ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-18: 22/100 ಗ್ರಾಂ ಚಿನ್ನದ ಬೆಲೆ 1,500 ರೂ. ಇಳಿಕೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ನಿನ್ನೆ ಸ್ವಲ್ಪ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ವಾರದ ಆರಂಭದಲ್ಲಿ ಏರಿಕೆಯನ್ನ ಕಂಡಿದ್ದು, ಈಗ ಮತ್ತೆ ಇಳಿಮುಖವಾಗಿದೆ. ಮದುವೆ, ಹಾಗು ಹಬ್ಬದ ಸೀಸನ್‌ ಹಿನ್ನೆಲೆ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಹೀಗಾಗಿ ಬೆಲೆಯು ಕೂಡ ಇಳಿಕೆಯಾಗಿದೆ. ಚಿನ್ನದ ಬೆಲೆಯ ದಿಢೀರ್‌ ಏರಿಕೆಯಿಂದಾಗಿ ನಿರಾಸೆಯಲ್ಲಿದ್ದ ಚಿನ್ನಪ್ರಿಯರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಇಳಿಕೆಯಾದ್ದರಿಂದ ಖರೀದಿದಾರರಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಒಳ್ಳೆ ಅವಕಾಶ ಸಿಕ್ಕಂತಾಗಿದೆ.

ಡಿಸೆಂಬರ್‌ 18 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಇಳಿಕೆಯಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 150ರೂ. ಇಳಿಕೆಯಾಗಿ 71,350 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 160ರೂ. ಇಳಿಕೆಯಾಗಿ 77,840ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80 ರೂ. ಇಳಿಕೆಯಾಗಿ 58,380 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನ ಬೆಲೆ ಮತ್ತೆ ಇಳಿಕೆಯಾಗಿದೆ!

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,500 ರೂ. ಇಳಿಕೆಯಾಗಿ 7,13,500 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,600 ರೂ. ಇಳಿಕೆಯಾಗಿ 7,78,400 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,200ರೂ ಇಳಿಕೆಯಾಗಿ, 5,83,800 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ ಸಾವಿರ ರೂಪಾಯಿ ಏರಿಕೆಯಾಗುವ ಮೂಲಕ ಚಿನ್ನದ ಮಾರುಕಟ್ಟೆಯಲ್ಲಿ ತನ್ನ ಓಟವನ್ನ ಆರಂಭಿಸಿತ್ತು, ಆದ್ರೆ ಇಂದು ಮತ್ತೆ ಇಳಿಕೆಯಾಗಿ ನಿಧಾನಗತಿಯಲ್ಲಿ ಸಾಗ್ತಿದೆ.

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ. ಇನ್ನು ಮಾರುಕಟ್ಟೆ ಪಾಲುದಾರರು ಫೆಡರಲ್‌ ರಿಸರ್ವ್‌ ಸಭೆಯ ದತ್ತಾಂಶದ ಬಗ್ಗೆ ಗಮನ ಹರಿಸಿದ್ದಾರೆ. ಹೀಗಾಗಿ ದಿನದ ಅಂತ್ಯದ ವೇಳೆ ಇದರ ಫಲತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. ಇದು ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳನ್ನ ಗಮನಿಸುವಂತೆ ಮಾಡಬಹುದು.

ಇನ್ನು ಇತ್ತೀಚಿನ ದಿನಳಲ್ಲಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು, ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಈ ವರ್ಷ ಚಿನ್ನ ದಾಖಲೆಯ ಓಟವನ್ನ ನಡೆಸಿದ್ದು, ಬೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಆರ್ಥಿಕ ಅನಶ್ಚಿತತೆಗಳ ನಡುವೆ ಮಾರುಕಟ್ಟೆಯಲ್ಲಿ ಚಿನ್ನ ಪ್ರಭಲ ಸ್ಥಾನ ಪಡೆದುಕೊಂಡಿದೆ. ಹಾಗೆ 2025ರ ವೇಳೆಗೆ ಚಿನ್ನದ ಬೆಲೆಗಳಲ್ಲಿ ಹೊಸ ಗರಿಷ್ಠ ಮುಂದೂಡಿಕೆಯನ್ನು ಕಾಣುವ ನಿರೀಕ್ಷೆ ಇದೆ.

ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಗ್ರಾಹಕ ಮತ್ತು ಉತ್ಪಾದಕರ ಎರಡೂ ಕಡೆಯ ಮಿಶ್ರ ಹಣದುಬ್ಬರ ದತ್ತಾಂಶವು ಮಾರುಕಟ್ಟೆಯ ಅನಿಶ್ಚಿತತೆಗೆ ಕಾರಣವಾಯಿತು.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
ನಗರಗಳು 24 ಕ್ಯಾರೆಟ್22 ಕ್ಯಾರೆಟ್
​ದೆಹಲಿ77,990​71,500
​ಮುಂಬೈ77,840​71,350
ಚೆನ್ನೈ ​77,84071,350
​ಕೋಲ್ಕತ್ತಾ77,84071,350

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳತ ಕಂಡುಬಂದಿಲ್ಲ. ಕೆಲವು ದಿನಗಳ ಹಿಂದೆ ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಅಲ್ಲದೆ ಕಳೆದ ನಾಲ್ಕು ದಿನಗಳಿಂದ ಚಿನದನ ಬೆಲೆ ಸ್ಥಿರವಾಗಿದೆ ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 92,500 ರೂ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 9,250 ರೂಪಾಯಿ ಇದೆ. ಸತತವಾಗಿ ಇಳಕೆಯನ್ನ ಕಂಡ ನಂತರ ಕಳೆದ ಮರು ದಿನಗಳಿಂದ ಬೆಳ್ಳಿ ಬೆಲೆ ಸ್ತಿರವಾಗಿದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.02%ನಷ್ಟು ಕಡಿಮೆಯಾಗಿ 76,859 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.25%ರಷ್ಟು ನಷ್ಟ ಅನುಭವಿಸುತ್ತಿದ್ದು,90,644 ರೂಪಾಯಿ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್‌ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ಬಲತೆಯಿಂದಾಗಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. ಇನ್ನು ಸ್ಪಾಟ್ ಚಿನ್ನವು 02:37 GMTಯ ಹೊತ್ತಿಗೆ ಪ್ರತಿ 0.1%ಔನ್ಸ್‌ಗೆ 2,648.43ಡಾಲರ್‌ ಇದ್ದು ಚಿನ್ನದ ದರ ಇಳಿಕೆಯಗಿದೆ. ಇದರ ಮಧ್ಯೆ, US ಚಿನ್ನದ ಭವಿಷ್ಯವು ಪ್ರತಿ ಔನ್ಸ್‌ಗೆ USD 2,663.20 ನಲ್ಲಿ ಸ್ಥಿರವಾಗಿದೆ. ಹಾಗೆ ಸ್ಪಾಟ್ ಬೆಳ್ಳಿ ಕೂಡ, 0.2% ಕುಸಿದು ಪ್ರತಿ ಔನ್ಸ್‌ಗೆ $30.46 ಕ್ಕೆ ತಲುಪಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವನ್ನ ಕಂಡಿದೆ. ಅಲ್ಲದೆ US ಡಾಲರ್ ತನ್ನ ಪ್ರಬಲ ಮಟ್ಟದಲ್ಲಿ ಸ್ಥಿರವಾಗಿ ಇರುವುದರಿಂದ ಈ ಕುಸಿತವನ್ನ ಕಾಣುವಂತಾಗಿದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+