ಬೇಸಿಗೆಯ ಬಿಸಿಲಿನಲ್ಲಿ ಬೆಂಗಳೂರು ಬೆಂದು ಹೋಗುತ್ತಿದೆ. ಬಿಲಿಲಲ್ಲಿ ಬರಿಗಾಲಿಟ್ಟರೆ ಸುಟ್ಟು ಹೋಗುವ ಅನುಭವ. ನೆತ್ತಿ ಮೇಲಿನ ಸೂರ್ಯ ಕೆಂಡದಂತ ಬಿಸಿ ಚೆಲ್ಲುತ್ತಿದ್ದಾನೆ. ಬಿಸಿಲಿಗೆ ಬರುವ ಮುನ್ನ ಯೋಚಿಸಿ ಬರಬೇಕಾಗುತ್ತದೆ. ಧಗೆ ಹೆಚ್ಚಾಗುತ್ತಿರುವ ಕಾರಣ ಕುಡಿಯುವ ನೀರಿನ ಬಳಕೆಯೂ ಹೆಚ್ಚಾಗುತ್ತಿದೆ. ಮಕ್ಕಳು, ವಯೋ ವೃದ್ಧರು ಈ ಬಿಸಿಲಿನಲ್ಲಿ ಹೊರಗೆ ಬಂದರೆ ದೇಹದ ಉಷ್ಣಾಂಶ ಹೆಚ್ಚಾಗಿ, ರೋಗಗಳಿಗೆ ತುತ್ತಾಗುವ ಸಾಧ್ಯತೆಗಳೂ ಇವೆ. ಯಾಕೆ ಅಂದರೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ ತಿಂಗಳಲ್ಲಿ ತಾಪಮಾನ ಕ್ರಮೇಣ ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರ್ಚ್ ತಿಂಗಳ ತಾಪಮಾನ ಊಹಿಸಲೂ ಆಗದಷ್ಟು ತೀವ್ರಗೊಂಡಿದೆ. ಈ ವರ್ಷದಲ್ಲಿ 35° ಸೆಲ್ಸಿಯಸ್ ತಾಪಮಾನ ಕಂಡಿದ್ದು, ಇದು ಈ ವರ್ಷದ ದಾಖಲೆಯ ಉಷ್ಣಾಂಶ ಎನ್ನಲಾಗಿದೆ.

ಅಂದರೆ ಇಂದು (ಮಾರ್ಚ್ 15) ಬೆಂಗಳೂಸಿರನಲ್ಲಿ ಅತ್ಯಂತ ಬಿಸಿಯಾದ ದಿನವಾಗಿದ್ದು ಇದು ದಾಖಲೆ ಎನ್ನಲಾಗಿದೆ. ಇದನ್ನು ಗಮನಿಸಿದ ಹವಾಮಾನ ತಜ್ಞರು ಮುಂದಿನ ಕೆಲವು ದಿನಗಳವರೆಗೆ ತಾಪಮಾನ 35°C ಅಥವಾ ಅದಕ್ಕಿಂತ ಹೆಚ್ಚು ಇರುವುದು ಸಾಧ್ಯವೆಂದು ಮುನ್ಸೂಚನೆ ನೀಡಿದ್ದಾರೆ. ಇನ್ನು ನಗರದಲ್ಲಿ ಬೀಸುತ್ತಿರುವ ಉಷ್ಣ ಗಾಳಿ, ಮತ್ತು ಮೋಡ ಕವಿದ ವಾತಾವರಣ ಕಾಣದೇ ಇರುವುದು ಈ ತಾಪಮಾನ ಏರಿಕೆಯ ಹಿಂದಿನ ಪ್ರಮುಖ ಕಾರಣವಾಗಿದೆ. ಅಂದರೆ ಇದು ಇದು ಬೆಂಗಳೂರಿನಲ್ಲಿ ಬಿಸಿನೆತ್ತಿರನ್ನು ಹೆಚ್ಚಿಸುತ್ತಿದೆ.
ಹವಾಮಾನ ಇಲಾಖೆ ವಿಜ್ಞಾನಿ ಮತ್ತು ನಿರ್ದೇಶಕ ಸಿ.ಎಸ್. ಪಾಟೀಲ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಬಿಸಿಯೊಂದಿಗೆ ಆರ್ದ್ರತೆ ಕೂಡ ಹೆಚ್ಚಾಗುತ್ತಿರುವುದರಿಂದ ಜನರು ಹೆಚ್ಚಿನ ತಾಪಮಾನ ಅನುಭವಿಸುತ್ತಿದ್ದಾರೆ. ಇನ್ನು ಮುಂದಿನ ಕೆಲವು ದಿನಗಳವರೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಕಡಿಮೆ ಇದೆ, ಹಾಗಾಗಿ ಇದೇ ರೀತಿಯ ಹವಾಮಾನ ಮುಂದುವರಿಯಬಹುದು.
ಮುಂದಿನ ದಿನಗಳ ತಾಪಮಾನ ವಿವರ:
1. ಇಂದು (ಮಾರ್ಚ್ 15)ಕನಿಷ್ಠ ತಾಪಮಾನ 19°C, ಗರಿಷ್ಠ ತಾಪಮಾನ 35°C ಎನ್ನಲಾಗುತ್ತಿದೆ. ಹಾಗೆಯೇ ಆಕಾಶದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಜೊತೆಗೆ ಹಗಲಿನ ವೇಳೆ ಬಿಸಿಯಾದ ವಾತಾವರಣವಿರಲಿದೆ.
2. ಮಾರ್ಚ್ 16 ಗರಿಷ್ಠ ತಾಪಮಾನ 34°C ಆಗಿ ಸ್ವಲ್ಪ ಇಳಿಕೆ ಕಾಣಲಿದೆ. ಆಕಾಶದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ನೋಡಬಹುದು.
3. ಮಾರ್ಚ್ 17 ಗರಿಷ್ಠ ತಾಪಮಾನ 33°C ಆಗಿರಲಿದೆ. ಹಾಗೂ ಆಕಾಶದಲ್ಲಿ ದಿನವಿಡೀ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ.
4. ಮಾರ್ಚ್ 18 ಯಾವುದೇ ಪ್ರಮುಖ ಬದಲಾವಣೆ ಇಲ್ಲ ಎನ್ನಲಾಗುತ್ತಿದೆ. ಅಂದರೆ ತಾಪಮಾನದಲ್ಲಿ ಮಾರ್ಚ್ 17ರ ಸ್ಥಿತಿಯೇ ಕಾಯ್ದುಕೊಳ್ಳಲಿದೆ.
5. ಮಾರ್ಚ್ 19ರಂದು ಕೂಡ ಯಾವುದೇ ಪ್ರಮುಖ ಬದಲಾವಣೆ ಇಲ್ಲ ಎನ್ನಲಾಗುತ್ತಿದೆ. ಅಂದರೆ ತಾಪಮಾನದಲ್ಲಿ ಮಾರ್ಚ್ 17ರ ಸ್ಥಿತಿಯೇ ಕಾಯ್ದುಕೊಳ್ಳಲಿದೆ.
6. ಮಾರ್ಚ್ 20ರಂದು ಕೂಡ ಗರಿಷ್ಠ ತಾಪಮಾನ 33°C ಆಗಿರುತ್ತದೆ. ಆದರೆ ಆಕಾಶ ಸ್ಪಷ್ಟವಾಗಿ ಇರುವುದು ಸಾಧ್ಯ. ಅಂದರೆ ಮೋಡ ಕವಿದ ವತಾವರಣ ಇರುವುದಿಲ್ಲ ಎಂದರ್ಥ.
ಅಂದಹಾಗೆ ಈ ಮೇಲಿನ ಉಷ್ಣಾಂಶದ ವರದಿ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳಲ್ಲಿ ಹಗಲಿನ ತಾಪಮಾನ 33°C ರಿಂದ 35°C ವರೆಗೆ ಇರಬಹುದು. ಹಾಗೆಯೇ ರಾತ್ರಿಯ ತಾಪಮಾನ 19°C ನಲ್ಲಿಯೇ ಉಳಿಯಬಹುದು ಎನ್ನಲಾಗಿದೆ. ಮಾದರಿಯಾಗಿ, ಮಾರ್ಚ್ 20 ರಂದು ಆಕಾಶ ಹೆಚ್ಚು ಸ್ಪಷ್ಟವಾಗುವ ನಿರೀಕ್ಷೆಯಿದೆ, ಆದರೆ ಬೇರೆಯ ದಿನಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುವ ಸಾಧ್ಯತೆ ಇದೆ.
ಈ ತಾಪಮಾನ ಏರಿಕೆ ಹೇಗೆ ಪ್ರಭಾವ ಬೀರುತ್ತದೆ..?
ಬೆಂಗಳೂರು ನಗರದಲ್ಲಿ ಬಿಸಿನೆತ್ತಿರು ಹೆಚ್ಚಾಗುವುದರಿಂದ, ಸಾರ್ವಜನಿಕರು ದೇಹದ ಆರ್ದ್ರತೆ ಕಾಪಾಡಿಕೊಳ್ಳಬೇಕು. ಹಗಲಿನ ವೇಳೆಯಲ್ಲಿ ನಿರಂತರ ಬಿಸಿಗೆ ಗುರಿಯಾಗುವ ಜನರು ಸೂರ್ಯನ ಅತಿಯಾದ ತಾಪಮಾನದಿಂದ ಸಮಸ್ಯೆ ಅನುಭವಿಸಬಹುದು. ಈ ರೀತಿಯ ಹವಾಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆಗಳಾದ ತಲೆನೋವು, ಡಿಹೈಡ್ರೇಶನ್, ಬಿಪಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ರೈತರಿಗೆ ಮತ್ತು ಕೃಷಿ ಕ್ಷೇತ್ರದವರಿಗೆ ಈ ಬಿಸಿಯ ಪರಿಣಾಮಗಳೇನಾಗಬಹುದು ಎಂಬುದನ್ನು ಗಮನದಲ್ಲಿಡಬೇಕು, ಏಕೆಂದರೆ ಶುಷ್ಕ ವಾತಾವರಣ ಕೃಷಿಗೆ ಹಾನಿ ಮಾಡಬಹುದು..ಹೀಗೆ ಜನರು ನಾನಾ ರೀತಿಯ ತೊಂದರೆಗೆ ಗುರಿಯಾಗಬಹುದು.
ಬಿಸಿಯಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ:
ಹಗಲಿನ ವೇಳೆಯಲ್ಲಿ ಸಾಧ್ಯವಾದಷ್ಟು ನೀರು ಕುಡಿಯುವುದು ಮತ್ತು ಜ್ಯೂಸ್, ಕೊಬ್ಬರಿ ನೀರು, ಮತ್ತು ಇತರ ತಂಪಾದ ಪಾನೀಯಗಳನ್ನು ಸೇವಿಸುವುದು.ಹೊರಗೆ ಹೋದಾಗ ತಲೆ ಮುಚ್ಚಿಕೊಳ್ಳುವುದು, ಕ್ಯಾಪ್ ಅಥವಾ ಹ್ಯಾಟ್ ಧರಿಸುವುದು. ಅತಿ ಬಿಸಿಯಾದ ವೇಳೆ ಹೊತ್ತಿಗೆ ಬೆಳಕಿಗೆ ಬಹಳ ಸಮಯ ವಿಲ್ಲದೆ ಉಳಿಯುವುದು. ಹಗಲಿನ ವೇಳೆಯಲ್ಲಿ ಹೆಚ್ಚು ಹಣ್ಣಿನ ಸೇವನೆ ಮಾಡುವುದು, ಇದರಿಂದ ದೇಹ ತಂಪಾಗಿರುತ್ತದೆ. ಅಗತ್ಯವಿದ್ದರೆ ಕಣ್ಣಿಗೆ ತಂಪಾದ ಗಾಗಲ್ಸ್ ಧರಿಸುವುದು ಉತ್ತಮ. ಈ ಮೂಲಕ ಬಿಸಿಯಿಂದಲೂ ರಕ್ಷಿಸಿಕೊಳ್ಳಬಹುದು. ಹಾಗೆಯೇ ಆರೋಗ್ಯದ ಕಡೆಯೂ ಗಮನಹರಿಸಬಹುದು.
ಸರ್ಕಾರದಿಂದ ಕೈಗೊಳ್ಳಬಹುದಾದ ಕ್ರಮಗಳು:
ಸರ್ಕಾರವು ಇಂಥ ಸುಡು ಬಿಸಿಲಿನಲ್ಲಿ ಜನರು ಪರದಾಡದಂತೆ ನೋಡಿಕೊಳ್ಳುವುದು ಉತ್ತಮ. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರವೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಸರ್ಕಾರಕ್ಕಿಂತ ಪಾಲಿಕೆಗಳು ಹೆಚ್ಚು ಗಮನ ಕೊಡಬೇಕು. ಸಾರ್ವಜನಿಕರಿಗೆ ಬಿಸಿಯಿಂದ ರಕ್ಷಣೆ ಪಡೆಯಲು ಅಗತ್ಯ ಮಾಹಿತಿಗಳನ್ನು ನೀಡುವುದು ಒಂದು ಕರ್ತವ್ಯವಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಸುಧಾರಿಸಬೇಕು. ಈ ರೀತಿ ಜನರನ್ನು ಬಿಸಿಲಿನ ತಾಪಮಾನದಿಂದ ರಕ್ಷಿಸಬಹುದು. ಈ ಮುನ್ಸೂಚನೆಗಳ ಪ್ರಕಾರ, ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಬಿಸಿನೆತ್ತಿರು ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ನಾಗರಿಕರು ಜಾಗರೂಕರಾಗಿ ತಾವು ಆರೋಗ್ಯವಾಗಿರಲು ಸೂಕ್ತ ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಶಾಲೆಗಳು ಮತ್ತು ಕಾಲೇಜುಗಳು ಬಿಸಿಯ ಸಮಯದಲ್ಲಿ ಅಗತ್ಯವಿದ್ದರೆ ವಿರಾಮವನ್ನು ನೀಡಬೇಕು. ನಗರದಲ್ಲಿ ಹಸಿರು ಪ್ರದೇಶಗಳನ್ನು ಹೆಚ್ಚಿಸುವ ಮೂಲಕ ತಾಪಮಾನ ನಿಯಂತ್ರಿಸಲು ಪ್ರಯತ್ನ ಮಾಡಬೇಕು.
ಇದಲ್ಲದೆ, ಈ ವರ್ಷದ ಹವಾಮಾನ ಬದಲಾವಣೆಗಳ ಪರಿಣಾಮವಾಗಿ ಮುಂದಿನ ವರ್ಷಗಳಲ್ಲಿ ಬೆಂಗಳೂರಿನ ಬೇಸಿಗೆ ತಾಪಮಾನವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿ ಕೆಲಸಗಳು, ನಗರೀಕರಣ, ಹಸಿರು ಪ್ರದೇಶಗಳ ನಾಶ, ಮತ್ತು ತಾಪಮಾನ ಭವನಗಳೆಂಬ ಶಿಲಾಯುಗ ಮೌಲ್ಯಗಳ ಬೆಳವಣಿಗೆ ಇಂತಹ ಬದಲಾವಣೆಗಳಿಗೆ ಕಾರಣವಾಗಬಹುದು. ನಗರದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಜಾರಿಗೆ ತರಬೇಕು ಎಂಬ ಒತ್ತಾಯ ಹೆಚ್ಚಾಗುತ್ತಿದೆ, ಇದು ಭವಿಷ್ಯದಲ್ಲಿ ಹವಾಮಾನ ಸಮತೋಲನವನ್ನು ಕಾಪಾಡಲು ಸಹಾಯ ಮಾಡಬಹುದು.
ಬೆಂಗಳೂರಿನಲ್ಲಿ ದಿನಕ್ಕೊಂದು ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಈ ಪರಿಣಾಮ ಅಲ್ಲಲ್ಲಿ ಬೆಳೆದುಕೊಂಡಿರುವ ಹಸಿರು ನಾಶವಾಗುತ್ತಿದೆ. ಅಲ್ಲದೇ ಸಿಮೆಂಟ್ ಧೂಳು, ಟ್ರಾಫಿಕ್ ಹೊಗೆ ಎಲ್ಲವುಗಳಿಂದ ಬೆಂಗಳೂರಿನ ವಾತಾವರಣ ಹದಗೆಡುತ್ತಿದೆ. ಹೀಗಾಗಿ ಜನರೇ ಅದಕ್ಕೆ ಕಡಿವಾಣ ಹಾಕಬೇಕಿದೆ. ತಮ್ಮ ಸ್ವಚ್ಛವಾದ ವಾತಾವರಣ ಸೃಷ್ಟಿಸಲು ಜನರು ಕೆಲವೊಂದಿಷ್ಟು ಕ್ರಮಗಳನ್ನು ಅನುಸರಿಸಿದರೆ ಉತ್ತಮ. ಅಂದರೆ ತಾವು ವಾಸಿಸುವ ಪ್ರದೇಶದ ಸುತ್ತ-ಮುತ್ತ ಯಾವುದೇ ರೀತಿಯ ಮರ ಗಿಡಗಳನ್ನು ಕಡಿಯದೇ ಇರುವುದು, ಮನೆಯ ಸುತ್ತ ಮುತ್ತ ಗಿಡಗಳನ್ನು ಬೆಳೆಸುವುದು..ಇಂತಹ ಕ್ರಮಗಳ ಮೂಲಕವೇ ಜನರು ತಮ್ಮ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯ.
More From GoodReturns

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ



Click it and Unblock the Notifications