ಬೆಂಗಳೂರು: ಬೆಂಗಳೂರಿನ ಮಹಾ ಯೋಜನೆಗಳಲ್ಲಿ ಸಿಲ್ಕ್‌ಬೋರ್ಟ್‌ನಿಂದ ಕೆ.ಆರ್.ಪುರಂ ರಸ್ತೆ ವಿಸ್ತರಣೆ ಕೂಡಾ ಒಂದು (Silk Board-KR Puram). ಇದೀಗ ಸಿಲ್ಕ್ ಬೋರ್ಟ್ ಜಂಕ್ಷನ್ ಮತ್ತು ಕೆಆರ್ ಪುರಂ ಮೆಟ್ರೋ ನಿಲ್ದಾಣದ ನಡುವಿನ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಇದೀಗ ರಾಜ್ಯ ಸಚಿವ ಸಂಪುಟ 307 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ.

ರಾಜ್ಯ ಸಚಿವ ಸಂಪುಟವು ಗುರುವಾರ ಹೊರ ವರ್ತುಲ ರಸ್ತೆಯ (ORR) ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದವರೆಗಿನ 17.01 ಕಿ.ಮೀ. ವಿಸ್ತರಣೆ ಮಾಡುವ ಉದ್ದೇಶದಿಂದ ₹307 ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಿದೆ. ಸರ್ಕಾರದ ಈ ಅಭಿವೃದ್ಧಿಯು ಸಂಚಾರ ಗುಣಮಟ್ಟ ಸುಧಾರಿಸಿ, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಹೊಸ ಪರಿಹಾರ ನೀಡಲಿದೆ.
ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಅಧಿಕಾರಿಗಳ ಪ್ರಕಾರ, ಅಪ್ಡೇಟ್ ಮಾಡಿದ ಈ ಕಾರಿಡಾರ್ 10-ಪಥದ ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಮೂರು ಮುಖ್ಯ ರಸ್ತೆ ಪಥಗಳು ಮತ್ತು ಪ್ರತಿ ಬದಿಯಲ್ಲಿ ಎರಡು ಸರ್ವಿಸ್ ರೋಡ್‌ಗಳು ಇರಲಿದೆ.
ಇನ್ನು ಈ ಯೋಜನೆಯಲ್ಲಿ ಎರಡೂ ಬದಿಗಳಲ್ಲಿ ಬ್ರಷ್ಡ್-ಕಾಂಕ್ರೀಟ್ ಪಾದಚಾರಿ ಮಾರ್ಗಗಳು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ರಸ್ತೆಯ ಕೆಲವು ಭಾಗಗಳನ್ನು ಹೊಸದಾಗಿ ನಿರ್ಮಿಸಿದರೆ, ಕೆಲವೊಂದು ಕಡೆಗಳಲ್ಲಿ ಅಗಲೀಕರಣ ಮಾಡಲಾಗುತ್ತದೆ ಎನ್ನಲಾಗಿದೆ. ಜೊತೆಗೆ, ಬೋರ್ಡ್‌ಗಳನ್ನು ಹೊಂದಿರುವ ಆಧುನಿಕ ಬಸ್ ನಿಲ್ದಾಣಗಳ ನಿರ್ಮಾಣವೂ ಆಗಲಿದೆ ಎಂದು ಹೇಳಲಾಗಿದೆ.
ಯೋಜನೆಯ ಆರಂಭಿಕ ಅಂದಾಜು ಸುಮಾರು ₹400 ಕೋಟಿ ಇತ್ತಾದರೂ, ಸಚಿವ ಸಂಪುಟವು ₹307 ಕೋಟಿ ರೂ.ಗೆ ಅನುಮೋದನೆ ನೀಡಿದೆ. "ಇಬ್ಲೂರುನಿಂದ ಕೆ.ಆರ್. ಪುರಂವರೆಗಿನ ಮೆಟ್ರೋ ಮಾರ್ಗದ ಅಡಿಯಲ್ಲಿ ಸ್ಕೈವಾಕ್ ಯೋಜನೆಗಳೂ ನಡೆಯಲಿದ್ದು, ಆದರೆ ಅದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಮಾತ್ರ ಕೈಗೊಳ್ಳಲಾಗುವುದು," ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಘೋಷಣೆ!
ಸದ್ಯ ಓಆರ್‌ಆರ್‌ನಲ್ಲಿ ಸಂಚಾರ ದಟ್ಟಣೆ ಮತ್ತು ಕಳಪೆ ರಸ್ತೆ ಗುಣಮಟ್ಟದಿಂದಾಗಿ ಐಟಿ ಕಂಪನಿಗಳು ಸತತವಾಗಿ ದೂರು ನೀಡುತ್ತಲೇ ಇದೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಸ್ತೆ ನವೀಕರಣ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ಹೆಚ್ಚಾಗುತ್ತಿರುವ ಪ್ರಯಾಣಿಕರ ಸಂಖ್ಯೆ, ಪ್ರಯಾಣದಲ್ಲಿ ವಿಳಂಬ, ರಸ್ತೆ ಗುಂಡಿಗಳಿಂದಾಗಿ ಹಲವಾರು ಸಮಸ್ಯೆಗಳಿಗೆ ದಾರಿಯಾಗುತ್ತಿದೆ. ಅಲ್ಲದೇ ಕೆಲವು ಕಂಪನಿಗಳು ನಗರದಿಂದ ಹೊರಕ್ಕೆ ಶಿಫ್ಟ್ ಆಗಲಿದೆ ಎಂದು ಸುಳಿವು ಸಿಕ್ಕಿತ್ತು. ಈ ಬೆನ್ನಲ್ಲೇ ಡಿಕೆಶಿ ಈ ಯೋಜನೆಯ ಘೋಷಣೆ ಮಾಡಿದ್ದರು.
ಇದೀಗ ಸರ್ಕಾರ ಕೊನೆಗೂ ಸಂಪೂರ್ಣಮಾಗಿ ಹೊರ ವರ್ತುಲ ರಸ್ತೆಯನ್ನು (ORR) ವಿಶ್ವ ದರ್ಜೆಯ ಮಟ್ಟಕ್ಕೆ ಮರುನಿರ್ಮಾಣ ಮಾಡಲು ಪ್ಲಾನ್ ಮಾಡಿದೆ. ಐಟಿಬಿಟಿ ರಸ್ತೆಯಾಗಿರುವ ಕಾರಣ ದಟ್ಟಣೆಯನ್ನು ಕಡಿಮೆ ಮಾಡುವುದು, ಮಳೆಗಾಲದಲ್ಲಾಗುವ ಸಮಸ್ಯೆಯನ್ನು ಪರಿಹರಿಸುವುದು ಮತ್ತು ಜಂಕ್ಷನ್‌ಗಳಲ್ಲಿ ಸುಧಾರಿಸುವ ಗುರಿಯನ್ನು ಹೊಂದಿದೆ. ಸದ್ಯ ಬೆಂಗಳೂರಿನ ಅತ್ಯಂತ ಒತ್ತಡದ ಸಂಚಾರ ವಲಯಗಳಲ್ಲಿ ಇದೂ ಒಂದಾಗಿದ್ದು, ಮುಂದಿನ ದಿನಗಳಲ್ಲಿ ಸುಗಮ ಸಂಚಾರದ ಮಾರ್ಗವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications