ಬೆಂಗಳೂರಿನಲ್ಲಿ ಮತ್ತೆ ಜಿಗಿದ ಚಿನ್ನದ ಬೆಲೆ, ನವೆಂಬರ್‌ 29: 22k/100 ಚಿನ್ನದ ಬೆಲೆ 7000 ರೂ. ಏರಿಕೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯನ್ನ ಕಾಣ್ತಿದೆ. ಕೆಲವು ದಿನಗಳ ಹಿಂದೆ ಸತತವಾಗಿ ಇಳಿಕೆಯಾದ ನಂತರ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಯುಎಸ್‌ ಡಾಲರ್‌ನಲ್ಲಿ ಸ್ವಲ್ಪ ಕುಸಿತ ಕಂಡ ನಂತರ ರಷ್ಯಾ ಮತ್ತು ಉಕ್ರೇನ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟುಗಳನ್ನ ಒಳಗೊಂಡಂತೆ ಚಿನ್ನದ ಬೇಡಿಕೆ ಮತ್ತೆ ಹೆಚ್ಚಾಗಿದೆ. ಇನ್ನು ಮುಂಬರುವ ದಿನಗಳನ್ನ ನೋಡುವುದಾದ್ರೆ, ಮಂದಿನ ವಾರ ಯುಎಸ್‌ ಆರ್ಥಿಕ ದಂತ್ತಾಶ ಬಿಡುಗಡೆಗಳನ್ನ ಕಾಣಬಹುದು. ಅಂದರೆ ಉದ್ಯೋಗವಕಾಶಗಳು, ಎಡಿಪಿ ಉದ್ಯೋಗ ವರದಿ, ಫೆಡರಲ್ ರಿಸರ್ವ್‌ನ ಹಣಕಾಸು ನೀತಿಯ ದೃಷ್ಟಿಕೋನಗಳಿಗೆ ನಿರ್ಣಾಯಕ ಒಳನೋಟಗಳನ್ನು ಒದಗಿಸುವ ನಿರೀಕ್ಷೆಯಿದೆ. ಹೂಡಿಕೆದಾರರು ಸಂಭಾವ್ಯ ದರ ಕಡಿತವನ್ನು ಎದುರು ನೋಡುತ್ತಿದ್ದಾರೆ, ಇದು ಚಿನ್ನದ ಬೆಲೆಗಳ ಮೇಲೆ ಮತ್ತಷ್ಟು ಪ್ರಭಾವ ಬೀರುತ್ತದೆ.

ನವೆಂಬರ್‌ 29 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳನ್ನ ಗಮನಿಸುವುದಾದ್ರೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 760 ರೂ ಏರಿಕೆಯಾಗಿ, ಈಗ 78,110 ರೂ ಆಗಿದೆ. ಅದೇ ರೀತಿ 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 700 ರೂಪಾಯಿಗಳಷ್ಟು ಏರಿಕೆಯಾಗಿ 71,600 ರೂ. ಆಗಿದೆ. ಹಾಗೆ 18 ಕ್ಯಾರೆಟ್‌ನ ಚಿನ್ನದ ಬೆಲೆ 570 ರೂ. ಏರಿಕೆಯಾಗಿ 58,580 ರೂ. ಆಗಿದೆ.

ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ಗಮಿಸುವುದಾದ್ರೆ, 100 ಗ್ರಾಂ 22-ಕ್ಯಾರೆಟ್ ಚಿನ್ನ 7000 ರೂ ಏರಿಕೆಯಾಗಿ 7,16,000 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 7,600 ರೂಪಾಯಿಗಳಷ್ಟು ಸ್ವಲ್ಪ ಏರಿಕೆಯಾಗಿ ರೂ. 7,81,100 ರೂ. ಆಗಿದೆ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆ!

ಚಿನ್ನದ ಬೆಲೆ ನಿನ್ನೆ ಕೂಡ ಇಳಮುಖವಾಗಿತ್ತು. ಆದ್ರೆ ಇಂದು ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಚಿನ್ನ ದರ ಮತ್ತೆ ಏರಿಕೆಯಾಗಿದೆ. ಭಾರತದಲ್ಲಿ ಮದುವೆಗಳ ಸೀಸನ್‌ ಶುರುವಾಗಿದ್ದು, ಚಿನ್ನದ ಬೇಡಿಕೆ ಕೂಡ ಹೆಚ್ಚಾಗ್ತಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷ ಮತ್ತು ದುರ್ಬಲ ಡಾಲರ್‌ನಿಂದ ಚಿನ್ನ ಬೆಂಬಲವನ್ನು ಕಂಡುಕೊಳ್ಳುತ್ತಿದೆ. ಫೆಡರಲ್ ರಿಸರ್ವ್ ದರ ಕಡಿತದ ಪ್ರಮಾಣವನ್ನು ನಿರ್ಧರಿಸಿದ ನಂತರ ಚಿನ್ನದ ಬೆಲೆಗಳಲ್ಲಿ ಭಾರಿ ವ್ಯತ್ಯಾಸಗಳನ್ನ ಕಣುವಂತಾಗಿದೆ.

ಇತರ ಪ್ರಮುಖ ಭಾರತೀಯ ನಗರಗಳಲ್ಲಿ ಚಿನ್ನದ ಬೆಲೆಗಳು

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24ಕ್ಯಾರೆಟ್‌ 22ಕ್ಯಾರೆಟ್‌
ದೆಹಲಿ 78,260 71,760
ಮುಂಬೈ 78,110 71,600
ಚೆನ್ನೈ 78,110 71,600
ಕೋಲ್ಕತ್ತಾ 78,110 71,600

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಏರಿಕೆಯಾಗಿದೆ. ಅಲ್ಲದೆ ಸತತ ಮೂರು ದಿನಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿರಲಿಲ್ಲ. ಆದ್ರೆ ಇಂದು ಬಳ್ಳಿ ಏರಿೆಯಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಕಿಲೋಗ್ರಾಂ ಬೆಳ್ಳಿ ಬೆಲೆ 2000 ರೂ ಏರಿಕೆಯಾಗಿ 91,500 ರೂ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 200 ರೂ. ಏರಿಕೆಯಾಗಿ 9,150 ರೂಪಾಯಿ ಆಗಿದೆ.

MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಡಿಸೆಂಬರ್‌ 5ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 76,300 ರೂ ಆಗಿದೆ. ಅಂದರೆ 0.76% ಏರಿಕೆಯಾಗಿದೆ. ಅದೇ ರೀತಿ, ಡಿಸೆಂಬರ್ 5ರ ಬೆಳ್ಳಿ ಭವಿಷ್ಯದ ವಹಿವಾಟು ಬಾರಿ ಏರಿಕೆಯನ್ನ ಕಾಣ್ತಿದೆ ಮತ್ತು 1.22% ರಷ್ಟು ಏರಿಕೆಯಾಗಿ, ಸದ್ಯಕ್ಕೆ 89,077 ರೂಪಾಯಿ ವಹಿವಾಟು ನಡೆಸುತ್ತಿದೆ.

ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರಗಳು

ರಾಯಿಟರ್ಸ್ ಇತ್ತೀಚಿನ ವರದಿ ಪ್ರಕಾರ ಯುಎಸ್‌ ಡಾಲರ್‌ನ ಸ್ವಲ್ಪ ಪ್ರಮಾಣದ ದುರ್ಬಲತೆ ಮತ್ತು ಜಾಗತಿಕ ಮತ್ತು ರಾಕೀಯ ಉದ್ವಿಗ್ನತೆಗಳಿಂದಾಗಿ ಶುಕ್ರವಾರ ಚಿನ್ನದ ಬೆಲೆಗಳು ಏರಿಕೆಯಾಗಿವೆ. ಹೀಗೆಂದು ರಾಯಿಟರ್ಸ್‌ ವರದಿ ಹೇಳಿದೆ. ಸ್ಪಾಟ್ ಚಿನ್ನವು 02: 36 GMT ಯ ಹೊತ್ತಿಗೆ ಪ್ರತಿ 0.7% ಔನ್ಸ್‌ಗೆ 2,660.03 ಡಾಲರ್‌ ಇದ್ದು ಚಿನ್ನದ ದರ ಸ್ವಲ್ಪ ಚೇತರಿಸಿಕೊಂಡಿದೆ. ಆದ್ರೂ ಕೂಡ ಇದು ವಾರಕ್ಕೆ 2 ಕಡಿಮೆಯಾಗಿದೆ. ಸ್ಪಾಟ್ ಬೆಳ್ಳಿ ಕೂಡ 1.1% ಏರಿಕೆಯಾಗಿ ಪ್ರತಿ ಔನ್ಸ್‌ಗೆ $ 30.58 ಆಗಿದೆ.ಈ ಹಿಂದೆ ಕುಸಿದಿದ್ದ ಚಿನ್ನದ ಬೆಲೆ ಈಗ ಮತ್ತೆ ಚೇತರಿಸಿಕೊಂಡಿದೆ .

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಹಲವು ಏರಿತಗಳನ್ನ ನಾವು ಕಾಣಬಹುದು. ವಾರದ ಆರಂಭದಲ್ಲಿ ಇಳಿಮುಖವಾಗಿದ್ದ ಚಿನ್ನ ಮತ್ತೆ ಇಂದು ಸ್ವಲ್ಪ ಏರಿಕೆಯಾಗಿತ್ತು. ದೇಶಿಯ ಚಿನ್ನದ ಬೆಲೆಗಳ ಮೇಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ ಹೆಚ್ಚಿರುವುದರಿಂದ ಬೆಲೆ ಇಳಿಕೆಯಾಗಿತ್ತು, ಆದ್ರೆ ಯುಸ್‌ ಡಾಲರ್‌ನ ದುರ್ಬಲತೆಯಿಂದಾಗಿ ಚಿನ್ನ ಮತ್ತೆ ಮಾರುಕಟ್ಟೆಯಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+