್ತವೆ.
ಮೆಟ್ರೋ ನಿಲ್ದಾಣಗಳು ಯಾವುವು?
ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ವೀವರ್ ಕಾಲೋನಿ, ನೆಲಮಂಗಲ, ವಿಶ್ವೇಶ್ವರಪುರ, ನೆಲಮಂಗಲ ಟೋಲ್‌ಗೇಟ್, ಬೂದಿಹಾಳ್, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ಕುಲವನಹಳ್ಳಿ, ಮಹಿಮಾಪುರ, ಬಿಲ್ಲನಕೋಟೆ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಯನಪಾಳ್ಯ ಚಿಕ್ಕಹಳ್ಳಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ, ಕ್ಯಾತ್ಸಂದ್ರ ಬೈಪಾಸ್, ಕ್ಯಾತ್ಸಂದ್ರ, ಎಸ್‌ಐಟಿ, ತುಮಕೂರು ಬಸ್ ನಿಲ್ದಾಣ, ಟೂಡಾ ಲೇಔಟ್, ನಾಗಣ್ಣನ ಪಾಳ್ಯ, ಶಿರಾ ಗೇಟ್
ಮೊದಲ ಬಾರಿಗೆ ಜಿಲ್ಲೆಯ ನಡುವೆ ಮೆಟ್ರೋ ಸಂಪರ್ಕ:
ಒಂದು ವೇಳೆ ಈ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಯ ನಡುವೆ ಮೆಟ್ರೋ ಹಾದು ಹೋಗುವುದು ಎಂಬುದಾಗಿದೆ. ಇದರಿಂದ ನಿತ್ಯ ಪ್ರಯಾಣಿಕರಿಗೆ ಅಸಾಧಾರಣ ಸಹಾಯವಾಗುವುದು ಮಾತ್ರವಲ್ಲ, ಉದ್ಯಮಗಳ ಬೆಳವಣಿಗೆಯಿಗೂ ಮಾರ್ಗ ಸಿಗಲಿದೆ. ತುಮಕೂರು ರಾಜ್ಯದ ಅತ್ಯಂತ ವೇಗವಾಗಿ ವಿಕಸಿಸುತ್ತಿರುವ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿ ಮೋಟಾರು ಭಾಗಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಸಣ್ಣ ಕೈಗಾರಿಕೆಗಳು ಬೆಳೆಯುತ್ತಿವೆ. ಈ ನಿಟ್ಟಿನಲ್ಲಿ, ಉತ್ತಮ ಮೆಟ್ರೋ ಸಂಪರ್ಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಿದೆ.
ರಾಜ್ಯದ ಗ್ರೀನ್ ಸಿಗ್ನಲ್ ನಂತರ ಕೇಂದ್ರದ ಒಪ್ಪಿಗೆ:
ಬಿಎಂಆರ್‌ಸಿಎಲ್ ಈಗಾಗಲೇ ರಾಜ್ಯ ಸರ್ಕಾರದ ಮುಂದೆ ವರದಿ ಸಲ್ಲಿಸಿದ್ದರಿಂದ, ಮುಂದಿನ ಹಂತವೆಂದರೆ ರಾಜ್ಯ ಸರ್ಕಾರದ ಗ್ರೀನ್ ಸಿಗ್ನಲ್. ರಾಜ್ಯ ಒಪ್ಪಿಗೆ ದೊರೆತ ಬಳಿಕ, ಯೋಜನೆ ಕೇಂದ್ರ ಸರ್ಕಾರದ ಅನುಮೋದನೆಗೆ ಜಾರಿಸಲಾಗುವುದು. ಕೇಂದ್ರದ ಒಪ್ಪಿಗೆ ನಂತರ ಯೋಜನೆಯ ಬಜೆಟ್ ಮತ್ತು ನಿರ್ವಹಣಾ ಆದೇಶಗಳು ಹೊರಬೀಳಲಿವೆ.
ಈ ಯೋಜನೆಯ ಬಹುಮಟ್ಟದ ಪ್ರಯೋಜನಗಳ ನಡುವೆ, ತುಮಕೂರು ರಸ್ತೆ ಸಂಚಾರದ ಭಾರವನ್ನು ಕಡಿಮೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ನಿತ್ಯದ ದುಡಿಯುವವರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಕೈಗಾರಿಕಾ ನೌಕರರಿಗೆ ಇದು ಹೊಸ ಆಶಾಕಿರಣವಾಗಿ ಪರಿಣಮಿಸಲಿದೆ. ಈ ಯೋಜನೆ ತಕ್ಷಣವೇ ಚಾಲನೆ ಆಗದಿದ್ದರೂ, ಬಿಎಂಆರ್‌ಸಿಎಲ್ ಕೈಗೊಂಡಿರುವ ಹೆಜ್ಜೆಗಳು ಭವಿಷ್ಯದಲ್ಲಿ ಕರ್ನಾಟಕದ ಸಾರಿಗೆ ನೀತಿಗೆ ಹೊಸ ದಿಕ್ಕು ನೀಡಬಲ್ಲದು. ಬೆಂಗಳೂರು ಹಾಗೂ ತುಮಕೂರು ನಡುವೆ ಈ ಪರಿ ಸಂಪರ್ಕ ಕಲ್ಪಿಸುವ ಯೋಜನೆ ರಾಜ್ಯದ ಅಭಿವೃದ್ಧಿಗೆ ಹೆಜ್ಜೆ ಇಡಲಿದೆ ಎಂಬುದು ಖಚಿತ.


Click it and Unblock the Notifications