ಮೊದಲೆಲ್ಲ ನಾಯಿ ಒಂದು ಮೂಕಪ್ರಾಣಿ ಎಂದು ಭಾವಿಸ್ತಿದ್ದ ಜನ, ಈಗ ನಾಯಿಯೂ ಮನೆಯ ಸದಸ್ಯನೆಂದು ಪರಿಗಣಿಸೋಕೆ ಶುರು ಮಾಡಿದ್ದಾರೆ. ಎಲ್ಲರಂತೆ ಮನೆಯಲ್ಲಿ ನಾಯಿಗೂ ಒಂದು ಮಹತ್ವ ಇರುತ್ತದೆ. ಅದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಕೊಡ್ತಾರೆ..ಹಾಗೇನೆ ಈ ನಾಯಿಗಳನ್ನು ನೋಡಿಕೊಳ್ಳೋಕೆ ಎಂದೇ ಜನ ಪ್ರತಿ ತಿಂಗಳು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ದುಬಾರಿ ಜಾತಿಯ ನಾಯಿಗಳನ್ನು ಕೊಂಡು ಮನೆಯಲ್ಲಿ ನೋಡಿಕೊಳ್ತಾರೆ. ಹಾಗೇನೆ ಇಲ್ಲೊಬ್ಬ ವ್ಯಕ್ತಿ ನಾಯಿಗಾಗಿ ಮಾಡಿರುವ ಖರ್ಚು ಎಷ್ಟೆಂದು ತಿಳಿದರೆ, ಹುಬ್ಬೇರುತ್ತದೆ. ಬೆಂಗಳೂರು ಮೂಲದ ಸತೀಶ್ ಎಂಬ ಈ ವ್ಯಕ್ತಿ ಓರ್ವ ನಾಯಿ ತಳಿಗಾರನಾಗಿದ್ದು, Wolf Dog ಎಂಬ ತಳಿಯ ನಾಯಿಯನ್ನು 50 ಕೋಟಿ ರೂ. ನೀಡಿ ಖರೀದಿಸಿದ್ದಾರೆ.

ಈ 50 ಕೋಟಿ ರೂಪಾಯಿಯ ನಾಯಿಯು, ತೋಳ ಮತ್ತು ಕಕೇಶಿಯನ್ ಶೆಫರ್ಡ್ ಎಂಬ ನಾಯಿಯ ಮಿಶ್ರ ತಳಿಯಾಗಿದೆ. ಈ ರೀತಿಯ ನಾಯಿ ಜಗತ್ತಿನಲ್ಲೇ ಮೊದಲ ಬಾರಿಗೆ ಮಾರಾಟ ಆಗ್ತಿದೆ ಎನ್ನಲಾಗ್ತಿದೆ. ಈ ನಾಯಿ ಕ್ಯಾಡಬೊಮ್ಸ್ ಒಕಾಮಿ ಎಂಬ ಹೆಸರನ್ನು ಹೊಂದಿದ್ದು, ಅಮೆರಿಕದಲ್ಲಿ ಜನಿಸಿದೆ.
ಇನ್ನು ಈ ನಾಯಿ ಕೇವಲ ಎಂಟು ತಿಂಗಳ ಹೊತ್ತಿಗೇ, 75 ಕೆಜಿಗಿಂತ ಹೆಚ್ಚು ತೂಕದ ನಾಯಿಯಾಗಿದೆ. ಇದು ಪ್ರತಿದಿನ ಏನಂದರೂ 3 ಕೆಜಿ ಹಸಿ ಮಾಂಸ ತಿನ್ನುತ್ತದೆ. ತೋಳದಂತೆ ಕಾಣುವ ಈ ನಾಯಿ ಬಹಳ ಅಪರೂಪದ ನಾಯಿ ಎನ್ನಲಾಗಿದೆ. ಈ ತಳಿಯ ನಾಯಿಯನ್ನ ಇದುವರೆಗೆ ಎಲ್ಲೂ ಮಾರಾಟ ಮಾಡಲಾಗಿರಲಿಲ್ಲ.
ನಾಯಿ ತಳಿಗಾರನಾದ ಸತೀಶ್ ಅವರು, ಶ್ವಾನ ತಳಿಗಾರರ ಸಂಘದ ಅಧ್ಯಕ್ಷರು ಕೂಡ ಹೌದು. ಅವರು ವಿಶೇಷವಾಗಿರುವ ನಾಯಿಗಳನ್ನು ಸಾಕಿ, ಅವುಗಳನ್ನು ಜನರ ಮುಂದೆ ಪ್ರದರ್ಶನ ಇಡುವುದರ ಮೂಲಕ ಆದಾಯ ಗಳಿಸುತ್ತಾರೆ. ಅಲ್ಲದೇ ಅವರಿಗೆ ನಾಯಿಗಳು ಎಂದರೆ ತುಂಬಾ ಇಷ್ಟ. ಅದರಲ್ಲೂ ಅಪರೂಪದ ತಳಿಗಳನ್ನು ಭಾರತಕ್ಕೆ ಪರಿಚಯಿಸಲು ಮತ್ತಷ್ಟು ಹುಚ್ಚು ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಜನಗಳು ಕೂಡ ನಾಯಿಗಳನ್ನು ನೋಡಲು ಸಾಕಷ್ಟು ಕುತೂಹಲಭರಿತರಾಗಿರುತ್ತಾರೆ. ಇದರಿಂದ ನನಗೂ ಹಣ ಬರುತ್ತದೆ ಎಂದಿದ್ದಾರೆ. ಇನ್ನು ನಾಯಿ ನೋಡಲು ಬರುವ ಜನರು ನಾಯಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕುತೂಹಲ ಹೊಂದಿರುತ್ತಾರೆ. ಹೀಗಾಗಿ ನಾನು ಚಿತ್ರಮಂದಿರಕ್ಕೆ ಹೋದರೆ, ನಟನಿಗಿಂತ ಹೆಚ್ಚು ಜನ ನನ್ನ ನಾಯಿಯನ್ನು ನೋಡುವುದಕ್ಕಾಗಿ ಬರುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹಾಗೂ ಸತೀಶ್ ಅವರ ಎಲ್ಲಾ ನಾಯಿಗಳಿಗೆ ಸ್ಪೆಷಲ್ ಕೇರ್ ಕೂಡ ಕೊಡಲಾಗುತ್ತದೆ. ಅವರ ಬಳಿ 6 ಜನರು ನಾಯಿಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ. ಹಾಗೆಯೇ ನಗರದಲ್ಲಿ ತಂಪಾದ ಹವಾಮಾನವಿರುವುದರಿಂದ ನಾಯಿಗಳನ್ನು ಎಸಿಯಲ್ಲಿ ಇಡಬೇಕಾಗಿಲ್ಲ. ಆದರೆ ಅವುಗಳಿಗೆ ಉತ್ತಮ ಆರೈಕೆಯ ಅಗತ್ಯವಿರುತ್ತದೆ. ಹೀಗಾಗಿ ಅವುಗಳನ್ನು ಆರೈಕೆಯಿಂದ ನೋಡಿಕೊಳ್ಳಲಾಗುತ್ತದೆ ಎಂದಿದ್ದಾರೆ. ಇನ್ನು ಎಲ್ಲೆಡೆ ಈ ಅಪರೂಪದ ತೋಳನಾಯಿ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಇಷ್ಟು ದುಬಾರಿ ನಾಯಿ ಖರೀದಿಸಿದ ಸತೀಶ್ ಅವರ ನಿರ್ಧಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಲ್‌ಚಲ್ ಹಬ್ಬಿಸಿದೆ. ಅಲ್ಲದೇ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಅಂದಹಾಗೆ ಈ ನಾಯಿ ಕುರಿತು ಜನಸಾಮಾನ್ಯರ ನಡುವೆ ಮತ್ತಷ್ಟು ಕುತೂಹಲ ಕೂಡ ಕೆರಳಿದೆ. ಅಂದರೆ ಈ ತೋಳನಾಯಿ ಅತ್ಯಂತ ಬಲಿಷ್ಠ, ಬುದ್ಧಿವಂತ ಮತ್ತು ಬದ್ರತಾ ಉದ್ದೇಶಕ್ಕೆ ಬಳಸಬಹುದಾದ ತಳಿಯಾಗಿದೆ. ಹಾಗೂ ಅತ್ಯಧಿಕ ಮೊತ್ತವನ್ನು ನೀಡಿ ಈ ನಾಯಿಯನ್ನು ಖರೀದಿ ಮಾಡಿರುವುದು, ನಿಜಕ್ಕೂ ಹುಬ್ಬೇರಿಸುವ ವಿಷಯವಾಗಿದೆ. ಹೀಗಾಗಿ ಜನರು ಈ ನಾಯಿಯಲ್ಲಿ ಅಂಥದ್ದೇನಿದೆ ಎಂಬಂತೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications