ಮಕರ ಸಂಕ್ರಾಂತಿಯಂದು ಬೆಂಗಳೂರಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೆಲ ದಿನಗಳಿಂದ ತೀವ್ರವಾಗಿ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಇಳಿಕೆಯಾಗಿದೆ. ಹಬ್ಬದ ದಿನದಂದೆ ಚಿನ್ನದ ದರ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಸಂತಸವನ್ನ ನೀಡಿದೆ. ಸತತವಾಗಿ ಒಂದು ವಾರಗಳಿಂದ ಚಿನ್ನದ ದರ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ಇಳಿಕೆಯಾಗಿದೆ.
ಮಕರ ಸಂಕ್ರಾಂತಿಗೆ ಚಿನ್ನ ಕೊಳ್ಳುವವರಿಗೆ ಶುಭ ಸುದ್ದಿ ಸಿಕ್ಕಿದೆ. ಬಹುದಿನಗಳಿಂದ ಚಿನ್ನದ ದರ ಏರಿಕೆಯಿಂದಾಗಿ ಕಂಗಾಲಾಗಿದ್ದ ಬೆಂಗಳೂರಿಗರಿಗೆ ಸಮಾಧಾನ ತಂದಿದೆ. ಇಂದು ಚಿನ್ನಕೊಳ್ಳುವವರಿಗೆ ಇದು ಶುಭ ಸಮುಯವಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಕೆಎ ಮಾಡಿದರೆ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣ ಇಳಿಕೆಯಾಗಿದೆ.

ಜನವರಿ 14 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100ರೂ. ಇಳಿಕೆಯಾಗಿ 73,300 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 110ರೂ. ಇಳಿಕೆಯಾಗಿ 79,960 ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 90 ರೂ. ಇಳಿಕೆಯಾಗಿ 59,970 ಆಗಿದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,000ರೂ. ಇಳಿಕೆಯಾಗಿ 7,33,000 ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,100 ರೂ. ಇಳಿಕೆಯಾಗಿ 7,99,600 ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 900 ರೂ. ಇಳಿಕೆಯಾಗಿ 5,99,700 ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 2 ರೂ. ಇಳಿಕೆಯಾಗಿ 92.50 ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 2,000 ರೂ. ಇಳಿಕೆಯಾಗಿ 92,500ರೂ. ಆಗಿದೆ. ಚಿನ್ನದ ಜೊತೆ ಜೊತೆಗೆ ಬೆಳ್ಳಿ ಬೆಲೆ ಕೂಡ ಇಂದು ಇಳಿಕೆಯಾಗಿದೆ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ನಗರಗಳು | 24ಕ್ಯಾರೆಟ್ | 22ಕ್ಯಾರೆಟ್ |
| ದೆಹಲಿ | 80,110 | 73,450 |
| ಮುಂಬೈ | 79,960 | 73,300 |
| ಚೆನ್ನೈ | 79,960 | 73,300 |
| ಕೋಲ್ಕತ್ತಾ | 79,960 | 73,300 |
MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್ ಔಟ್‌ಲುಕ್
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.22%%ನಷ್ಟು ಏರಿಕೆಯಾಗಿ 78,340 ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.02%%ನಷ್ಟು ಇಳಿಕೆಯಾಗಿ 90,495 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ ಹೆಚ್ಚಾದಂತೆ ಅದು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು. ಬಡ್ಡಿ ದರಗಳು, ಸರ್ಕಾರಿ ನೀತಿಗಳು, ಕರೆನ್ಸಿ ವಿನಿಮಯ ದರಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಬೆಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು.
ಸ್ಪಾಟ್ ಚಿನ್ನದ ಭವಿಷ್ಯ
ಯುಎಸ್ ಡಾಲರ್ ಕುಸಿತದಿಂದಾಗಿ ಚಿನ್ನದ ದರ ಕೂಡ ಇಳಿಕೆಯಾಗಿದೆ. ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.22% ಏರಿಕೆಯಾಗಿ 2,669.76 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 29.64 ಡಾಲರ್‌ನಲ್ಲಿ ಸ್ಥಿರವಾಗಿದೆ. ಪ್ಲಾಟಿನಮ್ ಬೆಲೆಯು ಪ್ರತಿ ಔನ್ಸ್‌ಗೆ 0.26% ರಷ್ಟು ಇಳಿಕೆಯಾಗಿ 954.75 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 1.28% ರಷ್ಟು ಏರಿಕೆಯಾಗಿ 946.50 ಡಾಲರ್ ತಲುಪಿದೆ.


Click it and Unblock the Notifications