ಬೆಂಗಳೂರು ಜನರಿಗೆ ಬಿಬಿಎಂಪಿ ಖುಷಿಸುದ್ದಿ ನೀಡಿದೆ. ಅದೇನೆಂದರೆ ಬೆಂಗಳೂರಿನ ಜನರಿಗೆ ಹೊಸ ಆನ್‌ಲೈನ್ ಖಾತಾ ಸೇವೆಯನ್ನು ನೀಡಲು ಮುಂದಾಗಿದೆ. ಬೆಂಗಳೂರು ಜನರಿಗೆ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸರಲು ಈ ಹೊಸ ಆನ್‌ಲೈನ್ ಖಾತಾ ಸೇವೆಯನ್ನು ಪರಿಚಯಿಸುತ್ತಿದೆ. ಇನ್ನುಮುಂದೆ ಬೆಂಗಳೂರಿನ ನಿವಾಸಿಗಳು ಆಸ್ತಿ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆಯಬೇಕಿಲ್ಲ. ಇದೊಂದು ಆನ್‌ಲೈನ್ ಸೇವೆ ಆಗಿರುವುದರಿಂದ ಅಂಗೈಯಲ್ಲೇ ಅಗತ್ಯವಿರುವ ದಾಖಲೆ ಸಿಗುತ್ತದೆ.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಬೆಂಬಲದೊಂದಿಗೆ ಈ ಹೊಸ ಖಾತಾ ಸೇವೆಯನ್ನು ಬಿಬಿಎಂಪಿ ಜನರಿಗೆ ಪರಿಚಯಿಸಿದೆ. ಇಲ್ಲಿ ಬೆಂಗಳೂರಿನ ನಿವಾಸಿಗಳು ತಮ್ಮ ಆಸ್ತಿ ದಾಖಲೆಗಳನ್ನು ಎಂಟ್ರಿ ಮಾಡಬಹುದು. ಹೀಗೆ ಬಿಬಿಎಂಪಿ ಹತ್ತು ಸಾವಿರ ಹೊಸ ಖಾತಾಗಳನ್ನು ನೀಡಲು ಸಜ್ಜಾಗಿದೆ. ಹಸ್ತಚಾಲಿತ ಖಾತಾ ಹೊಂದಿರದ ನಿವಾಸಿಗಳು, ಈಗ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ಸಲ್ಲಿಸಲು ಅನುಕೂಲವಾಗಿದೆ. https://BBMP.Karnataka.gov.in/NewKhata ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಖಾತಾ ಪತ್ರ ಎನ್ನುವುದು ಆಸ್ತಿ ಮಾಲೀಕತ್ವಕ್ಕೆ ಅತಿ ಅಗತ್ಯವಾದ ಒಂದು ದಾಖಲೆ. ಆಸ್ತಿ ತೆರಿಗೆ ಪಾವತಿಸಲೇ ಆಗಲಿ, ಬ್ಯಾಂಕ್‌ಗಳಲ್ಲಿ ಆಸ್ತಿ ಮೇಲೆ ಸಾಲ ಪಡೆಯುವುದಕ್ಕೇ ಆಗಲಿ ಅಥವಾ ತಮ್ಮ ಆಸ್ತಿಯನ್ನು ಮಾರಾಟ ಮಾಡುವುದಕ್ಕಾಗಲಿ, ಮಾಲೀಕತ್ವ ಬದಲಾಯಿಸಲಾಗಲಿ ಈ ಖಾತಾ ಪತ್ರ ಅತೀ ಮುಖ್ಯವಾಗಿದೆ. ಈ ಹೊಸ ಆನ್‌ಲೈನ್ ಖಾತಾ ಸೇವೆಯು ಎಷ್ಟು ಅನುಕೂಲಕರವಾಗಿದೆ ಎಂದರೆ, ಭೌತಿಕ ಭೇಟಿಯಾಗುವುದು ಮತ್ತು ಕಾಗದಪತ್ರಗಳ ತೊಂದರೆಯನ್ನು ನಿವಾರಿಸುತ್ತದೆ. ಹೀಗಾಗಿ ಇದು ತ್ವರಿತ ಹಾಗೂ ಹೆಚ್ಚು ಪಾರದರ್ಶಕವಾದ ಪ್ರಕ್ರಿಯೆಯಾಗಿದೆ. ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು ಎಂಬುದನ್ನು ತಿಳಿಯಿರಿ.
ಹಾಗಾದರೆ ಆನ್‌ಲೈನ್ ಖಾತಾ ಸೇವೆಗೆ ಅರ್ಜಿ ಸಲ್ಲಿಸುವುದು ಹೇಗೆ..?
- ಮೊದಲು ಅರ್ಜಿದಾರರು ವೆಬ್‌ಸೈಟ್‌ಗೆ ಹೋಗಿ ಮೊಬೈಲ್ ನಂಬರ್ ಹಾಕಬೇಕು
- ಮೊಬೈಲ್ ನಂಬರ್‍ಗೆ ಬಂದ ಒಟಿಪಿ ಬಳಸಿ ಲಾಗಿನ್ ಮಾಡಿಕೊಳ್ಳಬೇಕು
- ಬಳಿಕ ತಮ್ಮ ಆಸ್ತಿ ವಿವರಗಳನ್ನು ಒದಗಿಸಬೇಕು
( ಮಾರಾಟ/ನೋಂದಾಯಿತ ಡೀಡ್ ಸಂಖ್ಯೆಯನ್ನು ನಮೂದಿಸಬೇಕು)
- ನಮೂದಿಸಿದ ನಂತರ ಸಬ್-ರಿಜಿಸ್ಟ್ರಾರ್ ದಾಖಲೆಗಳಿಂದ ಎಲೆಕ್ಟ್ರಾನಿಕ್ ಆಗಿ ಪಡೆಯಲಾಗುತ್ತದೆ.
- ಬಳಿಕ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಪರಿಶೀಲನೆ ಪೂರ್ಣಗೊಳಿಸಬೇಕು
- ಸಾಲ ಮರುಪಾವತಿ ಪ್ರಮಾಣಪತ್ರ, ಬೆಸ್ಕಾಂ ಗುರುತಿನ ಚೀಟಿ ಮತ್ತು ಇತ್ತೀಚಿನ ಆಸ್ತಿಗಳ ಛಾಯಾಚಿತ್ರವನ್ನು ಸಲ್ಲಿಸಬೇಕು
-ಬಳಿಕ ಆಸ್ತಿ ತೆರಿಗೆ ಪಾವತಿಸಿ ಅವು ಅಪ್‌ಡೇಟ್ ಆಗಿದೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಬೇಕು
-ಎಲ್ಲಾ ಮಾಹಿತಿಯನ್ನು ಸಲ್ಲಿಸಿದ ಬಳಿಕ ಅವುಗಳನ್ನು ಪರಿಶೀಲಿಸಲಾಗುತ್ತದೆ. ಮತ್ತು ಯಶಸ್ವಿಯಾಗಿ ದೃಢೀಕರಣವಾದ ಬಳಿಕ ಹೊಸ ಖಾತಾಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತದೆ.
ಎಚ್ಚರಿಕೆ:
ಅರ್ಜಿ ಸಲ್ಲಿಸಬೇಕೆಂದಿರುವವರು ಈಗಾಗಲೇ ಮ್ಯಾನುಯಲ್ ಖಾತಾ ಹೊಂದಿದ್ದರೆ, ಹೊಸ ಅರ್ಜಿ ಸಲ್ಲಿಸುವಂತಿಲ್ಲ. ಹೀಗಿದ್ದರೂ ಒಂದು ವೇಳೆ ಅರ್ಜಿ ಸಲ್ಲಿಸಿದ್ದೇ ಆದರೆ, ಕ್ರಿಮಿನಲ್ ಆರೋಪಗಳು ಸೇರಿದಂತೆ ಕಾನೂನು ಪರಿಣಾಮಗಳು ಎದುರಿಸಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಖಾತಾ ಬೇಕೆಂದರೆ ನೀವು https://BBMPeAasthi.Karnataka.gov.in ಈ ವೆಬ್‌ಸೈಟ್‌ನಲ್ಲಿ ಇ-ಖಾತಾ ಪಡೆಯಬಹುದು.
ಹೀಗೆ ಸದಾ ತಮ್ಮ-ತಮ್ಮ ಕೆಲಸಗಳಲ್ಲೇ ಬಿಸಿಯಾಗಿರುವ ಬೆಂಗಳೂರು ಜನರಿಗೆ, ಆಸ್ತಿಯ ಖಾತಾ ಪತ್ರಗಳನ್ನು ಸಲೀಸಾಗಿ ಪಡೆಯಲು ಬಿಬಿಎಂಪಿ ಈ ಹೊಸ ಸೇವೆ ಪರಿಚಯಿಸಿದೆ. ಅರ್ಜಿದಾರರು ತಮಗೆ ಬೇಕಾದ ಖಾತಾ ಪತ್ರವನ್ನು ಇಲ್ಲಿ ಯಾವಾಗ ಬೇಕಾದರೂ ಪಡೆಯಬಹುದು. ಕಾಗದಪತ್ರ ಕಳೆದುಕೊಳ್ಳುವ ಭಯವಾಗಲಿ, ಅಥವಾ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆಯುವುದೇ ಆಗಲಿ ಇನ್ನುಮುಂದೆ ಇರುವುದಿಲ್ಲ. ಈ ಮೂಲಕ ಎಲ್ಲವನ್ನೂ ಸುಲಭಗೊಳಿಸಲಾಗಿದೆ.
More From GoodReturns

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications