ಯಾವುದೇ ಹಬ್ಬಗಳು ಬರಲಿ, ವಿಶೇಷ ದಿನಗಳಿರಲಿ ಬ್ಯಾಂಕ್, ಶಾಲಾ-ಕಾಲೇಜುಗಳು, ಸರ್ಕಾರಿ, ಖಾಸಗಿ ಕಚೇರಿಗಳಿಗೆ ರಜೆ ನೀಡಲಾಗುತ್ತದೆ. ಆದರಲ್ಲೂ ಮಾರ್ಚ್, ಏಪ್ರಿಲ್ ತಿಂಗಳು ಬಂತೆಂದರೆ ಸಾಕು ಸಾಲು ಸಾಲು ರಜೆ (Bank Holidays) ಸಿಗಲು ಆರಂಭವಾಗುತ್ತದೆ. ಮಾರ್ಚ್ ತಿಂಗಳಲ್ಲಿ ಸಾಲು ಸಾಲು ಹಬ್ಬಗಳಿದ್ದು, ಈ ಸಂದರ್ಭದಲ್ಲಿ ಬ್ಯಾಂಕುಗಳಿಗೂ ರಜೆ ನೀಡಲಾಗುತ್ತದೆ.

ಹೌದು, ಭಾರತದಲ್ಲಿ ಮಾರ್ಚ್ ತಿಂಗಳು ಹಬ್ಬಗಳ ತಿಂಗಳಾಗಿದ್ದು, ಹೋಳಿಯ, ರಂಜಾನ್, ಯುಗಾದಿ, ರಾಮನವಮಿ ಮುಂತಾದ ಹಬ್ಬಗಳು ಇರುವ ಕಾರಣ ಬ್ಯಾಂಕುಗಳು ಅನೇಕ ದಿನ ಮುಚ್ಚಿರುತ್ತದೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿದ ಕ್ಯಾಲೆಂಡರ್ ಪ್ರಕಾರ, 2026 ರ ಮಾರ್ಚ್‌ನಲ್ಲಿ ಒಟ್ಟು 18 ದಿನಗಳು ಬ್ಯಾಂಕ್ ಮುಚ್ಚಿರುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗು ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್ ಮುಚ್ಚಿರುತ್ತದೆ ಎನ್ನಲಾಗಿದೆ.
ಮಾರ್ಚ್ ತಿಂಗಳಲ್ಲಿ ಸಾಲು ಸಾಲು ರಜೆ!
ಈ ತಿಂಗಳ ಆರಂಭದಲ್ಲಿ ಅಂದರೆ ಇಂದು (ಮಾರ್ಚ್ 4) ರಂದು ಹಲವರ ಆಚರಿಸುವ ಹಬ್ಬವೆಂದರೆ ಅದು ಹೋಳಿ. ಉತ್ತರ ಪ್ರದೇಶದ ಶಾಲೆಗಳಿಗೆ ಈ ದಿನ ರಜೆ ನೀಡಲಾಗುತ್ತದೆ. ಅಲ್ಲದೇ ಈ ದಿನ ಬಿಹಾರ, ರಾಜಸ್ಥಾನ, ದೆಹಲಿ ಮತ್ತು ಜಾರ್ಖಂಡ್ ಸಹ ಮುಚ್ಚಲ್ಪಡುತ್ತದೆ. ಹೆಚ್ಚಿನ ರಾಜ್ಯಗಳಲ್ಲಿನ ಬ್ಯಾಂಕುಗಳು ಮಾರ್ಚ್ 3-4 ರಂದು ಮುಚ್ಚಲ್ಪಡುತ್ತದೆ.
ಇನ್ನು ಮಾರ್ಚ್ 1, 8, 22, 29 ರಂದು ಭಾನುವಾರವಾದ್ದರಿಂದ ದೇಶದ ಎಲ್ಲಾ ರಾಜ್ಯಗಳಲ್ಲಿ ರಜೆ ಇರಲಿದೆ. ಅದೇ ರೀತಿ ಮಾರ್ಚ್ 14 ಮತ್ತು ಮಾರ್ಚ್ 28 ರಂದು ಎರಡನೇ ಮತ್ತು ನಾಲ್ಕನೇ ಶನಿವಾರವಾದ್ದರಿಂದ ಸಾರ್ವಜನಿಕ ರಜೆ ಇರಲಿದೆ.
- ಇನ್ನು ಮಾರ್ಚ್ 13, ಶುಕ್ರವಾರದಂದು ಚಾಪ್‌ಚರ್ ಕುಟ್, ಮಿಜೋರಾಂನಲ್ಲಿ ರಜೆ ಇರಲಿದೆ ಎನ್ನಲಾಗಿದೆ.
- ಮಾರ್ಚ್ 17: ಮಂಗಳವಾರ, ಶಬ್-ಇ-ಕದ್ರ್‌ವಾದ್ದರಿಂದ ರಜೆ ಇರಲಿದೆ.
- ಮಾರ್ಚ್ 19: ಗುರುವಾರ, ಯುಗಾದಿ ಹಬ್ಬದ ಹಿನ್ನೆಲೆ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಣಿಪುರ್ ಮುಂತಾದ ಜಿಲ್ಲೆಗಳಲ್ಲಿ ರಜೆ ಇರಲಿದೆ ಎನ್ನಲಾಗಿದೆ.
- ಮಾರ್ಚ್ 20: ಶುಕ್ರವಾರ, ಈದ್-ಉಲ್-ಫಿತರ್. ಎಲ್ಲಾ ರಾಜ್ಯಗಳಲ್ಲಿ ರಜೆ ಇರಲಿದೆ.
- ಮಾರ್ಚ್ 21: ಶನಿವಾರ, ರಂಜಾನ್ ಹಬ್ಬದ ಪ್ರಯುಕ್ತ ಕೆಲವು ರಾಜ್ಯಗಳಲ್ಲಿ ರಜೆ.
- ಮಾರ್ಚ್ 26: ಗುರುವಾ, ಶ್ರೀ ರಾಮನವಮಿ, ಎಲ್ಲಾ ರಾಜ್ಯಗಳಲ್ಲಿ ರಜೆ ಇರಲಿದೆ.
- ಮಾರ್ಚ್ 27: ಶುಕ್ರವಾರ, ಮಹಾವೀರ ಜಯಂತಿ ಹಿನ್ನೆಲೆ ಕೆಲವು ರಾಜ್ಯಗಳಲ್ಲಿ ಮಾತ್ರ ರಜೆ ಇರಲಿದೆ.
- ಮಾರ್ಚ್ 28: ಶನಿವಾರ, ನಾಲ್ಕನೇ ಶನಿವಾರವಾದ್ದರಿಂದ ಎಲ್ಲಾ ರಾಜ್ಯಗಳಲ್ಲಿ ರಜೆ ಇರಲಿದೆ.
ಪ್ರತೀ ತಿಂಗಳು ಬ್ಯಾಂಕ್‌ಗಳಿಗೆ ಇದೇ ರೀತಿ ರಜೆ ಘೋಷಣೆ ಮಾಡಲಾಗುತ್ತದೆ. ಆರ್‌ಬಿಐ ಈ ರಜೆಯನ್ನು ನಿರ್ಧಾರ ಮಾಡುತ್ತದೆ. ಆರ್‌ಬಿಐ ಅಲ್ಲದೇ ಪ್ರಾದೇಶಿಕ ಹಬ್ಬಗಳಿಗನುಗುಣವಾಗಿ ಕೆಲವೊಮ್ಮೆ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿರುತ್ತದೆ. ಇನ್ನು ಬ್ಯಾಂಕ್‌ಗಳಿಗೆ ರಜೆ ಇದ್ದರೂ, ಆನ್‌ಲೈನ್ ಬ್ಯಾಂಕಿಂಗ್ ವಹಿವಾಟುಗಳು ತೆರೆದಿರುತ್ತದೆ. ಆದ್ದರಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆಯನ್ನು ಮಾಡಬಹುದು.


Click it and Unblock the Notifications