ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಈ ತಿಂಗಳು ಆರಂಭದಿಂದ ಇಲ್ಲಿಯವರೆಗೆ ಚಿನ್ನದ ಭಾರಿ ಪ್ರಮಾಣದಲ್ಲಿ ಏರಿಳತವನ್ನ ಎದುರಿಸಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಳ್ಳಿ ಮತ್ತೆ ಸ್ಥರ ಬೆಲೆಯನ್ನ ಕಾಯ್ದುಕೊಂಡಿದೆ. US ಡಾಲರ್ ಬಲವರ್ಧನೆಯಿಂದಾಗಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. ಅಲ್ಲದೆ ಇಂದು ಆರ್‌ಬಿಐ ರೆಪೋ ದರವನ್ನ ಯಥಾಸ್ಥಿತಿಯಲ್ಲಿ ಮುಂದುವರಿಕೆ ಮಾಡಿರುವುದು ಕೂಡ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ.
ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿದಿದೆ. 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 250 ರೂಪಾಯಿ ಇಳಿಕೆಯಾಗಿ 71,150 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂ ಇಳಿಕೆಯಾಗಿ, ಈಗ 77,620 ರೂ ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 200 ರೂ. ಇಳಿಕೆಯಾಗಿ 58,220 ರೂ. ಆಗಿದೆ.

ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ಗಮಿಸುವುದಾದ್ರೆ, 24 ಕ್ಯಾರೆಟ್ ಚಿನ್ನದ ಬೆಲೆ 2,700 ರೂಪಾಯಿ ಇಳಿಕೆಯಾಗಿ ರೂ.7,76,200 ರೂ. ಆಗಿದೆ. 100 ಗ್ರಾಂ 22-ಕ್ಯಾರೆಟ್ ಚಿನ್ನ 2,500 ರೂ ಇಳಿಕೆಯಾಗಿ 7,11,500 ರೂಪಾಯಿ ಆಗಿದೆ.
ಇಂದು ಚಿನ್ನದ ಬೆಲೆ ಇಳಿಮುಖವಾಗಿದ್ದು, ಇದರಿಂದಾಗಿ ಜಾಕತಿಕ ಆರ್ಥಿಕ ಒತ್ತಡ ಕೂಡ ಮುಂದುವರೆಯಲಿದೆ. ಆದ್ರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯನ್ನ ಉಂಟುಮಾಡಬಹುದು, ಹಾಗೆ ಇದು ಹೂಡಿಕೆದಾರರು ಮತ್ತು ವ್ಯಾಪಾರಿಗಳಿಗೆ ಪರಿಹಾರವನ್ನು ನೀಡುತ್ತದೆ.
ಪ್ರಸ್ತುತವಾಗಿ ಹಲವಾರು ಜಾಕತಿಕ ಅಂಶಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಲಿವೆ. ಹಾಗೆ ಯುಎಸ್ ಡಾಲರ್ ಸೂಚ್ಯಂಕವು 0.11% ಏರಿಕೆಯಾಗಿ 105.83 ಆಗಿದೆ. ಇದು ಫೆಡರಲ್ ರಿಸರ್ವ್ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಲಿದೆ. ಮಾರುಕಟ್ಟೆಯಲ್ಲಿ ಬಾಗವಹಿಸುವವರು ಯುಎಸ್ ವೇತನದಾರರ ಡೆಟಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ.
ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇಂದು ಬೆಳ್ಳಿ ಸ್ಥಿರ ಸ್ಥಾನ ಕಾಯ್ದುಕೊಂಡಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 92,000 ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 9,200 ರೂಪಾಯಿ ಆಗಿದೆ.
ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
ನಗರಗಳು 24ಕ್ಯಾರೆಟ್ 22ಕ್ಯಾರೆಟ್
ದೆಹಲಿ 77,770 71,300
ಮುಂಬೈ 77,620 71,150
ಚೆನ್ನೈ 77,620 71,150
ಕೋಲ್ಕತ್ತಾ 77,620 71,150
MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನ 0.03% ಏರಿಕೆಯಾಗಿ 76,718 ರೂ ಆಗಿದೆ. ಅದೇ ರೀತಿ, ಫೆಬ್ರವರಿ 5, 2025ರ ಬೆಳ್ಳಿ ಭವಿಷ್ಯದ ವಹಿವಾಟು 0.65% ರಷ್ಟು ಏರಿಕೆಯಾಗಿ, ಸದ್ಯಕ್ಕೆ 93,029.ರೂಪಾಯಿ ವಹಿವಾಟು ನಡೆಸುತ್ತಿದೆ.
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು
ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಶುಕ್ರವಾರ ಚಿನ್ನದ ಬೆಲೆಗಳು ಸಾಧಾರಣ ಹೆಚ್ಚಳವನ್ನ ಕಂಡಿವೆ. ಆದ್ರೆ ಎರಡನೇ ವಾರ ಮತ್ತೆ ಚಿನ್ನದ ಬೆಲೆ ಕುಸಿಯುವ ನಿರೀಕ್ಷೆ ಇದೆ. ಯುಎಸ್ ಡಾಲರ್‌ನ ಸ್ವಲ್ಪ ಪ್ರಮಾಣದ ಬಲವರ್ಧನೆಯಿಂದಾಗಿ ಚಿನ್ನದ ಬೆಲೆಗಳು ಇಳಿಕೆಯಾಗಿವೆ. ಹಾಗೆ ಮಾರುಕಟ್ಟೆಯಲ್ಲಿ ಬಾಗವಹಿಸುವವರು ಯುಎಸ್ ವೇತನದಾರರ ಡೆಟಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಮುಂದಿನ ಒಳನೋಟಗಳನ್ನು ನೀಡುವ ನಿರೀಕ್ಷೆ ಇದೆ. ಸ್ಪಾಟ್ ಚಿನ್ನವು 0346 GMT ಯ ಹೊತ್ತಿಗೆ ಪ್ರತಿ 0.5% ಔನ್ಸ್‌ಗೆ 2,661.00 ಡಾಲರ್ ಇದ್ದು ಚಿನ್ನದ ದರ ಇಳಿಕೆಯಾಗಿದೆ. ಸ್ಪಾಟ್ ಬೆಳ್ಳಿ ಕೂಡ 0.1% ಇಳಿಕೆಯಾಗಿ ಪ್ರತಿ ಔನ್ಸ್‌ಗೆ $ 31.3 ವಹಿವಾಟು ನಡೆಸುತ್ತಿದೆ. US ಡಾಲರ್‌ನಲ್ಲಿ ನವೀಕೃತ ಶಕ್ತಿ ಮತ್ತು ಇತ್ತೀಚಿನ ಚಿನ್ನದ ರ್ಯಾಲಿಯ ನಂತರ ಲಾಭವಿದ್ದರು ಕೂಡ ಈ ನಡುವೆ ಚಿನ್ನದ ಬೆಲೆಯಲ್ಲಿ ಕುಸಿತವು ಬರುತ್ತದೆ. ಇದು ಫೆಡರಲ್ ರಿಸರ್ವ್‌ನ ಭವಿಷ್ಯದ ಹಣಕಾಸು ನೀತಿಯ ನಿಲುವಿನ ಬಗ್ಗೆ ಸ್ಪಷ್ಟವಾದ ಸಂಕೇತಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಇಳಿಮುಖವಾಗಿದೆ.ಈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಏರಿಳತವನ್ನ ಕಾಣುವಂತಾಗಿದೆ. ಆದ್ರೆ ಯುಸ್ ಡಾಲರ್‌ನ ದುರ್ಬಲತೆಯಿಂದಾಗಿ ಚಿನ್ನ ಮತ್ತೆ ಮಾರುಕಟ್ಟೆಯಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದ್ದ ಚಿನ್ನದ ದರ ಮತ್ತೆ ಕುಸಿದಿದೆ. ದೇಶಿಯ ಚಿನ್ನದ ಬೆಲೆಗಳ ಮೇಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಹೆಚ್ಚಿರುವುದರಿಂದ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ.


Click it and Unblock the Notifications