ಜಾಗತಿಕವಾಗಿ ಚಿನ್ನ, ಬೆಳ್ಳಿ ದರಗಳು (Gold, Silver Price) ದಿನೇ ದಿನೇ ಏರಿಳಿತಗಳನ್ನು ಕಾಣಿಸಿಕೊಳ್ಳುತ್ತಿದೆ. ಅದೇ ರೀತಿ ಬೆಂಗಳೂರಿನಲ್ಲೂ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣಿಸಿಕೊಂಡಿದೆ. ಶುಕ್ರವಾರವಷ್ಟೇ ಜಾಗತಿಕವಾಗಿ, ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿತ್ತು. ಆದ್ರೆ ಇಳಿಕೆಯಾದ ಒಂದೇ ದಿನದಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಈ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದ ಚಿನ್ನ, ಬೆಳ್ಳಿ ದಿಢೀರ್ ಹೂಡಿಕೆದಾರರಿಗೆ, ಖರೀದಿದಾರರಿಗೆ ಶಾಕ್ ನೀಡಿದೆ. ಆದ್ದರಿಂದ ಚಿನ್ನ, ಬೆಳ್ಳಿ ಪ್ರಿಯರು ದರಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳುವುದು ಮುಖ್ಯ. ಹಾಗಿದ್ರೆ ಚಿನ್ನ, ಬೆಳ್ಳಿ ಬೆಲೆ ಇಂದು ಬೆಂಗಳೂರಿನಲ್ಲಿ ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ ಓದಿ. ಇದರಲ್ಲಿ 24K, 22K ಮತ್ತು 18K ಚಿನ್ನದ 1, 8, 10, 100 ಗ್ರಾಂ ಚಿನ್ನದ ಬೆಲೆಗಳು ಹೇಗಿದೆ ಎಂಬುದನ್ನು ತಿಳಿಯೋಣ.

ಬೆಂಗಳೂರಿನಲ್ಲಿ ಹೇಗಿದೆ 24K ಚಿನ್ನದ ಬೆಲೆ?
ಶುಕ್ರವಾರಕ್ಕೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ಶನಿವಾರ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ 1 ಗ್ರಾಂ ಚಿನ್ನದ ಬೆಲೆ 12,508 ರೂಪಾಯಿ ಆಗಿದೆ. ಶುಕ್ರವಾರಕ್ಕೆ ಹೋಲಿಸಿದ್ರೆ ನಿನ್ನೆ, ಇಂದು 137 ರೂಪಾಯಿ ಏರಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 1,00,064 ರೂಪಾಯಿಯಾಗಿದ್ದು, ಒಂದೇ ದಿನ 1 ಲಕ್ಷ ಗಡಿ ದಾಟಿದೆ. 10 ಗ್ರಾಂ ಚಿನ್ನದ ಬೆಲೆ 1,25,080 ರೂ. ಆಗಿದೆ. ಹಾಗೆಯೇ 100 ಗ್ರಾ 24K ಚಿನ್ನದ ಬೆಲೆ 12,50,800 ರೂಪಾಯಿ ಆಗಿದೆ.
ಬೆಂಗಳೂರು: 22K ಚಿನ್ನದ ಬೆಲೆ:
24K ಚಿನ್ನಕ್ಕೆ ಹೋಲಿಸಿದ್ರೆ 22K ಚಿನ್ನ ಮಾರುಕಟ್ಟೆಯಲ್ಲಿ ಸ್ವಲ್ಪ ಕಡಿಮೆ ಬೆಲೆಗೆ ಸಿಗುತ್ತದೆ. ಇನ್ನು 1 ಗ್ರಾಂ ಚಿನ್ನದ ಬೆಲೆ ಬೆಂಗಳೂರು ಮಾರುಕಟ್ಟೆಯಲ್ಲಿ 11,465 ರೂಪಾಯಿ ಆಗಿದ್ದು, ಶುಕ್ರವಾರದ ಬೆಲೆಗೆ ಹೋಲಿಸಿದ್ರೆ ಬರೋಬ್ಬರಿ 125 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 91,720 ರೂಪಾಯಿ ಆಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ 1,14,650 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 11,46,500 ರೂಪಾಯಿ ಆಗಿದೆ.
ಬೆಂಗಳೂರು: 18K ಚಿನ್ನದ ಬೆಲೆ:
ಬೆಂಗಳೂರು ಮಾರುಕಟ್ಟೆಯಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಶುಕ್ರವಾರಕ್ಕೆ ಹೋಲಿಸಿದ್ರೆ ಇಂದು ಭಾರೀ ಪ್ರಮಾಣದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. 1 ಗ್ರಾಂ ಚಿನ್ನದ ಬೆಲೆ ಶುಕ್ರವಾರ 9,278 ರೂ. ಇತ್ತು. ಆದ್ರೆ ಇಂದು 1 ಗ್ರಾಂ ಚಿನ್ನದ ಬೆಲೆ 9,381 ರೂಪಾಯಿ ಆಗಿದೆ. ಅದೇ ರೀತಿ ಇಂದು 8 ಗ್ರಾಂ ಚಿನ್ನದ ಬೆಲೆ 75,048 ರೂಪಾಯಿ ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಬೆಂಗಳೂರಿನಲ್ಲಿ 93,810 ಆಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 9,38,100 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರ:
ಇನ್ನು ಚಿನ್ನದಂತೆಯೇ ಬೆಂಗಳೂರು ಮಾರುಕಟ್ಟೆಯಲ್ಲಿ ಬೆಳ್ಳಿ ದರದಲ್ಲೂ ಏರಿಳಿತಗಳು ಆಗುತ್ತಿರುತ್ತದೆ. ಈ ಹಿನ್ನೆಲೆ ಹೂಡಿಕೆದಾರರು, ಖರೀದಿದಾರರು ಬೆಲೆ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯ. ಬೆಂಗಳೂರು ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿ ಬೆಲೆ 182.30 ರೂ. ಆಗಿದೆ. ಹಾಗೆಯೇ 8 ಗ್ರಾಂ ಬೆಳ್ಳಿ ಬೆಲೆ 1,458.40 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ಬೆಲೆ 1,823 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆಗೆ ಬೆಂಗಳೂರಿನಲ್ಲಿ 18,230 ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ 1,82,300 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ವರದಿ ಪ್ರಕಾರ ಅಕ್ಟೋಬರ್ 10, 2025 ರಂತೆ ಇಂದು ಗಮನಿಸುವುದಾದ್ರೆ, ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್ $3,965.59 ಆಗಿದೆ. ಹಿಂದಿನ ಮುಚ್ಚಿದ ದರದೊಂದಿಗೆ ಹೋಲಿಸಿದಾಗ ಇದು $9.45 ಕಡಿಮೆಯಾಗಿದೆ. ಹಾಗೆಯೇ ಸರಾಸರಿ 0.24% ಕಡಿಮೆಯಾಗಿದೆ. ಈ ಕುಸಿತವು ಚಿನ್ನದ ಮಾರುಕಟ್ಟೆಯಲ್ಲಿ ಕಡಿಮೆ ಬೆಳವಣಿಗೆ ಮತ್ತು ಹೂಡಿಕೆದಾರರ ನಿರೀಕ್ಷೆಗಳ ಮೇಲೆ ಪರಿಣಾಮ ಬೀಳಲಿದೆ. ಆದರೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಹೇಳಲಾಗುತ್ತದೆ.


Click it and Unblock the Notifications