ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಜಾಹೀರಾತುಗಳ ಬೋರ್ಡ್‌ಗಳು ತಲೆ ಎತ್ತಿ ನಿಂತಿವೆ. ನಗರದ ದೃಶ್ಯ ಮಾಲಿನ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಹೀಗಾಗಿ ಈ ಬೃಹತ್ ಜಾಹೀರಾತು ಬೋರ್ಡುಗಳ ನಿಯಂತ್ರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ಜಾಹೀರಾತು ನೀತಿಯನ್ನೇ ರೂಪಿಸಿದೆ.

ಅಂದರೆ, 2024 ರ ಜುಲೈ 17ರಿಂದ ಇದನ್ನು ಜಾರಿಗೆ ತಂದಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಅಡಿಯಲ್ಲಿ ಈ ಹೊಸ ನೀತಿಯು 2006 ಮತ್ತು 2018 ರ ಹಳೆಯ ನಿಯಮಾವಳಿಗಳನ್ನು ಬದಲಾಯಿಸಿ, ಸಮಗ್ರವಾಗಿ ಜಾಹೀರಾತು ವ್ಯವಸ್ಥೆಯನ್ನು ಸುಧಾರಿಸುವ ಗುರಿ ಹೊಂದಿದೆ. ಹೊಸ ನಿಯಮದ ಮುಖ್ಯ ಹೈಲೈಟ್ಸ್‌ಗಳ ಬಗ್ಗೆ ಇಲ್ಲಿ ತಿಳಿಯಿರಿ.
ಬೋರ್ಡ್ ಗಾತ್ರದ ನಿಯಂತ್ರಣ:
ರಸ್ತೆಯ ಅಗಲವನ್ನು ಆಧರಿಸಿ ಜಾಹೀರಾತು ಫಲಕಗಳಿಗೆ ಗರಿಷ್ಠ ಗಾತ್ರವನ್ನು ನಿಗದಿಪಡಿಸಲಾಗಿದೆ. ಉದಾಹರಣೆಗೆ, 60 ಮೀಟರ್ ಅಥವಾ ಹೆಚ್ಚಿನ ಅಗಲದ ರಸ್ತೆಯಲ್ಲಿ 1,200 ಚದರ ಅಡಿ ಗರಿಷ್ಠ ಗಾತ್ರದ ಬೋರ್ಡ್ ಮಾತ್ರ ಅನುಮತಿಸಲಾಗಿದೆ. ವಸತಿ ಪ್ರದೇಶಗಳಲ್ಲಿ (18 ಮೀಟರ್‌ಗಿಂತ ಕಡಿಮೆ) ನಿಯಂತ್ರಣ ಕಡಿಮೆ ಇದ್ದರೂ, ವಾಣಿಜ್ಯ ಅಥವಾ ಕೈಗಾರಿಕಾ ವಲಯಗಳಿಗೆ ಇದು ಅನ್ವಯವಾಗುತ್ತದೆ.
ಅನುಮತಿಸಲಾದ ಮಾಧ್ಯಮಗಳು:
- LED/LCD ಪರದೆಗಳ ಮೂಲಕ ಡಿಜಿಟಲ್ ಜಾಹೀರಾತುಗಳು (ಪ್ರತಿ ಇಮೇಜ್ 10 ಸೆಕೆಂಡುಗಳಲ್ಲಿ ಬದಲಾವಣೆ)
- ಪರಿಸರ ಸ್ನೇಹಿ ಸಾಮಗ್ರಿಗಳು - ಬಟ್ಟೆ ಅಥವಾ ಜೈವಿಕ ವಿಘಟನೀಯ ಫ್ಲೆಕ್ಸ್
- ಕಟ್ಟಡದ ಮೇಲ್ಮೈ ಹೊದಿಕೆಯ ಜಾಹೀರಾತುಗಳು (ಪಾರಂಪರಿಕ ಕಟ್ಟಡಗಳಿಗೆ ಅನ್ವಯವಿಲ್ಲ)
- ಡಿಜಿಟಲ್ ಪರದೆಗಳ ಸಮಯದ 10% ಅನ್ನು ಸಾರ್ವಜನಿಕ ಮಾಹಿತಿ ಪ್ರಸಾರದಿಗಾಗಿ ಮೀಸಲಿಡಬೇಕೆಂದು ನಿರ್ಧರಿಸಲಾಗಿದೆ.
ಜಾಹೀರಾತು-ನಿಷಿದ್ಧ ವಲಯಗಳು:
- ದೇವಾಲಯ, ಐತಿಹಾಸಿಕ ಸ್ಮಾರಕಗಳು, ಉದ್ಯಾನವನಗಳು (50-100 ಮೀಟರ್ ತ್ರಿಜ್ಯವರೆಗೆ)
- ಮರಗಳು, ಪಾದಚಾರಿ ಮಾರ್ಗಗಳು, ಫ್ಲೈಓವರ್, ಸರೋವರದ ದಂಡೆಗಳು
- ಬಿಬಿಎಂಪಿ ದಾಖಲೆ ಇಲ್ಲದ ಕಟ್ಟಡಗಳು
ಪರವಾನಗಿ ಮತ್ತು ಶುಲ್ಕ ವ್ಯವಸ್ಥೆ:
ಚದರ ಅಡಿಗೆ ₹25 ರಿಂದ ₹100 ವರೆಗೆ ಮಾಸಿಕ ಶುಲ್ಕ, ರಸ್ತೆಯ ಅಗಲವನ್ನು ಅವಲಂಬಿಸಿದೆ
ಪ್ರಮುಖ ಪ್ರದೇಶಗಳಲ್ಲಿ 50% ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ
ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಹರಾಜು ಪ್ರಕ್ರಿಯೆ, ಕನಿಷ್ಠ ₹5 ಲಕ್ಷ ಮೌಲ್ಯದ ಪರವಾನಗಿ, ಗರಿಷ್ಠ 5 ವರ್ಷ ಮಾನ್ಯತೆ
ಜಾರಿ ಕ್ರಮಗಳು:
ನಿಯಮ ಉಲ್ಲಂಘಿಸಿದರೆ ಎರಡು ಪಟ್ಟು ದಂಡ ಮತ್ತು 18% ಬಡ್ಡಿ ವಿಧಿಸಲಾಗುತ್ತದೆ
ವಶಪಡಿಸಿಕೊಳ್ಳುವಿಕೆ ಅಥವಾ ಕಪ್ಪುಪಟ್ಟಿಗೆ ಸೇರ್ಪಡೆಯ ಸಾಧ್ಯತೆ
ಈಗಿರುವ ಜಾಹೀರಾತುಗಳು 6 ತಿಂಗಳೊಳಗೆ ಹೊಸ ನಿಯಮಗಳಿಗೆ ತಕ್ಕಂತೆ ಮಾರ್ಪಾಡಾಗಬೇಕು
ಈ ಹೊಸ ಜಾಹೀರಾತು ನೀತಿಯು ಬೆಂಗಳೂರು ನಗರದ ನೋಟವನ್ನು ಪರಿಷ್ಕರಿಸಲು ಹಾಗೂ ಜಾಹೀರಾತು ವ್ಯವಸ್ಥೆಯಲ್ಲಿ ಸೌಕರ್ಯತೆ ತರಲು ನಿಟ್ಟಿರಿಸಿದೆ. ಆದರೆ, ಇದರ ಯಶಸ್ಸು ಸಂಪೂರ್ಣವಾಗಿ ಅನುಷ್ಠಾನ ಮತ್ತು ಕಟ್ಟುನಿಟ್ಟಾದ ಜಾರಿಗೆ ಅವಲಂಬಿತವಾಗಿದೆ.


Click it and Unblock the Notifications