ತೆರಿಗೆ ನೀಡದವರ ವಿರುದ್ಧ ಈ ವರ್ಷ ಬೃಹತ್‌ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ. ಈ ವೇಳೆ ತೆರಿಗೆ ಪಾವತಿ ಮಾಡದ 81,000ಕ್ಕೂ ಹೆಚ್ಚು ಆಸ್ತಿಗಳನ್ನ ಜಪ್ತಿ ಮಾಡಿದ್ದು, ಇನ್ನೂ ಬಾಕಿ ಪಾವತಿಸದ 6,914 ಆಸ್ತಿಗಳನ್ನ ಬಿಬಿಎಂಪಿ ಸೀಲ್ ಮಾಡಿದೆ.
ಈಗಾಗಲೇ 2,06,753 ಆಸ್ತಿಗಳು ತೆರಿಗೆ ಸುಸ್ತಿದಾರರೆಂದು ಗರತಿಸಲಾಗಿದ್ದು, ಒಟ್ಟು 329.15 ಕೋಟಿ ರೂಗಳಷ್ಟು ತೆರಿಗೆ ಹಣ ಇನ್ನು ಬರಬೇಕಿದೆ. ಅಲ್ಲದೆ ಬಿಬಿಎಂಪಿ ಕಳೆದ ವಾರ 3.69 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ. 203 ವಸತಿಯೇತರ ಆಸ್ತಿಗಳನ್ನು ಸೀಲ್ ಮಾಡಿದ್ದು, ಇದರ ಜೊತೆಗೆ ತೆರಗೆ ಪಾವತಿಸದ 180 ಆಸ್ತಿಗಳನ್ನು ಇದು ಜಪ್ತಿ ಮಾಡಿದೆ.

ಬಿಬಿಎಂಪಿ ಕಳೆದ ಏಪ್ರಿಲ್‌ನಲ್ಲಿ ವರದಿ ಮಾಡಿದ ಪ್ರಕಾರ ಇನ್ನೂ ತೆರಿಗೆ ಪಾವತಿಸುವವರ ಸಂಖ್ಯೆ 3,95,250 ಇದೆ ಎನ್ನಲಾಗ್ತಿದೆ. ಅಲ್ಲದೆ ಇದುವರೆಗೆ 1,88,497 ಜನರಿಂದ ಬಿಬಿಎಂಪಿ 404.46 ಕೋಟಿ ರೂ. ತೆರಿಗೆ ಬಿಬಿಎಂಪಿಗೆ ಬಂದಿದೆ.
ಈ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹಾಗೆ ಅತೀ ಹೆಚ್ಚು ತೆರಿಗೆ ಬಾಕಿ ಹೊಂದಿರುವ ವಾಣಿಜ್ಯ ಆಸ್ತಿಗಳನ್ನ ಸೀಲ್ ಮಾಡಲು ಹಾಗೆ ಇದರ ವಿರುದ್ಧ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲು
ಬಿಬಿಎಂಪಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ವಲಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ತೆರಿಗೆ ಪರಿಷ್ಕರಣೆ ಪ್ರಕರಣಗಳ ಅಡಿಯಲ್ಲಿ, 9,691 ಆಸ್ತಿಗಳಲ್ಲಿ 191.47 ಕೋಟಿ ರೂಪಾಯಿ ಬಾಕಿ ಉಳಿದಿದೆ. ಇನ್ನು ಕಳೆದ ವಾರ ಬಿಬಿಎಂಪಿ ಅಂತಹ 25 ಆಸ್ತಿಗಳನ್ನು ಜಪ್ತಿ ಮಾಡುವ ಮೂಲಕ 10 ಲಕ್ಷ ರೂಪಾಯಿ ಸಂಗ್ರಹ ಮಾಡಿದೆ. ಅಲ್ಲದೆ ಮೌದ್ಗಿಲ್ ಅವರು ಕೂಡ ಸೀಲಿಂಗ್, ಜಪ್ತಿ ಮತ್ತು ಸ್ವತ್ತುಮರುಸ್ವಾಧೀನದಂತಹ ಕ್ರಮಗಳ ಬಳಕೆಯ ಬಗ್ಗೆ ಹೆಚ್ಚು ಒತ್ತು ನೀಡಿದ್ದಾರೆ.
ಇನ್ನು ಬಿಬಿಎಂಪಿಯು ಸ್ವತ್ತುಮರುಸ್ವಾಧೀನ ಪಡಿಸಿಕೊಳ್ಳಲು ಅತೀ ಹೆಚ್ಚು ಬಾಕಿ ಇರುವ ಆಸ್ತಿಗಳನ್ನು ಗುರುತಿಸುವ ಕಡೆಗೆ ಗಮನ ಹರಿಸಿದೆ. ಹೀಗಾಗಿ ಈ ಕುರಿತಯ ಕೈಗೊಂಡ ಕ್ರಮಗಳನ್ನ ಪರಿಶೀಲನೆ ಮಾಡಲು ಅಧಿಕಾರಿಗಳು ಈ ವಾರ ಪ್ರತಿ ವಲಯಕ್ಕೆ ಭೇಟಿ ನೀಡಲು ಮುಂದಾಗಿದ್ದಾರೆ.
ಅನಧಿಕೃತ ಕಟ್ಟಡಗಳ ಮೇಲೆ ಬಿಬಿಎಂಪಿ ಸಮರ
ತೆರಿಗೆ ಪಾವತಿ ಮಾಡದ ಆಸ್ತಿಗಳನ್ನ ಬಿಬಿಎಂಪಿ ಸೀಜ್ ಮಾಡಲು ಮುಂದಾಗಿದ್ದಲ್ಲದೆ, ಕೆಲವು ದಿನಗಳ ಹಿಂದೆ ಅನಧಿಕೃತ ಕಟ್ಟಡಗಳ ತೆರವಿಗೂ ಕೂಡ ನೋಟಿಸ್ ನೀಡಿತ್ತು. ಇದರ ಜೊತೆಗೆ ಬಿಬಿಎಂಪಿ ಅನಧಿಕೃತ ಕಟ್ಟಡಗಳ ಮೇಲು ಕೂಡ ಕಟ್ಟುನಿಟ್ಟಿನ ಕ್ರಮವನ್ನ ತೆಗೆದುಕೊಂಡಿದೆ. ಬಾಬುಸಾಪಾಳ್ಯದ ನಿರ್ಮಾಣ ಹಂತದ ಕಟ್ಟಡ ಬಿದ್ದು 9 ಜನ ಕಾರ್ಮಿಕರು ಸಾವನ್ನಪ್ಪಿದ ಹಿನ್ನೆಲೆ ಬಿಬಿಎಂಪಿ ಸಾಕಷ್ಟು ಕಠಿಣ ಕ್ರಮಗಳನ್ನ ಜಾರಿ ಮಾಡಿದೆ.
ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿರುವ ಅನಧಿಕೃತ ಕಟ್ಟಡಗಳನ್ನ ತೆರವು ಮಾಡಲು ಮುಂದಾಗಿದೆ. ಈಗಾಗಲೇ ಈ ಕುರಿತು ಬಿಬಿಎಂಪಿ ಸರ್ವೇಗಳನ್ನ ಕೂಡ ಮಾಡ್ತಿದೆ. ಇನ್ನು ಸರ್ವೇ ಪ್ರಕಾರ 2 ಸಾವಿರ ಅನಧಿಕೃತ ಕಟ್ಟಡಗಳು ಪತ್ತೆಯಾಗಿವೆ. ಅಲ್ಲದೆ ಬೆಂಗಳೂರಿನ ಮಹದೇವಪುರ ಒಂದರಲ್ಲೇ 400ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳು ಮತ್ತೆಯಾಗಿದ್ದು, ಇದರ ವಿರುದ್ದ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ. 2024ರ ನವೆಂಬರ್‌ಬಲ್ಲೇ ಬಿಬಿಎಂಪಿ ಇದರ ಕುರಿತು ಸರ್ವೇಗಳನ್ನ ಮಾಡಲು ಆರಂಭ ಮಾಡಿತ್ತು. ಇಲ್ಲಿಯವರೆಗೆ 2 ಸಾವಿರ ಅನಧಿಕೃತ ಕಟ್ಟಡಗಳು ಪತ್ತೆಯಾಗಿರುವುದು ಅಚ್ಚರಿಯನ್ನ ತಂದಿದೆ.
ಇನ್ನು ಈ ಕಟ್ಟಡಗಳಲ್ಲಿ 112 ಕಟ್ಟಡಗಳಿಗೆ ನೋಟಿಸ್ ನೀಡಿದ್ದು ತೆರವುಗೊಳಿಸುವಂತೆ ಎಚ್ಚರಿಕೆಯನ್ನ ಕೂಡ ನೀಡಿದೆ. ಇನ್ನು ಈ ನೋಟೀಸ್‌ಗೆ ಮಾಲೀಕರು ಪ್ರತಿಕ್ರಿಯಿಸದೆ ಹೋದ್ರೆ ಕಟ್ಟಡಗಳನ್ನ ನೆಲಸಮ ಮಾಡುವಂತೆ ಬಿಬಿಎಂಪಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ.
More From GoodReturns

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications