ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 2025ರೊಳಗೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲೊಂದು ಎಂಬ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ, ಹೊಸ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರ್ಗಗಳು ಮತ್ತು ಸುಧಾರಿತ ಮೂಲಸೌಕರ್ಯಗಳ ಮೂಲಕ ವಿಮಾನ ನಿಲ್ದಾಣವು ಭವಿಷ್ಯದ ಅಗತ್ಯಗಳಿಗೆ ಸಜ್ಜಾಗುತ್ತಿದೆ. 2026ರಲ್ಲಿ ಅಂತರರಾಷ್ಟ್ರೀಯ ಪ್ರಯಾಣ ಮತ್ತು ಸರಕು ಬೇಡಿಕೆ ಹೆಚ್ಚಿಸಿಕೊಂಡು ಮತ್ತಷು ಮೇರು ಪರ್ವತಕ್ಕೇರಲು ಸಜ್ಜಾಗುತ್ತಿದೆ.

2025ರಲ್ಲಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದವರ ಸಂಖ್ಯೆ 4.3 ಕೋಟಿಗಿಂತ ಹೆಚ್ಚಾಗಿದ್ದು, ಹಿಂದಿನ ವರ್ಷದಿಗಿಂತ ಉತ್ತಮ ಬೆಳವಣಿಗೆಯನ್ನು ತೋರಿಸಿದೆ. ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ ದಿನವೂ ದಾಖಲಾಗಿದ್ದು, ವಿಮಾನ ಸಂಚಾರದ ಒತ್ತಡ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತದೆ. ದಿನನಿತ್ಯ ವಿಮಾನಗಳ ಸಂಚಾರವೂ ನಿರಂತರವಾಗಿ ಏರಿಕೆಯಾಗುತ್ತಿದೆ.
ದೇಶೀಯ ವಿಮಾನ ಸಂಚಾರದಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ರಾಷ್ಟ್ರ ಮಟ್ಟದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ. ಅಂತರರಾಷ್ಟ್ರೀಯ ಸಂಚಾರದಲ್ಲೂ ಮಹತ್ವದ ಏರಿಕೆ ಕಂಡುಬಂದಿದೆ. ಪ್ರತಿದಿನದ ಅಂತರರಾಷ್ಟ್ರೀಯ ವಿಮಾನಗಳ ಸಂಖ್ಯೆ ಹೆಚ್ಚಿದ ಪರಿಣಾಮ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ವೃದ್ಧಿಯಾಗಿದೆ.
2025ರಲ್ಲಿ ವಿಮಾನ ನಿಲ್ದಾಣವು ಹಲವು ಹೊಸ ದೇಶೀಯ ಮತ್ತು ವಿದೇಶಿ ಮಾರ್ಗಗಳನ್ನು ಆರಂಭಿಸಿದೆ. ಇದರೊಂದಿಗೆ ಬೆಂಗಳೂರು ಈಗ ದೇಶದ ಪ್ರಮುಖ ನಗರಗಳಷ್ಟೇ ಅಲ್ಲದೆ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಪೂರ್ವ ಏಷ್ಯಾದ ಹಲವು ನಗರಗಳಿಗೆ ನೇರ ಸಂಪರ್ಕ ಹೊಂದಿದೆ. ಒಟ್ಟು 100ಕ್ಕಿಂತ ಹೆಚ್ಚು ತಾಣಗಳಿಗೆ ಸಂಪರ್ಕ ದೊರಕಿರುವುದು ವಿಮಾನ ನಿಲ್ದಾಣದ ವ್ಯಾಪ್ತಿಯನ್ನು ತೋರಿಸುತ್ತದೆ.
ವಿಮಾನಯಾನ ಸಂಸ್ಥೆಗಳ ಸಹಕಾರವೂ ಹೆಚ್ಚಾಗಿದೆ. ಹಲವು ಭಾರತೀಯ ಮತ್ತು ವಿದೇಶಿ ವಿಮಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ವಿಸ್ತರಿಸಿದ್ದು, ಕೆಲವು ಸಂಸ್ಥೆಗಳು ಹೊಸ ಅಂತರರಾಷ್ಟ್ರೀಯ ಮಾರ್ಗಗಳನ್ನು ಆರಂಭಿಸಿವೆ. ದೀರ್ಘ ದೂರದ ವಿಮಾನ ಸೇವೆಗಳ ಸಂಖ್ಯೆಯೂ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಪ್ರಯಾಣಿಕರ ಜೊತೆಗೆ ಸರಕು ಸಾಗಣೆ ಕ್ಷೇತ್ರದಲ್ಲೂ ಬೆಂಗಳೂರು ವಿಮಾನ ನಿಲ್ದಾಣ ಉತ್ತಮ ಸಾಧನೆ ಮಾಡುತ್ತಿದೆ. ಕೃಷಿ ಉತ್ಪನ್ನಗಳು, ಔಷಧಗಳು, ತಂತ್ರಜ್ಞಾನ ಸಂಬಂಧಿತ ವಸ್ತುಗಳು ಮತ್ತು ಇ-ಕಾಮರ್ಸ್ ಸರಕುಗಳ ಸಾಗಣೆ ಹೆಚ್ಚಾಗಿದೆ. ಹೊಸ ಸರಕು ಟರ್ಮಿನಲ್‌ಗಳು ಮತ್ತು ಗೋದಾಮು ಸೌಲಭ್ಯಗಳ ನಿರ್ಮಾಣದಿಂದ ಸರಕು ನಿರ್ವಹಣೆಯ ಸಾಮರ್ಥ್ಯವೂ ವೃದ್ಧಿಯಾಗಿದೆ.
2026ರಲ್ಲಿ ಅಂತರರಾಷ್ಟ್ರೀಯ ಪ್ರಯಾಣ ಮತ್ತು ಸರಕು ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದ್ದು, ಹೊಸ ಮಾರ್ಗಗಳು ಮತ್ತು ಹೆಚ್ಚುವರಿ ವಿಮಾನ ಸೇವೆಗಳ ಯೋಜನೆ ನಡೆಯುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರು ನಗರವನ್ನು ಜಾಗತಿಕ ವ್ಯಾಪಾರ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.


Click it and Unblock the Notifications