ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೊಟ್ಟ ಮೊದಲ ಬಾರಿಗೆ ದಾಖಲೆಯಷ್ಟು ಲಾಭ ಗಳಿಸಿದೆ. ಈ ಸಾಧನೆ ಕೇವಲ ಹಣಕಾಸಿನ ಬೆಳವಣಿಗೆ ಮಾತ್ರವಾಗಿಲ್ಲ. ಇದು ವಿಮಾನ ನಿಲ್ದಾಣದ ದೀರ್ಘಕಾಲಿಕ ಕಾರ್ಯತಂತ್ರ, ನಿರ್ವಹಣಾ ಶಿಸ್ತು, ಪರಿಸರ ಕಾಪಾಡುವಲ್ಲಿ ಬದ್ಧತೆ ಮತ್ತು ಜಾಗತಿ ಮಟ್ಟದ ಕಾರ್ಯಾಚರಣಾ ಶ್ರೇಷ್ಠತೆಯ ಫಲವೂ ಆಗಿದೆ. ಅಂದಹಾಗೆ 2024-25ನೇ ವರ್ಷದ ಅವಧಿಯಲ್ಲಿ ವಿಮಾನ ನಿಲ್ದಾಣವು ರೂ. 510 ಕೋಟಿ ನಿವ್ವಳ ಲಾಭವನ್ನು ಗಳಿಸಿದ್ದು, ಇದು 2008ರಲ್ಲಿ ತನ್ನ ಕಾರ್ಯಚಟುವಟಿಕೆ ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಲಾಭದ ಅಧಿಕತೆಯಾಗಿದೆ.

ಈ ಲಾಭದ ಹಿಂದೆ ಪ್ರಮುಖ ಕಾರಣವೆಂದರೆ ಸಂಸ್ಥೆಯ ಒಟ್ಟು ಆದಾಯದಲ್ಲಿ 43%ರಷ್ಟು ಗಂಭೀರ ಹೆಚ್ಚಳವಾಗಿದೆ. 2024-25ರಲ್ಲಿ ಬಿಐಎಎಲ್ ಸಂಸ್ಥೆಯ ಒಟ್ಟು ಆದಾಯವು ರೂ. 3,732 ಕೋಟಿ ಎಳೆಯಿತು. ಈ ಆದಾಯದ ಹೆಚ್ಚಳಕ್ಕೆ ಸಹಕಾರ ನೀಡಿದ ಅಂಶಗಳು ಎಂದರೆ ಟರ್ಮಿನಲ್-2 ರ ವ್ಯಾಪಕ ಕಾರ್ಯಾಚರಣೆಗಳ ಆರಂಭ, ಪ್ರಯಾಣಿಕರ ಸಂಖ್ಯೆಯಲ್ಲಿ ಸಂಭವಿಸಿದ ಗಣನೀಯ ಹೆಚ್ಚಳ ಮತ್ತು ಉನ್ನತ ಮಟ್ಟದ ಸೇವಾ ವ್ಯವಸ್ಥೆ.
ಬಿಐಎಎಲ್ ಮಂಡಳಿಯ ಐತಿಹಾಸಿಕ ಸಭೆ:
ಅಂದಹಾಗೆ ಮೇ 16, 2025 ರಂದು ನಡೆದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ (BIAL) ಮಂಡಳಿಯ ಸಭೆಯಲ್ಲಿ ಈ ಐತಿಹಾಸಿಕ ಲಾಭದ ಬಗ್ಗೆ ಅಧಿಕೃತವಾಗಿ ತಿಳಿಸಲಾಯಿತು. ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ವಿಮಾನ ನಿಲ್ದಾಣದ ಆರ್ಥಿಕ ಮುನ್ನಡೆ, ಪರಿಸರ ಸಾಧನೆ, ತಂತ್ರಜ್ಞಾನಾ ಅನುಷ್ಠಾನ ಮತ್ತು ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲಾಯಿತು. ಬಿಐಎಎಲ್ ನ ಪ್ರಕಟಣೆಯ ಪ್ರಕಾರ, ಈ ಲಾಭವು ಭಾರತೀಯ ವಿಮಾನಯಾನ ವಲಯದಲ್ಲಿಯೇ ನಿದರ್ಶನೀಯ ಬೆಳವಣಿಗೆ ಎನ್ನಬಹುದು.
ಲಾಭದ ಹಿಂದಿನ ಕಾರಣ ಏನು?
ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ:
COVID-19 ನಂತರದ ಚೇತರಿಕೆ ಹಂತದಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಾಣುಗಟ್ಟಿದಷ್ಟು ಏರಿಕೆಯಾಗಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಈಗೀಗ ಫಾರಿನ್ ಟೂರ್ ಸಾಮಾನ್ಯ ಎನ್ನುವಂತಾಗಿದೆ.
ಅಪರೂಪದ ವಾಣಿಜ್ಯ ವೃದ್ಧಿ:
ವಿಮಾನ ನಿಲ್ದಾಣ ವ್ಯಾಪಾರದ ವಿವಿಧ ಭಾಗಗಳು, ಮೌಲ್ಯವರ್ಧಿತ ಸೇವೆಗಳು, ಲಾಂಜ್, ಖಾದ್ಯ ಗೃಹಗಳು ಮತ್ತು ಶಾಪಿಂಗ್ ಸೆಂಟರ್‍ಗಳಿಗೆ ಪ್ರಯಾಣಿಕರು ಹೆಚ್ಚಾಗಿ ಭೇಟಿ ನೀಡಿದ್ದಾರೆ. ಈ ಮೂಲಕ ಆದಾಯ ಹೆಚ್ಚಾಗಿದೆ.
ನಿರಂತರ ತಂತ್ರಜ್ಞಾನ ಹೂಡಿಕೆ:
ಇಮಿಗ್ರೇಶನ್, ಟರ್ಮಿನಲ್ ನಿರ್ವಹಣೆ, ವಾಹನ ಪಾರ್ಕಿಂಗ್ ಮುಂತಾದಲ್ಲಿ ಸ್ಮಾರ್ಟ್ ತಂತ್ರಜ್ಞಾನ ಜಾರಿಗೆ ತಂದ ಪರಿಣಾಮಕಾರಿ ನಿರ್ವಹಣೆಯಿಂದಲೂ ಆದಾಯ ಹರಿದುಬಂದಿದೆ. ಬಿಎಲ್‌ಆರ್‌ಗೆ ನೇರವಾಗಿ ಸಂಚರಿಸಲು ಹೊಸ ಮೆಟ್ರೋ ಮಾರ್ಗ ಯೋಜನೆಯು ವಿಮಾನ ನಿಲ್ದಾಣದ ಉಪಯೋಗವನ್ನು ವಿಸ್ತರಿಸಿದೆ. ಇದು ಕೂಡ ಒಂದು ರೀತಿಯ ಆದಾಯದ ಭಾಗವಾಗಿದೆ.
ಪರಿಸರದ ಕಾಳಜಿ ಹೊತ್ತ ಏರ್‍ಪೋರ್ಟ್:
ಇನ್ನು ಬೆಂಗಳೂರು ಅಂತಾರಾಷ್ಟ್ರೀಯ ಏರ್‍ಪೋರ್ಟ್ ಮೊದಲ ಲೆವೆಲ್ 5 ಕಾರ್ಬನ್ ಮಾನ್ಯತೆ ಪಡೆದ ವಿಮಾನ ನಿಲ್ದಾಣವಾಗಿದೆ. ಅಲ್ಲದೇ ಇದು ವಿಮಾನ ನಿಲ್ದಾಣದ ಬದ್ಧತೆಗೆ ಅತ್ಯಂತ ಶ್ಲಾಘನೀಯವಾಗಿದೆ. ಈ ಮಾನ್ಯತೆ 2024ರ ಮೇ 5ರಿಂದ ಜಾರಿಗೆ ಬರುವ ಮೂಲಕ ವಿಮಾನ ನಿಲ್ದಾಣವು ತನ್ನ ಸ್ಕೋಪ್ 1 ಮತ್ತು ಸ್ಕೋಪ್ 2 ಹಸಿರು ಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಶೇಕಡಾ 95.6ರಷ್ಟು ಕಡಿತ ಸಾಧಿಸಿದೆ.
ಇನ್ನು ಇದು ಕೇವಲ ಡಾಕ್ಯುಮೆಂಟೇಷನ್ ಸಾಧನೆ ಎಂದು ಪರಿಗಣಿಸಲಾಗುವುದಷ್ಟೇ ಅಲ್ಲ. ಬದಲಿಗೆ 2030ರ ಹೊತ್ತಿಗೆ ನೆಟ್ ಝೀರೋ ಕಾರ್ಬನ್ ಟಾರ್ಗೆಟ್ ಅನ್ನು ಸಾಧಿಸಬೇಕೆಂಬ ಗುರಿಯನ್ನು ಬಿಎಲ್‌ಆರ್ ಈಗಾಗಲೇ ಏಳು ವರ್ಷಗಳ ಮುಂಚಿತವಾಗಿ ಮುಟ್ಟಿದೆ.
2025 ರಲ್ಲಿ ವಿಶ್ವ ಮಟ್ಟದ ಬೆಳ್ಳಿ ಪ್ರಶಸ್ತಿ:
ಎಸಿಐ (Airports Council International) ಸಂಸ್ಥೆಯು 2025ರ "ಗ್ರೀನ್ ಏರ್‍ಪೋಟ್ ರೆಕಗ್ನಿಷನ್" ಕಾರ್ಯಕ್ರಮದಲ್ಲಿ 15-38 ಮಿಲಿಯನ್ ಪ್ರಯಾಣಿಕ ಸಾಮರ್ಥ್ಯದ ವಿಭಾಗದಲ್ಲಿ BLR ವಿಮಾನ ನಿಲ್ದಾಣಕ್ಕೆ ಬೆಳ್ಳಿ ಪ್ರಶಸ್ತಿ ನೀಡಿದೆ. ಇದರಿಂದ, ನಾಲ್ಕನೇ ವರ್ಷದೂ ಹಸಿರು ಉದ್ಯಮದ ಮಾದರಿಯಾಗಿ BLR ಗೆ ಗೌರವವಂತಾಯಿತು.
ಆರ್ಥಿಕ ಉತ್ಥಾನದ ಸಂಕೇತ:
ಈ ದಾಖಲೆಯ ಲಾಭವು ವಿಮಾನ ನಿಲ್ದಾಣದ ಮೇಲ್ಮಟ್ಟದ ನಿರ್ವಹಣೆ, ಶ್ರೇಷ್ಠ ವ್ಯವಸ್ಥಾಪನಾ ತಂತ್ರಜ್ಞಾನ ಮತ್ತು ಹೊಣೆಗಾರಿಕೆಪೂರ್ಣ ಹೂಡಿಕೆಗಳ ಪ್ರತಿಫಲವಾಗಿದೆ. ಮುಂದಿನ ಹಂತವಾಗಿ, ಬಿಎಲ್‌ಆರ್ ತನ್ನ ಟರ್ಮಿನಲ್-2 ಅನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖಗೊಳಿಸುತ್ತಿದ್ದು, ಪ್ರವಾಸಿಗರ ಅನುಭವವನ್ನು ಮತ್ತಷ್ಟು ಸುಧಾರಿಸಲು ಮುಂದಾಗಿದೆ. ವಿಮಾನ ನಿಲ್ದಾಣದ ಲಾಭದ ಹಿನ್ನೆಲೆಯು, ಹೂಡಿಕೆದಾರರಿಗೆ ನಂಬಿಕೆ ತುಂಬಿ ಕೊಡುತ್ತದೆ. ಇದು ನಗರದ ಆರ್ಥಿಕತೆಗೆ ಬಲವರ್ಧನೆಯಾಗಿದ್ದು, ಸರ್ಕಾರಕ್ಕೆ ಮತ್ತು ಖಾಸಗಿ ಪಾಲುದಾರರಿಗೆ ಭದ್ರತಾ ಪ್ರತಿಫಲ ನೀಡುವಂತಹ ಬೆಳವಣಿಗೆಗಳಾಗಿವೆ.
ಬಿಎಲ್‌ಆರ್ ವಿಮಾನ ನಿಲ್ದಾಣದ ಇತ್ತೀಚಿನ ದಾಖಲೆ ಲಾಭವು ಒಂದು ಕಾಲಚಿಹ್ನೆಯಂತಿದೆ. ಇದು ಭಾರತದಲ್ಲಿ ವಿಮಾನಯಾನ ಕ್ಷೇತ್ರದ ಪಾರಂಪರಿಕ ಧೋರಣೆಯು ಹೇಗೆ ಬದಲಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಹೂಡಿಕೆದಾರರ ನಂಬಿಕೆ, ಪರಿಸರದತ್ತ ದಿಟ್ಟ ಹೆಜ್ಜೆಗಳು, ಜಾಗತಿಕ ಮಟ್ಟದ ಮಾನ್ಯತೆಗಳು ಮತ್ತು ಆರ್ಥಿಕ ನಿರ್ವಹಣಾ ಶಿಸ್ತಿನ ಪ್ರತೀಕವಾಗಿರುವ ಈ ಬೆಳವಣಿಗೆ, ಮುಂದಿನ ಪೀಳಿಗೆಗೆ ಮಾದರಿಯಾಗಿದೆ.
ಬೆಂಗಳೂರು ನಗರದ ಹೆಮ್ಮೆ ಎನಿಸಬಹುದಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಮಾರ್ಟ್ ನಗರ ಮಾದರಿಯಲ್ಲಿ ಸ್ಮಾರ್ಟ್ ವಿಮಾನ ನಿಲ್ದಾಣವನ್ನಾಗಿ ರೂಪುಗೊಳ್ಳುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ.


Click it and Unblock the Notifications