ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ದರ: 100 ಗ್ರಾಂ 22k ಚಿನ್ನದ ಬೆಲೆ 4,000 ರೂ. ಏರಿಕೆ

ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಕಳೆದ ವಾರ ಸತತವಾಗಿ ಏರಿಕೆಯಾಗ್ತಾನೆ ಇದ್ದ ಚಿನ್ನದ ದರ ಮತ್ತೆ ಅದೇ ಓಟವನ್ನ ಮುಂದುವರೆಸಿದೆ. ಬೆಂಗಳೂರಿಗರಿಗೆ ಇಂದೂ ಕೂಡ ನಿರಾಸೆಯಾಗಿದೆ. ಚಿನ್ನ ಕೊಳ್ಳಲು ಮುಂದಾಗಿದ್ದ ಆಭರಣ ಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ. ಭಾರತದ ಕರೆನ್ಸಿ ಕುಸಿದಿದ್ದು, ಹೀಗಾಗಿ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ. ಅಲ್ಲದೆ ಯುಎಸ್‌ ಡಾಲರ್‌ನ ಬಲವರ್ಧನೆ ಕೂಡ ಮುಖ್ಯ ಕಾರಣವಾಗಿದೆ.

ಜನವರಿ 13 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 400ರೂ. ಏರಿಕೆಯಾಗಿ 73,400 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 430ರೂ. ಏರಿಕೆಯಾಗಿ 80,070 ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 330 ರೂ. ಏರಿಕೆಯಾಗಿ 60,060 ಆಗಿದೆ.

ಬೆಂಗಳೂರಿಗರಿಗೆ ಶಾಕ್‌! ಮತ್ತೆ ಚಿನ್ನದ ಬೆಲೆ ಎರಿಕೆ!

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 4,000 ರೂ. ಏರಿಕೆಯಾಗಿ 7,34,000 ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 4,300 ರೂ. ಏರಿಕೆಯಾಗಿ 8,00,700 ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 3,300 ರೂ. ಏರಿಕೆಯಾಗಿ 6,00,600 ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರಗಳು

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 1 ರೂ. ಏರಿಕೆಯಾಗಿ 94.50 ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 1,000 ರೂ. ಏರಿಕೆಯಾಗಿ 94,500ರೂ. ಆಗಿದೆ. ಚಿನ್ನದ ಜೊತೆ ಜೊತೆಗೆ ಬೆಳ್ಳಿ ಬೆಲೆ ಕೂಡ ಇಂದು ಏರಿಕೆಯಾಗಿದೆ.

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು 24ಕ್ಯಾರೆಟ್‌22ಕ್ಯಾರೆಟ್‌
ದೆಹಲಿ 80,220 73,550
ಮುಂಬೈ 80,070 73,400
ಚೆನ್ನೈ 80,070 73,400
ಕೋಲ್ಕತ್ತಾ 80,070 73,400

ಸ್ಪಾಟ್‌ ಚಿನ್ನದ ಭವಿಷ್ಯ

ಯುಎಸ್‌ ಡಾಲರ್‌ ಬಲವರ್ಧನೆಯಿಂದಾಗಿ ಚಿನ್ನದ ದರ ಏರಿಕೆಯಾಗಿದೆ. ಇದು ಸ್ಪಾಟ್‌ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ ಸ್ಪಾಟ್‌ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.09% ಇಳಿಕೆಯಾಗಿ 2,689.90 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 0.56% ಇಳಿಕೆಯಾಗಿ 30.24 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್‌ ಬೆಲೆಯು ಪ್ರತಿ ಔನ್ಸ್‌ಗೆ 0.41% ರಷ್ಟು ಇಳಿಕೆಯಾಗಿ 960.25 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.21% ರಷ್ಟು ಇಳಿಕೆಯಾಗಿ 949.50 ಡಾಲರ್‌ ತಲುಪಿದೆ.

MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್‌ ಔಟ್‌ಲುಕ್

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.25%ನಷ್ಟು ಏರಿಕೆಯಾಗಿ 78,619ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.38%ನಷ್ಟು ಇಳಿಕೆಯಾಗಿ 92,152 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಬೆಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು.

ಭಾರತೀಯ ಕರೆನ್ಸಿ ತೀವ್ರವಾಗಿ ಕುಸಿದ ಹಿನ್ನೆಲೆ ಚಿನ್ನದ ದರ ಗಗನಕ್ಕೇರಿದೆ. ತಜ್ಞರ ಪ್ರಖಾರ ಇಂದು ಚಿನ್ನದ ದರಗಳು ಒತ್ತಡವನ್ನ ಎದುರಿಸುತ್ತಿವೆ. ಯುಎಸ್‌ ಡಾಲರ್‌ನ ಬಲವರ್ದನೆಯಿಂದಾಗಿ ಚಿನ್ನದ ದರಗಳು ಏರಿಕೆಯಾಗ್ತಿವೆ. ಅಲ್ಲದೆ ಯುಎಸ್‌ ಫೆಡ್‌ ದರ ಕಡಿತ ಕೂಡ ಚಿನ್ನದ ದರ ಎರಿಕೆಗೆ ಮುಖ್ಯ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+