ಬ್ಯಾಂಕ್‌ಗಳಿಗೆ ಎರಡು ದಿನ ರಜೆ ನೀಡುವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಸರ್ಕಾರಕ್ಕೆ ಅಗ್ರಹಿಸಿದ್ದರು. ಆದ್ರೆ ಇವರ ಬೇಡಿಕೆ ಈಡೇರುವ ಯಾವುದೇ ಲಕ್ಷಣ ಕಾಣದ ಹಿನ್ನೆಲೆ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ದೇಶದಾದ್ಯಂತ ಪ್ರತಿಭಟನೆಯನ್ನ ನಡೆಸಲು ಮುಂದಾಗಿದೆ.
ಈ ಹಿಂದೆ ಬ್ಯಾಂಕ್ ಉದ್ಯೋಗಿಗಳೆಲ್ಲಾ ಸೇರಿ ಬ್ಯಾಂಕ್‌ಗಳಿಗೆ ಎರಡು ದಿನ ರಜೆ ನೀಡಿ ಎಂದು ಹಾಗೆ 5 ಮಾತ್ರ ಬ್ಯಾಂಕ್‌ಗಳನ್ನ ತೆರೆಯುವಂತೆ ಸರ್ಕಾರಕ್ಕೆ ಮನವಿಯನ್ನ ಮಾಡಿತ್ತು. ಹಾಗೆ ಡಿಸೆಂಬರ್‌ನಲ್ಲಿ ಬ್ಯಾಂಕ್ ನೌಕರರ ಈ ಹೊಸ ನೀತಿಯನ್ನ ಕಾರ್ಯರೂಪಕ್ಕೆ ತರಬೇಕು ಎಂದು ಬ್ಯಾಂಕ್ ಉದ್ಯೋಗಿಗಳು ಹೇಳೀದ್ದರು. ಆದ್ರೆ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನ ನೀಡಿಲ್ಲ ಅಲ್ಲದೇ ಇವರ ಬೇಡಿಕೆ ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಹೀಗಾಗಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಶೀಘ್ರದಲ್ಲೇ ಆಂದೋಲವನ್ನ ನಡೆಸುವ ಸಾಧ್ಯತೆ ಇದೆ.

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರೂಪಮ್ ರಾಯ್ ಮಾತನಾಡಿರುವುದು ನ್ಯೂಸ್18ನಲ್ಲಿ ವರದಿಯಾಗಿದ್ದು, ನಾವು ಶೀಘ್ರದಲ್ಲೇ ಆಂದೋಲನವನ್ನ ಆರಂಭಿಸಲಿದ್ದೇವೆ. ಹಾಗೆ ನಾವು ಈ ಯೋಜನೆಯನ್ನ ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದ್ದೇವೆ. ಹಾಗೆ ನಮ್ಮ ಈ ಆಂದೋಲನಕ್ಕೆ ಸಾರಲು ನಾವು UFBUನ ನಮ್ಮ ಅಂಗಸ್ಂಸ್ಥೆಗಳು ಹಾಗೂ ಸಂಘಗಳಿಗೆ ಆಹ್ವಾನಗಳನ್ನ ಸಹ ನೀಡಿದ್ದೇವೆ. ಆದ್ರೆ ಸರ್ಕಾರದಿಂದ ಈ ಐದು ದಿನಗಳ ಕೆಲಸದ ಅನುಷ್ಠಾನದ ಬಗ್ಗೆ ಯಾವುದೇ ಸೂಚನೆ ಇಲ್ಲ ಎಂದು ರೂಪಮ್ ರಾಯ್ ಹೇಳಿದ್ದಾರೆ.
ಭಾರತದ ಕೈಗಾರಿಕೋದ್ಯಮಿಗಳಾದ ಇನ್ಫೋಸಿಸ್ ಅಧ್ಯಕ್ಷ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಓಲಾ ಸಿಇಒ ಭವಿಶ್ ಅಗರ್ವಾಲ್ ಅವರು ಕೆಲಸದ ಸಮಯವನ್ನು ಹೆಚ್ಚಿಸುವಂತೆ ಪ್ರತಿಪಾದಿಸಿದ ಬಗ್ಗೆ ಪ್ರಸ್ತಾಪಿಸಿದಾಗ, ರಾಯ್ ಪ್ರತಿಕ್ರಿಯೆ ನೀಡಿದರು. ಈ ವಿಚಾರಗಳೆಲ್ಲಾ ಅವರ ವೈಯಕ್ತಿಕ ಅಭಿಪ್ರಾಯಗಳು. ಜಾಗತಿಕ ಪ್ರವೃತ್ತಿಗಳು ಕಡಿಮೆ ಕೆಲಸದ ಸಮಯ ಮತ್ತು ಕಡಿಮೆ ಕೆಲಸದ ವಾರಗಳ ಕಡೆಗೆ ಚಲಿಸುತ್ತಿರುವಾಗ, ಅಂತಹ ಹಕ್ಕುಗಳನ್ನು ಬೆಂಬಲಿಸಲು ಯಾವುದೇ ಪುರಾವೆ ಅಥವಾ ಆಧಾರಿತ ಅಧ್ಯಯನವಿಲ್ಲ. ಇನ್ನು ಈ ರೀತಿಯ ವೈಯಕ್ತಿಕ ಅಭಿಪ್ರಾಯಗಳಿಗೆ ಸರ್ಕಾರವು ಪ್ರಭಾವಿತವಾಗಿರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಅವರು ಹೇಳಿದರು.
5 ದಿನಗಳ ಕೆಲಸದ ವಾರಕ್ಕೆ ಬ್ಯಾಂಕ್ ಉದ್ಯೋಗಿಗಳು ಬೇಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಇನ್ನು ಈ ಕುರಿತ ದೀರ್ಘಾವಧಿಯ ಪ್ರಸ್ತಾವನೆಯು ಹಣಕಾಸು ಸಚಿವಾಲಯದಿಂದ ಅಂತಿಮ ಅನುಮೋದನೆಯೊಂದೇ ಬಾಕಿ ಇದೆ. ಉದ್ಯೋಗಿಗಳ ಒಕ್ಕೂಟ ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘದ (ಐಬಿಎ) ನಡುವೆ ಈ ಸಂಬಂಧ ಈಗಾಗಲೇ ಒಪ್ಪಂದ ಕೂಡ ಅಂತಿಮಗೊಂಡಿದೆ.
ವಾರದ 5 ದಿನಗಳು ಗ್ರಾಹಕರ ಸೇವೆಯ ಸಮಯದಲ್ಲಿ ಕಡಿತಕ್ಕೆ ಕಾರಣವಾಗುವುದಿಲ್ಲ ಎಂದು ಬ್ಯಾಂಕ್ ನೌಕರರ ಸಂಘಗಳು ಭರವಸೆ ನೀಡಿವೆ. ಇದನ್ನು ಖಚಿತಪಡಿಸಿಕೊಳ್ಳಲು, ಕೆಲಸದ ಸಮಯವನ್ನು ಸುಮಾರು 40 ನಿಮಿಷಗಳವರೆಗೆ ವಿಸ್ತರಿಸಲು ಸಮಯವನ್ನು ಪರಿಷ್ಕರಿಸಲಾಗುತ್ತದೆ.
ಇತ್ತೀಚೆಗೆ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC) X ನಲ್ಲಿ ಪೋಸ್ಟ್‌ನಲ್ಲಿ 5 ದಿನಗಳ ಕೆಲಸದ ಬಗ್ಗೆ ಪ್ರಸ್ತಾಪಿಸಿ, ಬ್ಯಾಂಕ್ ಉದ್ಯೋಗಿಗಳ ಯೋಗಕ್ಷೇಮಕ್ಕಾಗಿ ಮತ್ತು ಮತ್ತಷ್ಟು ಹೆಚ್ಚಿಸಲು ಆದ್ಯತೆ ನೀಡುವಂತೆ ಹಣಕಾಸು ಸಚಿವಾಲಯ ಮತ್ತು ಪ್ರಧಾನ ಮಂತ್ರಿಗಳ ಕಚೇರಿಗೆ ಮನವಿ ಮಾಡಿದೆ.
ಈಗಾಗಲೇ ಬ್ಯಾಂಕ್‌ಗಳಿಗೆ ಪ್ರತೀ ಭಾನುವಾರ, ಜೊತೆಗೆ ಪ್ರತೀ ತಿಂಗಳ ಎರಡನೇ ಶನಿವಾರ ಹಾಗು ನಾಲ್ಕನೇ ಶನಿವಾರ ಹೀಗೆ ಎರಡು ದಿನ ರಜೆಗಳಿವೆ. ಈ ಮಧ್ಯೆ ಶನಿವಾರವನ್ನ ಖಾಯಂ ರಜಾ ದಿನವನ್ನಾಗಿ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಾಗೇನಾದ್ರು ಬ್ಯಾಂಕ್‌ಗಳಲ್ಲಿ ಐದು ದಿನ ಕೆಲಸ ಮಾಡುವ ಪ್ರಸ್ತಾವನೆಯನ್ನು ಸರ್ಕಾರವೇನಾದರು ಅನುಮೋದಿಸಿದರೆ, ಬ್ಯಾಂಕಿಂಗ್ ಸಮಯ 40 ನಿಮಿಷ ವಸ್ತರಣೆಯಾಗುತ್ತದೆ. ಅಂದರೆ ಬ್ಯಾಂಕ್‌ಗಳ ತೆರೆಯುವ ಮತ್ತು ಮುಚ್ಚುವ ಸಮಯ ಬದಲಾಗುತ್ತದೆ. ಬ್ಯಾಂಕ್‌ಗಳು ಬೆಳಗ್ಗೆ 10 ಗಂಟೆಗೆ ಬದಲಾಗಿ 15 ನಿಮಿಷ ಮುಂಚಿತವಾಗಿ ತೆರೆದಿರುತ್ತವೆ. ಅಂದರೆ 9.45 ರಿಂದ ಸಂಜೆ 5.30 ರವರೆಗೆ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ. ಬ್ಯಾಂಕಿಂಗ್ ದಿನಗಳ ಮತ್ತು ಬ್ಯಾಂಕ್‌ಗಳ ಸಮಯ ಬದಲಾವಣೆಗೆ ಸಂಬಂಧಿಸಿದಂತೆ ಗ್ರಾಹಕ ಸೇವೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಬ್ಯಾಂಕ್ ಉದ್ಯೋಗಿಗಳು ಮತ್ತು ಬ್ಯಾಂಕಿಂಗ್ ಒಕ್ಕೂಟಗಳು ಹೇಳಿದ್ದಾರೆ.


Click it and Unblock the Notifications