ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-14: 22k/100g ಚಿನ್ನ 9,000 ರೂ. ಇಳಿಕೆ, ಬೆಳ್ಳಿ ಬೆಲೆ ರೂ. 1000/kg ಇಳಿಕೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಮನಾರ್ಹ ಏರಿಕೆಯ ನಂತರ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಕಳೆದ ಎರಡು ದಿನಗಳಿಂದ 15,000 ರೂಗಳಷ್ಟು ಇಳಿಕೆಯಾಗಿದೆ. ಚಿನ್ನದ ಬೆಲೆಯ ದಿಢೀರ್‌ ಏರಿಕೆಯಿಂದಾಗಿ ನಿರಾಸೆಯಲ್ಲಿದ್ದ ಚಿನ್ನಪ್ರಿಯರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಇಳಿಕೆಯಾದ್ದರಿಂದ ಖರೀದಿದಾರರಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಒಳ್ಳೆ ಅವಕಾಶ ಸಿಕ್ಕಂತಾಗಿದೆ. ವಿಶೇಷವಾಗಿ ಮದುವೆ, ಹಬ್ಬಗಳ ಸೀಸನ್‌ನಲ್ಲಿ ಚಿನ್ನದ ಬೆಲೆ ಸಿಕ್ಕಿದ್ದು ಆಭರಣ ಪ್ರಿಯರಿಗೆ ಮತ್ತಷ್ಟು ಹರ್ಷವನ್ನ ತಂದಿದೆ.

ಡಿಸೆಂಬರ್‌ 14ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದೆ. 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 900ರೂಪಾಯಿ ಇಳಿಕೆಯಾಗಿ 71,400 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 980 ರೂ. ಇಳಿಕೆಯಾಗಿ, ಈಗ 77,890 ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 740 ರೂ. ಇಳಿಕೆಯಾಗಿ 58,420 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ!

ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ಗಮನಿಸಿದ್ರೆ, 100 ಗ್ರಾಂ 24 ಕ್ಯಾರೆಟ್ ಚಿನ್ನ 9,800 ರೂ ಇಳಿಕೆಯಾಗಿ 7,78,900. ರೂಪಾಯಿ ಆಗಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನ 9,000 ರೂ ಇಳಿಕೆಯಾಗಿ 7,14,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಸತತವಾಗಿ ಎರಡೇ ಬಾರಿ ಚಿನ್ನದ ದರ ಇಳಿಮುಖವಾಗುತ್ತಿದ್ದು, ರಾಜ್ಯದಲ್ಲಿ ಚಿನ್ನ ಕೈಗೆಟುಕುವ ಬೆಲೆಯಲ್ಲಿ ಸಿಗ್ತಾ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತೀ ಗ್ರಾಂಗೆ 15,000 ಅಂದರೆ ಸುಮಾರು 2%ನಷ್ಟ ಇಳಿಕೆಯನ್ನ ಕಂಡಿದೆ.

ವಾರದ ಆರಂಭದಲ್ಲಿ ಏರಿಕೆಯನ್ನ ಕಂಡಿದ್ದು, ಈಗ ಮತ್ತ ಇಳಿಮುಖವಾಗಿದೆ. ಮದುವೆ, ಹಾಗು ಹಬ್ಬದ ಸೀಸನ್‌ ಹಿನ್ನೆಲೆ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಹೀಗಾಗಿ ಬೆಲೆಯು ಕೂಡ ಇಳಿಕೆಯಾಗಿದೆ. ಬಹುದಿನಗಳಿಂದ ಚಿನ್ನವನ್ನ ಖರೀದಿ ಮಾಡಲು ಕಾತುರರಾಗಿದ್ದು, ಇಂದು ಎಲ್ಲರ ಕೈಗೆಟುಕುವ ಬೆಲೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ.

ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಗ್ರಾಹಕ ಮತ್ತು ಉತ್ಪಾದಕರ ಎರಡೂ ಕಡೆಯ ಮಿಶ್ರ ಹಣದುಬ್ಬರ ದತ್ತಾಂಶವು ಮಾರುಕಟ್ಟೆಯ ಅನಿಶ್ಚಿತತೆಗೆ ಕಾರಣವಾಯಿತು. ಇನ್ನು ಈ ಕುಸಿತದ ಹೊರತಾಗಿಯೂ ಬುಲಿಯನ್ ಸುಮಾರು 1% ನಷ್ಟು ವಾರದ ಲಾಭವನ್ನು ಕಂಡಿತು. ಸ್ಪಾಟ್ ಚಿನ್ನದ ಬೆಲೆಗಳು ಕುಸಿದಿದ್ದು, ಸಧ್ಯಕ್ಕೆ 106.95ರಲ್ಲಿ ವಹಿವಾಟುಗಳನ್ನ ನಡೆಸುತ್ತಿದೆ.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24 ಕ್ಯಾರೆಟ್22 ಕ್ಯಾರೆಟ್
​ದೆಹಲಿ78,040​ 71,550
​ಮುಂಬೈ77,790​71,400
ಚೆನ್ನೈ ​77,79071,400
​ಕೋಲ್ಕತ್ತಾ77,79071,400

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಕೆಲವು ದಿನಗಳ ಹಿಂದೆ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಮತ್ತೆ ಇಳಿಕೆಯಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 1000ರೂ. ಇಳಿಕೆಯಾಗಿ 92,500 ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 100ರೂ. ಇಳಿಕೆಯಾಗಿ 9,250 ರೂಪಾಯಿ ಆಗಿದೆ. ಇನ್ನು ಈ ಕುಸಿತ ಖರೀದಿದಾರರು ಮತ್ತು ಹೂಡಿಕೆದಾರರ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.01% ನಷ್ಟು ಕಡಿಮೆಯಾಗಿ 77,130 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.01% ರಷ್ಟು ಏರಿಕೆಯಾಗಿ , 91,916 ರೂಪಾಯಿ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್‌ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ಬಲತೆಯಿಂದಾಗಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. ಇನ್ನು ಸ್ಪಾಟ್ ಚಿನ್ನವು 01:43 pm ET (18:43 GMT)ಯ ಹೊತ್ತಿಗೆ ಪ್ರತಿ 1.1% ಔನ್ಸ್‌ಗೆ 2,652.29ಡಾಲರ್‌ ಇದ್ದು ಚಿನ್ನದ ದರ ಇಳಿಕೆಯಗಿದೆ. ಸ್ಪಾಟ್ ಬೆಳ್ಳಿ ಕೂಡ, 1.3% ಕುಸಿದು ಪ್ರತಿ ಔನ್ಸ್‌ಗೆ $ 30.55 ಕ್ಕೆ ತಲುಪಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವನ್ನ ಕಂಡಿದೆ. ಅಲ್ಲದೆ US ಡಾಲರ್ ತನ್ನ ಪ್ರಬಲ ಮಟ್ಟದಲ್ಲಿ ಸ್ಥಿರವಾಗಿ ಇರುವುದರಿಂದ ಈ ಕುಸಿತವನ್ನ ಕಾಣುವಂತಾಗಿದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದು ಫೆಡರಲ್ ರಿಸರ್ವ್‌ನ ಭವಿಷ್ಯದ ಹಣಕಾಸು ನೀತಿಯ ನಿಲುವಿನ ಬಗ್ಗೆ ಸ್ಪಷ್ಟವಾದ ಸಂಕೇತಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+