ಇನ್ನೇನು ಹೊಸ ವರ್ಷವು ಪ್ರಾರಂಭವಾಗುವುದಕ್ಕೆ ಕೆಲ ಗಂಟೆಗಳಷ್ಟೇ ಬಾಕಿ ಇದೆ. ಹೊಸ ವರ್ಷದಲ್ಲಿ ಹೊಸ ಉತ್ಸಾಹದೊಂದಿಗೆ ಜೀವನ ಸಾಗಿಸುವ ಪಣವನ್ನು ಅನೇಕರು ಹಾಕಿಕೊಂಡಿರುತ್ತಾರೆ. ಅದೇ ರೀತಿ ನಿಮ್ಮ ಯೋಜಿತ ರೀತಿಯಲ್ಲಿ ಕೆಲಸ ಕಾರ್ಯಗಳು ಸಾಗಲು ಕೆಲ ಅಪ್ಡೇಟ್ ತಿಳಿದಿರುವುದು ತುಂಬಾನೇ ಮುಖ್ಯ. ಅದರಲ್ಲಿ ಬ್ಯಾಂಕ್ ಗಳ ಆಗುಹೋಗು ವಹಿವಾಟುಗಳ ದಿನಗಳ ಬಗ್ಗೆ ತಿಳಿದಿದ್ರೆ ಕೆಲಸಗಳು ನಾವು ಅಂದುಕೊಂಡಂತೆ ಸುಲಲಿತವಾಗಿ ಸಾಗುತ್ತದೆ.
ಜನವರಿಯಲ್ಲಿ ಅನೇಕ ಪ್ರಾದೇಶಿಕ ಮತ್ತು ಹಬ್ಬದ ರಜಾದಿನಗಳು ಸಮೀಪಿಸುತ್ತಿರುವ ಕಾರಣ ಬ್ಯಾಂಕ್ ರಜೆಯ ವೇಳಾಪಟ್ಟಿಯ ಬಗ್ಗೆ ತಿಳಿದಿರುವುದು ಬಹಳ ಉಪಯುಕ್ತ. ಆದ್ದರಿಂದ ಯಾವುದೇ ತೊಂದರೆ ತಪ್ಪಿಸಲು ಬ್ಯಾಂಕಿಂಗ್ ವಹಿವಾಟುಗಳನ್ನು ಮುಂಚಿತವಾಗಿ ಯೋಜಿಸುವುದು ಕೂಡಾ ಪ್ರಮುಖವಾಗುತ್ತದೆ.

ಭಾರತದಲ್ಲಿನ ಬ್ಯಾಂಕುಗಳು ಜನವರಿ 1 ರಂದು ಮುಚ್ಚಿರುತ್ತದೆ ಎಂದು ಅನೇಕರಿಗೆ ನಿರೀಕ್ಷೆ ಇರುತ್ತದೆ. ಜನವರಿಯ ಮೊದಲ ದಿನ, ಹೊಸ ವರ್ಷವನ್ನು ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಆದರೆ ಇದರ ಜೊತೆಗೆ, ವಿವಿಧ ರಾಜ್ಯಗಳು ತಮ್ಮದೇ ಆದ ವಿಶಿಷ್ಟ ಹಬ್ಬಗಳನ್ನು ಆಚರಿಸುವುದರಿಂದ, ರಜೆಯ ವೇಳಾಪಟ್ಟಿಯು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ.
ನಾವು ಉದಾಹರಣೆ ಸಹಿತ ನೋಡುವುದಾದರೆ, ಮಿಜೋರಾಂ ಮತ್ತು ಸಿಕ್ಕಿಂನಂತಹ ಕೆಲವು ರಾಜ್ಯಗಳು ಡಿಸೆಂಬರ್ 31 ರಂದು ಹೊಸ ವರ್ಷದ ಮುನ್ನಾದಿನ, ಲಾಸಾಂಗ್ ಮತ್ತು ನಮ್ಸೂಂಗ್ ಅನ್ನು ಆಚರಿಸಲು ಬ್ಯಾಂಕ್ ರಜೆ ನೀಡಲಾಗುತ್ತದೆ.
ಇದಲ್ಲದೆ, ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ನಾಲ್ಕು ಭಾನುವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದರ ಜೊತೆಗೆ ಪ್ರಮುಖ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ನೀವು ನಿಮ್ಮ ರಾಜ್ಯ ಅಥವಾ ಪ್ರಾದೇಶಿಕ ರಜಾದಿನದ ಕ್ಯಾಲೆಂಡರ್ ಅನ್ನು ಪರಿಶೀಲಿಸುವುದು ಉತ್ತಮ. ಅನೇಕ ಗ್ರಾಹಕರು ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸಲು ವಾರಾಂತ್ಯವನ್ನು ಅವಲಂಬಿಸುವ ಕಾರಣ ರಜೆ ದಿನಗಳ ಬಗ್ಗೆ ಪರಿಶೀಲಿಸಿ ಹೋಗುವುದು ಒಳ್ಳೆಯದು.
ಜನವರಿ 2025 ರ ಬ್ಯಾಂಕ್ ರಜಾದಿನಗಳ ಪಟ್ಟಿ
ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 2025 ರ ಅಧಿಕೃತ ಬ್ಯಾಂಕ್ ರಜೆ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ . ಅದರೂ , ಬ್ಯಾಂಕ್‌ಗಳು 4 ಭಾನುವಾರ ಮತ್ತು 2 ಶನಿವಾರಗಳನ್ನು ಒಳಗೊಂಡಂತೆ ತಿಂಗಳಾದ್ಯಂತ 13 ರಜಾ ದಿನಗಳನ್ನು ನಿರೀಕ್ಷಿಸಲಾಗಿದೆ. ಜನವರಿ 2025 ರ ಬ್ಯಾಂಕ್ ರಜಾದಿನಗಳ ತಾತ್ಕಾಲಿಕ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:
ಜನವರಿ 1: ಹೊಸ ವರ್ಷದ ದಿನ
ಜನವರಿ 5: ಭಾನುವಾರದ ರಜೆ
ಜನವರಿ 6: ಗುರು ಗೋಬಿಂದ್ ಸಿಂಗ್ ಜಯಂತಿ - ಚಂಡೀಗಢ, ಹರಿಯಾಣ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.
ಜನವರಿ 12: ಭಾನುವಾರ /ಸ್ವಾಮಿ ವಿವೇಕಾನಂದ ಜಯಂತಿ - ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
ಜನವರಿ 13: ಲೋಹ್ರಿ - ಪಂಜಾಬ್, ಜಮ್ಮು ಮತ್ತು ಹಿಮಾಚಲ ಪ್ರದೇಶದಲ್ಲಿ ಜನಪ್ರಿಯ ಹಬ್ಬ.
ಜನವರಿ 14: ಸಂಕ್ರಾಂತಿ/ಪೊಂಗಲ್ - ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ಆಚರಿಸಲಾಗುತ್ತದೆ.
ಜನವರಿ 15: ತಿರುವಳ್ಳುವರ್ ದಿನ/ತುಸು ಪೂಜೆ - ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಆಚರಿಸಲಾಗುತ್ತದೆ.
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ - ಒಡಿಶಾ, ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
ಜನವರಿ 26: ಗಣರಾಜ್ಯೋತ್ಸವ/ ಭಾನುವಾರ
ಜನವರಿ 30: ಸೋನಮ್ ಲೋಸರ್ - ಸಿಕ್ಕಿಂನಲ್ಲಿ ಆಚರಿಸಲಾಗುವ ಹಬ್ಬ
ಒಟ್ಟಾರೆ ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ ಸೇರಿ 2025ರ ಬ್ಯಾಂಕ್ ರಜಾದಿನಗಳ ಪಟ್ಟಿಯು ಘೋಷಿಸುತ್ತದೆ. ಮುಂಚಿತವಾಗಿ ನೀಡುವುದರಿಂದ ವ್ಯಕ್ತಿಗಳು ಮತ್ತು ವ್ಯವಹಾರಗಳು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ಬ್ಯಾಂಕ್ ಗಳ ರಜಾ ದಿನಗಳ ಸ್ಪಷ್ಟ ವೇಳಾಪಟ್ಟಿಯನ್ನು ನೀಡುತ್ತದೆ. ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳನ್ನು ಒಳಗೊಂಡ ವಹಿವಾಟುಗಳನ್ನು ನಿಯಂತ್ರಿಸುವ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ನಿಬಂಧನೆಗಳ ಅಡಿಯಲ್ಲಿ ಈ ರಜಾದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಿಸುತ್ತದೆ. ಈ ದಿನಾಂಕಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುವುದರಿಂದ ಮುಂಚಿತವಾಗಿ ವಹಿವಾಟುಗಳು ಮತ್ತು ಸೇವೆಗಳಿಗೆ ಗ್ರಾಹಕರು ಅಗತ್ಯ ವ್ಯವಸ್ಥೆಗಳನ್ನು ಮಾಡುವುದು ಅತ್ಯಗತ್ಯ.


Click it and Unblock the Notifications