ಇದು AI ತಂತ್ರಜ್ಞಾನದ ಯುಗ ಆಗಿದೆ. ಈ ಹೊಸ ತಂತ್ರಜ್ಞಾನ ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ. AI ಪ್ಲಾಟ್‌ಫಾರ್ಮ್‌ಗಳು ಮಾಹಿತಿ ಒದಗಿಸಲು ಕೂಡ ಸಹಕಾರಿಯಾಗುತ್ತಿವೆ. ಹೀಗಾಗಿ ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಚೀನಾ, ಒಂದು ಹೆಜ್ಜೆ ಮುಂದೆ ಹೋಗಿ ಶಿಕ್ಷಣ ಕ್ಷೇತ್ರದಲ್ಲಿ AI ತಂತ್ರಜ್ಞಾನವನ್ನು ತರಲು ಮುಂದಾಗಿದೆ. ಅಂದರೆ ಬೀಜಿಂಗ್‌ನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ, AI ಪಾಠವನ್ನು ಕಲಿಸಲಾಗುತ್ತದೆ.

ಇನ್ನು ಸೆಪ್ಟೆಂಬರ್ 1ರಿಂದ ಹೊಸ ಕ್ರಮದ ಶಿಕ್ಷಣ ಜಾರಿಗೆ ಬರಲಿದೆ. ಪ್ರತಿ ವಿದ್ಯಾರ್ಥಿ ಶೈಕ್ಷಣಿಕ ವರ್ಷದಲ್ಲಿ, ಕನಿಷ್ಠ 8 ಗಂಟೆಗಳ ಕಾಲ AI ಪಾಠಗಳನ್ನು ಕಲಿಯಬೇಕಾಗುತ್ತದೆ. ಶಾಲೆಗಳು ಈ ಎಐ ಪಾಠಗಳನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಪಠ್ಯಕ್ರಮದಲ್ಲಿ ಸೇರಿಸಬಹುದು ಅಥವಾ ಪ್ರತ್ಯೇಕವಾಗಿಯೂ ಬೋಧಿಸಬಹುದು ಎನ್ನಲಾಗಿದೆ.
ಈ ಹೊಸ ಕ್ರಮವು ಚೀನಾದ AI ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಮಾಡಲಾಗುತ್ತಿದೆ. ಹಲವು ವರ್ಷಗಳಿಂದಲೂ ಈ ಆರ್ಟಿಫಿಷಿಯಲ್ ಇಂಲಿಜೆನ್ಸ್ ವಲಯದಲ್ಲಿ, ಚೀನಾ ಆಗ್ರಸ್ಥಾನ ತಲುಪಲು ಪ್ರಯತ್ನಿಸುತ್ತಲೇ ಇದೆ. ಇದರ ಭಾಗವಾಗಿಯೇ ಡೀಪ್‌ಸೀಕ್ R1 ಎಂಬ ತಂತ್ರಜ್ಞಾನವನ್ನೂ ಪರಿಚಯಿಸಿದರು. ಇದು ಕಡಿಮೆ ವೆಚ್ಚದಲ್ಲಿ ಪ್ರಪಂಚದ AI ಉದ್ಯಮವನ್ನು ಪ್ರಭಾವಿತಗೊಳಿಸಿದ ಪ್ರಮುಖ ಯೋಜನೆಯೂ ಆಗಿತ್ತು.
AI ತಂತ್ರಜ್ಞಾನದ ಈ ಮಹಾ ದತ್ತಾಂಶ ಸಂಯೋಜನೆ, ಚೀನಾದ ಆರ್ಥಿಕತೆ ಅಭಿವೃದ್ಧಿಗೂ ಪ್ರಮುಖ ಆಧಾರವಾಗಿ ಬೆಳೆಯುತ್ತದೆ. ಇದನ್ನು ಮತ್ತಷ್ಟು ಬೆಂಬಲಿಸಲು, ಚೀನಾ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ AI ಪಾಠಗಳನ್ನು ಸೇರಿಸುವ ಮೂಲಕ ಯುವ ತಲೆಮಾರಿನಲ್ಲಿಯೇ ತಂತ್ರಜ್ಞಾನ ಅರಿವು ಹೆಚ್ಚಿಸಲು ಮುಂದಾಗಿದೆ. AI ಮಾದರಿಗಳ ಅನ್ವಯಿಕೆ ಮತ್ತು ಹೊಸ ಪೀಳಿಗೆಯ ಬುದ್ಧಿವಂತ ಉಪಕರಣಗಳ ಅಭಿವೃದ್ಧಿಯನ್ನು ಬೆಂಬಲಿಸುವ ಯೋಜನೆಯ ಭಾಗವಾಗಿದೆ. ಅಲ್ಲದೇ ಈ ಬಗ್ಗೆ ಚೀನಾದ ಶಿಕ್ಷಣ ಸಚಿವ ಹುವಾಯ್ ಜಿನ್‌ಪೆಂಗ್ ಅವರು AI ಆಧಾರಿತ ತಾಂತ್ರಿಕ ಕ್ರಾಂತಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಅವಕಾಶ ಒದಗಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ವರ್ಷ ಚೀನಾ AI ಶಿಕ್ಷಣದ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ.
AI ಕ್ಷೇತ್ರದಲ್ಲಿ ಪರಿಣಿತರ ಅಗತ್ಯ ದಿನೇದಿನೇ ಹೆಚ್ಚುತ್ತಿದೆ. AI ಪಠ್ಯಕ್ರಮವನ್ನು ಶಾಲಾ ಶಿಕ್ಷಣದಲ್ಲೇ ಪರಿಚಯಿಸುವುದರಿಂದ, ವಿದ್ಯಾರ್ಥಿಗಳು ಭಾನುವಾರದ ಮಾರುಕಟ್ಟೆ ಪ್ರವೇಶಕ್ಕೆ ಬೇಕಾದ ತಾಂತ್ರಿಕ ಜ್ಞಾನವನ್ನು ಹಂಚಿಕೊಳ್ಳಬಹುದು. ಇದರಿಂದ, ಚೀನಾದ AI ಕ್ಷೇತ್ರವು ಮತ್ತಷ್ಟು ಬಲವರ್ಧನೆಯಾಗಬಹುದು ಮತ್ತು ಭಾರತೀಯ ಹಾಗೂ ಇತರ ರಾಷ್ಟ್ರಗಳಿಗೂ ಮಾದರಿಯಾಗಬಹುದು. ಅಲ್ಲದೇ ಈಗಿನಿಂದಲೇ ಕಲಿತರೆ ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ನೆರವಾಗುತ್ತದೆ.
ಇನ್ನು ಯಾವುದೇ ಹೊಸ ತಂತ್ರಜ್ಞಾನ ಸಮಾಜದಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ ಎಂದಾ, ಅದನ್ನು ಅಳವಡಿಸಿಕೊಂಡು ಜೀವನ ಮಾಡುವುದು ಈಗಿನ ಕಾಲದಲ್ಲಿ ಅಗತ್ಯವಾದ ಅಂಶವಾಗಿದೆ. ಮತ್ತು ಅದರಲ್ಲಿ ಪರಿಣತಿ ಪಡೆಯಲು ಶಿಕ್ಷಣ ಅತ್ಯವಶ್ಯಕ. ಹಾಗೆಯೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕೂಡ, ಈಗಾಗಲೇ ಹಲವಾರು ಉದ್ಯೋಗಗಳ ಸ್ವರೂಪವನ್ನು ಬದಲಿಸುತ್ತಿದೆ. ಭವಿಷ್ಯದ ಉದ್ಯೋಗ ಮಾರುಕಟ್ಟೆ ಈ ಕ್ಷೇತ್ರದ ತಜ್ಞರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಇಡುತ್ತಿದೆ.
ಇನ್ನು AI ಶಿಕ್ಷಣದ ಮುಖ್ಯ ಉದ್ದೇಶಗಳೇನೆಂದರೆ, ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಅರಿವನ್ನು ಹೆಚ್ಚಿಸುವುದಾಗಿದೆ. ಅಂದರೆ ಭಾವಿ ಉದ್ಯೋಗ ಮಾರುಕಟ್ಟೆಗೆ ಸಿದ್ಧಗೊಳ್ಳಲು ತರಬೇತಿ ನೀಡುವುದು, ನೂತನ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು, AI ಮೂಲಕ ನವೀನ ಆವಿಷ್ಕಾರಗಳಿಗೆ ಪ್ರೇರಣೆಯಾಗುವುದು. ಆಟೋಮೇಷನ್ ಅರ್ಥಮಾಡಿಕೊಳ್ಳಲು ಮತ್ತು ಬಳಕೆ ಮಾಡಿಕೊಳ್ಳಲು ಕಲಿಸುವುದು ಬಹು ಮುಖ್ಯವಾಗಿದೆ.
ಇನ್ನು AI ಶೈಕ್ಷಣಿಕ ಪಠ್ಯಕ್ರಮವನ್ನು ಜಾಗತಿಕ ಮಟ್ಟದಲ್ಲಿ ಸ್ವೀಕರಿಸುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮಾದರಿಗಳು ಮತ್ತಷ್ಟು ಸುಧಾರಣೆಗೊಳ್ಳಲಿವೆ. ಕೇವಲ ತತ್ವಗಳನ್ನು ಕಲಿಸುವುದಲ್ಲದೆ, AI ಪ್ರಾಯೋಗಿಕ ತರಬೇತಿ, ಪ್ರೋಗ್ರಾಮಿಂಗ್ ಕೋರ್ಸ್‌ಗಳು, ಡೇಟಾ ವಿಶ್ಲೇಷಣೆ ಮತ್ತು ತಂತ್ರಜ್ಞಾನ ಆವಿಷ್ಕಾರಗಳತ್ತ ಹೆಚ್ಚು ಒತ್ತು ನೀಡುವ ಸಾಧ್ಯತೆ ಇದೆ.


Click it and Unblock the Notifications