ಹೊಸ ವರ್ಷ (New Year) ಆರಂಭವಾಗುತ್ತಿದ್ದಂತೆ ಬಂದ್.. ಬಂದ್ ಎಂಬ ಸುದ್ದಿಗಳು ಹರಿದಾಡಲು ಶುರುವಾಗಿದೆ. ಅತ್ತ ಕರ್ನಾಟಕದಲ್ಲಿ ಸಾರಿಗೆ ನೌಕರರು ಸರ್ಕಾರದ ವಿರುದ್ಧ ರೊಚ್ಚಿಗೆದ್ದರೆ, ಇತ್ತ ಬ್ಯಾಂಕ್ ನೌಕರರು ರಜಾ ವಿಷಯದಲ್ಲಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೌದು, ಈಗಾಗಲೇ ಬ್ಯಾಂಕ್ ನೌಕರರಿಗೆ ದೇಶವ್ಯಾಪಿಯಾಗಿ ಪ್ರತೀ ತಿಂಗಳ ಎರಡನೇ ಶನಿವಾರ ಮತು ನಾಲ್ಕನೇ ಶನಿವಾರ, ಎಲ್ಲಾ ಭಾನುವಾರ ರಜೆ ನೀಡಲಾಗುತ್ತಿದೆ. ಆದ್ರೆ ಬ್ಯಾಂಕ್ ನೌಕರರ (Bank Employees Strike) ಕೆಲಸದ ದಿನ ಕೇವಲ 5 ದಿನ ಮಾತ್ರ ಇರಬೇಕೆಂದು ಆಗ್ರಹಿಸಿದೆ. ಇದೇ ಕಾರಣದಿಂದ ಇದೀಗ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (UFBU) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲು ಮುಂದಾಗಿದೆ.

ವಾರದಲ್ಲಿ ಪಂಚದಿನಗಳ ಬ್ಯಾಂಕಿಂಗ್ ಸೇವೆಗಾಗಿ ಒತ್ತಾಯಿಸಿ, ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (UFBU) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಹಾಗಿದ್ರೆ ಏತಕ್ಕಾಗಿ ಈ ಹೋರಾಟ? ಯಾವಾಗ ನಡೆಯುತ್ತೆ ಮುಷ್ಕರ? ಈ ಕುರಿತು ಸಂಪೂರ್ಣ ಮಾಹಿತಿ ಕೆಳಗಿನ ಲೇಖನದಲ್ಲಿದೆ ಓದಿ.
ಮುಷ್ಕರಕ್ಕೆ ಕಾರಣವೇನು?
ಪಂಚದಿನಗಳ ಬ್ಯಾಂಕಿಂಗ್ ಸೇವೆಗಾಗಿ ಒತ್ತಾಯಿಸಿ, ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (UFBU) ಜನವರಿ 27, 2026 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಪ್ರಸ್ತುತ, ಬ್ಯಾಂಕ್ ಉದ್ಯೋಗಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ಘೋಷಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ಸರ್ಕಾರಿ ರಜಾದಿನಗಳು ಮತ್ತು ಭಾನುವಾರ ರಜೆ ಇರುತ್ತದೆ. ಆದರೆ ಕಳೆದ 2024, ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಒಪ್ಪಂದದ ವೇಳೆ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಮತ್ತು UFBU ನಡುವೆ ಉಳಿದ ಎರಡು ಶನಿವಾರಗಳನ್ನು ಸಹ ರಜಾದಿನಗಳೆಂದು ಘೋಷಿಸಲು ಸಮ್ಮತಿ ವ್ಯಕ್ತಪಡಿಸಲಾಗಿತ್ತು. ಆದರೆ ಇನ್ನೂ ಇದು ಜಾರಿಗೆ ಬರದ ಕಾರಣ ಇದೀಗ UFBU ಮುಷ್ಕರಕ್ಕೆ ಮುಂದಾಗಿದೆ.
ಯಾವಾಗ ಮುಷ್ಕರ?
ಇದೀಗ ಬ್ಯಾಂಕ್ ಉದ್ಯೋಗಿಗಳಿಗೆ ಇನ್ನೂ ಪಂಚದಿನಗಳ ಉದ್ಯೋಗ ಸೇವೆ ಜಾರಿಗೆ ಬರದ ಹಿನ್ನೆಲೆ, ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಜನವರಿ 27 ಕ್ಕೆ ಮುಷ್ಕರಕ್ಕೆ ಕರೆ ನೀಡಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ, ಜನವರಿ 25 ಮತ್ತು 26 ರ ಸಾರ್ವಜನಿಕ ರಜೆಗಳ ಬೆನ್ನಲ್ಲೇ, ಈ ಮುಷ್ಕರದ ಜೊತೆ ಸತತ ಮೂರು ದಿನಗಳ ಕಾಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸ್ಥಗಿತಗೊಳ್ಳಲಿದೆ. ಇದರಿಂದ ಗ್ರಾಹಕರ ಮೇಲೂ ಭಾರೀ ಪರಿಣಾಮ ಬೀರಲಿದೆ.
ಇನ್ನು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ "ನಮ್ಮ ನ್ಯಾಯಯುತ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವುದು ದುರದೃಷ್ಟಕರ," ಎಂದುಬೇಸರ ವ್ಯಕ್ತಪಡಿಸಿದೆ. "ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಹೆಚ್ಚುವರಿ 40 ನಿಮಿಷ ಕೆಲಸ ಮಾಡಲು ನಾವು ಒಪ್ಪಿಕೊಂಡಿರುವುದರಿಂದ, ಇದರಿಂದ ಸೇವೆಯಲ್ಲಿ ಯಾವುದೇ ನಷ್ಟವಾಗುವುದಿಲ್ಲ" ಎಂದು ಒಕ್ಕೂಟ ಹೇಳಿದೆ. ಅಲ್ಲದೇ ತನ್ನ ನಿಲುವನ್ನು ಪ್ರತಿಪಾದಿಸಿರುವ ಯುಎಫ್‌ಬಿಯು, ಐದು ದಿನಗಳ ಬ್ಯಾಂಕ್ ಸೇವೆಯಿಂದ ಕೆಲಸದ ಮೇಲೆ ಯಾವುದೇ ಒತ್ತಡ ಬೀಳುವುದಿಲ್ಲ ಎಂದು ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI), ಎಲ್‌ಐಸಿ (LIC), ಜಿಐಸಿ (GIC) ಸೇರಿದಂತೆ ಹಲವು ಸಂಸ್ಥೆಗಳು ಈಗಾಗಲೇ ವಾರದಲ್ಲಿ 5 ದಿನ ಮಾತ್ರ ಕಾರ್ಯನಿರ್ವಹಿಸುತ್ತಿವೆ. ವಿದೇಶಿ ವಿನಿಮಯ, ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೂ ಎಲ್ಲಾ ಶನಿವಾರ ರಜೆ ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳೂ ಸಹ ಶನಿವಾರ ಕೆಲಸ ಮಾಡುವುದಿಲ್ಲ. ಹೀಗಾಗಿ, ಬ್ಯಾಂಕುಗಳಿಗೂ ರಜೆ ನೀಡಬೇಕೆಂಬುದು UFBU ಆಗ್ರಹಿಸಿದೆ.
UFBU ಭಾರತದ 9 ಪ್ರಮುಖ ಬ್ಯಾಂಕ್ ಯೂನಿಯನ್‌ಗಳ ಸಮಗ್ರ ಸಂಸ್ಥೆಯಾಗಿದೆ. ಸಾರ್ವಜನಿಕ ಹಾಗೂ ಕೆಲವು ಹಳೆಯ ತಲೆಮಾರಿನ ಖಾಸಗಿ ಬ್ಯಾಂಕ್‌ಗಳ ಉದ್ಯೋಗಿಗಳು ಮತ್ತು ಅಧಿಕಾರಿಗಳನ್ನು ಇದು ಪ್ರತಿನಿಧಿಸುತ್ತದೆ. ಈಗಾಗಲೇ ಒಕ್ಕೂಟ ಸೋಷಿಯಲ್ ಮೀಡಿಯಾ ಮೂಲಕ #5DayBankingNow ಅಭಿಯಾನವನ್ನು ಶುರುಮಾಡಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications