ಬೆಂಗಳೂರು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿರುವ ಮಹತ್ವದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನ 71 ಕಿಲೋ ಮೀಟರ್ ವಿಭಾಗವು ಒಂದು ತಿಂಗಳಿನಲ್ಲಿ ಪೂರ್ಣವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೇಳಿದೆ. ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳ ನಡುವಿನ ಸಂಪರ್ಕ ಸುಧಾರಣೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. 2025ರಲ್ಲಿ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ಸಿದ್ದವಾಗಲಿದೆ.
ಮನಿ ಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಹೊಸಕೋಟೆಯಿಂದ ಬೇತಮಂಗಲದವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು 400 ಮೀಟರ್ ಬಾಕಿ ಕಾಮಗಾರಿ ನಡೆಯುತ್ತಿದೆ. ಜಿನ್ನಾಗರ ಬಳಿ ಇದ್ದ ದೇವಸ್ಥಾನ ಸ್ಥಳಾಂತರ ಮಾಡುವಲ್ಲಿ ತಡವಾಗಿದ್ದರಿಂದ 400 ಮೀಟರ್ ಕಾಮಗಾರಿ ಉಳಿದಿದ್ದು, ಇನ್ನೊಂದು ತಿಂಗಳಿನಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ (ಕರ್ನಾಟಕ) ವಿಲಾಸ್ ಪಿ. ಬ್ರಹ್ಮಂಕರ್ ತಿಳಿಸಿದ್ದಾರೆ.

ಹೊಸಕೋಟೆಯಿಂದ ಬೇತಮಂಗಲದವರೆಗೆ 71 ಕಿಲೋ ಮೀಟರ್ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಇನ್ನೊಂದು ತಿಂಗಳಿನಲ್ಲಿ ಮುಗಿಯಲಿದ್ದು, ವಾಹನ ಸಂಚಾರಕ್ಕೆ ತೆರೆಯುವ ಸಾಧ್ಯತೆ ಇದೆ. ಆದರೆ ಈ ಮಾರ್ಗದಲ್ಲಿ ಇನ್ನೂ ಟೋಲ್ ದರ ವಸೂಲಾತಿ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ವಿಲಾಸ್ ಪಿ. ಬ್ರಹ್ಮಂಕರ್ ಹೇಳಿದ್ದಾರೆ.
ಬೆಂಗಳೂರಿನಿಂದ ಮಾಲೂರು, ಬಂಗಾರಪೇಟೆಗೆ ತೆರಳುವ ವಾಹನ ಸವಾರರಿಗೆ ಈ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಸಿದ್ಧವಾದ ಬಳಿಕ ಸಮಯ ಉಳಿತಾಯವಾಗಲಿದೆ. ಸದ್ಯ ಬೆಂಗಳೂರು-ಕೆಜಿಎಫ್ ನಡುವೆ ಸಂಚಾರಕ್ಕೆ 1.30 ಗಂಟೆ ಸಮಯ ತೆಗೆದುಕೊಳ್ಳುತ್ತಿದ್ದು, ಎಕ್ಸ್‌ಪ್ರೆಸ್‌ವೇ ಕಾಮಗಾರಿ ಮುಗಿದ ಬಳಿಕ 45 ನಿಮಿಷಗಳಲ್ಲಿ ತಲುಪಬಹುದಾಗಿದೆ.
ಮಹತ್ವದ ಯೋಜನೆ
ಇದು ದಕ್ಷಿಣ ಭಾರತದ ಮೊದಲ ಗ್ರೀನ್‌ಫೀಲ್ಡ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ. ಬೆಂಗಳೂರಿನ ಹೊಸಕೋಟೆಯಿಂದ ಆರಂಭವಾಗುವ ಎಕ್ಸ್‌ಪ್ರೆಸ್‌ವೇ ಚೆನ್ನೈನ ಪೆರಂಬದೂರ್ ನಲ್ಲಿ ಮುಕ್ತಾಯವಾಗಲಿದೆ. ಭವಿಷ್ಯದಲ್ಲಿ ಎಂಟು ಲೇನ್‌ಗೆ ವಿಸ್ತರಣೆಯಾಗಲಿದ್ದು, ಸದ್ಯ ನಾಲ್ಕು ಪಥದ ಹೆದ್ದಾರಿ ನಿರ್ಮಾಣವಾಗುತ್ತಿದೆ. ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣವಾದ ಬಳಿಕ ಬೆಂಗಳೂರು ಚೆನ್ನೈ ನಡುವಿನ ಪ್ರಯಾಣದ ಅವಧಿ 4 ಗಂಟೆಗಳಿಗೆ ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಎಕ್ಸ್‌ಪ್ರೆಸ್‌ವೇ ಹೊಸಕೋಟೆ, ಮಾಲೂರು ಮತ್ತು ಕೆಜಿಎಫ್‌ನಲ್ಲಿ ಇಂಟರ್‌ಚೇಂಜ್‌ಗಳನ್ನು ಒಳಗೊಂಡಿದ್ದು, ಗರಿಷ್ಠ ವೇಗದ ಮಿತಿಯನ್ನು 120 ಕಿ.ಮೀ. ಗೆ ನಿಗದಿ ಮಾಡಲಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಹೆದ್ದಾರಿ ಹಾದುಹೋಗಲಿದೆ.
2025ಕ್ಕೆ ಕಾಮಗಾರಿ ಪೂರ್ಣ
2022ರಲ್ಲಿ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಅಕ್ಟೋಬರ್ 2024ರ ವೇಳೆಗೆ ಮುಗಿಸುವ ಗುರಿ ಹೊಂದಲಾಗಿತ್ತು. ಬಳಿಕ ಜೂನ್ 2025 ಕ್ಕೆ ವಿಸ್ತರಿಸಲಾಯಿತು, ಈಗ ಡಿಸೆಂಬರ್ 2025ರೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು ಚೆನ್ನೈ ಸಂಪರ್ಕಿಸಲು ಸದ್ಯ ಮೂರು ಪ್ರಾಥಮಿಕ ಮಾರ್ಗಗಳಿವೆ. ಹೊಸೂರು-ಕೃಷ್ಣಗಿರಿ ಮಾರ್ಗವಾಗಿ 380 ಕಿಲೋ ಮೀಟರ್ ಮಾರ್ಗ, ಓಲ್ಡ್ ಮದ್ರಾಸ್ ರಸ್ತೆ (340 ಕಿಲೋ ಮೀಟರ್) ಮತ್ತು ಕೋಲಾರ, ಕೆಜಿಎಫ್ ಮತ್ತು ವೆಲ್ಲೂರು ಮಾರ್ಗದ ರಸ್ತೆ. ಈಗ ನಿರ್ಮಾಣವಾಗುತ್ತಿರುವ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಟ್ರಾಫಿಕ್ ದಟ್ಟಣೆ ಕೂಡ ಕಡಿಮೆಯಾಗಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications