ಇಸ್ರೇಲ್-ಅಮೆರಿಕಾ ಮತ್ತು ಇರಾನ್ (Israel-US-Iran War) ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಸರ್ವೊಚ್ಛ ನಾಯಕ ಆಯತೊಲ್ಲಾ ಅಲ್-ಉಜ್ಮಾ ಖಮೇನಿ ಹಾಗೂ ಅವರ ಕುಟುಂಬದ ಹತ್ಯೆಯಿಂದಾಗಿ ಇರಾನ್ ಸದ್ಯ ಕೊತ ಕೊತ ಕುದಿಯುತ್ತಿದೆ. ಅಲ್ಲದೇ ಖಮೇನಿ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ, ತನ್ನ ದಾಳಿ ಮೂಲಕವೇ ಇರಾನ್, ಇಸ್ರೇಲ್ ಮತ್ತು ಅಮೆರಿಕಾಗೆ ಎಚ್ಚರಿಕೆ ನೀಡುತ್ತಿದೆ. ಇನ್ನು ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಸದ್ಯ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಆರಂಭವಾಗಿದ್ದು, ಇಬ್ಬರ ಜಗಳದಿಂದಾಗಿ ಹಲವು ರಾಷ್ಟ್ರಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೇ ಈಗಾಗಲೇ ಹಲವಾರು ವಿಮಾನ ಹಾರಾಟಗಳೂ ರದ್ದುಗೊಳಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಕದನ, ವಿಶ್ವದ ಹಲವು ವಾಯುಯಾನದ ಮೇಲೂ ತಟ್ಟಿದೆ. ಅಲ್ಲದೇ ಬೆಣಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) (ಮಾರ್ಚ್ 1) ಬರೋಬ್ಬರಿ 16 ವಿಮಾನಗಳು ರದ್ದಾಗಿದೆ. ಇದರಿಂದ ಗಲ್ಫ್ ದೇಶಗಳು ಮತ್ತು ಯುರೋಪ್‌ಗೆ ಹೋಗುವ ಪ್ರಯಾಣಿಕರಲ್ಲಿ ಭಾರೀ ಅಡಚಣೆ ಉಂಟಾಗಿದೆ.
ಹಲವು ವಿಮಾನಗಳು ರದ್ದು, ಪ್ರಯಾಣಿಕರಲ್ಲಿ ಸಂಕಷ್ಟ!
ಕನಿಷ್ಠ 16 ವಿಮಾನಗಳು ರದ್ದಾಗಿವೆ ಎಂದು ಹೇಳಲಾಗಿದ್ದು, ಇವುಗಳಲ್ಲಿ ಹೆಚ್ಚಿನವು ಗಲ್ಫ್ ನಗರಗಳಾದ ದುಬೈ, ದೋಹಾ, ಅಬುಧಾವಿ ಜೆಡ್ಡಾ ಮತ್ತು ಯುರೋಪ್‌ನ ಲಂಡನ್‌ಗೆ ಹೋಗುವ ವಿಮಾನಗಳು ಆಗಿದೆ.
ಅತ್ತ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷಗಳು ಶುರುವಾಗಿದೆ. ಅತ್ತ ಹಲವು ದೇಶಗಳು ತಮ್ಮ ಏರ್‌ಸ್ಪೇಸ್ ಅನ್ನು ಮುಚ್ಚಲಾಗಿದೆ. ಇರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಯಾನವನ್ನು ನಿರ್ಬಂಧಗಳಿಂದಾಗಿ, ಅಂತರಾಷ್ಟ್ರೀಯ ವಿಮಾನ ಸಂಚಾರದಲ್ಲಿ ಭಾರೀ ಅಡಚಣೆ ಉಂಟಾಗಿದೆ.
ವಿಮಾನಯಾನಕ್ಕೂ ತಟ್ಟಿದ ಯುದ್ಧದ ಭೀತಿ
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಭೀತಿ ಇಡೀ ವಿಶ್ವವನ್ನೇ ತಲ್ಲಣ ಸೃಷ್ಟಿಸಿದೆ. ಈ ಯುದ್ಧದ ಪರಿಣಾಮ ದಿಂದಾಗಿ ಬೆಂಗಳೂರಿನ ಕೆಂಪೇಗೌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಹಲವು ವಿಮಾನ ಹಾರಾಟಗಳನ್ನು ರದ್ದುಗೊಳಿಸಲಾಗಿದೆ. ಈ ಪರಿಣಾಮ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಅರಬ್ ರಾಷ್ಟ್ರಗಳಾದ ದುಬೈ, ಅಬುಧಾವಿ, ಜೆದ್ದಾ, ದೋಹಾ, ದಮಾಮ್‌ಗೆ ಹೋಗಬೇಕಿದ್ದ 6 ವಿಮಾನಗಳು ಹಾಗೂ ಅಲ್ಲಿಂದ ವಾಪಾಸ್ ಬರಬೇಕಿದ್ದ 9 ವಿಮಾನಗಳು ಸೇರಿದಂತೆ ಒಟ್ಟು 15 ವಿಮಾನಗಳು ರದ್ದಾಗಿದೆ ಎಂದು ಹೇಳಲಾಗಿದೆ.
ಪ್ರಯಾಣಿಕರ ಪರದಾಟ
ಇನ್ನು ಹಲವಾರು ವಿಮಾನಗಳು ರದ್ದಾಗಿರುವುದರಿಂದ ಸಾವಿರಾರು ಪ್ರಯಾನಿಕರು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪರದಾಡುವಂತಾಗಿದೆ. ಪ್ರಯಾಣಿಕರ ಸಮಸ್ಯೆಯನ್ನು ಅರಿತ ಏರ್‌ಪೋರ್ಟ್ ಸಿಬ್ಬಂದಿ, ಅವರಿಗೆ ತಿಂಡಿಗಳನ್ನು ನೀಡಿದ್ದಾರೆ. ಅಲ್ಲದೇ ಪ್ರಯಾಣಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಹೆಲ್ಪ್ ಡೆಸ್ಜ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಈ ಸಮಸ್ಯೆಯಿಂದ ವಿಮಾನ ಟಿಕೆಟ್ ರದ್ದುಪಡಿಸಲು ಹಲವರು ಮುಂದಾಗಿದ್ದು, ಈ ಸಂಘರ್ಷವು ಹಲವಾರು ವಿಮಾನಯಾನದ ಮೇಲೆ ಭಾರೀ ಪೆಟ್ಟು ಬಿದ್ದಿದೆ.
ಈಗಾಗಲೇ ಬಿಐಎಎಲ್ ಪ್ರಯಾಣಿಕರ ಸಹಾಯಕ್ಕಾಗಿ ಹೆಲ್ಪ್ ಡೆಸ್ಕ್‌ಗಳನ್ನು ತೆರೆದಿದೆ. ಪ್ರಯಾನಿಕರು ಏರ್‌ಲೈನ್ ಆಪ್, ವೆಬ್‌ಸೈಟ್ ಅಥವಾ ವಿಮಾನ ನಿಲ್ದಾಣದ ಅಧಿಕೃತ ಮಾಹಿತಿಯನ್ನು ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ. ಅಲ್ಲದೇ ಏರ್‌ಲೈನ್‌ಗಳು ರದ್ದಾದ ಟಿಕೆಟ್ ಹಣವನ್ನು ರಿಫಂಡ್ ಮಾಡಲು ಕಾರ್ಯಚರಿಸುತ್ತಿದೆ.


Click it and Unblock the Notifications