ಭಾರತದ ಪ್ರೀಮಿಯಂ ವಸತಿ ಮಾರುಕಟ್ಟೆಯು ಅಭೂತಪೂರ್ವ ಏರಿಕೆಯನ್ನು ಕಾಣುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು, ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ಮತ್ತು ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಐಷಾರಾಮಿ ಮನೆಗಳ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗಿದೆ.
ಆಸ್ತಿ ಸಲಹಾ ಸಂಸ್ಥೆಯಾಗಿರುವ ಸವಿಲ್ಸ್ ಇಂಡಿಯಾದ ಶುಕ್ರವಾರ ಬಿಡುಗಡೆ ಮಾಡಿರುವ ವರದಿಯು ಈ ಮೂರು ಪ್ರಮುಖ ನಗರಗಳ ಆಸ್ತಿ ಮೌಲ್ಯಗಳು ಕಳೆದ ವರ್ಷದಿಂದ ಶೇಕಡಾ 55 ರಷ್ಟು ಏರಿಕೆಯಾಗಿವೆ ಎಂದು ಬಹಿರಂಗಪಡಿಸಿದೆ. ಹೀಗಾಗಿ ಬೆಂಗಳೂರು ಸಹಿತ ಈ ಮೂರು ಸಿಟಿಯಲ್ಲಿ ಪ್ರೀಮಿಯಂ ವಸತಿ ಯೋಜನೆ, ಅಥವಾ ಹೈ ಎಂಡ್ ಮನೆಗಳಿಗೆ ಹೆಚ್ಚಿನ ಬೇಡಿಕೆ ಕೇಳಿಬರುತ್ತಿದ್ದು ವರದಿಯ ಪ್ರಕಾರ ಮುಂಬರುವ ದುಬಾರಿ ಮನೆಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಗುರುಗ್ರಾಮ್‌ನಲ್ಲಿ ತೀವ್ರ ಬೆಲೆ ಏರಿಕೆ
ಗುರುಗ್ರಾಮ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ತಿ ಮೌಲ್ಯಗಳಲ್ಲಿ ಅತ್ಯಂತ ಗಮನಾರ್ಹ ಏರಿಕೆ ಕಂಡುಬಂದಿದೆ, ಡಿಸೆಂಬರ್ 2024 ರ ವೇಳೆಗೆ ವಾರ್ಷಿಕವಾಗಿ 5 ರಿಂದ 55 ಪ್ರತಿಶತದಷ್ಟು ಬೆಲೆಗಳು ಏರಿಕೆಯಾಗಿವೆ. ಈ ತೀವ್ರ ಏರಿಕೆಯು ಪ್ರದೇಶದಲ್ಲಿ ಭಾರೀ ಪ್ರಮಾಣದ ಐಷಾರಾಮಿ ವಸತಿ ಬೇಡಿಕೆಯ ಸೂಚಕವಾಗಿದೆ. ವಸತಿ ಯೋಜನೆಗಳು ಪೂರ್ಣಗೊಳಿಸಿದಾಗ ಅಥವಾ ಇದು ಮುಂದುವರಿದ್ದಂತೆ ಬೆಲೆ ಹೆಚ್ಚಳವಾಗುತ್ತಾ ಹೋಗುತ್ತದೆ.
ಬೂಮ್ ನಲ್ಲಿ ಬೆಂಗಳೂರಿನಲ್ಲಿ ವಸತಿ ಮಾರುಕಟ್ಟೆ
ಗುರುಗ್ರಾಮದ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಉದ್ಯಾನನಗರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ ವಾರ್ಷಿಕ 25 ಪ್ರತಿಶತದಷ್ಟು ಬೆಲೆ ಏರಿಕೆ ದಾಖಲಾಗಿದೆ. ನಗರದಲ್ಲಿ ಪೂರ್ಣಗೊಂಡ ಯೋಜನೆಗಳು ಸುಮಾರು 19 ಪ್ರತಿಶತದಷ್ಟು ಬೆಲೆ ಏರಿಕೆಯನ್ನು ಕಂಡಿವೆ. ಅದರಲ್ಲೂ ವಿಶೇಷವಾಗಿ ಸೆಂಟ್ರಲ್ ಬೆಂಗಳೂರುಿದರ ಹಾಟ್ ಸ್ಪಾಟ್ ಆಗಿದ್ದು ಇಲ್ಲಿ ಸರಾಸರಿ ಬಂಡವಾಳ ಮೌಲ್ಯಗಳು ವಾರ್ಷಿಕವಾಗಿ 31 ಪ್ರತಿಶತದಷ್ಟು ಭಾರೀ ಏರಿಕೆಯನ್ನು ಕಂಡಿವೆ. ಪೂರ್ವ, ದಕ್ಷಿಣ ಮತ್ತು ಉತ್ತರ ಮೈಕ್ರೋ-ಮಾರುಕಟ್ಟೆಗಳು ಕ್ರಮವಾಗಿ 24 ಪ್ರತಿಶತ, 21 ಪ್ರತಿಶತ ಮತ್ತು 20 ಪ್ರತಿಶತದಷ್ಟು ಆಸ್ತಿ ಬೆಲೆ ಏರಿಕೆಯನ್ನು ಕಂಡಿವೆ.
ಬೆಂಗಳೂರಿನ ವಸತಿ ಮಾರುಕಟ್ಟೆಯಲ್ಲಿನ ಏರಿಕೆಗೆ ಪ್ರಮುಖ ಕಾರಣವೆಂದರೆ ಐಷಾರಾಮಿ ಮನೆಗಳ ಜನಪ್ರಿಯತೆ ಮತ್ತು ದುಬಾರಿ ಇನ್ ಪುಟ್ ಗಳು ವೆಚ್ಚಗಳು. ಡೆವಲಪರ್‌ಗಳು ನೀಡುವ ಹಂತಹಂತದ ಪಾವತಿ ಯೋಜನೆಗಳು ಸಹ ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ ಖರೀದಿದಾರರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ದರಗಳು ಏರುತ್ತಿವೆ.!
ಸೆಂಟ್ರಲ್ ಬೆಂಗಳೂರಿನಲ್ಲಿ ಬಾಡಿಗೆಗಳು ಇತರ ಮೈಕ್ರೋ-ಮಾರುಕಟ್ಟೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇವೆ, ಇದು ಹೈ-ಎಂಡ್ ಬಾಡಿಗೆದಾರರಿಗೆ ನಗರದ ಬೆಳೆಯುತ್ತಿರುವ ಆಕರ್ಷಣೆಯನ್ನು ಸಂಕೇತವಾಗಿದೆ. ಬೆಂಗಳೂರು ನಂತರದ ಸ್ಥಾನದಲ್ಲಿ ನೋಯ್ಡಾ ಇದೆ, ಇಲ್ಲಿ ವಾರ್ಷಿಕವಾಗಿ 12 ರಿಂದ 22 ಪ್ರತಿಶತದಷ್ಟು ಬಾಡಿಗೆ ಮೌಲ್ಯಗಳು ಏರಿಕೆಯಾಗಿವೆ. ದೆಹಲಿ ಮತ್ತು ಗುರುಗ್ರಾಮ್ ಕ್ರಮವಾಗಿ 10 ರಿಂದ 13 ಪ್ರತಿಶತ ಮತ್ತು 5 ರಿಂದ 12 ಪ್ರತಿಶತದಷ್ಟು ಏರಿಕೆಯನ್ನು ದಾಖಲಿಸಿವೆ.
ಎರಡನೇ ಮನೆಗಳಿಗೆ ಬೇಡಿಕೆ
ಮೆಟ್ರೋಗಳನ್ನು ಮೀರಿ, ಉತ್ತರ ಗೋವಾ ಎರಡನೇ ಮನೆಗಳಿಗೆ ಆದ್ಯತೆಯ ತಾಣವಾಗಿ ಹೊರಹೊಮ್ಮುತ್ತಿದೆ. ದೆಹಲಿ, ಬೆಂಗಳೂರು, ಮುಂಬೈ ಮತ್ತು ಚಂಡೀಗಢ್, ಕಾನ್ಪುರ ಮತ್ತು ಇಂದೋರ್‌ನಂತಹ ಟೈಯರ್-II ನಗರಗಳಿಂದ ಖರೀದಿದಾರರನ್ನು ಆಕರ್ಷಿಸುತ್ತಿದೆ.
ವಸತಿ ಮಾರುಕಟ್ಟೆಯಲ್ಲಿನ ಬೇಡಿಕೆಯ ಹೆಚ್ಚಳ ಮತ್ತು ಬಂಡವಾಳದ ಮೌಲ್ಯಗಳಲ್ಲಿನ ಏರಿಕೆಯಿಂದಾಗಿ, ಖರೀದಿದಾರರು ಆಸ್ತಿ ಬೆಲೆಗಳಲ್ಲಿ ಮತ್ತಷ್ಟು ಏರಿಕೆಯ ನಿರೀಕ್ಷೆಯೊಂದಿಗೆ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಬಡ್ಡಿ ದರಗಳಲ್ಲಿನ ಬದಲಾವಣೆಯಾಗದಿರುವುದು ಈ ಪ್ರವೃತ್ತಿಯನ್ನು ಬಲಪಡಿಸುತ್ತಿದೆ.
" ಆರ್ಥಿಕ ಬೆಳವಣಿಗೆ ಮತ್ತು ಐಷಾರಾಮಿ ವಸತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ 2024 ರಲ್ಲಿ ಐಷಾರಾಮಿ ಮನೆಗಳ ಮಾರಾಟ ಹೆಚ್ಚಾಗಿದೆ" ಎಂದು ಸವಿಲ್ಸ್ ಇಂಡಿಯಾದ ವಸತಿ ಸೇವೆಗಳ ವ್ಯವಸ್ಥಾಪಕ ನಿರ್ದೇಶಕಿ ಶ್ವೇತಾ ಜೈನ್ ಅಭಿಪ್ರಾಯಟ್ಟಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications