ಕೆಂಪೇಗೌಡ ಏರ್‌ಪೋರ್ಟ್‌ಗೆ ಪ್ರಯಾಣಿಸುವವರಿಗೆ ಕಿರಿಕಿರಿ ತಪ್ಪಿಸಲು ಬಿಬಿಎಂಪಿ ಹೊಸ ಯೋಜನೆಗೆ ಬಂದಿದೆ. ಅದೇನೆಂದರೆ ಪ್ರಯಾಣಿಕರು ಸುಗಮವಾಗಿ ಸಂಚರಿಸಲೆಂದು, ಕೆಂಪೇಗೌಡ ಏರ್‌ಪೋರ್ಟ್‌ಗೆ ಎರಡು ಲಿಂಕ್ ರಸ್ತೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದೆ. ಅದಕ್ಕಾಗಿ ತನ್ನ ವ್ಯಾಪ್ತಿಯನ್ನೂ ಮೀರಿ ಕಾರ್ಯ ನಿರ್ವಹಿಸಲು ಸಜ್ಜಾಗಿದೆ.
ಬಿಬಿಎಂಪಿಗೆ ತನ್ನ ವ್ಯಾಪ್ತಿಗೆ ಒಳಪಡದ ಎರಡು ರಸ್ತೆಗಳನ್ನು ನಿರ್ಮಿಸುವಂತೆ ಸರ್ಕಾರವೇ ಆದೇಶಿಸಿದೆ. ಅದರಂತೆ ಬಿಬಿಎಂಪಿಯು ಯಲಹಂಕ ವಲಯದ ರಸ್ತೆ ಮೂಲ ಸೌಕರ್ಯ ವಿಭಾಗದಿಂದ ಈ ರಸ್ತೆಗಳನ್ನು ನಿರ್ಮಿಸಲು ಮುಂದಾಗಿದೆ. ಅಲ್ಲದೇ ರಸ್ತೆ ನಿರ್ಮಾಣಕ್ಕಾಗಿ ಬೇಕಾದ ಸಿದ್ಧತೆಗಳನ್ನು ಕೂಡ ನಡೆಸುತ್ತಿದೆ. ಅಂದರೆ ರಸ್ತೆ ನಿರ್ಮಾಣಕ್ಕಾಗಿ ಅಗತ್ಯವಿರುವ ಅನುದಾ, ರಸ್ತೆಯ ವಿಸ್ತರಣೆ, ಭೂಸ್ವಾಧೀನಕ್ಕೆ ತಗಲುವ ವೆಚ್ಚ, ಕಟ್ಟಡ ನೆಲಸಮ, ಈಗಾಗಲೇ ಇರುಬ ರಸ್ತೆಗೆ ಮಾಡಬೇಕಿರುಪವ ಮರು ಡಾಂಬರೀಕರಣ ಸೇರಿದಂತೆ ವಿಸ್ತೃತ ಯೋಜನಾ ವರದಿ ತಯಾರಿಸಲು ಟೆಂಡರ್ ಕೂಡ ಆಹ್ವಾನಿಸಲಾಗಿದೆ.

ಇನ್ನು ವಿಮಾನ ನಿಲ್ದಾಣಕ್ಕೆ ಕಲ್ಪಿಸಲು ಬಾಗಲೂರು ಮಾರ್ಗವಾಗಿ ಒಂದು ಪರ್ಯಾಯ ರಸ್ತೆ ನಿರ್ಮಾಣವಾಗುತ್ತಿದೆ. ಅಂದ್ರೆ ಬಾಗಲೂರು ಮುಖ್ಯ ರಸ್ತೆಯಿಂದ ಕಂಟ್ರಿ ಕ್ಲಬ್ ಸಮೀಪ ಒಂದು ಹೊಸ ಲಿಂಕ್ ರಸ್ತೆ ಹಾದು ಹೋಗಲಿದೆ. ಇದನ್ನು ಹೊರತುಪಡಿಸಿಯೇ ಇನ್ನೆರಡು ಲಿಂಕ್ ರಸ್ತೆಗಳನ್ನು ನಿರ್ಮಿಸುವ ಉದ್ದೇಶವಿದೆ. ಬೇಗೂರು ಬಳಿ ಇರುವ ವಿದ್ಯುತ್ ಪ್ರಸರಣಾ ಘಟಕದ ಸಮೀಪದಿಂದ ಸಾದಹಳ್ಳಿ ಗೇಟ್ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಇನ್ನೊಂದಿ ಲಿಂಕ್ ರಸ್ತೆ ನಿರ್ಮಿಸಲಾಗುತ್ತದೆ ಎನ್ನಲಾಗಿದೆ. ಹೊಸದಾಗಿ ನಿರ್ಮಾಣವಾಗಲಿರುವ ಈ ಎರಡೂ ಲಿಂಕ್ ರಸ್ತೆಗಳು, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಒಂದಕ್ಕೊಂದು ಪೂರಕವಾಗಲಿವೆ.
ಅಂದಹಾಗೆ ಈ ಎರಡೂ ಲಿಂಕ್ ರಸ್ತೆಗಳನ್ನು ಹೊಸದಾಗಿಯೇ ನಿರ್ಮಿಸಬೇಕಾಗುತ್ತದೆ. ಏಕೆಂದರೆ ಈ ಭಾಗದಲ್ಲಿ ರೆವಿನ್ಯೂ ಲೇಔಟ್‌ಗಳಿವೆ. ಅಲ್ಲಿಂದ ಒಂದಷ್ಟು ಮೀಟರ್ ಉದ್ದ ದ ರಸ್ತೆ ಇರುವ ಕಾರಣ, ಅದನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಇನ್ನುಳಿದ ಭಾಗಗಳಲ್ಲಿ ಹೊಸದಾಗಿ ರಸ್ತೆ ನಿರ್ಮಿಸಬೇಕಿದ್ದು ಅದಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ ಎಂದು ಇಂಜಿನಿಯರ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗಾಗಿಯೇ ಟಿಡಿಆರ್ ( ಅಭಿವೃದ್ಧಿ ಹಕ್ಕು ವರ್ಗಾವಣೆ) ಯೋಜನೆ ಅಡಿಯಲ್ಲಿ ರಸ್ತೆಗೆ ಅಗತ್ಯ ಎನಿಸುವ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೂಡ ಯೋಜಿಸಲಾಗಿದೆ. ಡಿಪಿಆರ್ ಸಿದ್ಧಗೊಂಡ ಬಳಿಕವಷ್ಟೇ ಎಷ್ಟು ಪ್ರಮಾಣದಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ತಿಳಿಯಲಾಗುತ್ತದೆ. ಸರ್ಕಾರ ನೀಡಿರುವ ಆದೇಶದ ಮೇಲೆ ಬಿಬಿಎಂಪಿ ವತಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂಬುದನ್ನು ಕೂಡ ತಿಳಿಸಿದ್ದಾರೆ.
ಇನ್ನು ಈ ಎರಡೂ ಲಿಂಕ್ ರಸ್ತೆಗಳು ಸುಮಾರು 13 ಕಿಲೋಮೀಟರ್ ಉದ್ದದಲ್ಲಿ ನಿರ್ಮಿಸಲಾಗುತ್ತದೆ. ಹಾಗೆಯೇ ಈ ಎರಡೂ ರಸ್ತೆಗಳಿಗೆ ಬಹುತೇಕ ಮಾರ್ಗದುದ್ದಕ್ಕೂ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಅದರಂತೆ ಸರ್ಕಾರ ನಿಗದಿಪಡಿಸಿರುವ ಅನುದಾನ ಭೂಸ್ವಾಧೀನಕ್ಕೇ ಎಲ್ಲಾ ವೆಚ್ಚವಾಗುವ ಸಾಧ್ಯತೆಗಳು ಕೂಡ ಎದ್ದು ಕಾಣುತ್ತಿವೆ. ಇದರ ಜೊತೆಗೆ ಇನ್ನೊಂದು ಸವಾಲೇನೆಂದರೆ ಜಮೀನು ಕಳೆದುಕೊಳ್ಳುವ ಮಾಲೀಕರು ಟಿಡಿಆರ್ ಗೆ ಹೇಗೆ ಒಪ್ಪುತ್ತಾರೋ ಅದನ್ನು ಕೂಡ ಹೇಳಲಾಗದು. ಎರಡು ಲಿಂಕ್ ರಸ್ತೆಗಳ ಮಾರ್ಗದಲ್ಲಿ ಎರಡು ಮೇಲ್ಸವೇತುವೆಯೂ ನಿರ್ಮಿಸಬೇಕಿದೆ. ಜೊತೆಗೆ ಒಂದು ರೈಲ್ವೆ ಸೇತುವೆಯನ್ನೂ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಅತಿಹೆಚ್ಚು ಅನುದಾನ ಬೇಕಿದೆ. ಆದರೆ ಸರ್ಕಾರ ಈ ನಿಗದಿಪಡಿಸಿರುವ ಅನುದಾನದಿಂದ ಕೊರತೆ ಎದುರಾಗಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಬೆಂಗಳೂರಿನ ಕೆಲ ನಿವಾಸಿಗಳಿಗೆ ಏರ್‌ಪೋರ್ಟ್‌ಗೆ ಹೋಗುವುದೆಂದರೆ ಊರಿಂದೂರಿಗೆ ಹೋಗುವಂತೆ ಭಾಸವಾಗುತ್ತದೆ. ಟ್ರಾಫಿಕ್ ಕಿರಿಕಿರಿ ನಡುವೆ ನಗರ ದಾಟುವುದೇ ದೊಡ್ಡ ಸವಾಲಾಗಿದೆ. ಇದನ್ನೆಲ್ಲ ತಪ್ಪಿಸಿ ಸುಗಮವಾಗಿ ಪ್ರಯಾಣಿಸಿ ಏರ್‌ಪೋರ್ಟ್ ತಲುಪಲು ಅನುವು ಮಾಡಿ ಕೊಡಲು, ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿ ಲಿಂಕ್ ರಸ್ತೆ ಕಲ್ಪಿಸಿಕೊಡುವುದೂ ಕೂಡ ಒಂದಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications