ಭಾರತ ಮತ್ತು ಪಾಕಿಸ್ತಾನದ (India-Pakistan) ನಡುವೆ ಘರ್ಷಣೆ ಆರಂಭವಾದಾಗಿನಿಂದ, ಅಮೆರಿಕಾ ತನ್ನ ಬೇಳೆ ಬೇಯಿಸಿಕೊಳ್ಳಲು ಶುರುಮಾಡಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ನಾನೇ ಕಾರಣ ಎಂದು ಹೇಳಿಕೊಂಡು ಬರುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಸುಳ್ಳಿಗೆ ಹೊಸ ಹಾದಿ ಹಿಡಿದಿದ್ದಾರೆ. ಅದೇ ತೈಲ ಖರೀದಿ. ರಷ್ಯಾದಿಂದ ಭಾರತ (Russia-India) ಕೆಲವು ವರ್ಷಗಳಿಂದ ಇಂಧನ ತೈಲ ಖರೀದಿಸುತ್ತಲೇ ಇದೆ. ಆದ್ರೆ ಭಾರತ ಈ ಬಗ್ಗೆ ಏನೂ ಹೇಳದಿದ್ದರು, ಟ್ರಂಪ್ (Donald Trump) ಮಾತ್ರ 'ಭಾರತ ರಷ್ಯಾದಿಂದ ತೈಲ ಖರೀದಿಸುವುದಿಲ್ಲ' ಎಂದು ಹೇಳುತ್ತಲೇ ಇದ್ದಾರೆ.

ಇದೀಗ ಮತ್ತೆ ಶನಿವಾರ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಷ್ಯಾದ ತೈಲ ಖರೀದಿಯಿಂದ ಸಂಪೂರ್ಣವಾಗಿ ಹಿಂದೆ ಸರಿದಿದೆ ಎಂದು ಹೇಳಿದ್ದಾರೆ. ರಷ್ಯಾದ ಇಂಧನ ಕ್ಷೇತ್ರಕ್ಕೆ ಅಮೆರಿಕ ಹೊಸ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಭಾರತ ಈ ನಿರ್ಧಾರ ಕೈಗೊಂಡಿದೆ ಎಂದು ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ.
ಚೀನಾ ಅಧ್ಯಕ್ಷರ ಭೇಟಿಗೂ ಮುನ್ನವೇ ಈ ಹೇಳಿಕೆ:
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದಕ್ಷಿಣ ಕೊರಿಯಾದಲ್ಲಿ ಡೊನಾಲ್ಡ್ ಟ್ರಂಪ್ ಭೇಟಿಯಾಗಲಿದ್ದಾರೆ. ಆ ಸಮಯದಲ್ಲಿ ರಷ್ಯಾ ತೈಲ ಖರೀದಿಯ ವಿಷಯವನ್ನು ಚರ್ಚಿಸುವುದಾಗಿ ಟ್ರಂಪ್ ತಿಳಿಸಿದರು. ಕೃಷಿ ವ್ಯಾಪಾರ ಮತ್ತು ಜಾಗತಿಕ ಫೆಂಟನಿಲ್ ಬಿಕ್ಕಟ್ಟಿನ ಕುರಿತೂ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ವ್ಯಾಪಾರ ನಿರ್ಬಂಧಗಳು, ತಂತ್ರಜ್ಞಾನ ನಿಷೇಧಗಳು ಹಾಗೂ ಕಚ್ಚಾ ವಸ್ತುಗಳ ಪೂರೈಕೆಗಳ ಕುರಿತು ಹೆಚ್ಚುತ್ತಿರುವ ಉದ್ವಿಗ್ನತೆಗಳ ನಡುವೆಯೇ ಚೀನಾ ಅಧ್ಯಕ್ಷರನ್ನು, ಅಮೆರಿಕಾ ಅಧ್ಯಕ್ಷರು ಭೇಟಿಯಾಗಲಿದ್ದಾರೆ.
ರಷ್ಯಾದ ತೈಲ ಖರೀದಿಯ ಬಗ್ಗೆ ಸುದ್ದಿಗಾರರು ಪ್ರಶ್ನೆ ಮಾಡಿದಾಗ, "ನಾನು ಇದನ್ನು ಚೀನಾದ ಅಧ್ಯಕ್ಷರೊಂದಿಗೆ ಚರ್ಚಿಸಬಹುದು" ಎಂದು ಹೇಳಿದ್ದಾರೆ. "ಚೀನಾ ರಷ್ಯಾದ ತೈಲ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಿದೆ ಮತ್ತು ಭಾರತ ರಷ್ಯಾ ತೈಲ ಖರೀದಿಯಿಂದ ಸಂಪೂರ್ಣವಾಗಿ ಹಿಂದೆ ಸರಿಯುತ್ತಿದೆ. ಏಕೆಂದರೆ ನಾವು ನಿರ್ಬಂಧಗಳನ್ನು ವಿಧಿಸಿದ್ದೇವೆ" ಎಂದು ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ, ಟ್ರಂಪ್ ಅವರು ರಷ್ಯಾದ ತೈಲ ದೈತ್ಯ ಕಂಪನಿಗಳಾದ ರೋಸ್ನೆಫ್ಟ್ (Rosneft) ಮತ್ತು ಲುಕೋಯಿಲ್ (Lukoil) ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿತ್ತು. ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರುವ ಉದ್ದೇಶದಿಂದ ಟ್ರಂಪ್ ಈ ಕ್ರಮ ಕೈಗೊಂಡಿದ್ದರು.
ಇನ್ನು ಇದಕ್ಕೂ ಮೊದಲು, ಟ್ರಂಪ್ ರಷ್ಯಾದ ತೈಲ ದೈತ್ಯ ಕಂಪನಿಗಳಾದ ರೋಸ್ನೆಫ್ಟ್ ಮತ್ತು ಲುಕೋಯಿಲ್ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿದರು, ಇದು ಮಾಸ್ಕೋದ ಮೇಲೆ ಆರ್ಥಿಕ ಒತ್ತಡವನ್ನು ಬಿಗಿಗೊಳಿಸುವ ಮತ್ತು ಇಂಧನ ರಫ್ತುಗಳ ಮೂಲಕ ಮಿಲಿಟರಿ ಕಾರ್ಯಾಚರಣೆಗಳಿಗೆ ಹಣಕಾಸು ಒದಗಿಸುವ ಅದರ ಸಾಮರ್ಥ್ಯವನ್ನು ಸೀಮಿತಗೊಳಿಸುವ ಗುರಿಯನ್ನು ಹೊಂದಿದೆ.
ಟ್ರಂಪ್ ಹೇಳಿಕೆ ಭಾರತದ ಉತ್ತರ:
ಇನ್ನು ಟ್ರಂಪ್ ಹೇಳಿಕೆ ನೀಡಿದಾಗೆಲ್ಲಾ, ಅವರ ಹೇಳಿಕೆಗಳನ್ನು ಭಾರತ ನಿರಾಕರಿಸುತ್ತಲೇ ಬಂದಿದೆ. ರಷ್ಯಾದಿಂದ ತೈಲ ಖರೀದಿ, ತನ್ನ ಇಂಧನ ನೀತಿ ರಾಷ್ಟ್ರದ ಹಿತಾಸಕ್ತಿಗಾಗಿ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಎಂದು ಸಮರ್ಥಿಸಿಕೊಳ್ಳುತ್ತಲೇ ಇದೆ. ಅಷ್ಟೇ ಅಲ್ಲದೇ ರಷ್ಯಾದ ತೈಲ ಖರೀದಿ ಸಂಬಂಧಿಸಿ, ಅಮೆರಿಕಾದ ಯಾವುದೇ ನೀತಿಗಳನ್ನು ಭಾರತ ಒಪ್ಪಿಲ್ಲ ಎಂದು ಹೇಳಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications