ರಜೆ ದಿನಗಳು ಬಂದ ತಕ್ಷಣ ಪ್ರಾಯಾಣ ಮಾಡಲು ಬಯಸುವವರು ಈ ವಂಚನೆಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಅಲ್ಲದೆ ರಜೆ ಸಿಗುತ್ತಿದ್ದಂತೆ ಜನರು ಬಸ್, ರೂಮ್, ಹೊಟೆಲ್‌ಗಳನ್ನ ಬುಕ್ ಮಾಡಲು ಶುರು ಮಾಡ್ತಾರೆ. ಇನ್ನು ಇದನ್ನೆ ದಾಳವಾಗಿ ಮಾಡಿಕೊಂಡಿರುವ ವಂಚಕರು ತಮ್ಮ ಕೈಚಳಕವನ್ನತೋರಿಸಲು ಶುರು ಮಾಡ್ತಾರೆ.
ಹಾಗಾಗಿ ಇಂತಹ ಸಮಯದಲ್ಲಿ ನೀವು ಎಚ್ಚೆರಿದಿಂದಿರುವುದು ಬಹಳ ಮುಖ್ಯ. ಈ ವಂಚಕರಿಗೆ ಹಣ ಮಡಲು, ಜನರಿಗೆ ಮಣ್ಣುಮಕ್ಕಿಸಲು ಇದೇ ಸರಿಯಾದ ಸಮಯ ಕೂಡ ಹೌದು. ಅದರಲ್ಲೂ ಈ ಎಲ್ಲಾ ಆನ್‌ಲೈನ್ ಆದ ನಂತರ ಜನರು ಕೂತಲ್ಲೇ ಎಲ್ಲವನ್ನ ಆರ್ಡರ್ ಮಡುವುದು ಬುಕ್ ಮಾಡುವುದನ್ನು ಮಡುತ್ತಾರೆ. ಅಂತವರನ್ನೇ ಗುರಿಯಾಗಿಸಿಕೊಂಡು ಈ ವಂಚಕರು ಜನರಿಗೆ ಮೋಸ ಮಾಡುತ್ತಾರೆ

ಭಾರತದಲ್ಲಿ ಈ ಮದುವೆ ಸೀಸನ್‌ಗಳ ವೇಳೆ ಈ ಜನರು ಮದುವೆ ನಂತರ ಅಥವಾ ಮುದುವೆಗೆ ಮುನ್ನ ಸ್ನೇಹತರು ಹಾಗು ಕುಟುಂಬದವರೊದಿಗೆ ಪ್ರಯಾಣಿಸಲ ಬಯಸುತ್ತಾರೆ. ಹಾಗೆ ಅವರೊಟ್ಟಿಗೆ ಸಮಯ ಕಳೆಯಲು ಬಯಸುತ್ತಾರೆ. ಇದಕ್ಕಾಗಿ ರಜೆ ಹಾಕಿಕೊಂಡು ಪಯಾಣಗಳನ್ನ ಮಾಡುತ್ತಾರೆ
ನಿಮ್ಮ ರಜಾ ದಿನಗಳನ್ನ ಹಾಳು ಮಾಡವ ಪ್ರಮುಖ 5 ಹಗರಣಗಳು ಇಲ್ಲಿವೆ
ಸಾಮಾಜಿಕ ಮಾಧ್ಯಮ ಹಗರಣಗಳು
ಪ್ರಯಾಣ ಮತ್ತು ಹೋಟೆಲ್ ಬುಕಿಂಗ್‌ಗಳಲ್ಲಿ ರಿಯಾಯಿತಿಗಳಿಗೆ, ಉತ್ತಮ ಯೋಜನೆಗಳು ಮತ್ತು ಕೊಡುಗೆಗಳನ್ನ ನೀಡುತ್ತೇವೆ ಎಂದು ವಂಚಕರು ಸಾಮಾಜಿಕ ಜಾಲತಾಣದಲ್ಲಿ ಜನರನ್ನ ಮೋಸ ಮಾಡತ್ತಾರೆ. ಹೀಗೆ ಯಾವಾಗಲೂ ತಮ್ಮನ್ನು ಸಾಮಾಜಿ ಮಾಧ್ಯಮದಲ್ಲ ತೊಗಿಸಿಕೊಳ್ಳುವ ಜನರು ಇದೇ ಸತ್ಯ ಎಂದು ಮೋಸ ಹೋಗುತ್ತಾರೆ. ಮೋರ್ಗನ್ ಸ್ಟಾನ್ಲಿ ಪ್ರಕಾರ, ಜನರು ಆನ್‌ಲೈನ್ ಸಮೀಕ್ಷೆಗಳ ಬದಲಾಗಿ ಉಡುಗೊರೆ ಕಾರ್ಡ್‌ಗಳು ಅಥವಾ ವೋಚರ್‌ಗಳನ್ನು ನೀಡುವ ಸಾಮಾಜಿಕ ಮಾಧ್ಯಮದ ಸೈಟ್‌ಗಳನ್ನು ಹೆಚ್ಚಾಗಿ ನೋಡುತ್ತಾರೆ.
ಅಲ್ಲದೆ, ಅನೇಕ ಸಮೀಕ್ಷೆಗಳು ಸೈಬರ್ ಅಪರಾಧಗಳನ್ನು ಮಾಡಲು ಕೇವಲ ವೈಯಕ್ತಿಕ ಮಾಹಿತಿಯನ್ನು ಸೆರೆಹಿಡಿಯುತ್ತವೆ. ಆದ್ದರಿಂದ, ರಜಾದಿನಗಳಲ್ಲಿ ಜನರು ಜಾಗರೂಕರಾಗಿರಬೇಕು ಮತ್ತು ಜೊತೆಗೆ ವಿಶ್ವಾಸಾರ್ಹ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಿ ಮಹಿತಿ ಪಡೆಯಬೇಕು.
ಪ್ರಯಾಣ ಹಗರಣ
ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪ್ರವಾಸವನ್ನು ಕೈಗೊಳ್ಳುವ ಮುನ್ನ ಜನರು ಆನ್‌ಲೈನ್‌ನಲ್ಲಿ ಹೋಟೆಲ್‌ಗಳನ್ನು ಬುಕ್ ಮಾಡುವಾಗ ಅತೀ ಹೆಚ್ಚು ಜಾಗರೂರಾಗಿರಬೇಕು. ಕೆಲವೊಮ್ಮೆ, ಜನರು ನಕಲಿ ಹೋಟೆಲ್ ಅಥವಾ ನಕಲಿ ಟೂರ್ ಆಪರೇಟರ್‌ಗಳಿಗೆ ಹಣವನ್ನ ಪಾವತಿ ಮಾಡುತ್ತಾರೆ.
Instagram ಮತ್ತು Facebookನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನರು ಹೋಟೆಲ್ ವಿವರಗಳು ಮತ್ತು ಅವರ ವಾಸ್ತವ್ಯವನ್ನು ಸಹ ಕಾಣಬಹುದು. ಆ ಸಂದರ್ಭದಲ್ಲಿ, ಅವರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಗುಣಲಕ್ಷಣಗಳ ವಿವರಗಳನ್ನು ಪರಿಶೀಲಿಸಬೇಕು ಮತ್ತು ಬೇರೆ ಗ್ರಾಹಕರ ವಿಮರ್ಶೆಗಳನ್ನ ನಾವು ನೋಡಬೇಕು. ಇದರಿಂದಾಗಿ ನಾವು ವಂಚನೆಯಿಂದ ಪಾರಾಗಬಹುದು.
WhatsAppನಲ್ಲಿ ಮದುವೆಯ ಆಮಂತ್ರಣ ಕಾರ್ಡ್
ಅದರಲ್ಲೂ ಈ ಮದುವೆ ಸೀನ್‌ನಲ್ಲಿ ಜನು ಆನ್‌ಲೈನ್ ಮೂಲಕ ಮದುವೆ ಆಮಂತ್ರಣಗಳನ್ನ ಕಳುಹಿಸುವುದು ಸ್ವೀಕರಿಸುವುದು ಸಾಮಾನ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ಆಹ್ವಾನಗಳನ್ನು PDF ಸ್ವರೂಪದಲ್ಲಿ ಕಳುಹಿಸಲಾಗುತ್ತದೆ. WhatsApp ಬಳಕೆದಾರರು ಅಪರಿಚಿತ ಸಂಖ್ಯೆಯಿಂದ ಪಡೆದ ಮದುವೆಯ ಕಾರ್ಡ್ ಅನ್ನು ತೆರೆಯುವಾಗ ಬಹಳ ಜಾಗರೂಕರಾಗಿರಬೇಕು, ಹಾಗೆ ಮಾಡುವುದರಿಂದ ನಮ್ಮ ಮೊಬೈಲ್‌ಗಳಿಗೆ ಮಾಲ್‌ವೇರ್ ನಂತಹ ವೈರಸ್ ಅಟ್ಯಾಕ್ ಆಗವ ಸಾಧ್ಯತೆ ಹೆಚ್ಚಿರುತ್ತದೆ.
ಇ-ವೆಡ್ಡಿಂಗ್ ಆಮಂತ್ರಣ ವಂಚನೆಗಳ ಬಗ್ಗೆ ತೆಲಂಗಾಣ ಸರ್ಕಾರ ಎಚ್ಚರಿಕೆ ನೀಡುವ ಸಲುವಾಗಿ ರಾಜ್ಯ ಸೈಬರ್ ಸೆಕ್ಯುರಿಟಿ ಬ್ಯೂರೋ Xನಲ್ಲಿ ಪೋಸ್ಟ್‌ನಲ್ಲಿ ಬರೆದಿದೆ, ಈ ಮದುವೆಯ ಸೀಸನ್‌ನಲ್ಲಿ, ವಂಚಕರು ಮದುವೆಯ ಆಮಂತ್ರಣಗಳ ವೇಷದಲ್ಲಿ WhatsAppನಲ್ಲಿ ದುರುದ್ದೇಶಪೂರಿತ APKಗಳನ್ನು ಕಳುಹಿಸುತ್ತಿದ್ದಾರೆ. ಒಮ್ಮೆ ತೆರೆದರೆ, ಮಾಲ್‌ವೇರ್ ನಿಮ್ಮ ಮೊಬೈಲ್‌ಗಳಲ್ಲಿ ಸೇರುತ್ತವೆ. ಇದರಿಂದಾಗಿ ನಿಮ್ಮ ಬ್ಯಾಂಕ್ ಖಾತೆಗೆ ವಿವರಗಳು ಲೀಕ್ ಆಗುವ ಸಾಧ್ಯತೆ ಇದೆ ಎಂದು ಪೋಸ್ಟ್ ಹಾಕಿದ್ದಾರೆ.
OTP ಹಗರಣ
ಆಗಾಗ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಲು ಬಯಸುವವರು ಹೆಚ್ಚಾಗಿ ಈ ಸ್ಕ್ಯಾಮರ್‌ಗಳಿಗೆ ಗುರಿಯಾಗುತ್ತಾರೆ. ಕೆಲವೊಮ್ಮೆ, ವಂಚಕರು ಡೆಲಿವರಿ ಪ್ಯಾಕೇಜ್‌ಗಳನ್ನು ಸ್ವೀಕರಿಸುವ ಗ್ರಾಹಕರ ಬಳಿ OTPಯನ್ನು ಕೇಳುತ್ತಾರೆ. ಗ್ರಾಹಕರ ಮನೆ ಬಾಗಿಲಿಗೆ ವಿತರಣಾ ಏಜೆಂಟ್‌ಗಳಂತೆ ವೇಷ ಹಾಕಿ ಈ ರೀತಿ ವಂಚನೆಗಳನ್ನ ಮಡುತ್ತಾರೆ. ಇದಲ್ಲದೆ, ಅವರು ಆರ್ಡರ್ ಮೊತ್ತವನ್ನು ಕೇಳುತ್ತಾರೆ, ಇದು ಕ್ಯಾಶ್ ಆನ್ ಡೆಲಿವರಿ ಎಂದು ಹೇಳಿ ವಂಚಿಸಿ ನಮ್ಮ ಬಳಿ ಹಣ ಕೀಳುತ್ತಾರೆ.
ಒಂದು ವೇಳೆ ಗ್ರಾಹಕರು ಆರ್ಡರ್‌ಅನ್ನು ಸ್ವೀಕರಿಸಲು ನಿರಾಕರಿಸಿದಾಗ, ಅವರು ತಮ್ಮ ಫೋನ್‌ನಲ್ಲಿ ಆರ್ಡರ್ ಕ್ಯಾನ್ಸಲ್ ಮಡಬೇಕು ಎಂಬ ಹೆಸರಿನಲ್ಲಿ OTP ಕೇಳುತ್ತಾರೆ. ನಮಗೆ ಬಂದಿರುವ ಮೆಸೇಜ್‌ಗಳನ್ನ ಸರಿಯಾಗಿ ಓದದೆ OTP ನೀಡುವುದರಿಂದ ಆನ್‌ಲೈನ್ ಕಳ್ಳತನ ಮತ್ತು ಇತರ ವಂಚನೆಗಳಿಗೆ ನೀವು ಗುರಯಾಗಬಹುದು.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications