ಯಾವುದೇ ಹೋಟೆಲ್, ರೆಸ್ಟೋರೆಂಟ್‌ಗಳಿಗೆ (Hotel Rules ಹೋದಾಗ ಕಾಫಿ, ತಿಂಡಿ ತಿಂದುಕೊಂಡು, ಹರಟೆ ಹೊಡೆಯುತ್ತಾ ಕಾಳ ಕಳೆಯುವುದು ಸಹಜ. ಆದ್ರೆ ಇದೀಗ ಬೆಂಗಳೂರಿನ ಪ್ರಸಿದ್ಧ ಕೆಫೆಯೊಂದು, ತನ್ನ ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ತನ್ನ ಕೆಫೆ ಮುಂದೆ ಅಂಟಿಸಿರುವ ಬೋರ್ಡ್ ನೋಡಿ ಎಲ್ಲರೂ ಅಚ್ಚರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಭಾರೀ ಪ್ರಸಿದ್ಧಿ ಪಡೆದಿದ್ದ ಕೆಫೆಯೊಂದು ತನ್ನ ಆವರಣದಲ್ಲಿ "No Meeting Allowed" ಎಂದು ಬೋರ್ಡ್ ಹಾಕಿ, ಗ್ರಾಹಕರನ್ನು ನಿಬ್ಬೆರಗಾಗಿಸಿದೆ.

ಹೌದು, ಬೆಂಗಳೂರಿನ ಒಂದು ಕೆಫೆಯೊಂದು, ತನ್ನ ಟೇಬಲ್‌ನಲ್ಲಿ ಕುಳಿತು ಆಫೀಸ್ ಮೀಟಿಂಗ್, ಚರ್ಚೆಗಳನ್ನು ನಡೆಸುವ ಗ್ರಾಹಕರಿಗೆ ಹೊಸ ನಿಯಮ ಜಾರಿ ಮಾಡಿದೆ. ನಿಯಮದ ಕುರಿತು ಬೋರ್ಡ್ ಅಂಟಿಸಿದ್ದು ಅದರಲ್ಲಿ, ಮೀಟಿಂಗ್‌ಗೆ ಅವಕಾಶವಿಲ್ಲ. ಒಂದು ಗಂಟೆಗೂ ಹೆಚ್ಚು ಮೀಟಿಂಗ್ ನಡೆಸಿದರೆ ಹೆಚ್ಚುವರಿ ಗಂಟೆಗೆ ₹1,000 ಶುಲ್ಕ ವಿಧಿಸಲಾಗುವುದು ಎಂದು ಬೋರ್ಡ್‌ನಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ. ಈ ನಿರ್ಧಾರ ಈಗ ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬೋರ್ಡ್‌ನಲ್ಲಿ ಏನಿದೆ?
"ಮೀಟಿಂಗ್ ನಡೆಸಲು ಅವಕಾಶವಿಲ್ಲ. ಒಂದು ಗಂಟೆಗಿಂತ ಹೆಚ್ಚು ಇಲ್ಲಿ ಕೂತರೆ, ಪ್ರತಿ ಗಂಟೆಗೆ ₹1,000 ಶುಲ್ಕ ವಿಧಿಸಲಾಗುತ್ತದೆ" ಎಂಬ ಬೋರ್ಡ್ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಈ ಫೋಟೋವನ್ನು ಶೋಭಿತ್ ಬಕ್ಲಿವಾಲ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. "ಬೆಂಗಳೂರಿನ ಉಪಾಹಾರ ಗೃಹದಲ್ಲಿ ಇದನ್ನು ನೋಡಿದೆ" ಎಂಬ ಕ್ಯಾಪ್ಷನ್‌ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ಭಾರೀ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಈ ಪೋಸ್ಟ್ ಕೆಲವೇ ದಿನಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೂ ಕಾರಣವಾಗಿದೆ. ಅನೇಕರು ರೆಸ್ಟೋರೆಂಟ್‌ನ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಒಂದು ಕಾಫಿ ಆರ್ಡರ್ ಮಾಡಿ, ಗಂಟೆಗಟ್ಟಲೆ ಟೇಬಲ್‌ನಲ್ಲಿ ಕುಳಿತರೆ, ನಷ್ಟವಾಗೋದು ಹೋಟೆಲ್‌ನವರಿಗೆ ಎಂದು ಕೆಲವರು ಬೆಂಬಲ ನೀಡಿದ್ದಾರೆ.
ಒಬ್ಬ ಬಳಕೆದಾರರು, "ಅನೇಕ ರೆಸ್ಟೋರೆಂಟ್‌ಗಳಲ್ಲಿ ಜನರು ಗಂಟೆಗಟ್ಟಲೆ ಕುಳಿತು, ಏನನ್ನೂ ಆರ್ಡರ್ ಮಾಡುವುದಿಲ್ಲ" ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ. "ಪಬ್‌ಗಳು ಮತ್ತು ಬಾರ್‌ಗಳಲ್ಲಿ ಇಂತಹ ನೋಟಿಸ್‌ಗಳು ಇರಲ್ಲ. ಇದರಲ್ಲಲೂ ಒಂದು ಪಾಠವಿದೆ" ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹೋಟೆಲ್ ನಿರ್ಧಾರ ಸರಿಯೇ? ತಪ್ಪೇ?
ಸಾಮಾನ್ಯವಾಗಿ ಕೆಲವೊಂದು ಹೋಟೆಲ್‌ಗಳಲ್ಲಿ ಭಾರೀ ವ್ಯಾಪಾರ ಇರುತ್ತದೆ. ಆದ್ರೆ ಕೆಲವೊಮ್ಮೆ ಹೀಗೆ ಸುಖಾಸುಮ್ಮನೆ ಕುಳಿತುಕೊಳ್ಳುವುದರಿದ ಕೆಫೆಗಳ ವ್ಯಾಪಾರಕ್ಕೂ ಪೆಟ್ಟು ಬೀಳುತ್ತದೆ. ಬಂದ ಗ್ರಾಹಕರು ಟೇಬಲ್ ಇಲ್ಲ ಎಂದು ಹೇಳಿ ಅದೆಷ್ಟೋ ಬಾರಿ ಹಿಂದೆ ಹೋಗುತ್ತಾರೆ. ಅದರಲ್ಲೂ ಕೆಲವರು ಒಂದು ಲೋಟ ಕಾಫಿ ತೆಗೆದುಕೊಂಡು, ಗಂಟೆಗಟ್ಟಲೆ ಹೋಟೆಲುಗಳಲ್ಲಿ ಕಾಲ ಕಳೆಯುತ್ತಾರೆ. ಇದೀಗ ಅಂತಹವರಿಗಾಗಿ ಬೆಂಗಳೂರಿನ ಈ ಕೆಫೆ ಖಡಕ್ ಸೂಚನೆ ಹೊರಡಿಸಿದೆ.
ಅನೇಕರು ಈ ನಿಯಮದ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲಿನಿಂದಲೂ ಕೆಫೆಗಳು ಎಂದರೆ ಮೀಟಿಂಗ್, ದೀರ್ಘಾವಧಿ ಕೆಲಸಕ್ಕೆ ಅನುಕೂಲವಾದ ಸ್ಥಳಗಳಂತೆ ಪರಿಗಣಿಸಲ್ಪಿಟ್ಟಿದೆ. ಆದ್ರೆ ಈಗ ದಿಢೀರ್ ಈ ರೀತಿಯ ದಂಡದ ನಿಯಮ ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.


Click it and Unblock the Notifications