ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತ ಎಂದು ಎಲ್ಲರೂ ಭಾವಿಸುತ್ತಾರೆ. ಆದ್ರೆ ಏನ್ ಮಾಡೋದು, ಈಗಿನ ಚಿನ್ನದ ದರ ನೋಡಿದ್ರೆ ಖರೀದಿಸೋದೆ ಬೇಡವೆಂಬಂತಾಗಿದೆ. ಕೆಲವು ವರ್ಷಗಳ ಹಿಂದಷ್ಟೇ ಪ್ರತಿ ಗ್ರಾಂಗೆ 2 ಸಾವಿರವಿದ್ದ ಚಿನ್ನದ ಬೆಲೆ ಇದೀಗ 12 ಸಾವಿರ ಗಡಿದಾಟಿದೆ. ಇನ್ನಂತೂ ಚಿನ್ನದ ಬೆಲೆ ಇಳಿಕೆಯಾಗುತ್ತೇ ಅನ್ನೋ ಮಾತೇ ಬರಲ್ಲ ಎಂಬಂತಾಗಿದೆ. ಇನ್ನೇನು ಮದುವೆ, ಹಬ್ಬದ ಸೀಸನ್‌ಗಳು ಬರ್ತಾ ಇದೆ. ಈ ಸಂದರ್ಭದಲ್ಲಿ ಹಲವರು ಚಿನ್ನದ ಮೇಲೆ ಹೂಡಿಕೆ, ಖರೀದಿ ಮಾಡಲು ಮುಂದಾಗುತ್ತಾರೆ. ಆದ್ರೆ ಈ ಸಂದರ್ಭದಲ್ಲಿ ಚಿನ್ನದ ಮಾರುಕಟ್ಟೆ ಬೆಳವಣಿಗೆ ಬಗ್ಗೆ ಅರ್ಥ ಮಾಡಿಕೊಳ್ಳೋದು ಬಹಳ ಮುಖ್ಯ. ಹಾಗಿದ್ರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆ (Bengaluru Gold Rate) ಇಂದು ಹೇಗಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು- 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆ 12,540 ರೂಪಾಯಿ ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 12,508 ರೂ. ಇತ್ತು. ಅಂದರೆ ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ 32 ರೂ. ಏರಿಕೆಯಾಗಿದೆ. ಇನ್ನು 8 ಚಿನ್ನದ ಬೆಲೆ 1,00,320 ರೂ. ಆಗಿದ್ದು, ನಿನ್ನೆ ಯಥಾಸ್ಥಿತಿಯಲ್ಲಿ ರೂ. 1,00,064 ಇತ್ತು. ಈ ಮೂಲಕ ಒಂದೇ ದಿನದಲ್ಲಿ 256 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನದ ಬೆಲೆ 1,00,320 ರೂ. ಆಗಿದ್ದು, ನಿನ್ನೆ 10 ಗ್ರಾಂ ಚಿನ್ನಕ್ಕೆ 1,25,080 ರೂ. ಇತ್ತು. ನಿನ್ನೆಗಿಂತ ಇಂದು 320 ರೂ. ಜಾಸ್ತಿಯಾಗಿದೆ. ಅದರಂತೆ 100 ಚಿನ್ನದ ಬೆಲೆಯಲ್ಲಿ 3,200 ರೂ. ಹೆಚ್ಚಾಗಿದ್ದು, ಇಂದು 12,54,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಬೆಲೆ ಇಂದು 1 ಗ್ರಾಮ್‌ಗೆ 11,495 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ ರೂ. 11,465 ಆಗಿತ್ತು. ಈ ಮೂಲಕ ಒಂದೇ ದಿನದಲ್ಲಿ ಚಿನ್ನದ 22K ಚಿನ್ನದ ಬೆಲೆ 30 ರೂ. ಹೆಚ್ಚಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 91,960 ರೂ. ಆಗಿದ್ದು, ನಿನ್ನೆ ರೂ. 91,720 ಆಗಿತ್ತು. ಇಲ್ಲಿಯೂ 240 ರೂ.ನಷ್ಟು ಏರಿಕೆಯಾಗಿದೆ. 10 ಗ್ರಾಂ ಚಿನ್ನ ಬೆಲೆ ರೂ. 1,14,950 ನಷ್ಟು ಏರಿಕೆಯಾಗಿದೆ. ನಿನ್ನೆಗಿಂತ ಇಂದು ಚಿನ್ನದ ಬೆಲೆ ರೂ. 300 ರಷ್ಟು ಏರಿಕೆಯಾಗಿದೆ. 100 ಗ್ರಾಂ ಚಿನ್ನ ಬೆಲೆ ಇಂದು 11,49,500 ರೂಪಾಯಿ ಆಗಿದ್ದು, ನಿನ್ನೆ ರೂ.11,46,500 ಆಗಿತ್ತು. ಈ ಮೂಲಕ 3,000 ರೂ.ನಷ್ಟು ಏರಿಕೆಯಾಗಿದೆ.
18K ಚಿನ್ನದ ಬೆಲೆ ಹೇಗಿದೆ?
ಇನ್ನು ಬೆಂಗಳೂರಿನಲ್ಲಿ 18K ಚಿನ್ನದ 1 ಗ್ರಾಂ ಬೆಲೆ 9,405 ರೂಪಾಯಿ ಏರಿಕೆಯಾಗಿದೆ. ಅಂದರೆ ನಿನ್ನೆ 9,381 ರೂಪಾಯಿ ಇದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ರೂ 24 ರಷ್ಟು ಏರಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 75,240 ರೂ. ಏರಿಕಯಾಗಿದೆ. ನಿನ್ನೆಗಿಂತ ಇಂದು 192 ರೂಪಾಯಿ ದಿಢೀರ್ ಏರಿಕೆಯಾಗಿದೆ. ನಿನ್ನೆ 10 ಗ್ರಾಂ ಚಿನ್ನದ ಬೆಲೆ ರೂ. 93,810 ಇತ್ತು. ಆದ್ರೆ ಇಂದು ರೂ 94,050 ಆಗಿದ್ದು, ಒಂದೇ ದಿನದಲ್ಲಿ 240 ರೂಪಾಯಿ ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 9,40,500 ರೂ. ಆಗಿದ್ದು, ಒಂದೇ ದಿನದಲ್ಲಿ 2,400 ರೂಪಾಯಿ ಏರಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ವರದಿ ಪ್ರಕಾರ, 0253 GMT ವೇಳೆಗೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ $4,044.29 ರಂತೆ ವಹಿವಾಟು ನಡೆಸಿದೆ. ಹಿಂದಿನ ವಹಿವಾಟಿನ ಆರಂಭದಲ್ಲಿ ಔನ್ಸ್‌ಗೆ $4,059.30 ರಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ. ಡಿಸೆಂಬರ್ ವಿತರಣೆಗಾಗಿ US ಗೋಲ್ಡ್ ಫ್ಯೂಚರ್‌ಗಳು 1.6% ರಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ $4,062.50 ಕ್ಕೆ ತಲುಪಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಹೇಗಿದೆ?
ಚಿನ್ನದಂತೆಯೇ ಬೆಳ್ಳಿ ಬೆಲೆಯಲ್ಲೂ ಏರಿಳಿತಗಳಾಗುತ್ತಿರುತ್ತದೆ. ಆದ್ರೆ ನಿನ್ನೆ ಯಥಾಸ್ಥಿತಿಯಲ್ಲಿದ್ದ ಬೆಳ್ಳಿದರ ಇಂದು ದಿಢೀರ್ ಏರಿಕೆ ಕಂಡಿದೆ. ಗ್ರಾಂಗೆ ಬೆಳ್ಳಿ ದರ 182.30 ರೂ. ನಿನ್ನೆ ಇತ್ತು. ಆದರೆ ಇಂದು ಬೆಳ್ಳಿ ಬೆಲೆ 1 ಗ್ರಾಂಗೆ 185 ರೂಪಾಯಿ ಆಗಿದೆ. ಅಂದರೆ 2.70 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ಇಂದು 1,480 ರೂ. ಆಗಿದ್ದು, ನಿನ್ನೆಗಿಂತ ಇಂದು 21.60 ರೂಪಾಯಿ ಹೆಚ್ಚಾಗಿದೆ. 10 ಬೆಳ್ಳಿ ಬೆಲೆ ನಿನ್ನೆ ಬೆಂಗಳೂರಿನಲ್ಲಿ 1,823 ರೂ. ಇತ್ತು. ಇಂದು 1,823 ರೂ. ಆಗಿದ್ದು, ಒಟ್ಟು 27 ರೂಪಾಯಿಯಷ್ಟು ಹೆಚ್ಚಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ಇಂದು 18,500 ರೂ. ಆಗಿದ್ದು, ಒಟ್ಟು 270 ರೂ.ನಷ್ಟು ಏರಿಕೆಯಾಗಿದೆ. ಹಾಗೆಯೇ 1000 ಗ್ರಾಂ ಬೆಳ್ಳಿ ಬೆಲೆ ಇಂದು 1,85,000 ರೂ. ಆಗಿದೆ. ಆದರೆ ನಿನ್ನೆ ಈ ಬೆಲೆ 1,82,300 ರೂಪಾಯಿ ಆಗಿದೆ. ಈ ಮೂಲಕ ಒಂದೇ ದಿನದಲ್ಲಿ ರೂ 2,700 ದಷ್ಟು ಹೆಚ್ಚಾಗಿದೆ.


Click it and Unblock the Notifications