ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದ್ರು ಕೂಡ ಸೈಬರ್ ವಂಚಕರಿಗೆ ಬಲಿಯಾಗುವವರ ಸಂಖ್ಯೆ ಮಾತ್ರ ಕಡಿಮೆಯಾಗ್ತಿಲ್ಲ. ನಗರದಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೈಬರ್ ಕ್ರೈಮ್ ಗಮನಾರ್ಹ ಸಮಸ್ಯೆಯಾಗಿದೆ. ಇ-ಕಾಮರ್ಸ್ ಮತ್ತು ಆನ್‌ಲೈನ್ ಹಣಕಾಸು ವಹಿವಾಟುಗಳ ಹೆಚ್ಚಳದೊಂದಿಗೆ, ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳನ್ನು ಸೇರಿಸಲು ಸೈಬರ್ ಕ್ರೈಮ್ ವಿಸ್ತರಿಸಿದೆ.
ಈ ಹಿಂದೆ ಬರೀ ಸಂದೇಶಗಳನ್ನ ಕಳಿಸುವ ಮೂಲಕ ಹ್ಯಾಕರ್ಸ್‌ಗಳು ಹಣವನ್ನ ದೋಚುತ್ತಿದ್ದರು. ಆದ್ರೆ ಈಗ ವಂಚಕರು ವಿಡಿಯೋ ಕಾಲ್ ಮಾಡುವ ಮೂಲಕ ಜನರ ಹಣವನ್ನ ಲೂಟಿ ಮಾಡುತ್ತಿದ್ದಾರೆ. ಏಕೆಂದರೆ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಅಂತರ್ಜಾಲದ ಮೇಲೆ ಹೆಚ್ಚುತ್ತಿರುವ ಅವಲಂಬನೆಯು ಅಪರಾಧ ಚಟುವಟಿಕೆಗಳಿಗೆ ಹೊಸ ಅವಕಾಶಗಳನ್ನು ಒದಗಿಸಿದೆ.

ಈ ಹಿಂದೆ ಸಾಲು ಸಾಲು ಸೈಬರ್ ಪ್ರಕರಣಗಳ ನಂತರ ಬೆಂಗಳೂರಿನ ಎಂಜಿನಿಯರ್ ಒಬ್ಬರು ಮತ್ತೆ ಈ ವಂಚನೆಗೆ ಬಲಿಯಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳ ಸಮೀಪದ ಜಿಕೆವಿಕೆ ಲೇಔಟ್‌ನ 39 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸೈಬರ್ ವಂಚನೆಗೆ ಬಲಿಯಾಗಿ 11.8 ಕೋಟಿ ರೂ. ಕಳೆದುಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ , ನವೆಂಬರ್ 25 ಮತ್ತು ಡಿಸೆಂಬರ್ 12 ರ ನಡುವೆ ಈ ಘಟನೆ ನಡೆದಿದ್ದು, ಈಶಾನ್ಯ ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು, ನಾರ್ಕೋಟಿಕ್ಸ್ (ಸಿಇಎನ್) ಪೊಲೀಸರಿಗೆ ವರದಿ ಮಾಡಿದ್ದಾರೆ.
ದೂರುದಾರರು ಹೇಳಿಕೊಂಡಿರುವಂತೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿ ಎಂದು ಹೇಳಿಕೊಂಡು ಸಂತ್ರಸ್ಥರಿಗೆ ವಂಚನೆ ಮಾಡಿದ್ದಾರೆ. ಹಾಗೆ ಸಂತ್ರಸ್ಥರಿಗೆ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್‌ಅನ್ನು ನೋಂದಣಿ ಆಗಿದ್ದು, ಕಿರುಕುಳ ಸಂದೇಶಗಳನ್ನು ಕಳಿಹಿಸುವಂತಹ ಕಾನೂನು ಬಾಹಿರ ಚಟುವಟುಕೆಗಳಿಗೆ ಬಳಸಲಾಗುತ್ತಿದೆ. ಎಂದು ಕರೆ ಮಾಡಿ ಸಂತ್ರಸ್ತರ ಮಾಹಿತಿಯನ್ನ ಪಡೆದಿದ್ದಾರೆ. ಹಾಗೆ ಸಂತ್ರಸ್ತರ ಆಧಾರ್ ವಿವರಗಳನ್ನ ಸಿಮ್ ಪಡೆಯಲು ದುರ್ಬಳಕೆ ಮಾಡಲಾಗಿದೆ ಎಂದು ವಂಚಕರು ಪೊಲೀಸರಂತೆ ಸಂತ್ರಸ್ತರನ್ನ ಹೆದರಿಸಿ ಆರೋಪಿಸಿದ್ದಾರೆ.
ಈ ಕುರಿತಾಗಿ ನಾವು ತನಿಖೆ ಮಾಡುತ್ತಿದ್ದೇವೆ ಹಾಗೆ ಈ ಪ್ರಕರಣದ ಕುರಿತಾಗಿ ಮುಂಬೈನ ಕೋಲಾಬಾ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನ ದಾಖಲಿಸಲಾಗಿದೆ ಎಂದು ವಂಚಕರು ಹೇಳಿದ್ದಾರೆ. ಆದ್ರೆ ಅದಾದ ನಂತರ, ವಿಡಿಯೋ ಕಾಲ್ ಮೂಲಕ ಒಬ್ಬ ವ್ಯಕ್ತಿ, ಪೋಲೀಸ್ ಅಧಿಕಾರಿಯಂತೆ ನಟಿಸಿದ್ದಾರೆ. ಈ ಅಕ್ರಮ ಹಣ ವರ್ಗಾವಣೆಗೆ ಬಳಸುತ್ತಿದ್ದ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿರುವ ಬಗ್ಗೆ ಮಾಹಿತಿ ಕೂಡ ನಮ್ಮ ಬಳಿ ಇದೆ. ಈಗಾಗಲೇ ಇದೇ ರೀತಿಯ ಅಪರಾಧಗಳಿಗಾಗಿ ಬಂಧಿತರಾಗಿರುವ ಪ್ರಭಾವಿ ವ್ಯಕ್ತಿಗಳನ್ನು ಒಳಗೊಂಡಿರುವ ಹಿನ್ನೆಲೆ, ಈ ವಿಷಯವನ್ನು ಯಾರೊಂದಿಗೂ ಚರ್ಚಿಸಬೇಡಿ ಎಂದು ಕರೆ ಮಾಡಿದವರು ಎಚ್ಚರಿಕೆ ನೀಡಿದ್ದಾರೆ. ಸಹಕರಿಸದಿದ್ದರೆ ನಿಮ್ಮನ್ನ ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಆ ವ್ಯಕ್ತಿ ನಂತರ 9997342801 ರಿಂದ ಕರೆಗಳನ್ನು ಒಳಗೊಂಡಂತೆ ವಿವಿಧ ಸಂಖ್ಯೆಗಳಿಂದ ಸಾಲು ಸಾಲು ಕರೆಗಳನ್ನ ಸ್ವೀಕರಿಸಿದ್ದಾರೆ. ಇದು ಹೆಚ್ಚಿನ ಸಂವಹನಕ್ಕಾಗಿ ಸ್ಕೈಪ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಸೂಚಿಸಿದ್ದಾರೆ. ಮುಂಬೈ ಪೊಲೀಸರು ಎಂದು ಹೇಳಿಕೊಂಡು ವಿಡಿಯೋ ಕಾಲನ್ ಮೂಲಕ ವ್ಯಕ್ತಿಯನ್ನ ವಂಚಿಸಿದ್ದಾರೆ. ಕೆನರಾ ಬ್ಯಾಂಕ್‌ನಲ್ಲಿ ಉದ್ಯಮಿ ನರೇಶ್ ಗೋಯಲ್ ಅವರ ಖಾತೆಗೆ ಸಂಬಂಧಿಸಿದ 6 ಕೋಟಿ ರೂಗಳ ವಹಿವಾಟಿನಲ್ಲಿ ವ್ಯಕ್ತಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ವಂಚಕರು ಬೆಂಗಳೂರಿನ ವ್ಯಕ್ತಿಯ ಮೇಲೆ ಒತ್ತಡ ಹೇರುವುದರ ಮೂಲಕ ಮತ್ತಷ್ಟು ಬ್ಲ್ಯಾಕ್ ಮಾಡಲಿ ಮುಂದಾಗಿದ್ದಾರೆ. ಹಾಗೆ ಅವರ ಪ್ರಕರಣವು ಸುಪ್ರೀಂ ಕೋರ್ಟ್ ಪರಿಶೀಲನೆ ಮಾಡುತ್ತಿದೆ ಮತ್ತು ಅದನ್ನು ತಕ್ಷಣವೇ ಪರಿಹರಿಸಬೇಕು ಎಂದಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ ಅವರ ಬ್ಯಾಂಕ್ ಖಾತೆ ವಹಿವಾಟುಗಳನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದ್ದಾರೆ. ವಿವಿಧ ಖಾತೆಗಳಿಗೆ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಲು ಸೂಚನೆ ನೀಡಿದ್ದಾರೆ. ಬಂಧನದ ಭಯದಿಂದ ಸಂತ್ರಸ್ತೆ ಪಾಲಿಸಿದರು, ಅಂತಿಮವಾಗಿ ಹಲವಾರು ದಿನಗಳಲ್ಲಿ 11.8 ಕೋಟಿ ವರ್ಗಾಯಿಸಿದ್ದಾರೆ.
ತಾನು ವಂಚನೆಗೆ ಒಳಗಾಗಿದ್ದೇನೆಂದು ಅರಿತ ವ್ಯಕ್ತಿ ಡಿಸೆಂಬರ್ 12ರಂದು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318 ಮತ್ತು 319 ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದೇವೆ. ತನಿಖೆಗಳು ನಡೆಯುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈಗಂತು ಇಂತಹ ಕರೆಗಳು ಹೆಚ್ಚಾದ ಹಿನ್ನೆಲೆ ಸರ್ಕಾರ ಜನರಿಗೆ ಎಚ್ಚರಿಕೆಯನ್ನ ನೀಡ್ತಿದೆ. ಈ ಹಿನ್ನೆಲೆ ನಿಮಗೆ ಬಂದಿರುವ ಇಂತಹ ಕರೆಗಳಿಂತ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಹಾಗೆ ಇಂತಹ ಕರೆಗಳನ್ನ ಸ್ವೀಕರಿಸಿದ್ದಲ್ಲಿ ತಕ್ಷಣ ಪೋಲಿಸರಿಗೆ ಮಾಹಿತಿ ನೀಡುವುದು ಉತ್ತಮ. ಜೊತೆಗೆ ಯಾವುದೇ ಅಪರಿಚಿತ ಕರೆಗಳನ್ನ ನಿವು ಸ್ವೀಕರಿಸಿದಾಗ ನಿಮ್ಮ ಮಾಹಿತಿಗಳನ್ನ ನೀಡದಿರುವುದು ಉತ್ತಮ.


Click it and Unblock the Notifications