ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೀಗ ಪ್ರಪಂಚದ ಗಮನ ಸೆಳೆಯುತ್ತಿದೆ. ಕಾರಣ ಏನು ಗೊತ್ತಾ? ಇದು ಕೇವಲ ಒಂದು ವಿಮಾನ ನಿಲ್ದಾಣವಲ್ಲ. ಒಂದು ಸುಂದರವಾದ ಉದ್ಯಾನವೋ ಎಂಬ ಫೀಲ್ ಜನರಿಗೆ ಕೊಡುತ್ತಿದೆ. ನಮ್ಮವರಿಗಷ್ಟೇ ಅಲ್ಲ..ಹೊರ ದೇಶದವರಿಗೂ ಈ ಏರ್ಪೋರ್ಟ್ ಅಷ್ಟೊಂದು ಇಷ್ಟವಾಗಿದೆ. ಜಪಾನ್‌ನ ವ್ಯಕ್ತಿ ಹಂಚಿಕೊಂಡ ಪೋಸ್ಟ್ ಎಷ್ಟು ಚೆನ್ನಾಗಿತ್ತು ಗೊತ್ತಾ?

ಇತ್ತೀಚೆಗೆ ಜಪಾನ್‌ನ ಪ್ರಯಾಣಿಕ ಮತ್ತು ಕಂಟೆಂಟ್ ಕ್ರಿಯೇಟರ್ ಕೈಟೊ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ. ಅವರು ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಯನ್ನು ನೋಡಿ ಮೌನವಿಲ್ಲದ ಆಶ್ಚರ್ಯದಲ್ಲೇ ಮುಳುಗಿದರು. ಈ ಟರ್ಮಿನಲ್ ನೋಡಿದಂತೆಯೇ "ಇದು ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದು!" ಎಂದು ಅವರು ಉಲ್ಲಾಸದಿಂದ ಘೋಷಿಸಿದರು.
ಹಸಿರಿನ ಮಧ್ಯೆ ಗಗನವನ್ನು ತಲುಪುವ ಟರ್ಮಿನಲ್:
ಕೈಟೊ ಅವರು ವಿಮಾನ ನಿಲ್ದಾಣದ ಒಳಗಿನ ದೃಶ್ಯಗಳನ್ನು ತೋರಿಸುತ್ತಾ, "ಈ ವಾಸ್ತುಶಿಲ್ಪ ನಾನು ಬದುಕಿನಲ್ಲಿ ಎಂದೂ ಕಂಡಿಲ್ಲ ಎಂದು ಹೇಳಿದರು. ರನ್‌ವೇ, ಡ್ಯೂಟಿ ಫ್ರೀ ಅಂಗಡಿಗಳಿಗಿಂತಲೂ, ಅವರನ್ನು ಹೆಚ್ಚು ಆಕರ್ಷಿಸಿದದ್ದು ಟರ್ಮಿನಲ್‌ನ ಹಸಿರಾಗಿರುವ ವಿನ್ಯಾಸ. "ಛಾವಣಿಯಿಂದ ಮರಗಳು ನೇತಾಡುತ್ತಿವೆ, ಇದು ಹೋಟೆಲ್‌ನಂತಹ ಅನುಭವ ಕೊಡುತ್ತದೆ! ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಸಸ್ಯಗಳಲ್ಲಿ ಸುತ್ತುವರೆದ ದೊಡ್ಡ ಘಂಟೆಯಾಕಾರದ ವಿನ್ಯಾಸಗಳನ್ನು, ಶುದ್ಧಗಾಳಿ ನೀಡುವ ವಾತಾವರಣವನ್ನು, ಹಾಗು ಐಷಾರಾಮಿ ಗಂಧವನ್ನು ನೋಡಿ ಖುಷಿಯಾದರು. ಅವರು ಖುಷಿಯಾಗಿ "ಇದು ಈಸೋಪ್ ಅಂಗಡಿಗಳಂತೆ ಘಮಗಮಿಸುತ್ತದೆ! ಎಂದೂ ಹೇಳಿದರು.
ಹೆಚ್ಚು ಜನರ ಮನಸೆಳೆದಿರುವ ವಿಡಿಯೋ:
ಕೈಟೊ ಅವರ ವಿಡಿಯೋ ಇದೀಗ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಬಹುತೆಕ ಮೆಚ್ಚುಗೆ ಪಡೆದಿದೆ. ಹಲವರು ಕಾಮೆಂಟ್ ಮಾಡಿದ್ದು, "ದಕ್ಷಿಣ ಭಾರತದ ಹೆಮ್ಮೆ!", "ಇದು ನೋಡಿದ್ರೆ ಭಾರತವೆ ಸೌಂದರ್ಯದಲ್ಲಿ ಹಿಂದಿಲ್ಲ ಅಂಥ ಭಾಸವಾಗುತ್ತದೆ!" ಎಂದು. ಇನ್ನೊಬ್ಬರು, "ಇದು ಉದ್ಯಾನವಲ್ಲ, ನಿಜಕ್ಕೂ ಹಾರಬಹುದಾದ ಉದ್ಯಾನ!" ಎಂದು ಬರೆದು ಮೆಚ್ಚುಗೆ ಸೂಚಿಸಿದ್ದಾರೆ.
ವಿಶೇಷ ವಿನ್ಯಾಸದ ಹಿಂದೆ ಇರುವ ದೃಷ್ಟಿಕೋನ:
ಈ ವಿನ್ಯಾಸವನ್ನು "ಟರ್ಮಿನಲ್ ಇನ್ ಎ ಗಾರ್ಡನ್" ಎಂಬ ಹೆಸರಿನಲ್ಲಿ 2022ರಲ್ಲಿ ಅನಾವರಣಗೊಳಿಸಲಾಯಿತು. ಇದರಲ್ಲಿ ಸ್ಥಳೀಯ ಕಲಾ ಕೃತಿಗಳು, ಹಸಿರಾದ ಆವರಣ, ಬಿಸಿಲನ್ನು ಒಳಗೆ ಬಿಡುವ ಹೊಳೆಯುವ ಮೇಲ್ಚಾವಣಿ, ಹಸಿರಾಗಿ ಉಲ್ಕೊಂಡಿರುವ ಜಲಪಾತ ಎಲ್ಲವೂ ಒಂದೇ ಕಡೆ. ಇದರ ವಿನ್ಯಾಸ ಶಾಶ್ವತತೆಗೆ ಪ್ರಾಮುಖ್ಯತೆ ನೀಡುತ್ತಿದ್ದು, ಬೆಂಗಳೂರಿನ "ಉದ್ಯಾನ ನಗರಿ" ಎಂಬ ಹೆಸರಿಗೆ ನ್ಯಾಯ ಒದಗಿಸುತ್ತದೆ.
ಸಣ್ಣ ಭೇಟಿ, ದೊಡ್ಡ ಪ್ರಭಾವ:
ಕೈಟೊ ಅವರಿಗೆ ಟರ್ಮಿನಲ್ ಸಂಪೂರ್ಣವಾಗಿ ಅನ್ವೇಷಿಸಲು ಹೆಚ್ಚು ಸಮಯ ಸಿಕ್ಕಿಲ್ಲ. "ಬೋರ್ಡಿಂಗ್ ಈಗಾಗಲೇ ಶುರುವಾಗಿದೆ, ಆದ್ದರಿಂದ ನಾನು ಹೊರಡಬೇಕಾಯಿತು," ಎಂದರು ಅವರು ತಮ್ಮ ವಿಡಿಯೋ ಕೊನೆಯಲ್ಲಿ. ಆದರೆ ಈ ಕಿರು ಭೇಟಿಯಲ್ಲಿಯೇ ಅವರು ಟರ್ಮಿನಲ್‌ನ ವೈಭವವನ್ನು ಅನುಭವಿಸಿ, ಇಡೀ ವಿಶ್ವದ ಗಮನ ಸೆಳೆಯುವಂತ ಮಾಡಿದರು.
ಬೆಂಗಳೂರಿನ ಕೆಐಎ ವಿಮಾನ ನಿಲ್ದಾಣವು ತಂತ್ರಜ್ಞಾನ, ಶಿಲ್ಪ, ಪರಿಸರ ಮತ್ತು ನವೀಕರಣವನ್ನು ಒಂದೇ ಸೂರಿನಡಿ ತರುವ ಒಂದು ಅದ್ಭುತ ನಿದರ್ಶನವಾಗಿದೆ. ಇದು ವಿಮಾನ ನಿಲ್ದಾಣವಲ್ಲ - ಇಲ್ಲಿಯ ವಿನ್ಯಾಸ, ವಾತಾವರಣ ಮತ್ತು ಹಸಿರು ಪ್ರಪಂಚವು ನಿಮಗೆ ಪಟಾಪಟ ಹಾರುವ 'ಉದ್ಯಾನ ಅನುಭವ' ನೀಡುತ್ತದೆ!


Click it and Unblock the Notifications