ನವದೆಹಲಿ, ಮಾರ್ಚ್ 7: ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿ ಹಂತದಲ್ಲೂ ಮತ್ತು ಪ್ರತಿಯೊಂದು ದೇಶದಲ್ಲೂ ಭಾರತೀಯರು ತಮ್ಮ ಅಸಾಧಾರಣ ಪ್ರತಿಭೆಯಿಂದ ಮತ್ತು ನಾಯಕತ್ವದಿಂದ ಮಿಂಚುತ್ತಿದ್ದಾರೆ ಹಾಗೂ ದೊಡ್ದ ದೊಡ್ಡ ಸಂಸ್ಥೆಗಳನ್ನು ಆಳುತ್ತಿದ್ದಾರೆ. ಸತ್ಯ ನಾಡೆಲ್ಲಾ, ಲೀನಾ ನಾಯರ್ ಮತ್ತು ಜಯಶ್ರೀ ಉಳ್ಳಾಲ್ ಅವರಂತಹ ಹಲವಾರು ಸ್ಪೂರ್ತಿದಾಯಕ ವ್ಯಕ್ತಿಗಳು ತಮ್ಮ ತಮ್ಮ ಉದ್ಯಮಗಳಲ್ಲಿ ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ.
ಇದೇ ರೀತಿ ಸ್ಪೂರ್ತಿದಾಯಕ ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾಗಿರುವ ರೇವತಿ ಅದ್ವೈತಿ ಫ್ಲೆಕ್ಸ್‌ನ ಸಿಇಒ (ಹಿಂದೆ ಫ್ಲೆಕ್ಸ್‌ಟ್ರಾನಿಕ್ಸ್) ಮತ್ತು STEM ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಧ್ವನಿಯಾಗಿದ್ದವರು. ಅದ್ವೈತಿ ಅವರು 2019 ರಲ್ಲಿ ಫ್ಲೆಕ್ಸ್‌ಗೆ ಸೇರುವ ಮೊದಲು ಈಟನ್ ಮತ್ತು ಹನಿವೆಲ್‌ನಲ್ಲಿ ಹಲವಾರು ಸೀನಿಯರ್ ಗ್ರೇಡ್ ಹುದ್ದೆಗಳನ್ನು ನಿಭಾಯಿಸಿದ್ದರು.

ಯಾರು ಈ ಅದ್ವೈತಿ?
ಅದ್ವೈತಿ ಅವರ ತಾಯಿ ವಿಶಾಲಂ ಸ್ವಾಮಿ ಅವರು ಗೃಹಿಣಿಯಾಗಿದ್ದರೆ, ತಂದೆ ಎ.ಎನ್.ಎನ್. ಸ್ವಾಮಿ ಕೆಮಿಕಲ್ ಇಂಜಿನಿಯರ್ ಆಗಿದ್ದರು. ಚೆನ್ನೈನಲ್ಲಿ ನೆಲೆಯೂರುವ ಮೊದಲು ಅವರ ಫ್ಯಾಮಿಲಿ ಬಿಹಾರ, ಗುಜರಾತ್ ಮತ್ತು ಅಸ್ಸಾಂನಲ್ಲಿ ಹೀಗೆ ಬೇರೆ ಬೇರೆ ಕಡೆ ನೆಲೆಸಿದ್ದರು.
ಅದ್ವೈತಿ ಅವರು ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್‌ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿ ನಂತರ 2005 ರಲ್ಲಿ ಥಂಡರ್‌ಬರ್ಡ್ ಸ್ಕೂಲ್ ಆಫ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನಿಂದ MBA ಪದವಿಯನ್ನು ಪಡೆದರು.
ನಂತರ ಅದ್ವೈತಿ ಅವರು ಒಕ್ಲಹೋಮಾದ ಶಾವ್ನಿಯಲ್ಲಿರುವ ಈಟನ್‌ನ ಶಾಪ್ ಒಂದರ ಫ್ಲೋರ್ ಸೂಪರ್ವೈಸರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2002ರಲ್ಲಿ ಹನಿವೆಲ್ ಸೇರಿದ ನಂತರಲ್ಲಿ ಪ್ರೊಡಕ್ಷನ್ ಮತ್ತು ಲಾಜಿಸ್ಟಿಕ್ಸ್ ಗೆ ಸಂಬಂಧಪಟ್ಟಂತೆ ವಿವಿಧ ಹುದ್ದೆಗಳಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ, ಅದ್ವೈತಿ ಅವರು 2008 ರಲ್ಲಿ ಈಟನ್‌ಗೆ ಮರಳಿ ಅಲ್ಲಿ COO ಆಗಿ ಬಡ್ತಿ ಪಡೆಯುವ ಮೊದಲು ಎಲೆಕ್ಟ್ರಿಕಲ್ ವ್ಯಾಪಾರ ಘಟಕದ ವಿವಿಧ ವಿಭಾಗಗಳಲ್ಲಿ ವ್ಯವಸ್ಥಾಪಕ ಹುದ್ದೆಗಳಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಮುಂದೆ ನೆಕ್ಸ್ಟ್ ಜನರೇಷನ್ ಟೆಕ್ನಾಲಜಿ, ಉತ್ಪಾದನೆ ಹಾಗೂ ವಿತರಣಾ ಸರಪಳಿಯನ್ನು ಮುನ್ನಡೆಸುವುದರ ಕಡೆ ಹೆಚ್ಚಿನ ಗಮನಹರಿಸಿದ ಅವರು 2019ರ ಫೆಬ್ರವರಿಯಲ್ಲಿ ಫ್ಲೆಕ್ಸ್ ಸಿಇಒ ಆಗಿ ನೇಮಕಗೊಂಡರು. ಇದು ಆದಾಯದ ಮೂಲಕ ಮೂರನೇ ಅತಿದೊಡ್ಡ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳು (ಇಎಮ್‌ಎಸ್), ಮೂಲ ವಿನ್ಯಾಸ ತಯಾರಕ (ಒಡಿಎಂ) ಕಂಪನಿಯಾಗಿದೆ. ಆದರೆ ಅದ್ವೈತಿ ಮಾರ್ಗದರ್ಶನದಲ್ಲಿ ಕಂಪನಿಯು ಎಂಡ್-ಟು-ಎಂಡ್ ಕ್ಲೈಂಟ್ ವಾಲ್ಯೂ ಚೈನ್ ಮಾಲೀಕತ್ವಕ್ಕೆ ವೈವಿಧ್ಯಗೊಂಡಿತು.
ರೇವತಿ ಅವರ ನಾಯಕತ್ವದ ಮತ್ತು ನಿರ್ವಹಣೆಯ ಶೈಲಿಯನ್ನು "ಸಹಾನುಭೂತಿಯುಳ್ಳರು ಮತ್ತು ಆದರೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದು" ಎಂದು ವಿವರಿಸಲಾಗಿದೆ. ರೇವತಿ ಅವರ ಕಾರ್ಪೊರೇಟ್ ಕಾರ್ಯತಂತ್ರವು ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಸುಸ್ಥಿರತೆಯನ್ನು ಬಲವಾಗಿ ಒತ್ತಿಹೇಳುತ್ತದೆ ಎಂದು ವಿವರಿಸಲಾಗಿದೆ.
2022 ರ ಫ್ಲೆಕ್ಸ್ ವಾರ್ಷಿಕ ವರದಿಯ ಪ್ರಕಾರ, ರೇವತಿ ಅದ್ವೈತಿ ನಿರ್ವಹಿಸುತ್ತಿರುವ ಪ್ರತಿಷ್ಟಿತ ಹುದ್ದೆಯಿಂದ ಅವರು ಒಟ್ಟು $15,979,041 ಅಥವಾ 131 ಕೋಟಿ ರೂ.ಗಿಂತ ಹೆಚ್ಚು ಸಂಭಾವನೆಯನ್ನು ಗಳಿಸಿದ್ದಾರೆ. ಅದರಂತೆ ರೇವತಿ ಅವರು ಪ್ರತಿ ತಿಂಗಳು 10.9 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಮಾಧ್ಯಮದ ವರದಿಗಳ ಪ್ರಕಾರ, ರೇವತಿ ಅವರ ಆಸ್ತಿ ಮೌಲ್ಯವು 36 ರಿಂದ 54.5 ಮಿಲಿಯನ್ ಡಾಲರ್ ನಡುವೆ ಇದೆ ಎಂದು ಅಂದಾಜಿಸಲಾಗಿದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications