ಕೆಂಪೇಗೌಡ ಏರ್‌ಪೋರ್ಟ್ (Kempegowda Airport) ಬೆಂಗಳೂರಿನ ಜನನಿಬಿಡ ರಸ್ತೆಗಳಲ್ಲಿ ಒಂದಾಗಿದೆ. ದಿನವಿಡೀ ಸಾವಿರಾರು, ಲಕ್ಷಾಂತರ ಜನರು ಪ್ರಯಾಣಿಸುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸದಾ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ. ಅದೇ ಕಾರಣದಿಂದ ಸರ್ಕಾರ, ಅಧಿಕಾರಿಗಳು ಏನಾದರೊಂದು ಪ್ಲಾನ್ ಮಾಡುತ್ತಲೇ ಇದೆ. ಆದರೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Airport) ಹೋಗಬೇಕೆಂದರೆ ಟ್ರಾಫಿಕ್‌ನಿಂದ ಪರದಾಡಲೇಬೇಕು. ಅದೇ ಕಾರಣದಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ ಬಿಎಂಟಿಸಿ ಹೊಸ ಸೇವೆ ನೀಡಲು ಸಜ್ಜಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದಿಂದ, ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರ ಸಂಚಾರದ ಅನುಕೂಲಕ್ಕಾಗಿ, ವಿಮಾನ ನಿಲ್ದಾಣಕ್ಕೆ ಹೋಗುವ ಬೆಂಗಳೂರು ಮಹಾನರ ಸಾರಿಗೆ ನಿಗಮ (BMTC) ವಾಯುವಜ್ರ ಬಸ್‌ಗಳು (Vayuvajra Bus) ಇನ್ಮೇಲೆ ಎಲ್ಲಾ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ (Metro Stations) ನಿಲ್ಲುತ್ತದೆ ಎನ್ನಲಾಗಿದೆ. ಇದು ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ದೊಡ್ಡ ಬೂಸ್ಟ್ ನೀಡುವ ಮಹತ್ವದ ಕ್ರಮವಾಗಿದ್ದು, ಮೆಟ್ರೋ ಪ್ರಯಾಣಿಕರು ದೂರದ ಬಸ್ ಸ್ಟಾಪ್‌ಗಳಿಗೆ ನಡೆಯದೆಯೇ ಏರ್‌ಪೋರ್ಟ್ ಬಸ್ ಹತ್ತಲು ಸಹಕಾರಿಯಾಗಲಿದೆ.
ಬಿಎಂಆರ್‌ಸಿಎಲ್‌ನಿಂದ ಹೊಸ ಕ್ರಮ!
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL), BMTC ಮತ್ತು ಬೆಂಗಳೂರು ಸಂಚಾರ ಪೊಲೀಸರು ಜಂಟಿಯಾಗಿ ಜಾರಿಗೆ ತಂದ ಉಪಕ್ರಮ ಇದಾಗಿದ್ದು, ಮೆಟ್ರೋ ಪ್ರಯಾಣಿಕರ ಸಂಪರ್ಕವನ್ನು ಬಲಪಡಿಸುವ ಉದ್ದೇಶ ಹೊಂದಿದೆ.
ಹೊಸ ಸೇವೆಯ ನಿರ್ಧಾರಗಳೇನು?
ಎಲ್ಲಾ ಮೆಟ್ರೋ ಸ್ಟೇಷನ್‌ಗಳಲ್ಲಿ ನಿಲುಗಡೆ: ಮೆಟ್ರೋ ರೂಟ್‌ನಲ್ಲಿರುವ ಎಲ್ಲಾ ನಮ್ಮ ಮೆಟ್ರೋ ಸ್ಟೇಷನ್‌ಗಳ ಬಳಿ ವಾಯುವಜ್ರ ಬಸ್‌ಗಳಿಗೆ ಸ್ಟಾಪ್‌ಗಳನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಇದರಿಂದ ಮೆಟ್ರೋ ಇಳಿದ ತಕ್ಷಣವೇ ಏರ್‌ಪೋರ್ಟ್ ಬಸ್ ಹತ್ತಬಹುದು ಮತ್ತು ಇಳಿಯಬಹುದು. ಈ ಹಿಂದೆ ವಾಯುವಜ್ರ ಬಸ್‌ಗಳು ಕೇವಲ ನಿಗದಿತ ಬಿಎಂಟಿಸಿ ಬಸ್ ಸ್ಟಾಪ್‌ಗಳಲ್ಲಿ ಮಾತ್ರ ನಿಲುಗಡೆ ಹೊಂದಿತ್ತು. ಅಲ್ಲದೇ ಈ ಸಂದರ್ಭದಲ್ಲಿ ಅನೇಕ ಬಸ್ ಸ್ಟಾಪ್‌ಗಳು ಮೆಟ್ರೋ ಸ್ಟೇಷನ್‌ಗಳಿಂದ ದೂರದಲ್ಲಿದ್ದವು. ಆದರೆ ಇದೀಗ ಫೆಬ್ರವರಿ 5, 2026 ರಿಂದ ಈ ಸಮಸ್ಯೆಗೆ ಪರಿಹಾರವಾಗಿ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.
ಪರ್ಪಲ್ ಲೈನ್ ಮತ್ತು ಗ್ರೀನ್ ಲೈನ್‌ನಲ್ಲಿ ಹೊಸ ವ್ಯವಸ್ಥೆ:
ಇನ್ನು ಏರ್‌ಪೋರ್ಟ್ ಬಸ್‌ಗಳ ಜೊತೆಗೆ, ಪರ್ಪಲ್ ಲೈನ್ (ವೈಟ್‌ಫೀಲ್ಡ್-ಚಲ್ಲಘಟ್ಟ) ಮತ್ತು ಗ್ರೀನ್ ಲೈನ್ (ಮಾದಾವಾರ-ಸಿಲ್ಕ್ ಇನ್‌ಸ್ಟಿಟ್ಯೂಟ್) ನಲ್ಲಿ ಹಲವು ಮೆಟ್ರೋ ಸ್ಟೇಷನ್‌ಗಳ ಬಳಿ ಹೊಸ ಬಿಎಂಟಿಸಿ ಬಸ್ ಸ್ಟಾಪ್‌ಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.
ಆ ಪ್ರಕಾರ ಪರ್ಪಲ್ ಲೈನ್‌ನಲ್ಲಿ ಟ್ರಿನಿಟಿ ಮತ್ತು ಹೂಡಿ ಸ್ಟೇಷನ್‌ಗಳ ಬಳಿ ಹೊಸ ಸ್ಟಾಪ್‌ಗಳಾದರೆ, ಅದೇ ರೀತಿ ಗ್ರೀನ್ ಲೈನ್‌ನಲ್ಲಿ ಮಂಜುನಾಥನಗರ, ಪೀಣ್ಯ, ಲಾಲ್‌ಬಾಗ್, ಸೌತ್ ಎಂಡ್ ಸರ್ಕಲ್, ಜಯಪ್ರಕಾಶ್ ನಗರ, ಕೋಣಂಕುಂಟೆ ಕ್ರಾಸ್, ವಜ್ರಹಳ್ಳಿ, ತಲಘಟ್ಟಪುರ ಸ್ಟೇಷನ್‌ಗಳ ಬಳಿ ಹೊಸ ಸ್ಟಾಪ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.


Click it and Unblock the Notifications