ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಡಿಸೆಂಬರ್‌-17: 22/100 ಗ್ರಾಂ ಚಿನ್ನದ ಬೆಲೆ 1,000 ರೂ. ಏರಿಕೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಎರಡು ದಿನಗಳ ಹಿಂದೆಬಾರಿ ಇಳಿಕೆಯನ್ನ ಕಂಡಿದ್ದ ಚಿನ್ನ ಈಗ ಮತ್ತೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಗಮನಾರ್ಹ ವ್ಯತ್ಯಾಸ ಕಂಡು ಬಂದಿಲ್ಲ. ನಿನ್ನ ಸ್ಥಿರವಾಗಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಚಿನ್ನದ ಬೆಲೆ ಇಳಿಕೆಯಾಗಿದ್ದಕ್ಕೆ ಸಂತಸದಲ್ಲಿದ್ದ ಆಭರಣ ಪ್ರಿಯರಿಗೆ ಇಂದು ಸ್ವಲ್ಪ ನಿರಾಸೆಯಾಗಿದೆ.

ಡಿಸೆಂಬರ್‌ 17 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂ. ಏರಿಕೆಯಗಿ 71,500 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 110ರೂ. ಏರಿಕೆಯಾಗಿ 78,000 ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 80 ರೂ. ಏರಿಕೆಯಾಗಿ 58,500 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ!

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,000 ರೂ. ಏರಿಕೆಯಗಿ 7,15,000 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,100ರೂ. ಏರಿಕೆಯಾಗಿ 7,80,000 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 800 ರೂ ಏರಿಕೆಯಾಗಿ, 5,85,000 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಗಿದೆ. ನೂರು ಗ್ರಾಂ ಚಿನ್ನದ ಬೆಲೆ ಸಾವಿರ ರೂಪಾಯಿ ಏರಿಕೆಯಾಗುವ ಮೂಲಕ ಚಿನ್ನದ ಮಾರುಕಟ್ಟೆಯಲ್ಲಿ ತನ್ನ ಓಟವನ್ನ ಆರಂಭಿಸಿದೆ. ಕಳೆದ ಎರಡು ದಿನಗಳ ಹಿಂದೆ ಬಾರಿ ಇಳಿಕೆಯನ್ನ ಎದುರಸಿದ್ದ ಚಿನ್ನ ಇಂದು ಮತ್ತೆ ಏರಿಕೆಯಾಗಿದೆ. ಮದುವೆ, ಹಾಗು ಹಬ್ಬದ ಸೀಸನ್‌ ಹಿನ್ನೆಲೆ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಬೆನ್ನಲ್ಲೆ ಬೆಲೆಯು ಕೂಡ ಏರಿಕೆಯಾಗಿದೆ.

ಫೆಡೆರಲ್‌ ನೀತಿ ಸಭೆ ಇಂದು ಪ್ರಾರಂಭವಾಗಿದ್ದು, ನಾಳೆ ಮುಕ್ತಾಯಗೊಳ್ಳಲಿದೆ. ಇಲ್ಲಿ ಚಿನ್ನದ ಬಡ್ಡಿದರಗಳ ಕಡಿತ ಮತ್ತು ಸಮಯದ ಬಗ್ಗೆ ಸ್ಪಷ್ಟತೆ ನೀಡುವ ನಿರೀಕ್ಷೆ ಇದೆ. ಅಲ್ಲದೆ ಬಡ್ಡಿದರಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳು ಕೂಡ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಇನ್ನು ಇತ್ತೀಚಿನ ದಿನಳಲ್ಲಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು, ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಈ ವರ್ಷ ಚಿನ್ನ ದಾಖಲೆಯ ಓಟವನ್ನ ನಡೆಸಿದ್ದು, ಬೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಆರ್ಥಿಕ ಅನಶ್ಚಿತತೆಗಳ ನಡುವೆ ಮಾರುಕಟ್ಟೆಯಲ್ಲಿ ಚಿನ್ನ ಪ್ರಭಲ ಸ್ಥಾನ ಪಡೆದುಕೊಂಡಿದೆ. ಹಾಗೆ 2025ರ ವೇಳೆಗೆ ಚಿನ್ನದ ಬೆಲೆಗಳಲ್ಲಿ ಹೊಸ ಗರಿಷ್ಠ ಮುಂದೂಡಿಕೆಯನ್ನು ಕಾಣುವ ನಿರೀಕ್ಷೆ ಇದೆ.

ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಗ್ರಾಹಕ ಮತ್ತು ಉತ್ಪಾದಕರ ಎರಡೂ ಕಡೆಯ ಮಿಶ್ರ ಹಣದುಬ್ಬರ ದತ್ತಾಂಶವು ಮಾರುಕಟ್ಟೆಯ ಅನಿಶ್ಚಿತತೆಗೆ ಕಾರಣವಾಯಿತು. ಇನ್ನು ಈ ಕುಸಿತದ ಹೊರತಾಗಿಯೂ ಬುಲಿಯನ್ ಸುಮಾರು 1% ನಷ್ಟು ವಾರದ ಲಾಭವನ್ನು ಕಂಡಿತು. ಸ್ಪಾಟ್ ಚಿನ್ನದ ಬೆಲೆಗಳು ಕುಸಿದಿದ್ದು, ಸಧ್ಯಕ್ಕೆ 106.95ರಲ್ಲಿ ವಹಿವಾಟುಗಳನ್ನ ನಡೆಸುತ್ತಿದೆ.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24ಕ್ಯಾರೆಟ್‌ 22ಕ್ಯಾರೆಟ್‌

ದೆಹಲಿ 78,150 71,650
ಮುಂಬೈ 78,000 71,500
ಚೆನ್ನೈ 78,000 71,500
ಕೋಲ್ಕತ್ತಾ 78,000 71,500

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳತ ಕಂಡುಬಂದಿಲ್ಲ. ಕೆಲವು ದಿನಗಳ ಹಿಂದೆ ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 92,500 ರೂ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 9,250 ರೂಪಾಯಿ ಇದೆ. ಸತತವಾಗಿ ಇಳಕೆಯನ್ನ ಕಂಡ ನಂತರ ಕಳೆದ ಮರು ದಿನಗಳಿಂದ ಬೆಳ್ಳಿ ಬೆಲೆ ಸ್ತಿರವಾಗಿದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.04%ನಷ್ಟು ಕಡಿಮೆಯಾಗಿ 77,030 ರೂ ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.36% ರಷ್ಟು ನಷ್ಟ ಅನುಭವಿಸುತ್ತಿದ್ದು, 90,855 ರೂಪಾಯಿ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್‌ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ಬಲತೆಯಿಂದಾಗಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. ಇನ್ನು ಸ್ಪಾಟ್ ಚಿನ್ನವು 01:43 03:35 GMT ಯ ಹೊತ್ತಿಗೆ ಪ್ರತಿ 0.1% ಔನ್ಸ್‌ಗೆ 2,655.07 ಡಾಲರ್‌ ಇದ್ದು ಚಿನ್ನದ ದರ ಇಳಿಕೆಯಗಿದೆ. ಸ್ಪಾಟ್ ಬೆಳ್ಳಿ ಕೂಡ, 0.2% ಕುಸಿದು ಪ್ರತಿ ಔನ್ಸ್‌ಗೆ $30.47 ಕ್ಕೆ ತಲುಪಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವನ್ನ ಕಂಡಿದೆ. ಅಲ್ಲದೆ US ಡಾಲರ್ ತನ್ನ ಪ್ರಬಲ ಮಟ್ಟದಲ್ಲಿ ಸ್ಥಿರವಾಗಿ ಇರುವುದರಿಂದ ಈ ಕುಸಿತವನ್ನ ಕಾಣುವಂತಾಗಿದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದು ಫೆಡರಲ್ ರಿಸರ್ವ್‌ನ ಭವಿಷ್ಯದ ಹಣಕಾಸು ನೀತಿಯ ನಿಲುವಿನ ಬಗ್ಗೆ ಸ್ಪಷ್ಟವಾದ ಸಂಕೇತಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+