ಚಿನ್ನ (Gold) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹುಡುಗಿಯರಂತೂ ಚಿನ್ನಾಭರಣಗಳನ್ನು ಧರಿಸೋಕೆ ಇಷ್ಟ ಪಡುತ್ತಾರೆ. ಆದ್ರೆ ಇತ್ತೀಚಿನ ಯುವ ಸಮುದಾಯ ಚಿನ್ನವನ್ನು ಹೂಡಿಕೆಯ ವಸ್ತುವಾಗಿ ನೋಡುತ್ತಿದೆ. ಅದೇ ಕಾರಣದಿಂದ ಇಂದು ಚಿನ್ನದ ಬೇಡಿಕೆಯೂ ಹೆಚ್ಚಾಗಿದೆ. ಇದೀಗ ಇಂದೂ ಕೂಡಾ ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ (Gold Rate Bangalore) ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ ಇಂದು ಮತ್ತೆ ಚಿನ್ನದ ಬೆಲೆ ಏರಿಕೆ ಕಂಡಿದೆ. ಅದೇ ರೀತಿ ಇಂದು (ಶನಿವಾರ) 24K ಚಿನ್ನದ 1 ಗ್ರಾಂ ಬೆಲೆ ಇಂದು ₹14,378 ರೂ. ಆಗಿದ್ದು, ನಿನ್ನೆ ₹14,340 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ ₹38 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು ₹1,15,024 ರೂ. ಆಗಿದ್ದು, ನಿನ್ನೆ ₹1,14,720 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು ₹304 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,43,780 ರೂ. ಆಗಿದ್ದು, ನಿನ್ನೆ ₹1,43,400 ರೂ. ಇತ್ತು. ನಿನ್ನೆಗಿಂತ ಇಂದು ₹380 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 14,37,800 ರೂ. ಆಗಿದ್ದು, ನಿನ್ನೆ 14,34,000 ರೂ. ಇತ್ತು. ಒಟ್ಟು 3,800 ರೂ. ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹13,180 ರೂ. ಆಗಿದ್ದು, ನಿನ್ನೆ ₹13,145 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹35 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ದರ ಇಂದು 1,05,440 ರೂ. ಆಗಿದ್ದು, ನಿನ್ನೆ ₹1,05,160 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹280 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,31,800 ರೂ. ಆಗಿದ್ದು, ನಿನ್ನೆ ₹1,31,450 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹350 ರೂ. ವ್ಯತ್ಯಾಸ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹13,18,000 ರೂ. ಆಗಿದ್ದು, ನಿನ್ನೆ ₹13,18,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹3,500 ರೂ. ಏರಿಕೆ ಕಂಡಿದೆ.
ಬೆಂಗಳೂರಿನಲ್ಲಿ 18K ಚಿನ್ನದ ಬೆಲೆ:
ಸಾಮಾನ್ಯವಾಗಿ 24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಇಂದು 18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹10,784 ರೂ. ಆಗಿದ್ದು, ನಿನ್ನೆ ₹10,755 ರೂ. ಇತ್ತು. ನಿನ್ನೆಗಿಂತ ಇಂದು ₹29 ರೂ. ಕುಸಿತ ಏರಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹86,272 ರೂ. ಆಗಿದ್ದು, ನಿನ್ನೆ ₹86,040 ಇತ್ತು. ನಿನ್ನೆಗಿಂತ ಇಂದು ₹232 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ದರ 1,07,840 ರೂ. ಆಗಿದ್ದು, ನಿನ್ನೆ 1,07,550 ರೂ. ಇತ್ತು. ಒಟ್ಟು ₹290 ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಚಿನ್ನದ ಬೆಲೆಯಂತೆ ಬೆಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ ₹295 ರೂ. ಇದೆ. ನಿನ್ನೆ ₹292 ರೂ. ಇತ್ತು. ನಿನ್ನೆಗಿಂತ ಇಂದು ₹3 ರೂ. ಏರಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹2,360 ರೂ. ಆಗಿದ್ದು, ನಿನ್ನೆ ₹2,336 ರೂ. ಇತ್ತು. ನಿನ್ನೆಗಿಂತ ಇಂದು ₹24 ರೂ. ಹೆಚ್ಚಳವಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹2,950 ರೂ., 100 ಗ್ರಾಂ ಬೆಳ್ಳಿ ಬೆಲೆ ₹29,500 ರೂ., 1000 ಗ್ರಾಂ ಬೆಳ್ಳಿ ದರ ₹2,95,000 ರೂ. ಏರಿಕೆ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 15ರ ರಾಯಿಟರ್ಸ್ ವರದಿ ಪ್ರಕಾರ, ಭೌಗೋಳಿಕವಾಗಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 1830 GMT ಮಧ್ಯಾಹ್ನ 01:30ರ ಹೊತ್ತಿಗೆ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ 0.1% ಇಳಿಕೆಯಾಗಿ $4,614.93 ಕ್ಕೆ ತಲುಪಿದೆ.


Click it and Unblock the Notifications