ಹಣ, ಸಾಲ, ಚೆಕ್ ಸಂಬಂಧಿತ ಯಾವುದೇ ಅಗತ್ಯ ಕೆಲಸಗಳಿಗೆ ಬ್ಯಾಂಕ್ (Bank) ಹೋಗೋದು ಸಾಮಾನ್ಯ. ಆದ್ರೆ ಈ ಬ್ಯಾಂಕ್‌ಗಳು ಕೆಲವೊಮ್ಮೆ, 5 ದಿನ ಕೆಲಸ ಮಾಡಿದ್ರೆ, ಇನ್ನೂ ಕೆಲವೊಮ್ಮೆ 6 ದಿನ ಕಾರ್ಯ ನಿರ್ವಹಿಸುತ್ತದೆ. ಆದ್ರೆ ಸರ್ಕಾರಿ ರಜಾ ದಿನಗಳಿದ್ರೆ (Bank Holidays) ಮಾತ್ರ ಕೆಲವೊಮ್ಮೆ ವಾರವಿಡೀ ರಜೆ ಇರುತ್ತೆ. ಆದ್ದರಿಂದ ಜನರಿಗೂ ಈ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತೀ ತಿಂಗಳು ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ರ ಫೆಬ್ರವರಿ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಬ್ಯಾಂಕ್‌ಗೆ ಸಂಬಂಧಿತ ಕೆಲಸಗಳನ್ನು ಮೊದಲೇ ಪ್ಲಾನ್ ಮಾಡಿಕೊಳ್ಳುವ ಉದ್ದೇಶದಿಂದ ಈ ರಜಾದಿನಗಳನ್ನು ಮೊದಲೇ ಘೋಷಿಸಲಾಗುತ್ತದೆ. ವರದಿ ಪ್ರಕಾರ, ಈ ತಿಂಗಳು ಒಟ್ಟು ಒಂಬತ್ತು ದಿನ ಬ್ಯಾಂಕ್ ರಜೆ ಇರಲಿದೆ. ಹಾಗಿದ್ರೆ ಎಲ್ಲೆಲ್ಲಿ? ಯಾಕೆ ರಜೆ ನೀಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಆರ್‌ಬಿಐ ವಾರ್ಷಿಕ ರಜಾ ಕ್ಯಾಲೆಂಡರ್ ರಾಷ್ಟ್ರವ್ಯಾಪಿ ಹಾಗೂ ರಾಜ್ಯಗಳಿಗೆ ಸಂಬಂಧಿಸಿ ಆಯಾ ನಿರ್ದಿಷ್ಟ ಆಚರಣೆಗೆ ತಕ್ಕಂತೆ ಪ್ರಕಟಿಸಲಾಗುತ್ತದೆ. ಈ ಮಾಹಿತಿ ಗ್ರಾಹಕರು ಅನತ್ಯವಾಗಿ ಬ್ಯಾಂಕ್ ಹೋಗುವುದನ್ನು ತಪ್ಪಿಸಲಿದೆ. ಅಲ್ಲದೇ ಚೆಕ್ ಠೇವಣಿ ಅಥವಾ ವೈಯಕ್ತಿಕ ಬ್ಯಾಂಕಿಂಗ್ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಲು ಅನುಕೂಲವಾಗಲಿದೆ.
ಬ್ಯಾಂಕ್ ರಜೆಗಳನ್ನು ವಾರದ ರಜೆಗಳು (ಭಾನುವಾರ, ನಿಗದಿತ ಶನಿವಾರಗಳು), ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಕಾಯಿದೆ ರಜೆಗಳು (ಚೆಕ್ ಕ್ಲಿಯರೆನ್ಸ್‌ಗೆ ಸಂಬಂಧಿಸಿದ), ಮತ್ತು ಸ್ಥಳೀಯ ಹಬ್ಬ/ರಾಜ್ಯೋತ್ಸವ ಆಧಾರಿತ ರಾಜ್ಯ-ನಿರ್ದಿಷ್ಟ ರಜೆಗಳೆಂದು ವರ್ಗೀಕರಿಸಲಾಗಿದೆ.
ಡಿಜಿಟಲ್ ಸೇವೆ ಲಭ್ಯ
ಬ್ಯಾಂಕ್‌ಗಳು ಶಾಖೆಗಳು ಮುಚ್ಚಿದ್ದರೂ, ತಾಂತ್ರಿಕ ಅಡಚಣೆಯಿಲ್ಲದಿದ್ದರೆ ಯುಪಿಐ, ಮೊಬೈಲ್/ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಗಳಂತಹ ಹೆಚ್ಚಿನ ಡಿಜಿಟಲ್ ಸೌಲಭ್ಯಗಳು ಸಾಮಾನ್ಯವಾಗಿ ಲಭ್ಯವಿರುತ್ತವೆ.
ಫೆಬ್ರವರಿ 2026ರ ರಜಾ ವಿವರ:
ಫೆಬ್ರವರಿ 1, 8, 15, 22 ಭಾನುವಾರಗಳು, ಫೆಬ್ರವರಿ 14 (ಎರಡನೇ ಶನಿವಾರ) ಮತ್ತು ಫೆಬ್ರವರಿ 28 (ನಾಲ್ಕನೇ ಶನಿವಾರ) ರಾಷ್ಟ್ರವ್ಯಾಪಿ ರಜೆಗಳು. ಫೆಬ್ರವರಿ 15 ರಂದು ಮಹಾ ಶಿವರಾತ್ರಿ ಕೂಡ ಇದೆ. ಈ ಬಾರಿ ಭಾನುವಾರವೂ ಬಂದಿರುವುದರಿಂದ ಬೇರೆ ರಜೆ ಇರುವುದಿಲ್ಲ ಎನ್ನಲಾಗಿದೆ. ಸಿಕ್ಕಿಂನ ಗ್ಯಾಂಗ್ಟಾಕ್‌ನಲ್ಲಿ ಫೆಬ್ರವರಿ 18 (ಬುಧವಾರ) ಲೋಸರ್ ಆಚರಣೆಗೆ ರಜೆ.
ಮಹಾರಾಷ್ಟ್ರದ ಮುಂಬೈ, ನಾಗ್ಪುರ್, ಬೇಲಾಪುರ್‌ನಲ್ಲಿ ಫೆಬ್ರವರಿ 19 (ಗುರುವಾರ) ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಗೆ ಬ್ಯಾಂಕ್ ರಜೆ. ಫೆಬ್ರವರಿ 20 (ಶುಕ್ರವಾರ) ಮಿಜೋರಾಂ (ಐಜ್ವಾಲ್) ಮತ್ತು ಮಣಿಪುರ (ಇಟಾನಗರ/ಇಂಫಾಲ್) ರಾಜ್ಯಗಳಲ್ಲಿ ರಾಜ್ಯ ದಿನ/ರಾಜ್ಯೋತ್ಸವ ದಿನದಂದು ಬ್ಯಾಂಕುಗಳು ಮುಚ್ಚಿರುತ್ತದೆ ಎಂದು ಹೇಳಲಾಗಿದೆ.
ರಜಾದಿನಗಳಂದು ಬ್ಯಾಂಕ್‌ಗಳು ಮಾತ್ರ ಮುಚ್ಚಿರುತ್ತದೆ. ಆದರೂ, ಯುಪಿಐ, ಮೊಬೈಲ್/ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ನಗದು ಹಿಂಪಡೆಯುವಿಕೆ ಮತ್ತು ಆನ್‌ಲೈನ್ ಬಿಲ್ ಪಾವತಿಯಂತಹ ಡಿಜಿಟಲ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿರಲಿದೆ. ಆದರೆ, ಚೆಕ್ ಕ್ಲಿಯರಿಂಗ್, ಡಿಮ್ಯಾಂಡ್ ಡ್ರಾಫ್ಟ್, ಸಾಲ, ಖಾತೆ ಸಂಬಂಧಿತ ಕೆಲಸಗಳಿಗೆ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಲಾಗಿದೆ.
ಆದ್ದರಿಂದ ಈ ಅನಾನುಕೂಲತೆ ತಪ್ಪಿಸಲು, ಶಾಖೆಗೆ ಹೋಗುವ ಮುನ್ನ ರಜೆ ಚೆಕ್ ಮಾಡಿಕೊಳ್ಳಿ. ಶಾಖೆ ಮುಚ್ಚಿದಾಗ ಆನ್‌ಲೈನ್ ಬ್ಯಾಂಕಿಂಗ್ ಬಳಸಿ. ನಿಮ್ಮ ಪ್ರದೇಶಕ್ಕೆ ಹೆಚ್ಚುವರಿ ರಜೆಯಿದ್ದರೆ ಬ್ಯಾಂಕ್‌ನೊಂದಿಗೆ ಮಾಹಿತಿ ಪಡೆದು ಖಚಿತಪಡಿಸಿಕೊಳ್ಳಿ.
ಫೆಬ್ರವರಿಯಲ್ಲಿ ಕಡಿಮೆ ಬ್ಯಾಂಕ್ ರಜೆಗಳಿದ್ದರೂ, ರಾಜ್ಯದ ನಿರ್ದಿಷ್ಟ ರಜಾದಿನಗಳಂದು ಬ್ಯಾಂಕ್ ಮುಚ್ಚಿರುತ್ತದೆ. ಪ್ರಸ್ತುತ ಡಿಜಿಟಲ್ ಬ್ಯಾಂಕ್ ಸೇವೆಗಳು ಲಭ್ಯವಿರುವುದರಿಂದ, ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದ್ರೆ ಸಾಲ, ಚೆಕ್ ಸಂಬಂಧಿತ ಯಾವುದೇ ಅಗತ್ಯ ಸೇವೆಗಳಿದ್ದರೆ ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆ ಎದುರಾಗುತ್ತದೆ..


Click it and Unblock the Notifications