ಒಂದು ಹಣಕಾಸಿನ ವರ್ಷ ಅಥವಾ ವಿತ್ತ ವರ್ಷದ ಕೊನೆಯ ತಿಂಗಳು ಸಮೀಪಿಸುತ್ತಿದೆ. ಜೊತೆಗೆ ಇನ್ನೊಂದು ತಿಂಗಳಲ್ಲಿ ಪರೀಕ್ಷೆಗಳು ಮುಗಿದು ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆ ರಜೆಯೂ ಆರಂಭವಾಗುತ್ತದೆ. ರಜಾ ದಿನಗಳಿಗಾಗಿ ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯಲು, ಪ್ರವಾಸಕ್ಕಾಗಿ ಪ್ಲ್ಯಾನ್ ಹಾಕಿಕೊಳ್ಳುವರಿಗೆ ಕೆಲವು ಬಾರಿ ಬ್ಯಾಂಕ್ ವಹಿವಾಟುಗಳ ಅಗತ್ಯವಿರುವುದರಿಂದ ಬ್ಯಾಂಕ್ ರಾಜದಿನಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಂಡರೆ ಉತ್ತಮ.
ಭಾರತದಲ್ಲಿ ಕೆಲವು ರಾಷ್ಟ್ರೀಯ ಹಾಗೂ ಇನ್ನು ಕೆಲವು ನಿರ್ದಿಷ್ಟ ರಾಜ್ಯಗಳಿಗೆ ಮಾತ್ರ ಅನ್ವಯಿಸುವ ಪ್ರಾದೇಶಿಕ ರಜೆಗಳಿವೆ. ಹೀಗಾಗಿ ಬ್ಯಾಂಕಿಂಗ್ ಕಾರ್ಯಗಳ ಯೋಜನೆಗಳನ್ನು ಮುಂಚಿತವಾಗಿ ಮಾಡಿಕೊಳ್ಳಲು ಯಾವ ದಿನ ಬ್ಯಾಂಕ್ ಕೆಲಸ ಮಾಡುತ್ತದೆ ಎನ್ನುವುದನ್ನು ಗಮನಿಸಿ. ನಿಮಗೇನಾದ್ರೂ ಬ್ಯಾಂಕ್ ಕೆಲಸಗಳಿದ್ರೆ ನೀವು ಮುಂಚಿತವಾಗಿ ಕೆಲಸ ಮುಗಿಸಿಕೊಳ್ಳುವುದು ಉತ್ತಮ. ಏಕೆಂದರೆ ಮುಂದಿನ ಮಾರ್ಚ್ ತಿಂಗಳ ಅವಧಿಯಲ್ಲಿ ಬರೋಬ್ಬರಿ 13 ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರಲಿದೆ.

ಹಣಕಾಸು ವರ್ಷದ ಕೊನೆ ತಿಂಗಳಲ್ಲಿ 2025 ರ ಮಾರ್ಚ್ ನಲ್ಲಿ 5 ಭಾನುವಾರಗಳು ಇರಲಿದ್ದು, ಇದರೊಂದಿಗೆ ಎರಡನೇ ಹಾಗೂ ನಾಲ್ಕನೇ ಶನಿವಾರವೂ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಇದಲ್ಲದೇ ವಿವಿಧ ಹಬ್ಬಗಳ ಹಿನ್ನಲೆಯಲ್ಲಿ ದೇಶಾದ್ಯಂತ 7 ದಿನಗಳ ಕಾಲ ರಜೆ ಇರಲಿದೆ. ಒಟ್ಟಾರೆ ತಿಂಗಳಲ್ಲಿ 13 ರಜೆಗಳು ಮಾರ್ಚ್ ನಲ್ಲಿ ಇರಲಿದೆ.
ಬ್ಯಾಂಕ್ ಗಳಿಗೆ ರಜೆ ಇರುವ ದಿನಗಳು
ಮಾರ್ಚ್ 2: ಭಾನುವಾರ
ಮಾರ್ಚ್ 7: ಶುಕ್ರವಾರ ಚಾಪ್ಟರ್ ಕುಟ್ ಹಬ್ಬ (ಮಿಜೋರಂನ ಐಜ್ವಾಲ್ ನಲ್ಲಿ ಬ್ಯಾಂಕ್ಗಳಿಗೆ ರಜೆ)
ಮಾರ್ಚ್ 9: ಎರಡನೇ ಶನಿವಾರ
ಮಾರ್ಚ್ 13: ಗುರುವಾರ ದೇಶದಾದ್ಯಂತ ಹೋಳಿಕಾ ದಹನ್ ಆಚರಣೆ ಪ್ರಾದೇಶಿಕ ಬ್ಯಾಂಕ್ ರಜೆ ಇರುತ್ತದೆ
ಮಾರ್ಚ್ 14: ಶುಕ್ರವಾರ ಹೋಳಿ ಹಬ್ಬ ಇರಲಿದ್ದು ರಾಷ್ಟ್ರವ್ಯಾಪ್ತಿ ಪ್ರಮುಖ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ
ಮಾರ್ಚ್ 15: ಶನಿವಾರ (ಯಾವೋಸಿಂಗ್ ದಿನ ಆಚರಣೆ, ಭುವನೇಶ್ವರ)
ಮಾರ್ಚ್ 16: ಭಾನುವಾರ
ಮಾರ್ಚ್ 22: ನಾಲ್ಕನೇ ಶನಿವಾರ
ಮಾರ್ಚ್ 23: ಭಾನುವಾರ
ಮಾರ್ಚ್ 27: ಶಬ್-ಎ-ಖಾದ್ ಎನ್ನುವ ಆಚರಣೆ ಹಿನ್ನೆಲೆಯಲ್ಲಿ ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ.
ಮಾರ್ಚ್ 28: ಶುಕ್ರವಾರ (ಜಮಾತ್-ಉಲ್-ವಿದಾ ಆಚರಣೆ, ಜಮ್ಮು ಮತ್ತು ಶ್ರೀನಗರ)
ಮಾರ್ಚ್ 30: ಭಾನುವಾರ/ ಯುಗಾದಿ
ಮಾರ್ಚ್ 31: ಆರ್ ಬಿಐ ಗೆಜೆಟೆಡ್ ರಜೆ ಘೋಷಿಸಿದ್ದು, ಬಳಿಕ ಇದನ್ನು ರದ್ದು ಮಾಡಿದೆ.
ಬ್ಯಾಂಕ್ ಗೆ ತೆರಳಿ ಮಾಡುವ ಕೆಲಸಗಳಿಗೆ ಸಮಸ್ಯೆ ಆಗುವ ಕಾರಣ ನಿಮಗೆ ಬ್ಯಾಂಕಿಂಗ್ ಕೆಲಸ ಕಾರ್ಯಗಳು ಇದ್ದರೆ ಮುಂಚಿವಾಗಿ ಯೋಜನೆ ಮಾಡಿಕೊಳ್ಳಿ.
ಇನ್ನು ಬ್ಯಾಂಕ್ ರಜೆ ಇದ್ದರೂ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದರಿಂದ ನಿಮ್ಮ ಹಣಕಾಸಿನ ವಹಿವಾಟುಗಳು ಸುಗಮವಾಗಿ ನಡೆಯುತ್ತವೆ. ಆನ್ಲೈನ್ ಮೂಲಕ ನೀವು ಯಾರಿಗಾದರೂ ಹಣವನ್ನು ಕಳುಹಿಸಬಹುದು, ಸ್ವೀಕರಿಸಬಹುದು, ಬಿಲ್ ಪಾವತಿ ಮಾಡಬಹುದು ಮತ್ತು ಖಾತೆಯ ಮಾಹಿತಿಯನ್ನು ಪರಿಶೀಲಿಸಬಹುದು. ಅಗತ್ಯವಿದ್ದಾಗ ಹತ್ತಿರದ ಎಟಿಎಂಗೆ ಭೇಟಿ ನೀಡಿ ನಗದು ಹಿಂಪಡೆಯಬಹುದು. ಯುಪಿಐ ಸೇವೆಗಳು 24 ಗಂಟೆಗಳೂ ಲಭ್ಯವಿರುವುದರಿಂದ ರಜಾ ದಿನಗಳಲ್ಲಿಯೂ ವಹಿವಾಟು ನಡೆಸಲು ಅನುಕೂಲಕರವಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications