ಗ್ರಾಹಕರೇ ಎಚ್ಚರ...ನಾಳೆ (ಜುಲೈ 9) ನೀವು ಬ್ಯಾಂಕ್‌ಗೆ ಹೋದರೆ ನಿಮಗೆ ಸೇವೆಯಲ್ಲಿ ವ್ಯತ್ಯಯವಾಗಬಹುದು. ಏಕೆಂದರೆ ಇಂದು ದೇಶದೆಲ್ಲೆಡೆ ಬ್ಯಾಂಕ್ ಮತ್ತು ವಿಮಾ ವಲಯದ ನೌಕರರು ಮುಷ್ಕರ ಹಮ್ಮಿಕೊಂಡಿದ್ದಾರೆ. ಯಾಕೆ, ನಾಳೆ ಬ್ಯಾಂಕ್ ಸೇವೆಗಳು ಲಭ್ಯವಾಗುತ್ತದೋ ಇಲ್ಲವೋ ಎಂದು ಮೊದಲು ತಿಳಿದುಕೊಳ್ಳಿ.

ಹೌದು, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ದೇಶದೆಲ್ಲೆಡೆ ಮಷ್ಕರ ನಡೆಯುತ್ತಿದೆ. ಈ ಮುಷ್ಕರಕ್ಕೆ ದೇಶಾದ್ಯಂತ ಇರುವ ಬ್ಯಾಂಕ್‌ಗಳು ಮತ್ತು ವಿಮಾ ವಲಯದ ನೌಕರರು ಕೈ ಜೋಡಿಸಲಿದ್ದಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA) ಅನುಬಂಧಿತವಾಗಿರುವ ಬಂಗಾಳ ಪ್ರಾಂತೀಯ ಬ್ಯಾಂಕ್ ನೌಕರರ ಸಂಘ ತನ್ನ ಪ್ರಕಟಣೆಯಲ್ಲಿ ತಿಳಿಸಿದಂತೆ, AIBEA, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (AIBOA) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (BEFI) ಸೇರಿದಂತೆ ಪ್ರಮುಖ ಬ್ಯಾಂಕ್ ನೌಕರರ ಸಂಘಟನೆಗಳು ಈ ಮುಷ್ಕರದಲ್ಲಿ ಭಾಗವಹಿಸಲಿವೆ.
ಈ ಮುಷ್ಕರಕ್ಕೆ ಬೇರೆ ಯಾರಿಂದ ಸ್ಪಂದನೆ:
ಈ ದೇಶವ್ಯಾಪಿ ಮುಷ್ಕರದಲ್ಲಿ ವಿಮಾನ ವಿಮಾ ನೌಕರರು ಕೂಡ ಭಾಗವಹಿಸಲು ನಿರ್ಧರಿಸಿದ್ದಾರೆ. ಹಣಕಾಸು ಕ್ಷೇತ್ರದ ನೌಕರರ ಈ ಪ್ರತಿಭಟನೆ, ಕೇಂದ್ರದ ಆರ್ಥಿಕ ನೀತಿಗಳ ವಿರುದ್ಧ ವ್ಯಾಪಕ ವಿರೋಧದ ಸೂಚನೆಯಾಗಿದ್ದು, ಈ ದಿನ ಬ್ಯಾಂಕುಗಳು, ವಿಮಾ ಕಂಪನಿಗಳು ಹಾಗೂ ಇತರ ಹಣಕಾಸು ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಸಂಘಟನೆಗಳು ನೀಡಿರುವ ಮಾಹಿತಿ ಪ್ರಕಾರ, ಜುಲೈ 9 ರಂದು ಬ್ಯಾಂಕಿಂಗ್ ವಲಯದಲ್ಲಿ ಮುಷ್ಕರ ಸಂಪೂರ್ಣವಾಗಿ ಜರುಗಲಿದೆ. ಗ್ರಾಹಕರು ತಮ್ಮ ತುರ್ತು ಹಣಕಾಸು ವ್ಯವಹಾರಗಳನ್ನು ಮುಂಚಿತವಾಗಿ ನಿರ್ವಹಿಸಿಕೊಳ್ಳಬೇಕೆಂದು ಎಚ್ಚರಿಸಲಾಗಿದೆ.
15 ಕೋಟಿ ಕಾರ್ಮಿಕರಿಂದ ಪ್ರತಿಭಟನೆ:
ಈ ಮುಷ್ಕರವು ಕೇವಲ ಬ್ಯಾಂಕುಗಳ ಮಟ್ಟಕ್ಕೆ ಸೀಮಿತವಾಗಿಲ್ಲ. ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ 15 ಕೋಟಿಗೂ ಹೆಚ್ಚು ಕಾರ್ಮಿಕರು ಈ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಭಾರತದ ಕಾರ್ಮಿಕ ಸಮುದಾಯದ ಕೇಂದ್ರ ಸರ್ಕಾರದ ಆರ್ಥಿಕ ಮತ್ತು ಕಾರ್ಮಿಕ ನಿಲುವುಗಳ ಬಗ್ಗೆ ಏಳಿಸಿರುವ ಗಂಭೀರ ಆಕ್ಷೇಪಗಳ ಅಭಿವ್ಯಕ್ತಿಯಾಗಿದೆ.
ಸರ್ಕಾರದ "ಖಾಸಗಿ-ಪರ ಸುಧಾರಣೆ"ಗಳ ಪರಿಣಾಮವಾಗಿ ಸಾರ್ವಜನಿಕ ವಲಯದ ನೌಕರರು ನೂಕುನುಗ್ಗಲುಗಳನ್ನು ಎದುರಿಸುತ್ತಿದ್ದಾರೆ, ಬಡವರು ಹಾಗೂ ಮಧ್ಯಮವರ್ಗದ ಮೇಲೆ ಹೊರೆಯಾಗುತ್ತಿದೆ ಎಂಬ ತೀವ್ರ ಅಭಿಪ್ರಾಯವನ್ನು ಸಂಘಟನೆಗಳು ವ್ಯಕ್ತಪಡಿಸುತ್ತಿವೆ.
ಜುಲೈ 9ರಂದು ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳಲ್ಲಿ ವ್ಯತ್ಯಯ ಸಂಭವಿಸಬಹುದು. ಗ್ರಾಹಕರು ತಮ್ಮ ಬ್ಯಾಂಕ್ ಸಂಬಂಧಿತ ಕಾರ್ಯಗಳನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕೆಂದು ಸಂಘಟನೆಗಳು ವಿನಂತಿ ಸಲ್ಲಿಸಿವೆ.
ಈ ಮುಷ್ಕರವು ಶಾಂತಿಯುತ ವಿಧಾನದಲ್ಲಿ ಕೈಗೊಳ್ಳಲ್ಪಟ್ಟ ಧರಣಿಯಾಗಿ ದೇಶದಾದ್ಯಂತ ವ್ಯಾಪಕವಾಗಿ ಆಚರಿಸಲಾಗುತ್ತಿದೆ. ಕಾರ್ಮಿಕ ಸಂಘಟನೆಗಳು ತಮ್ಮ ಹಕ್ಕುಗಳಿಗಾಗಿ ಮೈತ್ರಿ ದೃಢಪಡಿಸುತ್ತಿರುವ ಈ ಹೋರಾಟ, ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಎದುರಾಳಿಯಾಗಿ ಬೆಳೆಯುತ್ತಿದೆ.


Click it and Unblock the Notifications