ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಏಳು ದಿನಗಳಲ್ಲಿ ಮೊದಲ ಬಾರಿಗೆ ಚಿನ್ನದ ಬೆಲೆ ಏರಿಕೆಯಾಗಿದೆ. ನಾಲ್ಕು ದಿಗಳಲ್ಲಿ 37,100 ರೂ.ಗಳಷ್ಟು ತೀವ್ರ ಕುಸಿತ ಕಂಡ ನಂತರ ಮತ್ತೆ ಚಿನ್ನದ ಬೆಲೆ ಎರಿಕೆಯಾಗಿದೆ. 24K 100 ಗ್ರಾಂನ ಚಿನ್ನ ಶುಕ್ರವಾರ, ನವೆಂಬರ್ 15, 2024 ರಂದು 1,100 ರೂ.ಗಳಷ್ಟು ಏರಿಕೆಯಾಗಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ 1 ಕೆಜಿ ಬೆಳ್ಳಿ ಬೆಲೆ 89,500 ರೂಪಾಯಿ ಇದೆ. ಗುರುನಾನಕ್ ಜಯಂತಿಯ ಆಚರಣೆಯ ವೇಳೆ ಭಾರತದಾದ್ಯಂತ ಹಳದಿ ಲೋಹ ಮತ್ತು ಬೆಳ್ಳಿ ಉತ್ತಮ ಪ್ರದರ್ಶನ ಕಾಣಲಿದೆ.
24K ಚಿನ್ನದ ಬೆಲೆಗಳು:
ನವೆಂಬರ್ 11 ರಿಂದ 14 ರ ನಡುವೆ 37,100 ರೂಪಾಯಿಗಳಷ್ಟು ಭಾರಿ ಕುಸಿತದ ನಂತರ ನವೆಂಬರ್ 15 ರಂದು 100 ಗ್ರಾಂ ಚಿನ್ನವು ರೂ 1,100 ರಷ್ಟು ಏರಿಕೆಯಾಗಿ 7,57,600 ರೂಪಾಯಿಗೆ ತಲುಪಿದೆ. ಇದರ ಮಧ್ಯೆ, 10 ಗ್ರಾಂ ಚಿನ್ನದ ಬೆಲೆ ರೂ 75,760 ರೂಗಳಿಷ್ಟಿದ್ದು, 110ರೂಪಾಯಿ ಏರಿಕೆಯಾಗಿದೆ. ಹಾಗೆಯೇ, 8 ಗ್ರಾಂ ಮತ್ತು 1 ಗ್ರಾಂ ಚಿನ್ನವು 88 ರೂಪಾಯಿ ಮತ್ತು 11ರೂಪಾಯಿಗಳಷ್ಟು ಏರಿಕೆಯಾಗಿ ಕ್ರಮವಾಗಿ 60,608 ರೂಪಾಯಿ ಮತ್ತು 7,576 ರೂಪಾಯಿಗೆ ತಲುಪಿದೆ.

22K ಚಿನ್ನದ ಬೆಲೆಗಳು:
ಇಲ್ಲಿ, ನವೆಂಬರ್ 15 ರಂದು 100 ಗ್ರಾಂ ಚಿನ್ನದ ಬೆಲೆ 1,000 ರೂಗಳಷ್ಟು ಜಿಗಿದು 6,94,500 ರೂ.ಗೆ ತಲುಪಿದೆ, ಆದರೆ 10 ಗ್ರಾಂ ಹಳದಿ ಲೋಹದ ಬೆಲೆ 69,450 ರೂಪಾಯಿಯಲ್ಲಿ 100 ರೂ. ಮತ್ತು 1 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಏರಿಕೆಯಾಗಿ 6,945 ರೂಪಾಯಿ ತಲುಪಿದೆ.
18K ಚಿನ್ನದ ಬೆಲೆಗಳು:
18 ಕ್ಯಾರೆಟ್‌ನ ಚಿನ್ನದ ಬೆಲೆ, ನವೆಂಬರ್ 15 ರಂದು 5,68,200 ರೂಪಾಯಿಗೆ 800 ರೂಗಳಷ್ಟು ಏರಿಕೆಯಾಗಿದೆ. 80 ರೂಪಾಯಿ ಏರಿಕೆಯಾಗಿ 56,820 ರೂಪಾಯಿಯಷ್ಟಿದೆ. ಹಾಗೆಯೇ, 8 ಗ್ರಾಂ ಚಿನ್ನದ ಬೆಲೆ 64 ರೂಪಾಯಿಗಳಷ್ಟು ಏರಿಕೆಯಾಗಿ 45,456ಕ್ಕೆ ತಲುಪಿದೆ. ಮತ್ತು 1 ಗ್ರಾಂ ಚಿನ್ನಕ್ಕೆ 8 ರೂಪಾಯಿ ಏರಿಕೆಯಾಗಿ 5,682 ರೂಪಾಯಿಗೆ ತಲಿಪಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳು ಮತ್ತು ಇತರ ನಗರಗಳು:
ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾ ನಗರಗಳ ಚಿನ್ನದ ಬೆಲೆ ಒಂದೇ ರೀತಿ ಇವೆ. ಆದರೆ, ದೆಹಲಿ ಮತ್ತು ಅಹಮದಾಬಾದ್‌ಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಮುಖವಾಗಿದೆ.

10 ದಿನಗಳಲ್ಲಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ:
ನವೆಂಬರ್ 15 ರಂದು, 24 ಕ್ಯಾರಟ್‌ನ 100 ಗ್ರಾಂ ಚಿನ್ನವು 1,100 ರೂ.ಗಳಷ್ಟು ಏರಿಕೆಯಾಗಿದೆ. ಆದರೆ, ನವೆಂಬರ್ 8 ರವರೆಗೆ ಈ ರೀತಿ ಇರಲಿಲ್ಲ. ನವೆಂಬರ್ 14 ರಂದು ಚಿನ್ನದ ಬೆಲೆ 12,000 ರೂಗಳಷ್ಟು ಇಳಿಮುಖವಾಗಿದೆ. ನಂತರ ನವೆಂಬರ್ 13 ರಂದು 4,400 ರೂಪಾಯಿಗಳಷ್ಟು ಇಳಿಕೆಯಾಗಿದೆ. ಅಲ್ಲದೆ ನವೆಂಬರ್ 12 ರಂದು ಈ ವಾರದ ಚಿನ್ನದ ಬೆಲೆ ಗರಿಷ್ಠ ಕುಸಿತಕಂಡು 14,700ರೂ ಆಗಿದೆ. ನವೆಂಬರ್ 11 ರಂದು ಮತ್ತೆ ಚಿನ್ನ ಇಳಿಕೆಯಾಗಿ 6,000 ದಾಖಲಾಗಿದೆ. ನಂತರ ನವೆಂಬರ್ 10 ರಂದು ಬೆಲೆ ತಟಸ್ಥವಾಗಿತ್ತು.
ನವೆಂಬರ್ 9 ರಂದು 1,100 ರೂಗಳಷ್ಟು ಇಳಿಮುಖಕಂಡು ಬೆಲೆ ಮತ್ತಷ್ಟು ಅಸ್ಥಿರವಾಗಿತ್ತು. 10 ದಿನಗಳಲ್ಲಿ, ಬೆಂಗಳೂರಿನಲ್ಲಿ ಚಿನ್ನದ ಬೆಲೆ ನವೆಂಬರ್ 8 ರಂದು ರೂ 9,100 ರಷ್ಟು ಏರಿಕೆಯಾಗಿದೆ ಮತ್ತು ನವೆಂಬರ್ 6 ರಂದು ರೂ 1,100 ರಷ್ಟು ಏರಿಕೆಯಾಗಿದೆ. ನವೆಂಬರ್ 7 ರಂದು 24 ಕ್ಯಾರಟ್‌ನ 100 ಗ್ರಾಂ ಚಿನ್ನದಲ್ಲಿ 17,900 ರೂ.ಗಳಷ್ಟು ಕುಸಿತ ಕಂಡಿದೆ.
ಬೆಂಗಳೂರಿನ ಬೆಳ್ಳಿ ಬೆಲೆ:
ನಗರದಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ. ನವೆಂಬರ್ 15 ರಂದು 1 ಕೆ.ಜಿ ಬೆಳ್ಳಿಯ ಬೆಲೆ 89,500 ರೂಪಾಯಿ ಆಗಿದೆ. ಇದರ ಮಧ್ಯೆ, 100 ಗ್ರಾಂ ಮತ್ತು 10 ಗ್ರಾಂ ಬೆಳ್ಳಿ ಕ್ರಮವಾಗಿ 8,950 ಮತ್ತು 895 ರೂಪಾಯಿ ಆಗಿದೆ. 8 ಗ್ರಾಂ ಮತ್ತು 1 ಗ್ರಾಂ ಬೆಳ್ಳಿಯ ಬೆಲೆ ಕ್ರಮವಾಗಿ 716 ಮತ್ತು 89.50 ರೂಪಾಯಿ ಆಗಿದೆ.
MCX ಚಿನ್ನ, ಬೆಳ್ಳಿ ಬೆಲೆಗಳು:
ನವೆಂಬರ್ 14 ರಂದು, MCX ಚಿನ್ನದ ಭವಿಷ್ಯವು ಡಿಸೆಂಬರ್ ಮುಕ್ತಾಯವಾಗಿದೆ. ಪ್ರತಿ 10 ಗ್ರಾಂಗೆ 74,072 ರೂಪಾಯಿ ಆಗಿ 82ರೂ. ಅಥವಾ 0.11% ರಷ್ಟು ಇಳಿಕೆಯಾಗಿದೆ. ಎಂಸಿಎಕ್ಸ್ ಬೆಳ್ಳಿ ಬೆಲೆಗಳು 1 ಕೆಜಿಗೆ 88,893 ರೂಪಾಯಿ ಆಗಿದ್ದು, 304 ರೂ. ಅಥವಾ 0.34% ಇಳಿಮುಖಕಂಡಿದೆ. ಇನ್ನು ನವೆಂಬರ್ 15 ರಂದು ಗುರುನಾನಕ್ ಜಯಂತಿಯ ಆಚರಣೆಯಿಂದಾಗಿ MCXನಲ್ಲಿ ವ್ಯಾಪಾರವನ್ನು ಮುಚ್ಚಲಾಗುತ್ತದೆ.
ನವೆಂಬರ್ 15, 2024, ಗುರು ನಾನಕ್ ಪ್ರಕಾಶ್ ಉತ್ಸವ ಎಂದೂ ಕರೆಯಲ್ಪಡುವ ಗುರು ನಾನಕ್ ಗುರುಪುರಬ್ ಅವರ ಜನ್ಮದಿನದ ಆಚರಣೆಯನ್ನು ಸೂಚಿಸುತ್ತದೆ. ಅವರು ಮೊದಲ ಸಿಖ್ ಗುರು ಮತ್ತು ಸಿಖ್ ಧರ್ಮದ ಸ್ಥಾಪಕರು. ಇದು ಸಿಖ್ ಧರ್ಮ ಅಥವಾ ಸಿಖಿಯಲ್ಲಿ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications