ಬೆಂಗಳೂರು ಮೂಲದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML)ನಿಂದ 26% ಈಕ್ವಿಟಿ ಷೇರು ಬಂಡವಾಳವನ್ನು ಸರ್ಕಾರ ಹಿಂತೆಗೆದುಕೊಳ್ಳಲಿದೆ. ಆಡಳಿತ ಮಂಡಳಿಯಲ್ಲಿನ ಹಿಡಿತವೂ ಸೇರಿದಂತೆ ಒಟ್ಟು 54.03% ಷೇರಿನ ಪಾಲನ್ನು ಸರ್ಕಾರ ಹೊಂದಿದೆ.
ಡಿಪಾರ್ಟ್ ಮೆಂಟ್ ಆಫ್ ಇನ್ವೆಸ್ಟ್ ಮೆಂಟ್ ಅಂಡ್ ಪಬ್ಲಿಕ್ ಅಸೆಟ್ ಮ್ಯಾನೇಜ್ ಮೆಂಟ್ (DIPAM)ನಿಂದ ಬಿಡ್ಡರ್ ಕಂಪೆನಿಗಳಿಗೆ ಅರ್ಹತಾ ಮಾನದಂಡ ನಿಗದಿ ಮಾಡಲಾಗಿದೆ. ಕಂಪೆನಿಯ ನಿವ್ವಳ ಮೌಲ್ಯವು ಬಿಡ್ ಸಲ್ಲಿಸುವುದಕ್ಕೆ ಕೊನೆಯ ದಿನವಾದ ಮಾರ್ಚ್ 1, 2021ರ ಹೊತ್ತಿಗೆ 1400 ಕೋಟಿ ರುಪಾಯಿ ಇರಬೇಕು ಎನ್ನಲಾಗಿದೆ.
"ಬಂಡವಾಳ ಹಿಂತೆಗೆತವನ್ನು ಎರಡು ಹಂತದ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಮಾಡಲಾಗುವುದು," ಎಂದು ಭಾನುವಾರ ಮಾಹಿತಿ ನೀಡಲಾಗಿದೆ. ಕಂಪೆನಿಗಳು, ಲಿಮಿಟೆಡ್ ಲಯಬಿಲಿಟಿ ಪಾರ್ಟನರ್ ಷಿಪ್ಸ್ (LLP's) ಮತ್ತು ಫಂಡ್ ಗಳು ಭಾರತದಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಆದರೆ ಸರ್ಕಾರಿ ಕಂಪೆನಿಗಳನ್ನು ಈ ಭಾಗವಹಿಸುವಿಕೆಯಿಂದ ನಿಷೇಧಿಸಲಾಗಿದೆ.

ಇನ್ನು ಒಕ್ಕೂಟ ಮಾಡಿಕೊಂಡು ಕೂಡ ಬಿಡ್ಡಿಂಗ್ ನಲ್ಲಿ ಭಾಗವಹಿಸಬಹುದು. ಅದರಲ್ಲಿ ಪ್ರಮುಖ ಸದಸ್ಯ ಆಗಿರುವುದು ಆ ಒಕ್ಕೂಟದಲ್ಲಿ 51% ಇರಬೇಕು. ಕಳೆದ ಐದು ವರ್ಷಗಳ ಪೈಕಿ ಮೂರು ವರ್ಷಗಳು ತೆರಿಗೆ ಕಳೆದ ನಂತರ ಲಾಭವನ್ನು ಗಳಿಸಿರಬೇಕು.
ಅರ್ಥ್ ಮೂವಿಂಗ್, ಸಾಗಣೆ ಮತ್ತು ಗಣಿಗಾರಿಕೆಗಳಲ್ಲಿ ಬಳಸುವ ಭಾರೀ ಸಲಕರಣೆಗಳನ್ನು ಬೆಮೆಲ್ ಕಂಪೆನಿಯು ಉತ್ಪಾದಿಸುತ್ತದೆ. ಸದ್ಯದ ಮಾರುಕಟ್ಟೆ ದರದಲ್ಲಿ 26% ಷೇರಿನ ಪಾಲು ಮಾರಾಟ ಮಾಡಿದರೆ 1000 ಕೋಟಿ ರುಪಾಯಿ ಸಂಗ್ರಹ ಮಾಡಲು ನೆರವಾಗುತ್ತದೆ. ಶುಕ್ರವಾರದ ಕೊನೆಗೆ ಷೇರಿನ ಬೆಲೆ ತಲಾ 974.25 ರುಪಾಯಿ ಇತ್ತು.


Click it and Unblock the Notifications