ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತ ಅನ್ನೋದು ಹಲವರ ಅಭಿಪ್ರಾಯ. ಅದೇ ಕಾರಣದಿಂದ ಹೆಚ್ಚಿನವರು ಚಿನ್ನ-ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಾರೆ. ಬೇಡಿಕೆ ಹೆಚ್ಚಾದಂತೆ ಬೆಲೆ ಕೂಡಾ ಜಾಸ್ತಿಯಾಗೋದು ಸಾಮಾನ್ಯ. ಅದೇ ಪರಿಸ್ಥಿತಿ ಇದೀಗ ಚಿನ್ನದಲ್ಲಿ ಬದಲಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold Rate India) ಇಂದು ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಎಷ್ಟಿದೆ ಗೊತ್ತಾ ದರ?

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ ಫೆಬ್ರವರಿ ಅಂತ್ಯದ ವೇಳೆ ಚಿನ್ನದ ಬೆಲೆ ಭಾರೀ ಹೆಚ್ಚಳವಾಗಿದೆ. 1 ಗ್ರಾಂ ಚಿನ್ನದ ಬೆಲೆ ಇಂದು ₹16,473 ರೂ. ಆಗಿದ್ದು, ನಿನ್ನೆ 16,157 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹316 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹1,31,784 ರೂ. ಆಗಿದ್ದು, ನಿನ್ನೆ ₹1,29,256 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹2,528 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,64,730 ರೂ. ಆಗಿದ್ದು, ನಿನ್ನೆ ₹1,61,570 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 3,160 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 16,47,300 ರೂ. ಆಗಿದ್ದು, ನಿನ್ನೆ 16,15,700 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ 31,600 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹15,100 ರೂ. ಆಗಿದ್ದು, ನಿನ್ನೆ ₹14,810 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹290 ರೂ. ಹೆಚ್ಚಳ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು 1,20,800 ರೂ. ಆಗಿದ್ದು, ನಿನ್ನೆ ₹1,18,480 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 2,320 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,51,000 ರೂ. ಆಗಿದ್ದು, ನಿನ್ನೆ ₹1,48,100 ರೂ. ಇತ್ತು. ಒಂದೇ ದಿನದಲ್ಲಿ ₹2,900 ರೂ. ಆಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ ಇಂದು ₹15,10,000 ರೂ. ಆಗಿದ್ದು, ನಿನ್ನೆ ₹14,81,000 ರೂ. ಇತ್ತು. ಒಟ್ಟು 29,000 ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ಇಂದು ₹12,355 ರೂ. ಆಗಿದ್ದು, ನಿನ್ನೆ ₹12,118 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹237 ರೂ. ಹೆಚ್ಚಳ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು ₹98,840 ರೂ. ಆಗಿದ್ದು, ನಿನ್ನೆ ₹96,944 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,896 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ದರ 1,23,550 ರೂ. ಆಗಿದ್ದು, ನಿನ್ನೆ 1,21,180 ರೂ. ಇತ್ತು. ಒಂದೇ ದಿನ 2,370 ರೂ. ಏರಿಕೆಯಾಗಿದ. 100 ಗ್ರಾಂ ಚಿನ್ನದ ದರ ₹12,35,500 ರೂ. ಆಗಿದ್ದು, ನಿನ್ನೆ ₹12,11,800 ರೂ. ಇತ್ತು. ದಿಢೀರ್ ₹23,700 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ ಎಷ್ಟಿದೆ?
ಅತ್ತ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಇತ್ತ ಬೆಳ್ಳಿ ದರವೂ ಇಂದು ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ₹295 ರೂ. ಆಗಿದ್ದು, ನಿನ್ನೆ ₹285 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹10 ರೂ. ಹೆಚ್ಚಳವಾಗಿದೆ. ಹಾಗೆಯೇ 8 ಗ್ರಾಂ ಬೆಳ್ಳಿ ದರ ₹2,360 ರೂ. ಆಗಿದ್ದು, ನಿನ್ನೆ ₹2,280 ರೂ. ಇತ್ತು. 10 ಗ್ರಾಂ ಬೆಳ್ಳಿ ದರ ₹2,950 ರೂ., 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ., 1000 ಗ್ರಾಂ ಬೆಳ್ಳಿ ದರ ₹2,95,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಶುಕ್ರವಾರ ಚಿನ್ನದ ದರವು ಒಂದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತು. ಯುಎಸ್ ಮತ್ತು ಇರಾನ್ ನಡುವಿನ ಮಾತುಕತೆಗಳ ನಂತರ, ಸ್ಪಾಟ್ ಚಿನ್ನದ ದರವು ಬೆಳಿಗ್ಗೆ GMT 1631 ರ ಹೊತ್ತಿಗೆ ಪ್ರತೀ ಔನ್ಸ್‌ಗೆ 1% ಏರಿಕೆಯಾಗಿ $5,238.75 ಕ್ಕೆ ತಲುಪಿದೆ.


Click it and Unblock the Notifications