ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆ: 22k/100 ಚಿನ್ನದ ಬೆಲೆ 6,500 ರೂ. ಇಳಿಕೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದು ತೀವ್ರವಾಗಿ ಇಳಿಕೆಯಾಗಿದೆ. ಚಿನ್ನದ ಮಾರಿಕಟ್ಟೆಯಲ್ಲಿ ಈ ದರ ಈ ವಾರದ ಎಚ್ಚರಿಕೆಯ ಆರಂಭವಾಗಿದೆ. US ಡಾಲರ್ ಬಲವರ್ಧನೆಯಿಂದಾಗಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಕಳೆದ ತಿಂಗಳಲ್ಲಿ ಚಿನ್ನದ ಬೆಲೆಗಳಲ್ಲಿ ನೀವು ಹಲವು ಬಾರಿ ಏರಿಳಿತಗಳನ್ನ ಕಂಡಿರಬಹುದು. ಆದ್ರೆ ಈ ತಿಂಗಳೂ ಕೂಡ ಇದೇ ಪ್ರವೃತ್ತಿ ಆರಮಭವಾದಂತೆ ಕಾಣುತ್ತಿದೆ. ಆದ್ರೆ ಈ ಎಲ್ಲದರ ಮಧ್ಯೆ ಚಿನ್ನ ಪ್ರಿಯರಿಗೆ ಮಾತ್ರ ಈ ಬೆಲೆ ಸ್ವಲ್ಪ ಸಮಾಧಾನವನ್ನೇ ನೀಡಿದೆ ಎನ್ನಬಹುದು.

ಡಿಸೆಂಬರ್‌ 2ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 600 ರೂಪಾಯಿ ಇಳಿಕೆಯಾಗಿ 70,900 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ650 ರೂ ಇಳಿಕೆಯಾಗಿ, ಈಗ 77,350, ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 490 ರೂ. ಇಳಿಕೆಯಾಗಿ 58,010 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ!

ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ಗಮಿಸುವುದಾದ್ರೆ, 24 ಕ್ಯಾರೆಟ್ ಚಿನ್ನದ ಬೆಲೆ 6,500 ರೂಪಾಯಿ ಇಳಿಕೆಯಾಗಿ ರೂ. 7,73,500 ರೂ. ಆಗಿದೆ. 100 ಗ್ರಾಂ 22-ಕ್ಯಾರೆಟ್ ಚಿನ್ನ 6,000. ರೂ ಇಳಿಕೆಯಾಗಿ 7,09,000. ರೂಪಾಯಿ ಆಗಿದೆ.

ಭಾರತದಲ್ಲಿ, ವರ್ಷದ ಈ ಸಮಯದಲ್ಲಿ ಸಾಮಾನ್ಯವಾಗಿ ಚಿನ್ನಕ್ಕೆ ಈ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಆದರೆ, ಈ ವರ್ಷ ಚಿಲ್ಲರೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ. ಹೆಚ್ಚಿನ ಸಂಖ್ಯೆಯ ವಿವಾಹಗಳನ್ನು ನಿಗದಿಪಡಿಸಲಾಗಿದ್ದರೂ, ಕೂಡ ಸಾಮಾನ್ಯವಾಗಿ ಚಿನ್ನದ ಖರೀದಿ ಈ ವೇಳೆ ಹೆಚ್ಚಿರುತ್ತದೆ.

ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ಬಲವರ್ಧನೆಯೇ ಇದಕ್ಕೆ ಮುಖ್ಯ ಕಾರವಾಗಿದೆ. ಇದು ಚಿನ್ನದ ಬೆಲೆಗಳ ಮೇಲೆ ಸಾಕಷ್ಟು ಒತ್ತಡವನ್ನು ಬೀರುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ!

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24ಕ್ಯಾರೆಟ್‌ 22ಕ್ಯಾರೆಟ್‌
ದೆಹಲಿ 77,500 71,050
ಮುಂಬೈ 77,350 70,900
ಚೆನ್ನೈ 77,350 70,900
ಕೋಲ್ಕತ್ತಾ 77,350 70,900

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಕೆಲವು ದಿನಗಳ ಹಿಂದೆ ಸ್ಥಿರ ಸ್ಥಾನ ಕಾಯ್ದುಕೊಂಡಿದ್ದ ಬೆಳ್ಳಿ ಬೆಲೆ ಮತ್ತೆ ಇಳಿಮುಖವಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 500 ರೂ ಇಳಿಕೆಯಾಗಿ 91,000 ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 50 ರೂ. ಇಳಿಕೆಯಾಗಿ 9,100 ರೂಪಾಯಿ ಆಗಿದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಡಿಸೆಂಬರ್‌ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 75,643 ರೂ ಆಗಿದೆ. ಅಂದರೆ 0.96%ಏರಿಕೆಯಾಗಿದೆ. ಅದೇ ರೀತಿ, ಡಿಸೆಂಬರ್ 5ರ ಬೆಳ್ಳಿ ಭವಿಷ್ಯದ ವಹಿವಾಟು ನಿನ್ನೆ ಬಾರಿ ಏರಿಕೆಯನ್ನ ಕಂಡಿತ್ತು ಮತ್ತು 1.16% ರಷ್ಟು ಮುಕ್ತಾಯದೊಂದಿಗೆ, ಸದ್ಯಕ್ಕೆ 87,854 ರೂಪಾಯಿ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್‌ ಡಾಲರ್‌ನ ಸ್ವಲ್ಪ ಪ್ರಮಾಣದ ಬಲವರ್ಧನೆಯಿಂದಾಗಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. ಹೀಗೆಂದು ರಾಯಿಟರ್ಸ್‌ ವರದಿ ಹೇಳಿದೆ. ಸ್ಪಾಟ್ ಚಿನ್ನವು 02:04 GMT ಯ ಹೊತ್ತಿಗೆ ಪ್ರತಿ 0.7% ಔನ್ಸ್‌ಗೆ 2,636.38 ಡಾಲರ್‌ ಇದ್ದು ಚಿನ್ನದ ದರ ಇಳಿಕೆಯಾಗಿದೆ. ಸ್ಪಾಟ್ ಬೆಳ್ಳಿ ಕೂಡ 0.7% ಇಳಿಕೆಯಾಗಿ ಪ್ರತಿ ಔನ್ಸ್‌ಗೆ $30.39 ಆಗಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವು ಬರುತ್ತದೆ. ಹೀಗಾಗಿ ಹೂಡಿಕೆದಾರರು ಈಗ ಮುಂಬರುವ US ಆರ್ಥಿಕ ದತ್ತಾಂಶ ಬಿಡುಗಡೆಗಳನ್ನು ನಿಕಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದು ಫೆಡರಲ್ ರಿಸರ್ವ್‌ನ ಭವಿಷ್ಯದ ಹಣಕಾಸು ನೀತಿಯ ನಿಲುವಿನ ಬಗ್ಗೆ ಸ್ಪಷ್ಟವಾದ ಸಂಕೇತಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಇಳಿಮುಖವಾಗಿದೆ.ಈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳತವನ್ನ ಕಾಣುವಂತಾಗಿದೆ. ಚಿನ್ನವು ತಿಂಗಳ ಅಂತ್ಯದಲ್ಲಿ ಕುಸಿತವನ್ನ ಕಂಡಿತ್ತು. ದೇಶಿಯ ಚಿನ್ನದ ಬೆಲೆಗಳ ಮೇಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಹೆಚ್ಚಿರುವುದರಿಂದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ಆದ್ರೆ ಯುಸ್‌ ಡಾಲರ್‌ನ ದುರ್ಬಲತೆಯಿಂದಾಗಿ ಚಿನ್ನ ಮತ್ತೆ ಮಾರುಕಟ್ಟೆಯಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದ್ದ ಚಿನ್ನದ ದರ ಮತ್ತೆ ಕುಸಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+